Tuesday, 6 February 2018

ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿ ಪ್ರಕಟ


ಕೊಪ್ಪಳ ಫೆ. 06 (ಕರ್ನಾಟಕ ವಾರ್ತೆ): ಈಶಾನ್ಯ ಪದವೀಧರರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು,  ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟಾರೆ 77461 ಮತದಾರರ ನೋಂದಣಿಯಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.  
    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವು ಈಗ ಮುಗಿದಿದ್ದು, ಮತದಾರರ ಪಟ್ಟಿಗಳನ್ನು ಅಂತಿಮವಾಗಿ ಜ. 19 ರಂದು ಪ್ರಚುರಪಡಿಸಲಾಗಿದೆ.  ಸಾರ್ವಜನಿಕರು ತಮ್ಮ ಹೆಸರುಗಳನ್ನು ಮುಖ್ಯ ಚುನಾವಣಾ ಆಯುಕ್ತರ ವೆಬ್‍ಸೈಟ್  www.ceokarnataka.kar.nic ನಲ್ಲಿ ವೀಕ್ಷಿಸಬಹುದಾಗಿದೆ.    ಪ್ರಕಟಿಸಲಾಗಿರುವ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಟ್ಟು 77461 ಮತದಾರರು ನೊಂದಣಿಯಾಗಿರುತ್ತಾರೆ.  ಈ ಪೈಕಿ ಕೊಪ್ಪಳ ಜಿಲ್ಲೆಯ6027- ಪುರುಷ ಹಾಗೂ 2138-ಮಹಿಳೆ ಸೇರಿದಂತೆ ಒಟ್ಟು 8165 ಮತದಾರರು ಹೆಸರು ನೊಂದಾಯಿಸಿದ್ದಾರೆ.
ಹೆಸರು ನೊಂದಯಿಸಲು ಅವಕಾಶ :
*************** ಪ್ರಜಾ ಪ್ರತಿನಿಧಿ ಕಾಯ್ದೆ 1950ರ ನಿಯಮ 22 ಮತ್ತು 23 ಹಾಗೂ ಮತದಾರರ ನೊಂದಣಿ ನಿಯಮ 1960ರಂತೆ ಮತದಾರರ ಪಟ್ಟಿ ತಯಾರಿಕೆಯು ನಿರಂತರ ಪ್ರಕ್ರಿಯೆ ಆಗಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಟಣೆ ನಂತರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಉಮೇದುವಾರಿಕೆ ಸಲ್ಲಿಸುವಿಕೆಯ ಕೊನೆಯ ದಿನದವರೆಗೂ ದ್ವೀಪ್ರತಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.  ದಿನಾಂಕ 01-11-2017 ಕ್ಕೆ ಮೂರು ವರ್ಷಗಳ ಹಿಂದೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಅರ್ಹ ಪದವೀಧರರು ತಾವು ವಾಸಿಸುತ್ತಿರುವ ಸ್ಥಳದ ತಹಸೀಲ್ದಾರರಿಗೆ, ಸಹಾಯಕ ಆಯುಕ್ತರಿಗೆ ದ್ವೀಪ್ರತಿಯಲ್ಲಿ ಅರ್ಜಿ ಸಲ್ಲಿಸಿದಲ್ಲಿ ಮತ್ತು ಸ್ವೀಕರಿಸಲಾದ ಅರ್ಜಿ ಚುನಾವಣಾ ಆಯೋಗವು ನೀಡಿದ ಶರತ್ತುಗಳಿಗೆ ಅನುಗುಣವಾಗಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗುವುದು. 
     ಅರ್ಹ ಪದವೀಧರರು ಈ ಬಗ್ಗೆ ಗಮನ ಹರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment