Friday, 9 February 2018

ಚಿಕಿತ್ಸೆಗೆಂದು ದಾಖಲಿಸಿ ತೊರೆದು ಹೋದ ಹೆಣ್ಣು ಮಗುವಿನ ರಕ್ಷಣೆ


ಕೊಪ್ಪಳ ಫೆ. 09 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ನವಜಾತ ಹೆಣ್ಣು ಶಿಶುವನ್ನು ಚಿಕಿತ್ಸೆಗೆಂದು ದಾಖಲಿಸಿ, ಬಿಟ್ಟುಹೋಗಿದ್ದು, ಇದುವರೆಗೂ ಮಗುವನ್ನು ಪಡೆಯಲು ಯಾರೂ ಬಾರದ ಕಾರಣಕ್ಕಾಗಿ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಗಿದೆ.
     ಕಳೆದ ಫೆ. 01 ರಂದು ಮೌಲಾಬಿ ಸಾ|| ಸಿಂಗನಾಳ ಎಂಬುವವರು ನವಜಾತ ಹೆಣ್ಣು ಶಿಶುವನ್ನು ಜಿಲ್ಲಾ ಆಸ್ಪತ್ರೆಯ ಎಸ್.ಎನ್.ಸಿ.ಯು ಘಟಕಕ್ಕೆ ಚಿಕಿತ್ಸೆಗಾಗಿ ದಾಖಲಿಸಿ ತೆರಳಿದ್ದು, ನಂತರ ಇದುವರೆಗೂ ಜಿಲ್ಲಾ ಆಸ್ಪತ್ರೆಗೆ ಹಿಂದಿರುಗಿ ಬಂದಿಲ್ಲ್ಲ.  ಜಿಲ್ಲಾ ಆಸ್ಪತ್ರೆಯಲ್ಲಿ ಈ ಮಗುವಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗಿದ್ದು, ಮಗು ಚೇತರಿಸಿಕೊಂಡಿರುತ್ತದೆ. ಇದುವರೆಗೂ ಮಗುವಿನ ಪಾಲಕರು ಮಗುವನ್ನು ಮರಳಿ ಕರೆದುಕೊಂಡು ಹೋಗಿರುವದಿಲ್ಲಾ ಮತ್ತು ಆಸ್ಪತ್ರೆಗೂ ಬಂದಿಲ್ಲಾ.  ಈ ಕುರಿತು ಪೊಲೀಸ್ ಇಲಾಖೆಗೆ ಪ್ರಕರಣದ ವರದಿ ನೀಡಲಾಗಿದ್ದು, ಮಗುವನ್ನು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದೆ.  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಈ ಮಗುವನ್ನು ಸದ್ಯ ತಾತ್ಕಾಲಿಕ ಆರೈಕೆ ಮತ್ತು ಪೋಷಣೆಗಾಗಿ ಅಮೂಲ್ಯ (ಪಿ) ದತ್ತು ಸೇವಾ ಕೇಂದ್ರಕ್ಕೆ ದಾಖಲಿಸಿದೆ. ಈ ಮಗುವಿನ ಬಗ್ಗೆ ಯಾರಿಗಾದರೂ, ಮಾಹಿತಿ ಇದ್ದಲ್ಲಿ, ಅಂತಹವರು  ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment