Thursday, 8 February 2018

ಭಾಗ್ಯನಗರ : ಅನುಮತಿ ಇಲ್ಲದೆ ಪ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ನಿರ್ಬಂಧ


ಕೊಪ್ಪಳ ಫೆ. 08 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯತಿ ಅನುಮತಿ ಇಲ್ಲದೇ ಯಾವುದೇ ಪ್ಲೇಕ್ಸ್ ಬ್ಯಾನರ್‍ಗಳನ್ನು ಅಳವಡಿಸುವುದು, ವ್ಯವಹಾರಗಳನ್ನು ಮಾಡಿಕೊಂಡಿರುವ ಅಂಗಡಿಗಳ ಮುಂದೆ ಅಡ್ಡಲಾಗಿ ಹಾಕುವುದನ್ನು ನಿರ್ಬಂಧಿಸಲಾಗಿದೆ. 
    ಕರ್ನಾಟಕ ಬಯಲು ಸ್ಥಳಗಳ (ವಿರೂಪಗೊಳಿಸುವಿಕೆಯ ನಿವಾರಣೆ) ಅಧಿನಿಯಮ 1981ರ ಅನುಸಾರ ಸ್ಪರ್ಧಾತ್ಮಕ ರೀತಿಯಲ್ಲಿ ಪ್ಲೆಕ್ಸ್‍ಗಳನ್ನು ಹಾಕುವುದರ ಮೂಲಕ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಮಾಡುವುದು ಬೇಡ.  ಮುಂಬರುವ ಚುನಾವಣೆಯಲ್ಲಿ ಈ ಕುರಿತು ಗೊಂದಲಗಳು ಉದ್ಬವಿಸುವುದರಿಂದ ಯಾವುದೇ ಸಂಘಟಕರು ರಾಜಕೀಯ ಪಕ್ಷಗಳು ಸರ್ಕಾರದ ನಿಯಮಗಳನ್ನು ಪಾಲಿಸುವುದರ ಮೂಲಕ ಅನಧಿಕೃತ ಪ್ಲೆಕ್ಸ್‍ಗಳನ್ನು ಹಾಕಬಾರದು.  ಮತ್ತು ಪ್ಲಾಸ್ಟಿಕ್‍ನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದೆಂದು ಭಾಗ್ಯನಗರ ಪಟ್ಟಣ ಪಂಚಾಯತ ವಿನಂತಿಸಿಕೊಂಡಿದೆ.  ಕಾರ್ಯಾಲಯದ ಅನುಮತಿ ಇಲ್ಲದೇ ಯಾವುದೇ ಪ್ಲೆಕ್ಸ್ ಬ್ಯಾನರ್‍ಗಳ ಅಳವಡಿಕೆಯನ್ನು, ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಲಾಗುವುದು ಎಂದು ಭಾಗ್ಯನಗರ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment