Wednesday, 7 February 2018

ಗಂಗಾವತಿ : ವಾಹನ ಚಾಲನಾ ತರಬೇತಿಗೆ ನೊಂದಾಯಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನ


ಕೊಪ್ಪಳ ಫೆ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿಗಾಗಿ ಲಘು ವಾಹನ ಚಾಲನಾ ತರಬೇತಿಗಾಗಿ ಗುರಿ ನಿಗಧಿಪಡಿಸಲಾಗಿದ್ದು, ಆರ್.ಟಿ.ಓ ನೋಂದಾಯಿತ ವಾಹನಾ ಚಲನಾ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಗಂಗಾವತಿ ನಗರಸಭೆಯ ಡೇ-ನಲ್ಮ್ ಯೋಜನೆಯಡಿಯಲ್ಲಿ ಲಘು ವಾಹನ ಚಾಲನಾ ತರಬೇತಿಯನ್ನು ಒದಗಿಸಲು ನಗರದ 60 ಅಭ್ಯರ್ಥಿಗಳನ್ನು ಗುರಿ ನಿಗದಿಪಡಿಸಲಾಗಿದೆ.  ಅರ್ಜಿ ಸಲ್ಲಿಸಲು ಸರ್ಕಾರಿ ಹಾಗೂ ಸರ್ಕಾರೇತರ ವಾಹನ ಚಾಲನಾ ತರಬೇತಿ ಸಂಸ್ಥೆಗಳು ಅರ್ಹರಾಗಿರುತ್ತಾರೆ.  ಆಸಕ್ತ ಸಂಸ್ಥೆಗಳು ಏಳು (07) ದಿನಗಳೊಳಗಾಗಿ ಗಂಗಾವತಿ ನಗರಸಭೆ ಪೌರಾಯುಕ್ತರಿಗೆ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ನಗರಸಭೆ ಕಾರ್ಯಾಲಯದ ಡೇ-ನಲ್ಮ ವಿಭಾಗಕ್ಕೆ ಕಛೇರಿ ವೇಳೆಯಲ್ಲಿ ಸಂರ್ಪಕಿಸಬಹುದು.  ಅಥವಾ ಸಂಜಯ್ ಕೋರೆ, ಅಭಿಯಾನ ವ್ಯವಸ್ಥಾಪಕರು, ಡೇ-ನಲ್ಮ, ನಗರಸಭೆ ಗಂಗಾವತಿ ದೂರವಾಣಿ ಸಂಖ್ಯೆ 9880652783 ಕ್ಕೆ ಸಂಪರ್ಕಿಸಬಹುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
Post a Comment