Friday, 9 February 2018

ಟ್ಯಾಕ್ಸಿ ಡ್ರೈವರ್ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನ


ಕೊಪ್ಪಳ ಫೆ. 08 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆಯ-ನಲ್ಮ್ ಅಭಿಯಾನದಡಿ ಟ್ಯಾಕ್ಸಿ ಡ್ರೈವರ್ ತರಬೇತಿ ನೀಡಲು ಆರ್.ಟಿ.ಓ ಅವರಿಂದ ನೋಂದಾಯಿಸಲ್ಪಟ್ಟಿರುವ ಅರ್ಹ ವಾಹನ ಚಾಲನಾ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಕೊಪ್ಪಳ ನಗರಸಭೆಯು ದೀನದಯಾಳ ಅಂತ್ಯೋದಯ ಯೋಜನೆಯ-ನಲ್ಮ್ ಅಭಿಯಾನದಡಿ ರಾಜ್ಯ ಯೋಜನೆಯ ಉಪ-ಘಟಕ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ನಿಯುಕ್ತಿ ಘಟಕದಡಿ ಆರ್.ಟಿ.ಓ. ನೋಂದಾಯಿತ ವಾಹನ ಚಾಲನಾ ತರಬೇತಿ ಸಂಸ್ಥೆಗಳಿಂದ “ಟ್ಯಾಕ್ಸಿ ಡ್ರೈವರ್ ಚಾಲನಾ ತರಬೇತಿ” ಯನ್ನು ನೀಡಲು ನಿರ್ಧರಿಸಿದ್ದು, ಪ್ರತಿ ಪಲಾನುಭವಿಗೆ ರೂ. 4750/- ದಂತೆ ತರಬೇತಿ ಶುಲ್ಕವನ್ನು ಪಾವತಿಸಲಾಗುವುದು.  ತರಬೇತಿ ಸಂಸ್ಥೆಯವರು ಬೇರೆ ಸಂಸ್ಥೆಗೆ ಉಪ-ಗುತ್ತಿಗೆ ನೀಡಬಾರದು.  ತರಬೇತಿಗೆ ಹಾಜರಾದ ಪ್ರಾರಂಭಿಕ ವರದಿಯನ್ನು ತರಬೇತಿ ಸಂಸ್ಥೆಯ ಮೂಲಕ ಪಡೆದ ನಂತರ ಹಾಗೂ ಅನುದಾನದ ಲಭ್ಯತೆ ಆಧಾರದ ಮೇಲೆ ಮೊದಲನೇ ಕಂತಿನ ಶೇ.50 ರಷ್ಟು ಅನುದಾನ ಬಿಡುಗಡೆ ಮಾಡಲಾಗುವುದು.  ತರಬೇತಿ ಪೂರ್ಣಗೊಂಡು ಚಾಲನಾ ಪರವಾನಿಗೆ ಪತ್ರ ನೀಡಿದ ನಂತರ ಹಾಗೂ ಅನುದಾನದ ಲಭ್ಯತೆ ಆಧಾರದ ಮೇಲೆ ಶೇ.30 ರಷ್ಟು ಬಿಡುಗಡೆ ಮಾಡಲಾಗುವುದು.  ತರಬೇತಿ ಪಡೆದ ಶೇ.50 ರಷ್ಟು ಅಭ್ಯರ್ಥಿಗಳು ಉದ್ಯೋಗಕ್ಕೆ ಸೇರಿಕೊಂಡು 6 ತಿಂಗಳ ವರೆಗೆ ಪೋಸ್ಟ್ ಪ್ಲೇಸ್‍ಮೆಂಟ್ ಟ್ರ್ಯಾಕ್ ಮಾಡಿದ ನಂತರ ಹಾಗೂ ಅನುದಾನದ ಲಭ್ಯತೆ ಆಧಾರದ ಮೇಲೆ ಮೂರನೇ ಕಂತಿನ ಶೇ.20 ರಷ್ಟು ಅನುದಾನವನ್ನು ಬಿಡುಗಡೆಮಾಡಲಾಗುವುದು.  ಅನುದಾನವನ್ನು ನಿರ್ದೇಶಕರು ಬಿಡುಗಡೆ ಮಾಡಿದ ನಂತರ ತರಬೇತಿ ಶುಲ್ಕವನ್ನು ಪಾವತಿಸಲಾಗುವುದು.
    ತರಬೇತಿ ನೀಡಲು ಇಚ್ಛೆಯುಳ್ಳ ಆರ್.ಟಿ.ಓ ನೋಂದಾಯಿತ ಅರ್ಹ ವಾಹನ ಚಾಲನಾ ತರಬೇತಿ ಸಂಸ್ಥೆಯವರು,  ಆರ್.ಟಿ.ಓ ನೋಂದಾಯಿತ ಪ್ರತಿ, ಕಾಲಕಾಲಕ್ಕೆ ನೋಂದಣಿಯಾದ ಪ್ರತಿ ಹಾಗೂ ಕನಿಷ್ಠ ಒಂದು ಸಲವಾದರು ನವೀಕರಣಗೊಂಡಿರುವ ಪ್ರತಿ, ಅನುಭವ ಪ್ರಮಾಣ ಪತ್ರ (ಈ ಹಿಂದೆ ತರಬೇತಿಗಾಗಿ ಸರ್ಕಾರದಿಂದ ಪಡೆದ ಆದೇಶಗಳ ಪ್ರತಿ), ಇತ್ಯಾದಿಗಳೊಂದಿಗೆ ಫೆ. 14 ರೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment