Tuesday, 6 February 2018

ಪ್ರಗತಿಪರ ರೈತರ ತಾಂತ್ರಿಕ ಆವಿಷ್ಕಾರಗಳನ್ನು ರೈತರಿಗೆ ತಲುಪಿಸಲು ತರಬೇತಿ


ಕೊಪ್ಪಳ ಫೆ. 06 (ಕರ್ನಾಟಕ ವಾರ್ತೆ): ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಪ್ರಗತಿಪರ ರೈತರ ತಾಂತ್ರಿಕ ಆವಿಷ್ಕಾರಗಳನ್ನು ತರಬೇತಿಗಳ ಮೂಲಕ ಇತರ ರೈತರಿಗೆ ತಲುಪಿಸುವ ಯೋಜನೆಯಡಿ “ಒಣ ಬೇಸಾಯ ಮತ್ತು ತೋಟಗಾರಿಕೆ ಅಭಿವೃದ್ಧಿ” ಎಂಬ ತರಬೇತಿಯನ್ನು ಫೆ. 14 ರಿಂದ 16 ರವರೆಗೆ ಮೂರು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ.
       ತರಬೇತಿ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದ್ದು, ತರಬೇತಿಯಲ್ಲಿ ಕೇವಲ 30 ಜನ ರೈತರಿಗೆ ಭಾಗವಹಿಸಲು ಅವಕಾಶವಿರುತ್ತದೆ. ಮೊದಲು ಬಂದು ಹೆಸರು ನೊಂದಾಯಿಸಿದ ರೈತರಿಗೆ ಆದ್ಯತೆ ನೀಡಲಾಗುವುದು.  ತರಬೇತಿಯಲ್ಲಿ ಭಾಗವಹಿಸುವವರು 3 ದಿನಗಳು ಕಡ್ಡಾಯವಾಗಿ ಹಾಜರಿರಬೇಕು. ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತ ರೈತರು ಫೆ. 09 ರೊಳಗಾಗಿ ಕೃಷಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತಾ.ಪಂ. ಆವರಣ, ಕೊಪ್ಪಳ ಇವರಲ್ಲಿ ಅಥವಾ ಜಂಟಿಕೃಷಿ ನಿರ್ದೇಶಕರ ಕಚೇರಿ, ಕೊಪ್ಪಳ ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ಡಾ. ಎಂ.ಬಿ. ಪಾಟೀಲ-9480696319, ಮಹಮದ್ ಹಸನ್-8277932145 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment