Monday, 12 February 2018

ಡಿಪ್ಲೋಮಾ ಹಳೆ ಪಠ್ಯಕ್ರಮ : ಪರೀಕ್ಷೆಗೆ ಕೊನೆಯ ಅವಕಾಶ


ಕೊಪ್ಪಳ ಫೆ. 12 (ಕರ್ನಾಟಕ ವಾರ್ತೆ) : ತಾಂತ್ರಿಕ ಶಿಕ್ಷಣ ಇಲಾಖೆಯು 2009-10 ನೇ ಸಾಲಿನಲ್ಲಿ ಸಿ-09 ಪಠ್ಯಕ್ರಮದಲ್ಲಿ ಡಿಪ್ಲೋಮಾ ಪ್ರವೇಶಾತಿ ಪಡೆದು, ಬಾಕಿ ವಿಷಯಗಳನ್ನು ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದನ್ವಯ 2018 ರ ಏಪ್ರಿಲ್/ಮೇ ಸೆಮಿಸ್ಟರ್ ಪರೀಕ್ಷೆಯೇ ಕೊನೆಯ ಅವಕಾಶವಾಗಿರುತ್ತದೆ.
     ಈ ಅವಧಿಯ ನಂತರ ಡಿಪ್ಲೋಮೊ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ.  ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment