Saturday, 3 February 2018

ಕಲಬುರಗಿ ರಂಗಾಯಣಕ್ಕೆ ನಟ/ನಟಿ ಆಯ್ಕೆ : ಅರ್ಜಿ ಆಹ್ವಾನ


ಕೊಪ್ಪಳ ಫೆ. 03 (ಕರ್ನಾಟಕ ವಾರ್ತೆ): ಕಲಬುರಗಿ ರಂಗಾಯಣಕ್ಕೆ ತಾತ್ಕಾಲಿಕವಾಗಿ 3 ವರ್ಷಗಳ ಅವಧಿಗೆ ಒಬ್ಬ ನಟ/ನಟಿಯನ್ನು ಆಯ್ಕ್ಕೆ ಮಾಡಿಕೊಂಡು ರೆಪರ್ಟರಿ ಪ್ರಾರಂಭಿಸಲಾಗುತ್ತಿದೆ. ಆಸಕ್ತರು ಈ ಕೆಳಕಂಡ ನಿಬಂಧನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸಬಹುದು.
      ಕಲಬುರಗಿ ರಂಗಾಯಣಕ್ಕೆ ಒಬ್ಬ ನಟ/ನಟಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.  ರಂಗ ಪರಿಣತಿಯೇ ಪ್ರಥಮ ಅರ್ಹತೆ ಹಾಗೂ ರಂಗ ಶಿಕ್ಷಣದ ಅರ್ಹತೆಗಳು ಅಪೇಕ್ಷೆಣೀಯ ಹೊರತು ಕಡ್ಡಾಯವಲ್ಲ. ರಂಗಪ್ರಯೋಗಗಳಲ್ಲಿ ಭಾಗವಹಿಸುವವರಿಗೆ ಆದ್ಯತೆಯನ್ನು ನೀಡಲಾಗುವುದು.  ಕಲಾವಿದರ ವಯಸ್ಸು ಗರಿಷ್ಟ 25 ವರ್ಷ ಮೀರಬಾರದು.  ಆಯ್ಕೆಯಾದ ಕಲಾವಿದರಿಗೆ ಮೊದಲ ವರ್ಷದಲ್ಲಿ ಸಂಚಿತ ವೇತನವನ್ನು ಮಾಸಿಕ ರೂ. 12,000/- ಎರಡನೇ ವರ್ಷದಲ್ಲಿ ಮಾಸಿಕ ರೂ. 14,000/- ಹಾಗೂ ಮೂರನೇ ವರ್ಷದಲ್ಲಿ ಮಾಸಿಕ ರೂ. 16,000/- ಗಳನ್ನು ಕ್ರೂಢೀಕೃತ ಸಂಬಳವಾಗಿ ನೀಡಲಾಗುವುದು. ಇತರೆ ಯಾವುದೇ ಭತ್ಯೆಗಳನ್ನು ನೀಡುವುದಿಲ್ಲ. ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಹಾಗೂ ರಂಗ ಶಿಕ್ಷಣದ ಪದವಿ ಪಡೆದು ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇಂತಹ ಪ್ರಕರಣದಲ್ಲಿ ವಯೋಮಿತಿಯನ್ನು 5 ವರ್ಷ ಸಡಿಲಿಸಬಹುದು.
     ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯು ರಂಗಾಯಣದ ಚಟುವಟಿಕೆಗಳ ಅಗತ್ಯದ ಹಿನ್ನಲೆಯಲ್ಲಿ ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವು ಸರ್ಕಾರದ ಖಾಯಂ ಹುದ್ದೆಗಳಾಗಿರುವುದಿಲ್ಲ.  ಈಗಾಗಲೇ ಆಯ್ಕೆಯಾಗಿರುವ ನಟ-ನಟಿಯರು  ಪುನ: ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಆಸಕ್ತ ಕಲಾವಿದರು ಬಿಳಿ ಹಾಳೆಯ ಮೇಲೆ ಸಂಪೂರ್ಣ ಸ್ವವಿವರ ಹಾಗೂ ತಮ್ಮ ಸಂಬಂಧಿಸಿದ ದಾಖಲೆಗಳೊಂದಿಗೆ ಫೆ. 14 ರ ಸಂಜೆ 5 ಗಂಟೆಯೊಳಗಾಗಿ ಇ-ಮೇಲ್ ವಿಳಾಸ  rangayanakalaburgi@gmail.com, rangayanakalaburagi@gmail.com ಅಥವಾ ಅಂಚೆ ಮೂಲಕ, ಖುದ್ದಾಗಿ ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ, ಡಾ. ಸಿದ್ಧಯ್ಯ ಪುರಾಣಿಕ ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ-ಶಹಾಬಾದ ವರ್ತುಲ ರಸ್ತೆ, ಕಲಬುರಗಿ ಜಿಲ್ಲೆ ಕಲಬುರಗಿ – 585105 ವಿಳಾಸಕ್ಕೆ ಸಲ್ಲಿಸಬೇಕು.   ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08472-227735ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment