Friday, 9 February 2018

ಕೊಪ್ಪಳ ನಗರಸಭೆ ವತಿಯಿಂದ ಟ್ಯಾಕ್ಸಿ ಡ್ರೈವರ್ ತರಬೇತಿ : ಅರ್ಜಿ ಆಹ್ವಾನ



ಕೊಪ್ಪಳ ಫೆ. 08 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆಯ-ನಲ್ಮ್ ಅಭಿಯಾನ ರಾಜ್ಯ ಯೋಜನೆಯಡಿ ನಿರುದ್ಯೋಗಿಗಳಿಗೆ ಟ್ಯಾಕ್ಸಿ ಡ್ರೈವರ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.  ಒಂದು ವರ್ಷ ಅವಧಿ ಮೀರಿರುವ ಚಾಲನಾ ಪ್ರಮಾಣ ಪತ್ರ ಹೊಂದಿರಬೇಕು.  ಹಾಗೂ 21 ವರ್ಷ ವಯೋಮಿತಿಯಲ್ಲಿರಬೇಕು.  ನಗರಸಭೆಯು ನಿಗದಿಪಡಿಸಲಾಗಿರುವ ಗುರಿಗೆ ತಕ್ಕಂತೆ ಪ. ಜಾತಿ/ ಪ. ಪಂಗಡ, ಅಲ್ಪಸಂಖ್ಯಾತರು ಹಾಗೂ ಇತರೆ ವರ್ಗದವರಿಗೆ ಸರ್ಕಾರದ ನಿಯಮಾನುಸಾರವಾಗಿ ಆಯ್ಕೆ ಮಾಡಲಾಗುತ್ತದೆ.  ಆಸಕ್ತರು ಅರ್ಜಿಯನ್ನು ಕಾರ್ಯಾಲಯದ ವಿಷಯ ನಿರ್ವಾಹಕರಿಂದ ಪಡೆದು ಭರ್ತಿ ಮಾಡಿ ಅದರೊಂದಿಗೆ ಜಾತಿ ಪ್ರಮಾಣ ಪತ್ರ, ಪ್ರಸಕ್ತ ಸಾಲಿನ ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಭಾವಚಿತ್ರವಿರುವ ಮತದಾರರ ಚೀಟಿ ಅಥವಾ ಆಧಾರ ಕಾರ್ಡ್, ಬಿ.ಪಿ.ಎಲ್ ರೇಷನ್ ಕಾರ್ಡ್, 03 ಭಾವಚಿತ್ರ, ಇತ್ಯಾದಿ ದಾಖಲೆ ಲಗತ್ತಿಸಿ ಫೆ. 15 ರೊಳಗಾಗಿ ಸಲ್ಲಿಸಬೇಕೆ.  ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಕಾರ್ಯಾಲಯದ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
Post a Comment