Monday, 12 February 2018

ಬಾಲಕ ಅಪಹರಣ ಶಂಕೆ: ಪತ್ತೆಗೆ ಸಹಕರಿಸುವಂತೆ ಮನವಿ


ಕೊಪ್ಪಳ ಫೆ.12 (ಕರ್ನಾಟಕ ವಾರ್ತೆ) : ಕೊಪ್ಪಳ ನಗರದ  ಗವಿಮಠ ವಸತಿ ನಿಲಯದ ಮೂವರು ವಿದ್ಯಾರ್ಥಿಗಳು ಫೆ. 02 ರಂದು ನಾಪತ್ತೆಯಾಗಿದ್ದರು, ಈ ಪೈಕಿ 02 ವಿದ್ಯಾರ್ಥಿಗಳು ಪತ್ತೆಯಾಗಿದ್ದು, ಇನ್ನೋರ್ವ ವಿದ್ಯಾರ್ಥಿ ಬಸವರಾಜ ಹರಿಜನ (13)  ಕಾಣೆಯಾಗಿದ್ದು, ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದೆ.  ಬಾಲಕನ ಪತ್ತೆಗೆ ಸಹಕರಿಸುವಂತೆ ನಗರ ಪೊಲೀಸ್ ಠಾಣೆಯ ಸ್ಟೇಶನ ಹೌಸ್ ಅಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    ಗವಿಮಠ ವಸತಿ ನಿಲಯದ ವಾರ್ಡನ್ ನೀಡಿದ ದೂರಿನನ್ವಯ ಮೂವರು ಬಾಲಕರು ಫೆ.02 ರಂದು ಬೆಳಿಗ್ಗೆ 9 ಗಂಟೆಗೆ ಶಾಲೆಗೆ ಹೋಗಿದ್ದು, ಶಾಲೆ ಬಿಟ್ಟ ನಂತರ ವಾಪಸ್ ವಸತಿ ನಿಲಯಕ್ಕೆ ಬಾರದೇ ಎಲ್ಲಿಯೋ ಕಾಣೆಯಾಗಿದ್ದರು.ವೀ ಪೈಕಿ ಇಬ್ಬರು ಬಾಲಕರು ಪತ್ತೆಯಾಗಿದ್ದು, ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಕಾಚಾಪೂರ ಗ್ರಾಮದ ವಿದ್ಯಾರ್ಥಿ ಬಸವರಾಜ ತಾಯಿ ಲಕ್ಷ್ಮವ್ವ ಹರಿಜನ (13) ಇದುವರೆಗೂ ಪತ್ತೆಯಾಗಿಲ್ಲ ಬಾಲಕನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿರುತ್ತದೆ.
     ಕಾಣೆಯಾದ ಬಾಲಕನ ಚಹರೆ ವಿವರ ಇಂತಿದೆ:  ಬಸವರಾಜ ಹರಿಜನ (13),  ಎತ್ತರ 4 ಅಡಿ, ಸದೃಢ ಮೈಕಟ್ಟು, ಕಪ್ಪು ತಲೆಗೂದಲು, ಕನ್ನಡ ಮಾತನಾಡುತ್ತಾನೆ. ಕಾಣೆಯಾದಾಗ ಖಾಕಿ ಪ್ಯಾಂಟ್, ಬಿಳಿ ಅಂಗಿ ಧರಿಸಿದ್ದಾನೆ. ಈ ಚಹರೆಯುಳ್ಳ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ ಕೂಡಲೆ ಕೊಪ್ಪಳ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08539-230100/230222 , ನಗರ ಪೊಲೀಸ್ ಠಾಣೆ ಮೊ ಸಂ:9480803745, ಅಥವಾ 08539-220333 ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment