Thursday, 1 February 2018

ಆದರ್ಶ ವಿದ್ಯಾಲಯ : 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಫೆ. 01 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಆದರ್ಶ ವಿದ್ಯಾಲಯಗಳಿಗೆ 2018-19 ನೇ ಸಾಲಿನ 6 ನೇ ತರಗತಿ (ವಸತಿ ರಹಿತ ಆಂಗ್ಲ ಮಾಧ್ಯಮ-ರಾಜ್ಯ ಪಠ್ಯಕ್ರಮ) ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
         ಪ್ರಸ್ತುತ 5 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕೊಪ್ಪಳ ಜಿಲ್ಲೆಯ ಆಯಾ ತಾಲೂಕಿನ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲಿಚ್ಚಿಸುವ ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಇಲಾಖೆ ವೆಬ್‍ಸೈಟ್   www.schooleducation.kar.nic.in ಅಥವಾ   www.vidyavahini.karnataka.gov.in ನಲ್ಲಿ ಫೆಬ್ರವರಿ. 17 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವನ್ನು ಅಥವಾ ಸಂಬಂಧಿಸಿದ ಆದರ್ಶ ವಿದ್ಯಾಲಯದ ಮುಖ್ಯ ಗುರುಗಳಾದ ಕೊಪ್ಪಳ (ಟಣಕನಕಲ್) ಎ.ಕೆ ತುಪ್ಪದ್ – 9902574251, ಗಂಗಾವತಿ (ಕನಕಗಿರಿ) ಕೃಷ್ಣಪ್ಪ – 9449546446, ಕುಷ್ಟಗಿ (ತಳುವಗೇರ) ಸಂಗಪ್ಪ ಕಿರಸೂರ್– 9008976878, ಯಲಬುರ್ಗಾ (ಇಟಗಿ) ಶರಣಪ್ಪ ಹಂಡಿ– 8105860704, ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳಾದ ಶೇಖರ್ (ಡಯಟ್ ಮುನಿರಾಬಾದ್ - 9535428290 ಹಾಗೂ ಮಹಾಂತೇಶ ಕೆ. (ಡಿ.ಡಿ.ಪಿ.ಐ ಕಛೇರಿ)– 9739909367, ಇವರನ್ನು ಸಂಪರ್ಕಿಸಬಹುದು.  ಸಂಬಂಧಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ ಸೇವಾ ಕೇಂದ್ರಗಳಲ್ಲಿ ಅಥವಾ ಖಾಸಗಿ ಯಾಗಿಯೂ ಉಚಿತವಾಗಿ ಆನ್‍ಲೈಲ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೆಶಕರು (ಅಭಿವೃದ್ಧಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment