Wednesday, 14 February 2018

ಫೆ. 17 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ


ಕೊಪ್ಪಳ ಫೆ. 14 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಮಿನಿ ಉದ್ಯೋಗ ಮೇಳವನ್ನು ಫೆ. 17 ರಂದು ಬೆಳಿಗ್ಗೆ 10-30 ರಿಂದ 2-30 ರವರೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
    ಮಿನಿ ಉದ್ಯೋಗ ಮೇಳದಲ್ಲಿ ಪ್ರೆಸುಲ್ ಇನ್ಪೋಟೆಕ್ ಹುಬ್ಬಳ್ಳಿ, ಸಾಯಿ ಬಯೋ ಫರ್ಟಿಲೈಜರ್ ಹುಬ್ಬಳ್ಳಿ, ಜಿ.ವಿ.ಕೆ-108 ಇ.ಎಮ್.ಆರ್.ಐ ಬೆಂಗಳೂರು, ನ್ಯಾಚುರಲ್ ಮ್ಯಾನೇಜಮೆಂಟ್ ಸರ್ವಿಸಸ್ ಬೆಂಗಳೂರು, ಎಮ್.ಎಸ್.ಪಿ.ಎಲ್ ಪ್ರೈ.ಲಿ ಕೊಪ್ಪಳ (ಹಾಲವರ್ತಿ), ಎಜು ಬ್ರೀಡ್ಜ್ ಪ್ರೈ.ಲಿ ಶಿವಮೊಗ್ಗ, ಪೆಮ್ಮಯ್ಯ ರಾಕ್ಸ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ.ಲಿ ಬೆಂಗಳೂರು, ಹಾಗೂ ಖಾಸಗಿ ಕಂಪನಿಗಳು ಭಾಗವಹಿಸಿ ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದು, ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ.
    ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಬಿ.ಎ., ಬಿ.ಬಿ.ಎಂ., ಬಿ.ಕಾಂ., ಬಿ.ಬಿ.ಎ., ಬಿ.ಇ., ಬಿ.ಎಸ್.ಸಿ., ಜಿ.ಎನ್.ಎಂ ನರ್ಸಿಂಗ್, ಎಂ.ಬಿ.ಎ., ಎಂ.ಸಿ.ಎ., ಮತ್ತು ನ್ಯಾಚುರಲ್ ಮ್ಯಾನೇಜಮೆಂಟ್ ಸರ್ವಿಸಸ್ ಇವರು 1ನೇ ತರಗತಿ ಯಿಂದ 9ನೇ ತರಗತಿಯವರೆಗೆ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಸಹ ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ.  ಸೆಕ್ಯೂರಿಟಿ ಹುದ್ದೆಗಳಿಗೆ 167 ಸಿ.ಎಂ ಎತ್ತರದ ದೇಹ ಧೃಢತೆಯನ್ನು ಹೊಂದಿರಬೇಕು.  ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.  18 ರಿಂದ 32 ವರ್ಷ ವಯೋಮಿತಿಯಲ್ಲಿನ ಅರ್ಹ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು, ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ, ಹಾಗೂ ಪಾಸ್ ಪೋಟ ಅಳತೆಯ ಭಾವಚಿತ್ರಗಳೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ ಕೊಪ್ಪಳ ದೂರವಾಣಿ ಸಂಖ್ಯೆ 08539-220859, ಮೊ.ಸಂ 8105848991 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment