Friday, 9 February 2018

ಕುಷ್ಟಗಿ : ಫೆ. 11 ರ ವಾರದ ಸಂತೆ ಮುಂದೂಡಿಕೆ


ಕೊಪ್ಪಳ ಫೆ. 09 (ಕರ್ನಾಟಕ ವಾರ್ತೆ): ಕುಷ್ಟಗಿ ಪಟ್ಟಣದಲ್ಲಿ ಫೆ. 11 ರಂದು ನಡೆಯಬೇಕಿದ್ದ ವಾರದ ಸಂತೆಯನ್ನು ಮುಂದೂಡಲಾಗಿದೆ ಎಂದು ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.
 ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು, ರಾಹುಲ್ ಗಾಂಧಿ ಎ.ಐ.ಸಿ.ಸಿ  ಅಧ್ಯಕ್ಷರು, ನವದೆಹಲಿ ಇವರು ಹಾಗೂ ಸರಕಾರದ ವಿವಿಧ ಸಚಿವರುಗಳು  ಫೆ. 11 ರಂದು ಕುಷ್ಟಗಿ ಪಟ್ಟಣದಲ್ಲಿ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಕುಷ್ಟಗಿ ಪಟ್ಟಣದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯಸ್ಥೆ ಕಾಪಾಡುವ ಉದ್ದೇಶದಿಂದ ಫೆ. 11 ರಂದು ರವಿವಾರ ದಿವಸ ನಡೆಯುವ ವಾರದ ಸಂತೆಯನ್ನು ಮುಂದೂಡಿದ್ದು, ಫೆ. 11 ರಂದು ರೈತರು ಜಾನುವಾರುಗಳನ್ನು ಮಾರುಕಟ್ಟೆಗೆ ಮಾರಾಟಕ್ಕೆ ಅಥವಾ ಖರೀದಿಗಾಗಿ ತರಬಾರದು ಎಂದು ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
Post a Comment