Friday, 8 September 2017

ವಾಜಪೇಯಿ ನಗರ ವಸತಿ ಯೋಜನೆ : ಅವಧಿ ವಿಸ್ತರಣೆ


ಕೊಪ್ಪಳ ಸೆ. 08 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ಖಾಲಿ ನಿವೇಶನ ಹೊಂದಿದ ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಒದಗಿಸಿಕೊಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್. 25 ರವರೆಗೆ ವಿಸ್ತರಿಸಲಾಗಿದೆ.
       ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಸಾಮಾನ್ಯ ವರ್ಗದ 105 ಹಾಗೂ ಅಲ್ಪಸಂಖ್ಯಾತರ 17 ಸೇರಿದಂತೆ ಒಟ್ಟು 122 ವಸತಿಗೆ ಕೊಪ್ಪಳ ನಗರಸಭೆ ವತಿಯಿಂದ ಗರಿಯನ್ನು ನಿಗದಿಪಡಿಸಲಾಗಿದೆ.  ಅರ್ಜಿ ಸಲ್ಲಿಸಲು ಕೊಪ್ಪಳ ನಗರ ಪ್ರದೇಶದವರಾಗಿರಬೇಕು.  ಅರ್ಜಿದಾರರು ತಮ್ಮ ಹೆಸರಿನಲ್ಲಿ ಖುಲ್ಲಾ ಜಾಗೆ ಹೊಂದಿರಬೇಕು.  ಪ್ರಸಕ್ತ ಸಾಲಿನ ಆಸ್ತಿಕರ ಪಾವತಿಸಿದ ರಶೀದಿ ಹಾಗೂ ನಮೂನೆ-3, ಆಧಾರ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ, ರೂ.20-00 ರ ಛಾಪಾ ಕಾಗದದ ಮೇಲೆ ಆಶ್ರಯ ಯೋಜನೆಯಡಿಯಲ್ಲಿ ಯಾವುದೇ ವಸತಿ ಸೌಲಭ್ಯ ಪಡೆದಿರುವುದಿಲ್ಲವೆಂಬ ನೋಟರಿ ಮಾಡಿಸಿ ಲಗತ್ತಿಸಬೇಕು.  ಖುಲ್ಲಾ ಜಾಗೆಯ ಭಾವಚಿತ್ರ ಹಾಗೂ ಅರ್ಜಿದಾರರ ಪಾಸ್‍ಪೋರ್ಟ್ ಸೈಜಿನ 03 ಭಾವಚಿತ್ರ, ಪ್ರಸಕ್ತ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಫಲಾನುಭವಿ ಹೆಸರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‍ಪುಸ್ತಕದ ಜರಾಕ್ಸ್ ಇತ್ಯಾದಿಗಳನ್ನು ಲಗತ್ತಿಸಿ, ಸೆಪ್ಟೆಂಬರ್. 25 ರೊಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment