Wednesday, 31 May 2017

ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ- ಎಂ. ಕನಗವಲ್ಲಿ


ಕೊಪ್ಪಳ, ಮೇ. 31 (ಕರ್ನಾಟಕ ವಾರ್ತೆ): ಕೃಷಿ ಮತ್ತು ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಎನ್ನುವ ಘೋಷವಾಕ್ಯದಡಿ ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಜಿಲ್ಲೆಯಲ್ಲಿ ಕೃಷಿ ಅಭಿಯಾನ ಪ್ರಾರಂಭಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೃಷಿ ಮತ್ತು ಬೇಸಾಯ ಸಂಬಂಧಿತ ಇಲಾಖೆಗಳಾದ ಕೃಷಿ ಇಲಾಖೆ, ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ, ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು, ಕೃಷಿ ಅಭಿಯಾನ ಮೂಲಕ ರೈತರಿಗೆ ಮಾಹಿತಿ ಒದಗಿಸುವುದು, ತಾಂತ್ರಿಕತೆಯನ್ನು ರೈತರಿಗೆ ವರ್ಗಾವಣೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಈ ಬಾರಿ ಕೃಷಿ ಅಭಿಯಾನವನ್ನು ಜೂ. 01 ರಿಂದ ಪ್ರಾರಂಭಿಸಲಾಗುವುದು.  ಪ್ರತಿ ಹೋಬಳಿಗೆ ಒಂದು ಮಾಹಿತಿ ರಥ ವಾಹನ ಸಂಚರಿಸಲಿದ್ದು, ವಾಹನದಲ್ಲಿ ಧ್ವನಿವರ್ಧಕ, ಮಾಹಿತಿ ಫಲಕಗಳ ಮೂಲಕ ರೈತರಿಗೆ ಮಾಹಿತಿ ಒದಗಿಸಲಾಗುವುದು.  ಕೃಷಿ ಮತ್ತು ಬೇಸಾಯ ಸಂಬಂಧಿತ ಇಲಾಖೆಗಳು ಸಮನ್ವಯದೊಂದಿಗೆ ಹಾಗೂ ಸಂಬಂಧಪಟ್ಟ ಕ್ಷೇತ್ರಗಳ ಎಲ್ಲ ಜನಪ್ರತಿನಿಧಿಗಳನ್ನು ಜೊತೆಗೂಡಿಸಿಕೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಿ :
************* ಬೆಳೆ ಪರಿಹಾರ, ಬೆಳೆ ವಿಮೆ ಸೇರಿದಂತೆ ರೈತರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ವಿಳಂಬವಾಗದಂತೆ ತಲುಪಲು, ರೈತರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸುವುದು ಅತ್ಯಂತ ಪ್ರಮುಖ ಕಾರ್ಯವಾಗಿದೆ. ಸರ್ಕಾರದ ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುತ್ತಿರುವುದರಿಂದ, ರೈತರು, ತಮ್ಮ ಬ್ಯಾಂಕ್ ಖಾತೆಯನ್ನು ಅವರದೇ ಆಧಾರ್ ಸಂಖ್ಯೆಗೆ ಕಡ್ಡಾಯವಾಗಿ ಜೋಡಣೆ ಮಾಡಿಸಬೇಕು.  ಇದುವರೆಗೂ ಆಧಾರ್ ಮಾಡಿಸದಿರುವವರು, ಕೂಡಲೆ ಆಧಾರ್ ನೊಂದಣಿ ಮಾಡಿಸಬೇಕು ಈ ಕುರಿತಂತೆ ಕೃಷಿ ಅಭಿಯಾನದಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ಬೆಳೆ ವಿಮೆ ಜಾಗೃತಿ :
******** ಪ್ರಕೃತಿಯ ಅಸಮತೋಲನದಿಂದಾಗಿ ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಕೈ ಸೇರುತ್ತಿಲ್ಲ.  ಹೀಗಾಗಿ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳುವುದು ಸೂಕ್ತ.  ಶೀಘ್ರದಲ್ಲಿಯೇ ಮುಂಗಾರು ಹಂಗಾಮು ಪ್ರಾರಂಭವಾಗಲಿದ್ದು, ರೈತರಿಗೆ ಬೆಳೆ ವಿಮೆ ಕುರಿತಂತೆಯೂ ಜಾಗೃತಿ ಮೂಡಿಸಬೇಕು.  ರೈತರು ಯಾವ ಬೆಳೆ, ಬೆಳೆಯುತ್ತಾರೆಯೋ ಅದೇ ಬೆಳೆಗೆ ವಿಮೆ ಮಾಡಿಸಬೇಕು.  ವಿಮೆ ಮಾಡಿಸುವಾಗ ಬಿತ್ತನೆ ಪ್ರಮಾಣಪತ್ರದ ದಾಖಲೆ ಸಲ್ಲಿಸಿ ವಿಮೆ ಮಾಡಿಸಬೇಕು.  ವಿಮೆ ಮಾಡಿಸಲು ಕೊನೆಯ ದಿನಾಂಕದವರೆಗೂ ಕಾಯದೆ, ಸಕಾಲದಲ್ಲಿ ಬೆಳೆ ವಿಮೆ ಮಾಡಿಸಬೇಕು.  ರೈತರು ಬೆಳೆ ಕಟಾವು ಮಾಡುವ ಮುನ್ನ ಮಾಹಿತಿ ನೀಡಿ ಮಾಡಿದಲ್ಲಿ ಸೂಕ್ತ.  ಬೆಳೆ ಕಟಾವು ಸಮೀಕ್ಷೆಯ ಆಧಾರದಲ್ಲಿಯೇ ಬೆಳೆ ವಿಮೆಯನ್ನು ನಿರ್ಧಾರ ಮಾಡುವುದರಿಂದ, ರೈತರು ಈ ಕುರಿತು ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು.  ಈ ಕುರಿತಂತೆಯೂ ರೈತರಿಗೆ ಕೃಷಿ ಅಭಿಯಾನ ಸಂದರ್ಭದಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೃಷಿ ಅಭಿಯಾನ ಕುರಿತು ಮಾಹಿತಿ ನೀಡಿದ ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು, ಈ ಬಾರಿಯ ಕೃಷಿ ಅಭಿಯಾನದಲ್ಲಿ ಸಿರಿಧಾನ್ಯದ ಮಹತ್ವ, ನೀರಿನ ಸದ್ಬಳಕೆ ಹಾಗೂ ವಿಫಲ ಕೊಳವೆ ಬಾವಿಯನ್ನು ಮುಚ್ಚುವ ಕುರಿತು, ಕೃಷಿ ಯಾಂತ್ರೀಕರಣ, ಕಳೆ ನಾಶಕಗಳು, ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ, ಮಣ್ಣು ಆರೋಗ್ಯ,  ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗುತ್ತಿದೆ.  ಜೊತೆಗೆ ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ, ರೈತರ ಮನೋಸ್ಥೈರ್ಯ ಹೆಚ್ಚಿಸುವುದಕ್ಕೆ ಒತ್ತು ನೀಡಲಾಗುವುದು.  ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಸಹಕಾರ ಮತ್ತು ಕಂದಾಯ ಇಲಾಖೆಗಳು ಅಭಿಯಾನಕ್ಕೆ ಕೈಜೋಡಿಸಲಿವೆ.  ಅದರ ಜೊತೆಗೆ ಕೃಷಿ ವಿವಿ ಮತ್ತು ಕೆವಿಕೆ ವಿಜ್ಞಾನಿಗಳು, ರೈತರು, ಆತ್ಮ ಗುಂಪುಗಳು, ಸಾವಯವ ಕೃಷಿ, ಸ್ವಸಹಾಯ, ಸರ್ಕಾರೇತರ ಗುಂಪುಗಳು ಭಾಗವಹಿಸಲಿವೆ.  ಕೃಷಿ ಅಭಿಯಾನದಡಿ ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಹೋಬಳಿಯಲ್ಲಿ ಗ್ರಾ.ಪಂ. ವಾರು ಕಾರ್ಯ ತಂಡಗಳನ್ನು ರಚಿಸಿಕೊಂಡು, ಆಯಾ ಪಂಚಾಯಿತಿಗೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಸಂಚಾರಿ ಕೃಷಿ ಮಾಹಿತಿ ಘಟಕಗಳ ಮೂಲಕ ತೀವ್ರ ಪ್ರಚಾರ ಕೈಗೊಳ್ಳಲಾಗುವುದು.  ಹೋಬಳಿ ಕೇಂದ್ರಸ್ಥಾನದಲ್ಲಿ ಕೃಷಿ ವಸ್ತುಪ್ರದರ್ಶನ, ರೈತರ ಸಂವಾದದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಮಾಡಲಾಗುವುದು ಎಂದರು.
ಕೃಷಿ ಅಭಿಯಾನ ವೇಳಾಪಟ್ಟಿ :
************ ಗಂಗಾವತಿ ತಾಲೂಕಿನ ಗಂಗಾವತಿ, ಕಾರಟಗಿ, ಕನಕಗಿರಿ ಹೋಬಳಿಯಲ್ಲಿ ಜೂ. 01 ರಿಂದ 03 ರವರೆಗೆ.  ವೆಂಕಟಗಿರಿ- ಜೂ. 04 ರಿಂದ 06.  ಮರಳಿ, ಸಿದ್ದಾಪುರ, ಹುಲಿಹೈದರ ನಲ್ಲಿ- ಜೂ. 05 ರಿಂದ 07 ರವರೆಗೆ ನಡೆಯಲಿದೆ.  ಕೊಪ್ಪಳ ತಾಲೂಕಿನ ಕೊಪ್ಪಳ, ಹುಲಿಗಿ ಹೋಬಳಿಯಲ್ಲಿ ಜೂ. 02 ರಿಂದ 04.  ಇರಕಲ್ಲಗಡ ಮತ್ತು ಅಳವಂಡಿ ಹೋಬಳಿಯಲ್ಲಿ ಜೂ. 06 ರಿಂದ 08 ರವರೆಗೆ.  ಯಲಬುರ್ಗಾ ತಾಲೂಕಿನ ಯಲಬುರ್ಗಾ ಮತ್ತು ಮಂಗಳೂರು ಹೋಬಳಿಗಳಲ್ಲಿ ಜೂ. 01 ರಿಂದ  03 ರವರೆಗೆ.  ಕುಕನೂರು, ಹಿರೇವಂಕಲಕುಂಟಾ ಹೋಬಳಿಗಳಲ್ಲಿ ಜೂ. 02 ರಿಂದ 04 ರವರೆಗೆ.  ಕುಷ್ಟಗಿ ತಾಲೂಕಿನ ತಾವರಗೇರಾ, ಕುಷ್ಟಗಿ ಹೋಬಳಿಗಳಲ್ಲಿ ಜೂ. 02 ರಿಂದ 03 ರವರೆಗೆ ಹಾಗೂ ಹನಮಸಾಗರ ಮತ್ತು ಹನಮನಾಳ ಹೋಬಳಿಗಳಲ್ಲಿ ಜೂ. 05 ರಿಂದ 07 ರವರೆಗೆ ಅಭಿಯಾನ ನಡೆಯಲಿದೆ ಎಂದು ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು ಹೇಳಿದರು.
     ಸಭೆಯಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ಮಂಜುನಾಥ್, ಸೇರಿದಂತೆ ಎಲ್ಲ ಸಹಾಯಕ ಕೃಷಿ ನಿರ್ದೇಶಕರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಂಬಾಕು ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕ : ವಿಜಯಲಕ್ಷ್ಮೀ ಉಪನಾಳ


ಕೊಪ್ಪಳ, ಮೇ. 31 (ಕರ್ನಾಟಕ ವಾರ್ತೆ): ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಹಾಗೂ ಅಭಿವೃದ್ಧಿಗೆ ಮಾರಕವಾಗಿದ್ದು, ತಂಬಾಕು ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್. ಉಪನಾಳ ಹೇಳಿದರು.
    ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಇವರ ಸಹಯೋಗದಲ್ಲಿ ಬುಧವಾರದಂದು ಜಿಲ್ಲಾ ನ್ಯಾಯಾಲಯದ ಸಾಕ್ಷಿದಾರರ ಮೊಗಸಾಲೆ ಆವರಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸಮಾಜದಲ್ಲಿ ನಾವು ವಿದ್ಯಾವಂತರಾಗಿದ್ದೇವೆ ಅಂದುಕೊಂಡರೆ ಸಾಲದು, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ, ಕುಟುಂಬ, ಸಮಾಜದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ತಂಬಾಕು ಸೇವೇನೆಯನ್ನು ತಡೆಗಟ್ಟಲು ಸಹಕರಿಸಬೇಕು.  ಅಂದಾಗ ಮಾತ್ರ ನಾವು ವಿದ್ಯಾವಂತರು ಎನಿಸಿಕೊಳ್ಳಲು ಸಾಧ್ಯ.  ಒಬ್ಬರು ಕನಿಷ್ಠ 2 ವ್ಯಕ್ತಿಗಳನ್ನು ಸುಧಾರಿಸುವ ಕಾರ್ಯವೆಸಗಿದಲ್ಲಿ, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ತ್ವರಿತವಾಗಿ ಸುಧಾರಿಸಬಹುದು.  ಜೀವನ ಆಯ್ದುಕೊಳ್ಳಿ ತಂಬಾಕನ್ನಲ್ಲ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್. ಉಪನಾಳ ಹೇಳಿದರು.
    ತಂಬಾಕು ಉತ್ಪನ್ನಗಳ ಅಧಿನಿಯಮ-2003 ಹಾಗೂ ತಂಬಾಕು ಸೇವೆನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಎಂ.ಎಂ. ಕಟ್ಟಿಮನಿ ಅವರು ವಿಶೇಷ ಉಪನ್ಯಾಸ ನೀಡಿ, ತಂಬಾಕು ಸೇವನೆಯಲ್ಲಿ ಹೊಗೆ ರಹಿತ ಹಾಗೂ ಹೊಗೆ ಸಹಿತ ಎರಡು ಪ್ರಕಾರಗಳಲ್ಲಿವೆ.  ಹೊಗೆ ರಹಿತ ತಂಬಾಕು ಸೇವನೆಗಳಲ್ಲಿ ತಂಬಾಕು, ಗುಟ್ಕಾ, ಇತ್ಯಾದಿ, ಹಾಗೂ ಹೊಗೆ ಸಹಿತ ತಂಬಾಕು ಸೇವನೆಯಲ್ಲಿ ಬೀಡಿ, ಸಿಗ್‍ರೇಟ್ ಇತ್ಯಾದಿಗಳ ಸೇವನೆಯಾಗಿವೆ.  ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಖಾಯಿಲೆಗಳಿಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ.  ತಂಬಾಕು ಸೇವನೆಯಿಂದ ಪ್ರತಿದಿನ ಸುಮಾರು 6 ಲಕ್ಷ ಜನರು ಸಾವನ್ನಪ್ಪುತ್ತಾರೆ.    ಇದರ ನಿಯಂತ್ರಣಕ್ಕಾಗಿ ತಂಬಾಕು ನಿಯಂತ್ರಣ ಕಾನೂನು- ಕೋಟ್ಪಾ 2003 ಕಾಯ್ದೆ ಜಾರಿಗೆ ಬಂದಿದೆ.  ಸೆಕ್ಷನ್-4 ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದು ನಿóಷೇಧ.  ಸೆಕ್ಷನ್-5 ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತೆ ನಿಷೇಧ.  ಸೆಕ್ಷನ್-6 ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ (18 ವರ್ಷದೊಳಗಿನ ಮಕ್ಕಳಿಗೆ) ಸಿಗದಂತೆ ನಿಯಂತ್ರಣ ಮಾಡುವುದು.  ಹಾಗೂ ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ರಾಮಕೃಷ್ಣ ಅವರು ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಶ್ರೀನಿವಾಸ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ ಕನ್ನೂರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರಡ್ಡಿ, ಡಾ. ಜಂಬಯ್ಯ, ಡಾ. ಯುವರಾಜ ಸೇರಿದಂತೆ   ಇತರರು ಪಾಲ್ಗೊಂಡಿದ್ದರು.

ಜೂ. 13 ರಂದು ಕೊಪ್ಪಳ ತಾ.ಪಂ. ಸಾಮಾನ್ಯ ಸಭೆ


ಕೊಪ್ಪಳ, ಮೇ. 31 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಪಂಚಾಯತ್ ಸಾಮಾನ್ಯ ಸಭೆ ಜೂನ್. 13 ರಂದು ಬೆಳಿಗ್ಗೆ 10-30 ಗಂಟೆಗೆ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. 
    ಸಭೆಯ ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಅವರು ವಹಿಸುವರು.  ತಾಲೂಕ ಮಟ್ಟದ ಎಲ್ಲಾ ಅನುಷ್ಠಾನಾಧಿಕಾರಿಗಳು ಪ್ರತಿನಿಧಿಗಳಿಗೆ ಕಳುಹಿಸದೇ, ಖುದ್ದಾಗಿ ಎಲ್ಲಾ ಮಾಹಿತಿಯೊಂದಿಗೆ ತಪ್ಪದೇ ಸಭೆಗೆ ಹಾಜರಾಗಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಜೂ.02 ರಂದು ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ


ಕೊಪ್ಪಳ, ಮೇ. 31 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆಗಳಿಗೆ ಜೂ. 02 ರಂದು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಯಲಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿಗಳು ತಿಳಿಸಿದ್ದಾರೆ.
     ಸಮನ್ವಯ ಶಿಕ್ಷಣ ಚಟುವಟಿಕೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲೆಯ ನಾಲ್ಕು ಕ್ಷೇತ್ರ ಸಂಪನ್ಮೂಲ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ ನಾಲ್ಕರಂತೆ (ಪ್ರಾಥಮಿಕ/ ಪ್ರೌಢ) ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಈ ಹುದ್ದೆಗಳಿಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿಶೇಷ ಬಿ.ಇಡಿ/ ವಿಶೇಷ ಡಿ.ಇಡಿ/ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಜೂ. 02 ರಂದು ಬೆಳಿಗ್ಗೆ 11-00 ಗಂಟೆಗೆ ಕೊಪ್ಪಳ ಸರ್ವ ಶಿಕ್ಷಣ ಅಭಿಯಾನ ಉಪನಿದೇರ್ಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಲಾಗಿದೆ. 
    ಭಾಗವಹಿಸುವ ಆಸಕ್ತ ಅಭ್ಯರ್ಥಿಗಳು ಪ್ರಾಥಮಿಕ/ ಪ್ರೌಢ ಶಾಲೆಗಳ ಶಿಕ್ಷಕರು ಅಗತ್ಯ ಶೈಕ್ಷಣಿಕ ವಿದ್ಯಾರ್ಹತೆ ದಾಖಲಾತಿಗಳು ಹಾಗೂ ಬಿ.ಇ.ಒ ಇವರಿಂದ ಸೇವಾ ದೃಢೀಕರಣ ಪತ್ರ ಪಡೆದುಕೊಂಡು ಹಾಜರಾಗಬೇಕು.  ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಸರ್ವ ಶಿಕ್ಷಣ ಅಭಿಯಾನ ಉಪನಿದೇರ್ಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜೂ.01 ರಂದು ಕುಕನೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕಾರ್ಯಗಳಿಗೆ ಚಾಲನೆ


ಕೊಪ್ಪಳ, ಮೇ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ಮತ್ತು ಕುಕನೂರ ಪಟ್ಟಣ ಪಂಚಾಯತ್ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಹಾಗೂ 14ನೇ ಹಣಕಾಸು ಯೋಜನೆಯ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಎಚ್.ಕೆ.ಡಿ.ಪಿ ಯೋಜನೆಯ ಬುದ್ಧ, ಬಸವ, ಅಂಬೇಡ್ಕರ ಭವನದ ಕಾಮಗಾರಿಗಳ ಅಡಿಗಲ್ಲು ಮತ್ತು ಬಾಲಕರ ವಸತಿ ನಿಲಯದ ಉದ್ಘಾಟನಾ ಸಮಾರಂಭ ಜೂ.01 ರಂದು ಬೆಳಿಗ್ಗೆ 10-00 ಗಂಟೆಗೆ ಕುಕನೂರಿನಲ್ಲಿ ನಡೆಯಲಿದೆ.  
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ನೆರೆವೇರಿಸುವರು.  ಕುಕನೂರ ಪ.ಪಂ. ಅಧ್ಯಕ್ಷೆ ಸುಭದ್ರಾ ಮಲಿಯಪ್ಪ ಅಣ್ಣಿಗೇರಿ ಅಧ್ಯಕ್ಷತೆ ವಹಿಸುವರು.  ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ, ಕೆ.ರಾಘವೇಂದ್ರ ಹಿಟ್ನಾಳ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ಯಲಬುರ್ಗಾ ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ದ್ಯಾಮಣ್ಣ ಗೌಡರ್, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನುಪ್ ಕೆ.ಶೆಟ್ಟಿ,  ಅಪರ ಜಿಲ್ಲಾಧಿಕಾರಿ ರುದ್ರೇಶ ಎಸ್.ಘಾಳಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ವಿಜಯ ಕುಮಾರ ಮೆಕ್ಕಳಕಿ, ಸಹಾಯಕ ಕಾರ್ಯಪಾಲಕ ಅಭಿಯಂತ ಮಂಜುನಾಥ ಪಿ.ಎ. ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tuesday, 30 May 2017

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ, ಮೇ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಮೇ. 31 ಮತ್ತು ಜೂ. 01 ರಂದು ಎರಡು ದಿನಗಳ ಜಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮಂತ್ರಿಗಳು ಮೇ. 31 ರಂದು ಸಂಜೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 7-45 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ವಾಸ್ತವ್ಯ ಮಾಡುವರು.  ಜೂ. 01 ರಂದು ಬೆಳಿಗ್ಗೆ 11 ಗಂಟೆಗೆ ಯಲಬುರ್ಗಾ ತಾಲೂಕು ಕುಕನೂರಿನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಜೂ. 11 ರಂದು ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿ ಎಂದು ನಾಮಕರಣ ಮಾಡುವ ಕಾರ್ಯಕ್ರಮ ಕುರಿತು ಹಾಗೂ ಮಹಿಳಾ ಜಾಗೃತಿ ಹಾಗೂ ಮಹಿಳಾ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಮಹಿಳೆಯರು ಭಾಗವಹಿಸುವ ಕುರಿತು ಮಧ್ಯಾಹ್ನ 12 ಗಂಟೆಗೆ ಕೊಪ್ಪಳ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವರು.  ಮಂತ್ರಿಗಳು ಜೂ. 01 ರಂದು ಮಧ್ಯಾಹ್ನ 2-30 ಗಂಟೆಗೆ ಹುಬ್ಬಳ್ಳಿಗೆ ತೆರಳಿ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ವಿಜಯಪುರ ಮಹಿಳಾ ವಿವಿಗೆ ಅಕ್ಕಮಹಾದೇವಿ ವಿವಿ ಎಂದು ನಾಮಕರಣ: ಪೂರ್ವಭಾವಿ ಸಭೆ


ಕೊಪ್ಪಳ, ಮೇ. 29 (ಕರ್ನಾಟಕ ವಾರ್ತೆ): ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡುವ ಸಂಬಂಧ ಜೂ. 11 ರಂದು ವಿಜಯಪುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕುರಿತಂತೆ ಪೂರ್ವಭಾವಿ ಸಭೆ ಜೂ. 01 ರಂದು ಮಧ್ಯಾಹ್ನ 12-30 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
       ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ವಹಿಸುವರು.  ಮಹಿಳಾ ಜಾಗೃತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯಿಂದ ಭಾಗವಹಿಸುವುದರ ಕುರಿತಂತೆಯೂ ಚರ್ಚೆ ನಡೆಯಲಿದೆ.   ಸಭೆಯಲ್ಲಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ತಿಳಿಸಿದ್ದಾರೆ.

ಮೇ. 31 ರಂದು ಕೊಪ್ಪಳದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ


ಕೊಪ್ಪಳ, ಮೇ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಇವರ ಸಹಯೋಗದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಮೇ. 31 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾ ಕೋರ್ಟ್ ಹಿಂಬಾಗ ಸಾಕ್ಷಿದರ ಮೊಗಸಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
    ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ “ತಂಬಾಕು-ಅಭಿವೃದ್ಧಿಗೆ ಮಾರಕ” ಎಂಬ ಘೋಷ ವಾಕ್ಯದಡಿ, ಕಾನೂನು ಅರಿವು-ನೆರವು ಕಾರ್ಯಕ್ರಮ ಮೇ. 31 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾ ಕೋರ್ಟ್ ಹಿಂಬಾಗದ ಸಾಕ್ಷಿದರ ಮೊಗಸಾಲೆ ಆವರಣದಲ್ಲಿ ನಡೆಯಲಿದೆ.
    ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್. ಉಪನಾಳ ಅವರು ಉದ್ಘಾಟನೆ ನೆರೆವೇರಿಸುವರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ರಾಮಕೃಷ್ಣ  ಅಧ್ಯಕ್ಷತೆ ವಹಿಸುವರು.   ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಶ್ರೀನಿವಾಸ, ಕಿರಿಯ ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ ಕನ್ನೂರು, ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಉಪಾಧ್ಯಕ್ಷ ಶೇಖರಪ್ಪ ಹೆಚ್. ಇಂಗಳದಾಳ, ಕಾರ್ಯದರ್ಶಿ ಕೊಟ್ರೇಶ ಯು.ಪೋಚಗುಂಡಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಪಾಲ್ಗೊಳ್ಳುವರು.
    ಕಾನೂನು ಅರಿವು-ನೆರವು ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಎಂ.ಎಂ. ಕಟ್ಟಿಮನಿ ಅವರು ತಂಬಾಕು ಉತ್ಪನ್ನಗಳ ಅಧಿನಿಯಮ-2003 ಹಾಗೂ ತಂಬಾಕು ಸೇವೆನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.     

ಭಾಗ್ಯನಗರ ಪ.ಪಂ. ವತಿಯಿಂದ ವಿವಿಧ ಯೋಜನೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 29 (ಕರ್ನಾಟಕ ವಾರ್ತೆ): ಭಾಗ್ಯನಗರ ಪಟ್ಟಣ ಪಂಚಾಯತಿಯಿಂದ ವಿವಿಧ ಯೋಜನೆಯಡಿ ಅನಿಲ ಸಂಪರ್ಕ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 
    ಭಾಗ್ಯನಗರ ಪಟ್ಟಣ ಪಂಚಾಯತಿಯಿಂದ ಶೇ. 24.10ರ ಅಡಿಯಲ್ಲಿ ಬಡ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ ಅನಿಲ ಸಂಪರ್ಕ ಹಾಗೂ ವಿವಿಧ ಶೈಕ್ಷಣಿಕ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಹಾಗೂ ಶೇ. 7.25ರ ಅಡಿ ಕಾರ್ಯಕ್ರಮದಲ್ಲಿ ಪಟ್ಟಣದ ಬಡ ಜನರಿಗೆ ಅನಿಲ ಸಂಪರ್ಕ ಒದಗಿಸಲಾಗುವುದು.  ಹಾಗೂ ಶೇ.3ರ ವಿಕಲಚೇತನರ ಕಾರ್ಯಕ್ರಮದಲ್ಲಿ ತ್ರಿಚಕ್ರ ಮೋಟಾರ್ ವಾಹನ ವಿತರಿಸಲಾಗುವುದು. 
    ಅರ್ಜಿ ಸಲ್ಲಿಸಲು ಆಧಾರ ಕಾರ್ಡ, ಭಾಗ್ಯನಗರ ನಿವಾಸಿಯಂಬ ಬಗ್ಗೆ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗುರುತಿನ ಚೀಟಿ, ಹಿಂದಿನ ವರ್ಷದ ಅಂಕಪಟ್ಟಿ, ವಿಧ್ಯಾಭ್ಯಾಸದ ಪ್ರಮಾಣ ಪತ್ರ, ಬೇರೆ ಇಲಾಖೆಯಿಂದ ಪ್ರೋತ್ಸಾಹ ಧನ ಮತ್ತು ಅನಿಲ ಸಂಪರ್ಕ ಸೌಲಭ್ಯ ಪಡೆದಿರುವುದಿಲ್ಲವೆಂಬ ಬಗ್ಗೆ ಪತ್ರದೊಂದಿಗೆ ಜೂ. 30 ರೊಳಗಾಗಿ ಭಾಗ್ಯನಗರ ಪಟ್ಟಣ ಪಂಚಾಯತಿ ಕಛೇರಿಗೆ ತಮ್ಮ ಭಾವಚಿತ್ರಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನಕಗಿರಿ ಪ.ಪಂ. ವತಿಯಿಂದ ವಿವಿಧ ಯೋಜನೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 29 (ಕರ್ನಾಟಕ ವಾರ್ತೆ): ಕನಕಗಿರಿ ಪಟ್ಟಣ ಪಂಚಾಯತಿಯಿಂದ ಪ್ರಸಕ್ತ ಸಾಲಿಗೆ  ಎಸ್.ಎಫ್.ಸಿ/ ಪಟ್ಟಣ ಪಂಚಾಯತಿ ನಿಧಿ ಅನುದಾನ ಪ.ಜಾ/ ಪ.ಪಂ ಬಡ ಜನಾಂಗದವರಿಗೆ/ ಇತರೆ ಜನಾಂಗದವರಿಗೆ/ ವಿಕಲಚೇತನರ ಕಲ್ಯಾಣಕ್ಕಾಗಿ ಶೇ. 24.10%, 7.25%, 3% ಘಟಕದಡಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
    ವೈಯಕ್ತಿಕ ಶೌಚಾಲಯಕ್ಕಾಗಿ ಮತ್ತು ವಿಧ್ಯಾರ್ಥಿ/ ವಿಧ್ಯಾರ್ಥಿನಿಯರಿಗೆ ಶೈಕ್ಷಣಿಕ ಸಹಾಯಧನ, ಕಲ್ಯಾಣ ಕಾರ್ಯಕ್ರಮಗಳಿಗೆ, ಶೇಕಡಾ 3 ರಲ್ಲಿ ತ್ರಿಚಕ್ರ ಮೋಟಾರ ವಾಹನಕ್ಕಾಗಿ ಆಡಳಿತ್ಮಾತಕ ಮಂಜೂರಾತಿ ನೀಡಲಾಗಿದೆ. 
    ಅರ್ಜಿ ಸಲ್ಲಿಸಲು ಕನಕಗಿರಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ, ಆರ್ಥಿಕವಾಗಿ ದುರ್ಬಲರಿರುವ, ಪಟ್ಟಣದ ಖಾಯಂ ನಿವಾಸಿಯಾಗಿರಬೇಕು.  ಪ.ಜಾ/ ಪ.ಪಂ ಬಡ ಜನಾಂಗದವವರು ಹಾಗೂ ಇತರೆ ಜನಾಂಗದ ವಿಕಲಚೇತನರು ಸೂಕ್ತ ದಾಖಲೆಗಳೊಂದಿಗೆ ಜೂ. 15 ರೊಳಗಾಗಿ ಪ.ಪಂ ಮುಖ್ಯಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕನಕಗಿರಿ ಪಟ್ಟಣ ಪಂಚಾಯತಿ ಕಚೇರಿಯಿಂದ ಪಡೆಯಬಹುದು ಎಂದು ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Friday, 26 May 2017

ಮೇ 29ರಿಂದ ಅನುತ್ತೀರ್ಣ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿ


ಕೊಪ್ಪಳ ಮೇ.26 (ಕರ್ನಾಟಕ ವಾರ್ತೆ)-ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಮೇ 29 ರಿಂದ ಜೂನ್ 17 ರವರೆಗೆ ವಿಶೇಷ ತರಗತಿಗಳನ್ನು ಆಯಾ ಸರ್ಕಾರಿ ಪ್ರೌಢಶಾಲೆಗಳಲ್ಲಿಯೇ ಹಮ್ಮಿಕೊಳ್ಳಲಾಗಿದೆ ಎಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ತಿಳಿಸಿದ್ದಾರೆ.
     2017ರ ಜೂನ್ 19 ರಿಂದ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಾಗಿರುವ ಹಿನ್ನೆಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯೂ ಸೇರಿದಂತೆ ಆರು ಜಿಲ್ಲೆಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಮೇ 29 ರಿಂದ ಜೂನ್ 17 ರವರೆಗೆ ವಿಶೇಷ ತರಗತಿಗಳನ್ನು ಆಯಾ ಸರ್ಕಾರಿ ಪ್ರೌಢಶಾಲೆಗಳಲ್ಲಿಯೇ ಹಮ್ಮಿಕೊಳ್ಳಲಾಗಿದೆ.   ಎಸ್‍ಎಸ್‍ಎಲ್‍ಸಿಯಲ್ಲಿ ಅನುತ್ತೀರ್ಣರಾದ ವಿಧ್ಯಾರ್ಥಿಗಳು ಪುನಃ ಪರೀಕ್ಷೆಯನ್ನು ಬರೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶವಿರುತ್ತದೆ.  ಈ ಸಾಲಿನಲ್ಲಿ ಅನುತ್ತೀರ್ಣರಾದ ಮಕ್ಕಳು ಪೂರಕ ಪರೀಕ್ಷೆಯನ್ನು ಬರೆಯಲು ಮನವರಿಕೆ ಮಾಡಿ, ವಿಧ್ಯಾರ್ಥಿಗಳಿಗೆ  ಅಗತ್ಯ ಶೈಕ್ಷಣಿಕ ತರಬೇತಿಯನ್ನು ಮತ್ತು ವಿಷಯವಾರು ಪಠ್ಯಕ್ರಮದ ಅಭ್ಯಾಸ ಕಲ್ಪಿಸಿ, ಫಲಿತಾಂಶವನ್ನು ಸುಧಾರಿಸಲು ಈ ಕ್ರಮ ಅನುಕೂಲವಾಗುತ್ತದೆ.
     ಈ ನಿಟ್ಟಿನಲ್ಲಿ ಶಾಲಾ ಪ್ರಾರಂಭದ ದಿನದಿಂದಲೇ ಪ್ರತಿ ಶಾಲೆಯಲ್ಲಿ ವಿಷಯವಾರು ಶಿಕ್ಷಕರಿಂದ ಪೂರಕ ಪರೀಕ್ಷೆಯನ್ನು ಬರೆಯಲಿರುವ ಮಕ್ಕಳಿಗೆ ವಿಶೇಷ ತರಬೇತಿಯನ್ನು ಮೇ 29 ರಿಂದ ಶಾಲೆಯಲ್ಲಿ ಲಭ್ಯವಿರುವ ಕೋಣೆಯೊಂದರಲ್ಲಿ ನಡೆಸಲು ಕ್ರಮ ಜರುಗಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಾಲಾ ವೇಳಾಪಟ್ಟಿಯ ಅನುಗುಣವಾಗಿ ವಿದ್ಯಾರ್ಥಿಗಳ ಅಗತ್ಯತೆಯನುಸಾರವಾಗಿ ವಿಷಯವಾರು ವಿಶೇಷ ಬೋಧನಾ ವ್ಯವಸ್ಥೆಯನ್ನು  ಮೇ 29 ರಿಂದ ಜೂನ್ 17  ರವರೆಗೆ ನಡೆಸಬೇಕು. ವಿಶೇಷ ತರಬೇತಿಗೆ ಪೂರಕವಾಗಿ ಪ್ರತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅನುತ್ತೀರ್ಣರಾದ ಮಕ್ಕಳ/ಪಾಲಕರ ಸಭೆಯನ್ನು ಆಯಾ ಶಾಲಾ ಮುಖ್ಯೋಪಾಧ್ಯಾಯರು ನಡೆಸಿ, ಅವರಿಗೆ ಪೂರಕ ಪರೀಕ್ಷೆಯ ಪ್ರಾಮುಖ್ಯತೆಯ ಅರಿವು ಮೂಡಿಸುವುದು ಹಾಗೂ ಮಕ್ಕಳಲ್ಲಿ  ಅರಿವು ಮೂಡಿಸುವತ್ತ  ಗಮನ ಹರಿಸತಕ್ಕದೆಂದು ಅವರು ತಿಳಿಸಿದ್ದಾರೆ.
ಪ್ರತಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪೂರಕ ಪರೀಕ್ಷೆಗೆ ಅಗತ್ಯ ವಿರುವ ವಿಷಯವಾರು ವಿಶೇಷ ತರಬೇತಿ ಆಯೋಜಿಸತಕ್ಕದ್ದು. ಒಂದು ವೇಳೆ ವಿಷಯವಾರು  ಶಿಕ್ಷಕರು ಲಭ್ಯವಿಲ್ಲದ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಲಭ್ಯವಿರುವ  ಶಾಲಾ ಶಿಕ್ಷಕರ ಸಹಕಾರವನ್ನು ಪಡೆಯುವುದು. ಈ ತರಬೇತಿಯಲ್ಲಿ ವಿಧ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಸಫಲತೆಗೆ ಹೆಚ್ಚಿನ ಶ್ರಮ ವಹಿಸಿ, ಫಲಿತಾಂಶವನ್ನು ವೃದ್ಧಿಸಲು ಕ್ರಮ ಜರುಗಿಸಬೇಕೆಂದು ಸೂಚಿಸಿದ್ದಾರೆ.

ಉದ್ಯೋಗ ಖಾತ್ರಿ : ಬಿ. ಹೊಸಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ


ಕೊಪ್ಪಳ, ಮೇ. 26 (ಕರ್ನಾಟಕ ವಾರ್ತೆ): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ. ಹೊಸಳ್ಳಿ ಗ್ರಾಮದಲ್ಲಿ ಕರೆ ಹೂಳೆತ್ತುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

    ಬರಗಾಲ ಪ್ರಯುಕ್ತ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ. ಹೊಸಳ್ಳಿ ಗ್ರಾಮದಲ್ಲಿ ಕರೆ ಹೂಳೆತ್ತುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಕಾಮಗಾರಿ ಅಂದಾಜು ಮೊತ್ತ ರೂ.40 ಲಕ್ಷ ಇದ್ದು, ಕಾಮಗಾರಿಗ ಸ್ಥಳದಲ್ಲಿ ಕೂಲಿಕಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ.  20 ರಿಂದ 25 ಜನ ಕೂಲಿಕಾರರಿಗೆ ಒಬ್ಬ ಕಾಯಕ ಬಂಧುವನ್ನು ನೇಮಿಸಲಾಗಿದ್ದು, ಒಟ್ಟು 15 ಕಾಯಕ ಬಂಧುಗಳು ನಿರಂತರವಾಗಿ ಕಾಮಗಾರಿಯಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುವ ಮಾಹಿತಿ, ಅವರ ಹಾಜರಾತಿ ಪಡೆಯುವುದು, ಅಳತೆ ಪಡೆಯುವುದು, ಅವರ ಕೂಲಿ ಪಾವತಿ ಅಲ್ಲದೆ, ಅವರಿಗೆ ಸಮರ್ಪಕವಾಗಿ ಕೂಲಿ ಹಣ ದೊರೆಯಲು ಅವರು ಗ್ರಾಮ ಪಂಚಾಯತಿಯ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾರೆ.
    ಪ್ರಸಕ್ತ ವರ್ಷದಲ್ಲಿ ಕೂಲಿ, ಪ್ರತಿ ದಿನಕ್ಕೆ ರೂ.236/- ಇದ್ದು, ಅವರ ಸಲಕರಣೆಗಳ ಹರಿತಗೊಳಿಸಲು ರೂ.10/- ಪ್ರತ್ಯೇಕವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ.  ಕಾಮಗಾರಿಯಲ್ಲಿ ಬಹದ್ದೂರಬಂಡಿ, ಹ್ಯಾಟಿ, ಬಿ. ಹೊಸಳ್ಳಿ ಗ್ರಾಮಗಳ ಸೇರಿ ಒಟ್ಟು 620 ಕೂಲಿಕಾರರು ಕೂಲಿ ಕೆಲಸ ನಿರ್ವಹಿಸುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರರಿಗೆ ಕೆಲಸ ಒದಗಿಸಿದೆ.  ಬಹದ್ದೂರಬಂಡಿ ಗ್ರಾಮ ಪಂಚಾಯತಿಯಲ್ಲಿ 1951 ಜಾಬಕಾರ್ಡದಾರರು ಇದ್ದಾರೆ.  471 ಕುಟುಂಬಗಳಿಗೆ ಕೂಲಿ ಕೆಲಸ ನೀಡಿದ್ದು, ರೂ. 28.84 ಲಕ್ಷ ಖರ್ಚಾಗಿದೆ.  ಈವರೆಗೆ 7357 ಮಾನವ ದಿನಗಳನ್ನು ಸೃಜಿಸಲಾಗಿದೆ.  ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಉಪಕಾರ್ಯದರ್ಶಿಗಳು ಹಾಗೂ ಯೋಜನಾ ನಿರ್ದೇಶಕರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.  ಹೊಸದಾಗಿ ಕೂಲಿ ಬಯಸಿ ಅರ್ಜಿ ಸಲ್ಲಿಸಿದವರಿಗೆ ಕೂಲಿ ಕೆಲಸ ನೀಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕುಷ್ಟಗಿ ಪುರಸಭೆ ವತಿಯಿಂದ ವಿವಿಧ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ, ಮೇ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಯಿಂದ ಪ್ರಸಕ್ತ ಸಾಲಿನಲ್ಲಿ ಎಲ್.ಪಿ.ಜಿ ಗ್ಯಾಸ್ ವಿತರಣೆ ಹಾಗೂ ವೈಯಕ್ತಿಕ ಶೌಚಾಲಯ ಮತ್ತು ಅಂಗವಿಕಲರಿಗೆ ದ್ವಿಚಕ್ರ ವಾಹನ, ಹೊಲಿಗೆ ತರಬೇತಿಯೊಂದಿಗೆ ಯಂತ್ರ ವಿತರಿಸಲು ಅರ್ಹ ಫಲಾನಿಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಪುರಸಭೆ ನಿಧಿಯ ಶೇ.24.10% ಯೋಜನೆಯಲ್ಲಿ ಪ.ಜಾ/ಪ.ಪಂಗಡದ ಕುಟುಂಬಗಳಿಗೆ, 7.25% ಯೋಜನೆಯಡಿಯಲ್ಲಿ ಅನುದಾನದ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಎಲ್.ಪಿ.ಜಿ ಗ್ಯಾಸ್ ವಿತರಣೆ ಹಾಗೂ ವೈಯಕ್ತಿಕ ಶೌಚಾಲಯಕ್ಕಾಗಿ, ಹಾಗೂ ಅಂಗವಿಕಲರಿಗೆ ದ್ವಿಚಕ್ರ ವಾಹನ, ಗ್ಯಾಸ್ ಸಂಪರ್ಕ ಮತ್ತು ಹೊಲಿಗೆ ತರಬೇತಿಯೊಂದಿಗೆ ಯಂತ್ರ ವಿತರಿಸಲಾಗುವುದು. 
 ಅರ್ಜಿ ಸಲ್ಲಿಸಲು ಜೂ. 08 ರೊಳಗಾಗಿ ಕುಷ್ಟಗಿ ಪುರಸಭೆ ಕಛೇರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ವಿಷಯ ನಿರ್ವಾಹಕರನ್ನು ಭೇಟಿ ಮಾಡಿ ಅಥವಾ  www.kustagitown.mrc.gov.in   ನಲ್ಲಿ ಮಾಹಿತಿ ಪಡೆಯಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ ಕುಮಾರ ಎಸ್. ಚವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲಬುರ್ಗಾ : ವಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ ಪಡೆಯಲು ಅರ್ಜಿ ಆಹ್ವಾನ


ಕೊಪ್ಪಳ, ಮೇ. 26 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಆಯ್ಕೆಗೊಂಡ ಯಲಬುರ್ಗಾ ಪಟ್ಟಣದ ನಿವಾಸಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಹಾಗೂ ಪಟ್ಟಣ ಪಂಚಾಯತ ನಿಧಿ ಶೇ.24.10, 7.25, 3ರ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. 
    ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ರೂ. 5,333 ಹಾಗೂ ಎಸ್.ಎಫ್.ಸಿ ಮತ್ತು ಪಟ್ಟಣ ಪಂಚಾಯತ ನಿಧಿಯಲ್ಲಿ ರೂ. 10,000 ಗಳಂತೆ ಒಟ್ಟು ರೂ. 15,333 ಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬಹುದು.  ಅರ್ಜಿಯನ್ನು ಸಲ್ಲಿಸಲು     ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಅರ್ಜಿದಾರರ ಪೋಟೋ, ಆಸ್ತಿ ದಾಖಲಾತಿ, ಇತ್ಯಾದಿ ದಾಖಲೆಗಳನ್ನು ದೃಢೀಕರಿಸಿ, ಪ್ರಕಟಣೆಗೊಂಡ 15 ದಿನಗಳೊಳಗಾಗಿ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಯಲಬುರ್ಗಾ ಪ.ಪಂ. ಕಾರ್ಯಾಲಯಕ್ಕೆ ಭೇಟಿ ನೀಟಿ ಮಾಹಿತಿ ಪಡೆಯಬಹುದು ಎಂದು ಪ.ಪಂ. ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕೊಪ್ಪಳ : ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ


ಕೊಪ್ಪಳ, ಮೇ. 26 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್ ಇಂಟರಾಕ್ಟಿವ್ ಕೌನ್ಸಲಿಂಗ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಜೂ. 05 ರವರೆಗೆ ವಿಸ್ತರಿಸಲಾಗಿದೆ.
    ಅರ್ಜಿ ಸಲ್ಲಿಸಲು ಈ ಹಿಂದೆ ಮೇ. 25 ಕೊನೆಯ ದಿನವಾಗಿತ್ತು.  ಇದೀಗ ಜೂ. 05 ರವರೆಗೆ ಅವಧಿ ವಿಸ್ತರಿಸಲಾಗಿದೆ.  ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕೃತ ವೆಬ್‍ಸೈಟ್  www.kea.kar.nic.in & www.dte.kar.nic.in ಗಳ ಮೂಲಕ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು (ಜಿ.ಎಂ./2ಎ/2ಬಿ/3ಎ.3ಬಿ ರೂ. 100/- & ಎಸ್‍ಸಿ/ಎಸ್‍ಟಿ/ಸಿಎಟಿ-1 ರೂ. 50/-) ರಾಜ್ಯದ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿನ ಖಾತೆ ಸಂಖ್ಯೆ:  ED-KEA-DCET ಅಪ್ಲಿಕೇಶನ್ ಫೀ ಕಲೇಕ್ಷನ್ ಅಕೌಂಟ್ ನಂ. 36843662415 ಐಎಫ್‍ಸಿ ಕೊಡ್- ಎಸ್‍ಬಿಐಎನ್0007080  ಗೆ ಪಾವತಿಸಿ, ಬ್ಯಾಂಕ್ ಚ್ಯಾನೆಲ್ ನೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್ ಕೊಪ್ಪಳ, ಸಂಸ್ಥೆಗೆ ಎಲ್ಲಾ ಮೂಲ ದಾಖಲೆಗಳು ಮತ್ತು ಅವುಗಳ ಧೃಢೀಕರಿಸಿದ ನಕಲು ಪ್ರತಿಗಳೊಂದಿಗೆ ಬಂದು ಆನ್‍ಲೈನ್ ನಲ್ಲಿ   ಜೂನ್. 05ರ ಸಾಯಂಕಾಲ 5-30 ಗಂಟೆಯೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಪ್ರಿನ್ಸಿಪಾಲರ ಕಛೇರಿ, ಕೊಪ್ಪಳ ಸರ್ಕಾರಿ ಪಾಲಿಟೆಕ್ನಿಕ್ ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಮೇ. 26 (ಕರ್ನಾಟಕ ವಾರ್ತೆ): ಬೆಂಗಳೂರು ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಸರಕಾರಿ/ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಆಗಷ್ಟ್-2017 ರ ಸಾಲಿನ ವಿವಿಧ ತಾಂತ್ರಿಕ/ ತಾಂತ್ರಿಕೇತರ ಐಟಿಐ ವೃತ್ತಿಗಳಿಗೆ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  
    ಅರ್ಜಿಗಳನ್ನು ಮೇ. 27 ರಿಂದ ಜೂನ್. 12 ರೊಳಗಾಗಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಇಂಟರ್ನೆಟ್ ಕಫೆ/ ಸೈಬರ್ ಸೆಂಟರ್‍ಗಳಿಗೆ ಭೇಟಿ ನೀಡಿ ಇಲಾಖಾ ಅಂತರ್ಜಾಲ ತಾಣಗಳಾದ  www.emptrg.kar.nic.in  ಅಥವಾ  www.detkarnataka.org.in ಗಳಲ್ಲಿ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿ ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಬಹುದು ಎಂದು ಕುಕನೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 25 May 2017

ಚಿಕ್ಕಮ್ಯಾಗೇರಿಯಲ್ಲಿ ಖಾತ್ರಿಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ


ಕೊಪ್ಪಳ ಮೇ. 25 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಯಲಬುರ್ಗಾ ತಾಲೂಕು ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕ ದೊಡ್ಡ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಯಿತು
 ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಬಿ.ಎಸ್. ಸತೀಶ್, ಮಾತನಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕುಶಲ ಕೂಲಿಕಾರರಿಗೆ ತಮ್ಮ ಗ್ರಾಮ/ಹಳ್ಳಿಗಳ ವ್ಯಾಪ್ತಿಯಲ್ಲಿ ಕೂಲಿಕೆಲಸ ಸಿಗುವಂತಾಗಲಿ ಎಂದು ಯೋಜನೆಯಲ್ಲ ಸರ್ಕಾರ ಅವಕಾಶ ಮಾಡಿದೆ. ಕೂಲಿಕಾರರು ಯೋಜನೆಯ ಕಾಮಗಾರಿಗಳಲ್ಲಿ ಕೂಲಿ ಕೆಲಸ ಮಾಡಲು ಉದ್ಯೋಗ ಖಾತ್ರಿ ಪುಸ್ತಕ, ಬ್ಯಾಂಕ್ ಖಾತೆ ಪುಸ್ತಕದ ಝರಾಕ್ಸ, ಆಧಾರ ಸಂಖ್ಯೆಯ ಝರಾಕ್ಸ ಪ್ರತಿಗಳನ್ನು ಕಡ್ಡಾಯವಾಗಿ ಕಾಮಗಾರಿಯ ಸ್ಥಳಕ್ಕೆ ಬರುವ ಮುಂಚೆ ಗ್ರಾಮ ಪಂಚಾಯತಿಯಲ್ಲಿ ಎಮ್.ಐ.ಎಸ್ ತಂತ್ರಾಂಶದಲ್ಲಿ ದಾಖಲಾತಿಗಳನ್ನು ಅಳವಡಿಸಿ ಖಾಲಿ ಎನ್.ಎಮ್.ಆರ್ ನೊಂದಿಗೆ ಕಾಮಗಾರಿ ಸ್ಥಳಕ್ಕೆ ಬರುವುದು ಸೂಕ್ತ.  ಈಗಾಗಲೆ ತಾಲೂಕಿನ ಹಲವಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೆರೆ ಹೂಳೆತ್ತುವ, ಕೃಷಿ ಹೊಂಡ ನಿರ್ಮಾಣ, ಚೆಕ್ ಡ್ಯಾಮ್ ಹೂಳೆತ್ತುವುದು ಸೇರಿದಂತೆ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳು ಚಾಲನೆಯಲ್ಲಿದ್ದು ಕೂಲಿಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಂಡು ಕಾಮಗಾರಿಗಳಲ್ಲಿ ಕೂಲಿ ಕೆಲಸ ಮಾಡಲು ಮನವಿ ಮಾಡಿದರು.
     ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ತಾಂತ್ರಿಕ ಸಹಾಯಕ ಕನಕಪ್ಪ ಚಲುವಾದಿ, ತಾಲೂಕ ಐ.ಇ.ಸಿ ಸಂಯೋಜಕÀ ಲಕ್ಷ್ಮಣ ಕೆರಳ್ಳಿ ಮತ್ತು ಸಮುದಾಯ ತಾಂತ್ರಿಕ ಸಹಾಯಕ ಈರಣ್ಣ ಗ್ರಾಮ ಪಂಚಾಯತಿಯ ಸಿಬ್ಬಂದಿ ಶಾಮಿದ್ ಮತ್ತು 150 ಕ್ಕೂ ಹೆಚ್ಚು ಕೂಲಿಕಾರರು ಸ್ಥಳದಲ್ಲಿದ್ದರು.

ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿ.ಪಂ. ಸಿ.ಇ.ಓ ವೆಂಕಟರಾಜಾ ಚಾಲನೆ


ಕೊಪ್ಪಳ, ಮೇ. 25 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರದಂದು ಹಮ್ಮಿಕೊಂಡ ಡೆಂಗ್ಯೂ ಜಾಗೃತಿ ಜಾಥಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಕೊಪ್ಪಳದ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.   
            ಡೆಂಗ್ಯೂ ಮತ್ತು ಚಿಕನ್‍ಗುನ್ಯಾ ಜ್ವರ ಈಡಿಸ್ ಜಾತಿಯ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ.  ಈ ಸೊಳ್ಳೆ ಹಗಲು ಹೊತ್ತಿನಲ್ಲೇ ಕಚ್ಚುತ್ತದೆ.  ಯಾವುದೇ ಜ್ವರವಿರಲಿ ಶೀಘ್ರ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ.  ಮನೆಯ ಒಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆ ಉತ್ಪತ್ತಿಯನ್ನು ತಟೆಗಟ್ಟಿ.  ನಿಂತ ನೀರು ಸೊಳ್ಳೆಯ ತವರು, ನೀರಿನ ಶೇಕರಣೆ ಸಲಕರಣೆಗಳನ್ನು ಭದ್ರವಾಗಿ ಮುಚ್ಚಿಡಿ.  ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಿ.  ಸಮಗ್ರ ಕೀಟ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ.  ಅಂತರ್ ಇಲಾಖಾ ಸಹಕಾರ – ರೋಗ ತೆಡೆಗೆ ಪರಿಹಾರ.  ಕಡಿತ ಚಿಕ್ಕದು - ಕಂಟಕ ದೊಡ್ಡದು, ಸೊಳ್ಳೆಗಳಿಂದ ದೂರವಿರಿ - ಸೊಳ್ಳೆಗಳನ್ನು ದೂರವಿಡಿ. ಎಂಬ ಘೋಷಣಾ ವಾಕ್ಯಗಳೊಂದಿಗೆ ಡೆಂಗ್ಯೂ ಜ್ವರದ ಹರಡುವಿಕೆ, ನಿಯಂತ್ರಣ ಹಾಗೂ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಮುದಾಯವನ್ನು ಜಾಗೃತಿಗೊಳಿಸಲು ಡೆಂಗ್ಯೂ ಜಾಗೃತಿ ಜಾಥ ಏರ್ಪಡಿಸಲಾಯಿತು. 
       ಡೆಂಗ್ಯೂ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ವೆಂಕಟರಾಜಾ ಅವರು, ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಕರಪತ್ರಗಳನ್ನು ಹಚ್ಚಿಸಿ.  ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ರೋಗಗಳನ್ನು ತಡೆಗಟ್ಟುವ ಬಗ್ಗೆ ಮಕ್ಕಳಲ್ಲಿ, ಹಾಗೂ ಅವರ ಪಾಲಕರಲ್ಲಿ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.  ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ಸೇರಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಮತ್ತು ಎಎನ್‍ಎಂ ಟ್ರೈನಿಂಗ್ ಸೇಂಟರ್‍ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ, ಮೇ. 25 (ಕರ್ನಾಟಕ ವಾರ್ತೆ): ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು, ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ ಮಂಜೂರಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಮೂಲಕ ಸೀಟು ಪಡೆದು ಬಿ.ಇ., ಎಂ.ಬಿ.ಬಿ.ಎಸ್., ಬಿ.ಯು.ಎಂ.ಎಸ್., ಬಿ.ಡಿ.ಎಸ್., ಬಿ.ಎ.ಎಂ.ಎಸ್., ಬಿ.ಹೆಚ್.ಎಂ.ಎಸ್., ಎಂ.ಸಿ.ಎ., ಎಂ.ಎಸ್ಸಿ(ಅಗ್ರಿ)., ಮುಂತಾದ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ. 1 ಲಕ್ಷಗಳವರೆಗೆ ಸಾಲ ಮಂಜೂರು ಮಾಡಲಾಗಿದೆ. 
ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ. ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸಿದ ಮುಂಗಡ ಹಣದ ಮೊತ್ತದಲ್ಲಿ ಜಮಾ ಮಾಡಲಾಗುತ್ತದೆ.  ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪ್ರ-1, ಪ್ರ-2ಎ (ವಿಶ್ವಕರ್ಮ ಮತ್ತು ಉಪ ಜಾತಿಗಳನ್ನು ಹಾಗೂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ), ಪ್ರ-3ಎ ಗೆ ಸೇರಿದ್ದು, ಕುಟುಂಬದ ವಾರ್ಷಿಕ ವರಮಾನ ರೂ.3.50 ಲಕ್ಷಗಳ ಮಿತಿಯಲ್ಲಿರಬೇಕು.
ಅರ್ಜಿ ಸಲ್ಲಿಸಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್  www.karnataka.gov.in/dbcdc ರಲ್ಲಿ  ಅರ್ಜಿಯನ್ನು ಆನ್‍ಲೈನ್ ನಲ್ಲಿ ಭರ್ತಿ ಮಾಡಬೇಕು.  ಹಾಗೂ ಜಾತಿ & ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ, ಆಧಾರ್ ಕಾರ್ಡ್ ಸಂಖ್ಯೆ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಸಿ.ಇ.ಟಿ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅರ್ಜಿಯೊಂದಿಗೆ ಆನ್‍ಲೈನ್ ನಲ್ಲಿ ಜೂನ್. 20 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳಿಗಾಗಿ ನಿಗಮದ ಜಿಲ್ಲಾ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.

ಗಂಗಾವತಿ : ವಿದ್ಯಾರ್ಥಿಗಳಿಗೆ ಸಹಾಯ ಧನ ಯೋಜನೆಗೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯಿಂದ ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ ಮತ್ತು ಪ.ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಗೂ ವಿಕಲಚೇತನರಿಗೆ ಸಹಾಯ ಧನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಗಂಗಾವತಿ ನಗರಸಭೆಯ ಶೇ.24.10 ರ ಯೋಜನೆಯ ಎಸ್.ಎಫ್.ಸಿ. ಅನುದಾನದಲ್ಲಿ ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳಿಗಾಗಿ ಎಂ.ಎ./ ಎಂ.ಕಾಂ/ ಎಂ.ಎಸ್.ಸಿ/ ಎಂ.ಎಸ್.ಡಬ್ಲ್ಯೂ/ ಎಂ.ಸಿ.ಎ/ ಎಲ್.ಎಲ್.ಬಿ ಹಾಗೂ ಬಿ.ಇ/ ಎಂ.ಬಿ.ಬಿ.ಎಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಶೇ.7.25 ಯೋಜನೆ ಅಡಿಯಲ್ಲಿ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗಾಗಿ ಬಿ.ಇ/ ಎಂ.ಬಿ.ಬಿ.ಎಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಧನವನ್ನು ಹಾಗೂ ಶೇ.3ರ ಅನುದಾನದಲ್ಲಿ ವಿಕಲಚೇತನರಿಗಾಗಿ ಮಾತ್ರ ಯಂತ್ರಚಾಲಿತ ತ್ರಿಚಕ್ರ ವಾಹನ, ಸ್ವಯಂ ಉದ್ಯೋಗಕ್ಕಾಗಿ ಶ್ರವಣ ಸಾಧನ ಖರೀದಿಗಾಗಿ ಸಹಾಯ ಧನ ಒದಗಿಸಲಾಗುತ್ತಿದೆ.
ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್, ಐಡಿ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ,  ವಿಕಲಚೇತನ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ, ಜೂ. 21 ರೊಳಗಾಗಿ ಗಂಗಾವತಿ ನಗರಸಭೆಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೆಂಗ್ಯೂ ಜಾಗೃತಿ : ಸಾರ್ವಜನಿಕರ ಸಹಕಾರ ಅಗತ್ಯ- ಡಾ. ರಾಮಕೃಷ್ಣ



ಕೊಪ್ಪಳ ಮೇ. 25 (ಕರ್ನಾಟಕ ವಾರ್ತೆ): ಡೆಂಗ್ಯೂ ಜ್ವರ ಮಾರಣಾಂತಿಕ ರೋಗವಾಗಿದ್ದು, ರೋಗ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು ಹೇಳಿದರು.


       ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊಪ್ಪಳದ ಹಳೆ ಜಿಲ್ಲಾಸ್ಪತ್ರೆ ಆವರಣದ ಸಭಾ ಭವನದಲ್ಲಿ ಮಾಧ್ಯಮದವರಿಗೆ ಏರ್ಪಡಿಸಲಾಗಿದ್ದ ಮಾಹಿತಿ ನೀಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
       ಡೆಂಗ್ಯೂ ಜ್ವರ ರೋಗ ಈಡಿಸ್ ಸೊಳ್ಳೆಗಳಿಂದ ಹರಡುವ ರೋಗವಾಗಿದ್ದು, ಸಾಮಾನ್ಯವಾಗಿ ಇದು, ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ.  ಹೀಗಾಗಿ ಮನೆಯ ಸುತ್ತಮುತ್ತ ಅಥವಾ ಮನೆ ಮಾಳಿಗೆ ಇನ್ನಿತರೆ ಸ್ಥಳಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.  ಮನೆಯ ಸುತ್ತಮುತ್ತ ಉತ್ತಮ ಪರಿಸರ ನಿರ್ಮಾಣವಾದಲ್ಲಿ, ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದು.  ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 291 ಶಂಕಿತ ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 55 ಪ್ರಕರಣಗಳು ಡೆಂಗ್ಯು ಜ್ವರ ಎಂದು ಖಚಿತಪಟ್ಟಿದೆ.  ಈ ವರ್ಷ ಏಪ್ರಿಲ್ ಅಂತ್ಯದವರೆಗೆ 125 ಶಂಕಿತ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 19 ಪ್ರಕರಣಗಳು ಖಚಿತಗೊಂಡಿವೆ.  ಕೊಪ್ಪಳ ತಾಲೂಕಿನಲ್ಲಿ 71, ಗಂಗಾವತಿ-17, ಕುಷ್ಟಗಿ-24, ಯಲಬುರ್ಗಾ-13 ಶಂಕಿತ ಪ್ರಕರಣಗಳು ವರದಿಯಾಗಿದ್ದು, ಕೊಪ್ಪಳ-02, ಗಂಗಾವತಿ-10, ಕುಷ್ಟಗಿ-06 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 01 ಡೆಂಗ್ಯೂ ಪ್ರಕರಣಗಳು ಖಚಿತಗೊಂಡಿವೆ.  ಡೆಂಗ್ಯೂ ಮತ್ತು ಚಿಕುನ್‍ಗುನ್ಯಾ ಜ್ವರಕ್ಕೆ ಕಾರಣವಾಗುವ ಈಡಿಸ್ ಸೊಳ್ಳೆಗಳು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ.   ಯಾವುದೇ ಜ್ವರವಿರಲಿ, ಶೀಘ್ರ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಸಉಕ್ತ.  ನೀರಿನ ಶೇಖರಣೆ ಸಲಕರಣೆಗಳನ್ನು ಭದ್ರವಾಗಿ ಮುಚ್ಚಬೇಕು.  ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.  ಮನೆಯ ಸುತ್ತಮುತ್ತ ಅಥವಾ ಬಯಲಿನಲ್ಲಿ ಟೈರು, ಟ್ಯೂಬು, ಒಡೆದ ಬಕೆಟ್, ಎಳನೀರು ಚೆಪ್ಪು, ಮರದ ಪೊಟರೆ, ಹೂವಿನ ಕುಂಡ, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.  ಡೆಂಗ್ಯೂ ಮತ್ತು ಚಿಕೂನ್‍ಗುನ್ಯಾಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇಲ್ಲ.  ರೋಗದ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು.  ರೋಗ ಹತೋಟಿಕೆಗೆ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಯೊಂದೆ ಪರಿಹಾರ ಮಾರ್ಗವಾಗಿದೆ. 
      ಡೆಂಗ್ಯೂ ಜಾಗೃತಿ ಕುರಿತಂತೆ ಜಿಲ್ಲೆಯಲ್ಲಿ ಮೇ. 13 ರಿಂದ 25 ರವರೆಗೆ ವಿಶೇಷ ಆಂದೋಲನವನ್ನು ಇಲಾಖೆ ಹಮ್ಮಿಕೊಂಡಿದೆ.  ಸಾರ್ವಜನಿಕರು ಕೂಡ ಸೊಳ್ಳೆಗಳ ನಿರ್ಮೂಲನೆಯಲ್ಲಿ ಸಹಕರಿಸಬೇಕು.  ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಿ, ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಮನವಿ ಮಾಡಿದರು.
      ಡಾ. ವಿರುಪಾಕ್ಷರೆಡ್ಡಿ ಮಾದಿನೂರು, ಡಾ. ಕಟ್ಟಿಮನಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Wednesday, 24 May 2017

ಯಲಬುರ್ಗಾ : ವಿವಿಧ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು


ಕೊಪ್ಪಳ, ಮೇ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ 22 ಗ್ರಾಮಗಳಲ್ಲಿನ ಪರಿಶಿಷ್ಟ ವರ್ಗದವರ ಕಾಲೋನಿಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ತಾತ್ವಿಕ ಮಂಜೂರಾತಿ ನೀಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. 
    ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.  ಈ ಹಿನ್ನೆಲೆಯಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದ್ದು, ಸಮುದಾಯ ಭವನ ಮಂಜೂರಾಗಿರುವ ಯಲಬುರ್ಗಾ ತಾಲೂಕಿನ ಗ್ರಾಮಗಳ ವಿವರ ಇಂತಿದೆ.   ಶಿಡ್ಲಬಾವಿ, ಬೋದೂರು, ಚೌಡಾಪುರ, ಗುಂತಮಡವು, ಎನ್. ಜರಕುಂಟಿ, ಯಡ್ಡೋಣಿ, ಮುರಡಿ, ಬೀರಲದಿನ್ನಿ, ಮ್ಯಾದನೇರಿ, ಚಿಕ್ಕಬಿಡನಾಳ, ಮುರಡಿ, ಕೋನಸಾಗರ, ಜಿ. ಜರಕುಂಟಿ, ತಲ್ಲೂರು, ಕುಡಗುಂಟಿ, ಜೂಲಕಟ್ಟಿ, ಕರಮುಡಿ, ಹೊನ್ನುಣಸಿ, ಗಾಣಧಾಳ, ಮರಕಟ್, ತಾಳಕೇರಿ ಹಾಗೂ ಬುಡಗುಂಟಿ ಸೇರಿದಂತೆ ಒಟ್ಟು 22 ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು  ನಿರ್ಮಿಸಲು ತಾತ್ವಿಕ ಮಂಜೂರಾತಿ ನೀಡಲಾಗಿದೆ.  ಗ್ರಾಮ ಮಟ್ಟದಲ್ಲಿ 12.00 ಲಕ್ಷ ರೂ. ಹೋಬಳಿ ಮಟ್ಟದಲ್ಲಿ 50. ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು  ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ. 

ಮೇ. 25 ರಂದು ಕೊಪ್ಪಳದಲ್ಲಿ ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಜಾಗೃತಿ ಜಾಥಾ


ಕೊಪ್ಪಳ ಮೇ. 24 (ಕರ್ನಾಟಕ ವಾರ್ತೆ): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಮೇ. 25 ರಂದು ಕೊಪ್ಪಳ ನಗರದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದೆ.
     ಡೆಂಗ್ಯೂ ಜ್ವರದ ಹರಡುವಿಕೆ, ನಿಯಂತ್ರಣ ಹಾಗೂ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಮೇ. 25 ರಂದು ಬೆಳಿಗ್ಗೆ 8-30 ಗಂಟೆಗೆ ನಗರದ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಥಾಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Tuesday, 23 May 2017

ಸಾಮಾನ್ಯ ಸೇವಾ ಕೇಂದ್ರಗಳ ಆರಂಭಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 23 (ಕರ್ನಾಟಕ ವಾರ್ತೆ): ಡಿಜಿಟಲ್ ಇಂಡಿಯಾ ಯೋಜನೆ ಅಭಿಯಾನದಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಸಾಮಾನ್ಯ ಸೇವಾ ಕೇಂದ್ರದಲ್ಲಿ ಆಧಾರ ಕಾರ್ಡ, ಪ್ಯಾನ ಕಾರ್ಡ, ಪಾಸಪೊರ್ಟ, ಮೊಬೈಲ್ ರಿಚಾರ್ಜ, ಡಿ.ಟಿ.ಎಚ್ ಸೇವೆ, ಬಿಲ್ ಪಾವತಿಗಳು, ಇನ್ಸೂರೆನ್ಸ್ ಪ್ರೀಮಿಯಮ್, ಶೈಕ್ಷಣಿಕ ಸೇವೆಗಳು, ಬ್ಯಾಂಕಿಂಗ್ ಸೇವೆ, ಪಿಂಚಣಿ ಸೇವೆ ಸೇರಿದಂತೆ ಇತರ ಸೇವೆಗಳು ಒಳಗೊಂಡಿವೆ.  ಆಸಕ್ತ ಅರ್ಜಿದಾರರು ಆಧಾರ ಸಂಖ್ಯೆಗೆ ಮೊಬೈಲ್ ನಂಬರ ಮತ್ತು ಇ-ಮೇಲ್ ನ್ನು ಲಿಂಕ್ ಮಾಡಬೇಕು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.  ಹೆಚ್ಚಿನ ವಿವರಗಳಿಗಾಗಿ  www.csc.gov.in ಜಾಲತಾಣಕ್ಕೆ ಭೇಟಿ ನೀಡಬಹುದು.  ಮತ್ತು ಹೆಚ್ಚಿನ ಮಾಹಿತಿಗಾಗಿ ಸಿ.ಎಸ್.ಸಿ. ಜಿಲ್ಲಾ ವ್ಯವಸ್ಥಾಪಕರಾದ ಮಂಜುನಾಥ ಹಿರೇಮಠ – 7829686848 ಹಾಗೂ ಶಿವಶೇಖರಗೌಡ ಪಾಟೀಲ್ – 8904284977/ 7892617849 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮೇ. 26 ರಂದು ಕ್ಯಾಂಪಸ್ ಸೆಲೆಕ್ಷನ್


ಕೊಪ್ಪಳ, ಮೇ. 23 (ಕರ್ನಾಟಕ ವಾರ್ತೆ): ಐಟಿಐ ಪಾಸಾಗಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಎಂ.ಎಸ್. ಸುಜಲಾನ ವ್ಹಿಂಡ್ ಎನರ್ಜಿ ಪ್ರೈ.ಲಿ. ಬಳ್ಳಾರಿ ಇವರ ವತಿಯಿಂದ ಕ್ಯಾಂಪಸ್ ಸೆಲೆಕ್ಷನ್ ಅನ್ನು ಕೊಪ್ಪಳ ತಾಲೂಕು ಟಣಕನಕಲ್ ಬಳಿ ಇರುವ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ) ಯಲ್ಲಿ ಮೇ.26 ರಂದು ಏರ್ಪಡಿಸಲಾಗಿದೆ.  
    ಯಾವುದೇ ವೃತ್ತಿಯಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‍ಗೆ ಹಾಜರಾಗಿ ಸದುಪಯೋಗ ಪಡೆದುಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ 9945672606, 9448695611, 9535470111, 9448968282, ಕ್ಕೆ ಸಂಪರ್ಕಿಸಬಹುದು ಎಂದು ಟಣಕನಕಲ್ಲ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಥಮ ಪಿಯುಸಿ ವಸತಿ ಕಾಲೇಜುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿ.ಯು.ಸಿ. ವಿಜ್ಞಾನ ಕೋರ್ಸುಗಳಿಗೆ ಪ್ರವೇಶ ಆರಂಭಗೊಂಡಿದ್ದು, ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರವು ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಮುಂದುವರೆದ ಶಿಕ್ಷಣ ನೀಡುವ ಹಿತದೃಷ್ಟಿಯಿಂದ ಸರ್ಕಾರವು ಜಿಲ್ಲೆಗೊಂದರಂತೆ 26 ಮೊರಾರ್ಜಿ ದೇಸಾಯಿ/ 4 ಏಕಲವ್ಯ ಪದವಿ ಪೂರ್ವ ವಸತಿ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಬ್ಯಾಸ ನೀಡಲಾಗುತ್ತಿದೆ. ಪ.ಜಾತಿ/ ಪ.ವರ್ಗ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ (ವಿಜ್ಞಾನ) ಶಿಕ್ಷಣವನ್ನು ಕಲ್ಪಿಸಲಾಗುತ್ತಿದೆ.
ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಶೇ.50% ಸೀಟುಗಳು ವಿದ್ಯಾರ್ಥಿನಿಯರಿಗೆ ಹಾಗೂ ಶೇ.50% ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಿರುತ್ತವೆ. ಇಂಗ್ಲೀಷ್ ಮಾಧ್ಯಮದಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ನೀಡಲಾಗುತ್ತದೆ. ಕೊಪ್ಪಳದ ಹಿರೇಸಿಂದೋಗಿಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಪ.ಜಾ 30, ಪ್ರವರ್ಗದಲ್ಲಿ 01, ಪ್ರವರ್ಗ-1ರಲ್ಲಿ 01, 2ಎ ದಲ್ಲಿ 04, 2ಬಿ ದಲ್ಲಿ 01, 3ಎ ದಲ್ಲಿ 02, 3ಬಿ ದಲ್ಲಿ 01, ಹಿಗೆ ಪಿಸಿಎಂಬಿ ವಿಭಾಗದಲ್ಲಿ 40 ಮತ್ತು ಪಿಸಿಎಂಸಿಎಸ್ ವಿಭಾಗದಲ್ಲಿ 40 ಸೇರಿದಂತೆ ಒಟ್ಟು 80 ಸೀಟುಗಳು ಲಭ್ಯವಿರುತ್ತವೆ.
ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗದ ಪ್ರವರ್ಗ-1 ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 2,50,000 ರೂ, ಹಾಗೂ ಹಿಂದುಳಿದ ವರ್ಗ 2ಎ, 2ಬಿ, 3ಎ, 3ಬಿ ಗುಂಪಿಗೆ ಸೇರಿದ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 1,00,000 ರೂ ಮಿತಿಯಲ್ಲಿರಬೇಕು. ಎಸ್‍ಎಸ್‍ಎಲ್‍ಸಿ ಇರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಮತ್ತು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಅರ್ಜಿ ಫಾರಂ ಪಡೆದು ಮೇ.25 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್


ಕೊಪ್ಪಳ, ಮೇ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹಿರೇಮ್ಯಾಗೇರಿ ಹಾಗೂ ಗಂಗಾವತಿ ತಾಲೂಕು ಲಿಂಗದಹಳ್ಳಿ ಗ್ರಾಮಕ್ಕೆ ತಲಾ ಒಂದು 33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರಾಗಿದೆ ಎಂದು ಜೆಸ್ಕಾಂ ನಿರ್ದೇಶಕ ರೆಡ್ಡಿ ಶ್ರೀನಿವಾಸ್ ತಿಳಿಸಿದ್ದಾರೆ.
     ಹಿರೇಮ್ಯಾಗೇರಿ ಹಾಗೂ ಲಿಂಗದಹಳ್ಳಿ ಗ್ರಾಮದಲ್ಲಿ 33 ಕೆ.ವಿ. ಸಬ್‍ಸ್ಟೇಷನ್ ಅನ್ನು ತಲಾ 05 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಈಗಾಗಲೆ ಮಂಜೂರಾತಿ ದೊರೆತಿದೆ.  ಈ ಭಾಗದಲ್ಲಿ 33 ಕೆ.ವಿ. ಸಬ್‍ಸ್ಟೇಷನ್ ಸ್ಥಾಪಿಸುವುದರಿಂದ, ಗ್ರಾಮೀಣ ಪ್ರದೇಶದ ಜನರಿಗೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಹಾಗೂ ರೈತರಿಗೆ ಪಂಪ್‍ಸೆಟ್‍ಗೆ ವಿದ್ಯುತ್ ತೊಂದರೆ ನೀಗಲಿದ್ದು, ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ.  ಹೊಸದಾಗಿ ಮಂಜೂರಾಗಿರುವ ಸಬ್‍ಸ್ಟೇಷನ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಜೆಸ್ಕಾಂ ನಿರ್ದೇಶಕ ರೆಡ್ಡಿ ಶ್ರೀನಿವಾಸ್ ತಿಳಿಸಿದ್ದಾರೆ.

Saturday, 20 May 2017

ಜನ-ಮನ ಕಾರ್ಯಕ್ರಮ : ಅನ್ನಭಾಗ್ಯದಿಂದ ಹಸಿವುಮುಕ್ತ ಕರ್ನಾಟಕ ನಿರ್ಮಾಣ ಸಾಧ್ಯವಾಗಿದೆ- ಬಸವರಾಜ ರಾಯರಡ್ಡಿ




ಕೊಪ್ಪಳ, ಮೇ. 20 (ಕರ್ನಾಟಕ ವಾರ್ತೆ) : ಬಡ ಕುಟುಂಬಗಳಿಗೆ ಉಚಿತ ಅಕ್ಕಿ, ಧಾನ್ಯ ನೀಡುವ ‘ಅನ್ನಭಾಗ್ಯ’ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೊಳಿಸಿರುವುದರಿಂದ, ಹಸಿವುಮುಕ್ತ ಕರ್ನಾಟಕ ನಿರ್ಮಾಣ ಸಾಧ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಇವರ ಸಹಯೋಗದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶನಿವಾರದಂದು ವಿವಿಧ ಯೋಜನೆಗಳ ಫಲಾನುಭವಿಗಳ ಅಭಿಪ್ರಾಯ ಪಡೆಯುವ ಸಲುವಾಗಿ ಏರ್ಪಡಿಸಲಾಗಿದ್ದ ಜನ-ಮನ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅನ್ನಭಾಗ್ಯ ಯೋಜನೆ ವಿಸ್ತರಣೆಯಡಿ ಫಲಾನುಭವಿಗಳಿಗೆ ಅಕ್ಕಿ ವಿತರಣೆ ನೆರವೇರಿಸಿ, ಅವರು ಮಾತನಾಡಿದರು.


     ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ಕೂಡಲೆ, ಬಡ ಜನರಿಗೆ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ,ಧಾನ್ಯ ನೀಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದರು.  ಇದು ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಇಟ್ಟ ದಿಟ್ಟ ಹೆಜ್ಜೆ.  ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ 05 ಕೆ.ಜಿ. ಉಚಿತವಾಗಿ ಅಕ್ಕಿ ನೀಡುವ ಯೋಜನೆಯನ್ನು ಜಾರಿಗೊಳಿಸಲಾಯಿತು.  ಇದೀಗ ಪ್ರತಿ ಸದಸ್ಯರಿಗೆ ತಿಂಗಳಿಗೆ 07 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ.  ತೀವ್ರ ಬರ ಪರಿಸ್ಥಿತಿಯ ಹೊರತಾಗಿಯೂ ನಮ್ಮ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಿಂದಾಗಿ, ಯಾವ ಕುಟುಂಬಗಳೂ ಹಸಿವಿನ ತೊಂದರೆ ಅನುಭವಿಸಲಿಲ್ಲ.  ಕೊಪ್ಪಳ ಜಿಲ್ಲೆಯಲ್ಲಿ 238047 ಬಿಪಿಎಲ್ ಹಾಗೂ 37398 ಅಂತ್ಯೋದಯ ಪಡಿತರ ಚೀಟಿಗಳಿದ್ದು, ಸುಮಾರು 973735 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.  ಕಳೆದ ನಾಲ್ಕು ವರ್ಷಗಳಲ್ಲಿ ಇದಕ್ಕಗಿಯೇ ಜಿಲ್ಲೆಯಲ್ಲಿ 179. 41 ಕೋಟಿ ರೂ. ಸಹಾಯಧನವನ್ನು ಸರ್ಕಾರ ಭರಿಸಿದೆ.  ಈ ವರ್ಷ ರಾಜ್ಯದಲ್ಲಿ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೂ ಸಹ ಉಚಿತವಾಗಿ ಆಹಾರಧಾನ್ಯ ಕೊಡುವ ‘ದಾಸೋಹ’ ಯೋಜನೆಯನ್ನು ಸರ್ಕಾರ ಶೀಘ್ರದಲ್ಲಿಯೇ ಜಾರಿಗೆ ತರಲಿದೆ ಎಂದು ಮಂತ್ರಿಗಳು ಹೇಳಿದರು.
     ರಾಜಸ್ಥಾನ ರಾಜ್ಯ ಬಿಟ್ಟರೆ, ಅತಿ ಹೆಚ್ಚು ಒಣ ಬೇಸಾಯವನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದ್ದು, ಮಳೆ ನೀರು ಸಂಗ್ರಹಿಸಿ, ಬೆಳೆಗಳನ್ನು ಉಳಿಸಿಕೊಳ್ಳಬಹುದಾದ ರೀತಿಯಲ್ಲಿ ನಮ್ಮ ಸರ್ಕಾರ ‘ಕೃಷಿ ಭಾಗ್ಯ’ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಲು ಸಹಾಯಧನ ನೀಡುತ್ತಿದೆ.  ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣವಾಗಿದೆ.  ಜಿಲ್ಲೆಯಲ್ಲಿ 5734 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, 5177. 59 ಲಕ್ಷ ರೂ. ಅನುದಾನ ಸರ್ಕಾರ ಒದಗಿಸಿದೆ.  ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 4000 ಕೃಷಿ ಹೊಂಡಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.
1. 5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ : ರಾಜ್ಯದಲ್ಲಿ ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸುವ ಯೋಜನೆಯನ್ನು ಸರ್ಕಾರ ಶೀಘ್ರ ಜಾರಿಗೆ ತರಲಿದ್ದು, ಈ ವರ್ಷ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸುವ ಗುರಿ ಹೊಂದಲಾಗಿದೆ ಎಂದರು.  ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ 07 ಕೆ.ಜಿ. ಅಕ್ಕಿ ನೀಡುವ ಕಾರ್ಯಕ್ರಮವನ್ನು, ಫಲಾನುಭವಿಗಳಿಗೆ ಅಕ್ಕಿ ವಿತರಿಸುವ ಮೂಲಕ ಸಾಂಕೇತಿಕವಾಗಿ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಬಡವರ, ಶೋಷಿತ ವರ್ಗದವರ ಆಶಾಕಿರಣದಂತೆ ನಮ್ಮ ಸರ್ಕಾರ ಹಲವು ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೊಳಿಸಿದೆ.  ಸರ್ಕಾರ ರಚನೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಭರವಸೆಗಳ ಪೈಕಿ ಬಹುತೇಕ ಭರವಸೆಗಳನ್ನು ಈಗಾಗಲೆ ಈಡೇರಿಸಲಾಗಿದೆ.  ಅನ್ನಭಾಗ್ಯ ಯೋಜನೆಯಿಂದ ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಲಾಗಿದ್ದು, ಗುಳೆ ತಡೆಗೂ ಯೋಜನೆ ಸಹಕಾರವಾಗಿದೆ.  ಮಕ್ಕಳ ಶಿಕ್ಷಣಕ್ಕೆ ಹೇಗೆ ಆದ್ಯತೆ ನೀಡಲಾಗುತ್ತಿದೆಯೋ, ಅದೇ ರೀತಿ ಮಕ್ಕಳ ಪೌಷ್ಠಿಕತೆ ಹೆಚ್ಚಿಸಲೂ ಸಹ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
     ಕಾರ್ಯಕ್ರಮದಲ್ಲಿ  ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್ ಖಾದ್ರಿ,  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಉಪಸ್ಥಿತರಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ವಂದಿಸಿದರು.  ಸದಾಶಿವ ಪಾಟೀಲ್ ಅವರ ತಂಡ ನಾಡಗೀತೆ ಮತ್ತು ರೈತಗೀತೆಯನ್ನು ಪ್ರಸ್ತುತಪಡಿಸಿದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳವನ್ನೂ ನೀಡಿ- ಫಲಾನುಭವಿಗಳ ಒತ್ತಾಸೆ



ಕೊಪ್ಪಳ ಮೇ. 20 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಅನ್ನ ಭಾಗ್ಯ ಯೋಜನೆಯಿಂದ  ಬಡವರು ಮೂರೊತ್ತು ನೆಮ್ಮದಿಯಿಂದ ಊಟ ಮಾಡುವಂತಾಗಿದೆ.  ಯೋಜನೆಯಡಿ ಅಕ್ಕಿ, ಗೋಧಿಯ ಜೊತೆಗೆ ಜೋಳವನ್ನೂ ನೀಡಿದರೆ ತುಂಬಾ ಒಳಿತಾಗಲಿದೆ ಎಂದು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನದಾಳದ ಮಾತನ್ನು ಹೇಳಿದರು.

     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಇವರ ಸಹಯೋಗದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶನಿವಾರದಂದು  ಏರ್ಪಡಿಸಲಾಗಿದ್ದ ಜನ-ಮನ ಕಾರ್ಯಕ್ರಮದಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿ ಮಲಿಯವ್ವ ಮಾದರ್ ವ್ಯಕ್ತಪಡಿಸಿದ ಅಭಿಪ್ರಾಯವಿದು.

     ಅನ್ನಭಾಗ್ಯ ಯೋಜನೆಯಿಂದ ಯಾರೂ ಕೂಡ ಹಸಿವಿನ ತೊಂದರೆ ಎದುರಿಸುತ್ತಿಲ್ಲ.  ಬಡವರು ಅನ್ನಕ್ಕಾಗಿ ಯಾರ ಮುಂದೆಯೂ ಕೈಚಾಚದೆ ಮೂರೊತ್ತು ನೆಮ್ಮದಿಯಿಂದ ಊಟ ಮಾಡುವಂತಾಗಿದೆ.  ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಜೊತೆಗೆ ಜೋಳವನ್ನು ನೀಡಿದಲ್ಲಿ, ತುಂಬ ಅನುಕೂಲವಾಗಲಿದೆ ಎಂದು ಮಲಿಯವ್ವ ಎನ್ನುವವರು ಅಭಿಪ್ರಾಯಪ್ಟರೆ, ಇನ್ನೋರ್ವ ಫಲಾನುಭವಿ ಸಿದ್ದಪ್ಪ ಎಂಬುವವರು, ಯೋಜನೆಯಡಿ ಅಕ್ಕಿ, ಬೇಳೆ ಹಾಗೂ ಸಾಂಬಾರು ಪದಾರ್ಥಗಳನ್ನೂ ಸಹ ಸರ್ಕಾರ ನೀಡಲಿ ಎಂದಾಗ, ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಮಂತ್ರಿಗಳು, ಫಲಾನುಭವಿಗಳ ಕೋರಿಕೆ ಸರಿಯಾಗಿಯೇ ಇದೆ.  ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿದೆ ಎಂದರು.

ವಿದ್ಯಾಸಿರಿಯಿಂದ ಓದು ಮುಂದುವರೆಯಿತು :
**********ಹೃದಯ ಸಂಬಂಧಿ ರೋಗದಿಂದ ಪ್ರಾಣಾಪಾಯ ಎದುರಿಸುತ್ತಿದ್ದ ತನಗೆ,: ಹಾಸ್ಟೆಲ್ ಸೌಲಭ್ಯ ದೊರಕದ ವಿದ್ಯಾರ್ಥಿಗಳಿಗೆ, ಸರ್ಕಾರ ಪ್ರತಿ ವರ್ಷ 15000 ರೂ. ಗಳ ಸಹಾಯಧನ ನೀಡುವಂತಹ ವಿದ್ಯಾಸಿರಿ ಯೋಜನೆ ಜಾರಿಗೊಳಿಸಿರುವುದು ಬಡ ಕುಟುಂಬಗಳ ಮಕ್ಕಳಿಗೆ ವರದಾನವಾಗಿದೆ.  ವಿದ್ಯಾಸಿರಿ ಯೋಜನೆಯಿಂದಾಗಿಯೇ ನಮ್ಮ ಶಿಕ್ಷಣ ಇನ್ನೂ ಮುಂದುವರೆದಿದೆ ಎಂದು ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಎದುರು ತಮ್ಮ ಮನದಾಳದ ಮಾತುಗಳನ್ನಾಡಿದರು.  ಬಡವರು ತಮ್ಮ ಮಕ್ಕಳನ್ನು ಹಾಸ್ಟೆಲ್‍ನಲ್ಲಿರಿಸಿ ಓದಲು ಕಳುಹಿಸುವುದು ಹೆಚ್ಚು.  ಹಾಸ್ಟೆಲ್ ಸೌಲಭ್ಯ ದೊರಕದಿದ್ದರೆ, ಶಾಲೆಗೆ ಕಳುಹಿಸದೆ, ದುಡಿಯಲು ಹಚ್ಚುತ್ತಾರೆ.  ಇದರಿಂದ ಅಂತಹ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತದೆ.   ಸರ್ಕಾರ ಪ್ರತಿ ವರ್ಷ 15000 ರೂ. ಗಳ ಸಹಾಯಧನ ನೀಡುವಂತಹ ವಿದ್ಯಾಸಿರಿ ಯೋಜನೆಯಿಂದಾಗಿಯೇ ನಮ್ಮ ಶಿಕ್ಷಣ ಇನ್ನೂ ಕೂಡ ಮುಂದುವರೆದಿದೆ.  ಇಂತಹ ಮಹತ್ವದ ಯೋಜನೆ ನೀಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.
ವಾರದ 06 ದಿನವೂ ಹಾಲು ನೀಡಿ :
******** ಕ್ಷೀರಭಾಗ್ಯ ಯೋಜನೆಯ ಫಲಾನುಭವಿ ಮಕ್ಕಳು, ಸಚಿವರೊಂದಿಗೆ ಮಾತನಾಡಿ,  ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಮೂರು ದಿನ ಹಾಲು ನೀಡುತ್ತಿತ್ತು.  ಇದೀಗ ವಾರಕ್ಕೆ 05 ದಿನ ಹಾಲು ನೀಡಲಾಗುವುದು ಎಂದಿದ್ದಾರೆ.   ಐದು ದಿನದ ಬದಲಿಗೆ ವಾರದ 06 ದಿನವೂ ಹಾಲು ನೀಡಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.  ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಈ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೂ ಯೋಜನೆ ವಿಸ್ತರಿಸಿ :
*************  ಉಚಿತ ಶೂ ಮತ್ತು ಸಾಕ್ಸ್ ವಿತರಣೆ, ಉಚಿತ ಸಮವಸ್ತ್ರ ಸೇರಿದಂತೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಹಲವು ಸವಲತ್ತುಗಳನ್ನು ಅನುದಾನಿತ ಶಾಲೆ ಮಕ್ಕಳಿಗೂ ಕೂಡ ವಿಸ್ತರಿಸಬೇಕ ಎಂದು  ವಿದ್ಯಾರ್ಥಿ ಶ್ರೀಹರಿ ಸುಬೇದಾರ ಸಚಿವರಲ್ಲಿ ಮನವಿ ಮಾಡಿಕೊಂಡರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಬೇಕು,  ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಸವಲತ್ತು ದೊರೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಮಾತ್ರ ಈ ಯೋಜನೆ ಜಾರಿಗೆ ತರಲಾಗಿದೆ.  ಖಾಸಗಿ ಶಾಲೆಗಳಿಗೆ ಈ ಯೋಜನೆ ವಿಸ್ತರಿಸುವುದು ಕಷ್ಟಸಾಧ್ಯ  ಎಂದರು.
ರಾಜೀವ್ ಆರೋಗ್ಯ ಭಾಗ್ಯ :
*********** ಹೃದಯ ಸಂಬಂಧಿ ರೋಗದಿಂದ ಪ್ರಾಣಾಪಾಯ ಎದುರಿಸುತ್ತಿದ್ದ ತನಗೆ, ರಾಜೀವ್ ಆರೋಗ್ಯ ಭಾಗ್ಯ, ಮರು ಹುಟ್ಟು ನೀಡಿದೆ.  ಯೋಜನೆಯಡಿ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸುತ್ತಿದ್ದು, ಔಷಧಿಗಳ ವೆಚ್ಚ ಭರಿಸಲು ಸಹ ಸರ್ಕಾರ ನೆರವಾದಲ್ಲಿ, ಯೋಜನೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಚೆನ್ನಪ್ಪ ಎಂಬುವವರು ಮಂತ್ರಿಗಳಿಗೆ ಮನವಿ ಮಾಡಿದರು.  ಆರೋಗ್ಯ ಸಚಿವರೊಂದಿಗೆ ಚರ್ಚಿಸಿ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂತ್ರಿಗಳು ಉತ್ತರಿಸಿದರು.
ಕೃಷಿಭಾಗ್ಯ :
****** ಕೃಷಿ ಭಾಗ್ಯ ಯೋಜನೆ ಬಗ್ಗೆ ನಡೆದ ಸಂವಾದದಲ್ಲಿ ರೈತರು ಕೃಷಿಹೊಂಡ ಯೋಜನೆಯಿಂದಾಗಿ ಅಂತರ್ಜಲ ಹೆಚ್ಚಳವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.  ಕೃಷಿ ಯಂತ್ರಧಾರೆ ಯೋಜನೆ ಜಾರಿಯಿಂದಾಗಿ, ಹೊಲದಲ್ಲಿ ಬಿತ್ತನೆ ಕಾರ್ಯ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳು ನೀಡುತ್ತಿರುವುದರಿಂದ, ಬಡ ರೈತರಿಗೆ ಹೆಚ್ಚು ಉಪಯೋಗವಾಗುತ್ತಿದೆ ಎಂದು ರೈತ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.  ಪಶು ಭಾಗ್ಯ ಯೋಜನೆಯಿಂದ ಹಸುಗಳನ್ನು ಸಾಕಿಕೊಂಡು ತಮ್ಮ ಕುಟುಂಬ ಹೈನುಗಾರಿಕೆ  ಮಾಡುತ್ತಿದೆ.  ಯೋಜನೆಯ ಕಾರಣದಿಂದ ಕುಟುಂಬ ನೆಮ್ಮದಿಯ ಜೀವನ ನಡೆಸುತ್ತಿದೆ ಎಂದು ಫಲಾನುಭವಿ ನಾಗಮಣಿ ಅಭಿಪ್ರಾಯಪಟ್ಟರು.
     ಉಳಿದಂತೆ ಮನಸ್ವಿನಿ ಹಾಗೂ ಮೈತ್ರಿ ಯೋಜನೆಯ ಫಲಾನುಭವಿಗಳು ಮಾಸಾಶನ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.  ಬಿದಾಯಿ ಯೋಜನೆ (ಶಾದಿಭಾಗ್ಯ), ಹರೀಶ್ ಸಾಂತ್ವನ ಯೋಜನೆಯ ಫಲಾನಭವಿಗಳು ಯೋಜನೆಯಿಂದ ತಮಗಾದ ಒಳಿತಿನ ಬಗ್ಗೆ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  ಫಲಾನುಭವಿಗಳು ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ವ್ಯಕ್ತಪಡಿಸಿದ ಅನಿಸಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು, ಈಡೇರಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ನೀಡಿದರು.
      ಕಾರ್ಯಕ್ರಮದಲ್ಲಿ   ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್ ಖಾದ್ರಿ,  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಉಪಸ್ಥಿತರಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ವಂದಿಸಿದರು.   ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಹಲವು ಯೋಜನೆಗಳ ಫಲಾನುಭವಿಗಳು ಪಾಲ್ಗೊಂಡಿದ್ದರು.

Friday, 19 May 2017

ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿ


ಕೊಪ್ಪಳ, ಮೇ. 19 (ಕರ್ನಾಟಕ ವಾರ್ತೆ): ಜಾಟ್ ರೇಜಿಮೆಂಟ್ ಸೇಂಟರ್ ವತಿಯಿಂದ ಜಾಟ್ ರೇಜಿಮೆಂಟ್‍ನಲ್ಲಿ ನಿವೃತ್ತರಾದ ಮಾಜಿ ಸೈನಿಕರ ಮಕ್ಕಳಿಗೆ ಯುನಿಟ್ ಹೆಡ್ಡ್‍ಕ್ವಾರ್ಟರ್ ಕೋಟಾದಲ್ಲಿ ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಸೇನಾ ನೇಮಕಾತಿಯಲ್ಲಿ ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ಟ್ರೇಡ್ಸಮೆನ್, ಸಿಪಾಯಿ ಕ್ಲಾರ್ಕ ಹುದ್ದೆಗಳಿಗೆ ಸೇನಾ ಭರ್ತಿ ಮಾಡಲಾಗುವುದು.  ಜಾಟ್ ರೇಜಿಮೆಂಟ್‍ದಿಂದ ನಿವೃತ್ತರಾದ ಸೈನಿಕರ ಸಹೊದರರು ಮತ್ತು ಮಾಜಿ ಸೈನಿಕರ ಮಕ್ಕಳು, ಯುದ್ಧ ವಿಧವೆಯರು, ಯುದ್ಧ ಸಂತ್ರಸ್ಥರು, ಮಾಜಿ ಸೈನಿಕರ ವಿಧವೆಯರ ಅವಲಂಬಿತರ (ಜಾಟ್ ರೇಜಿಮೆಂಟ್ ಸೇಂಟರ್) ಅಭ್ಯರ್ಥಿಗಳು ಮಾತ್ರ ಭಾಗವಹಿಸಬಹುದು. 
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ದೂರವಾಣಿ ಸಂಖ್ಯೆ 08354-235434 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೈಸೂರು ಮಿಲಿಟರಿ ಬಾಲಕರ ವಸತಿ ನಿಲಯ : ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 19 (ಕರ್ನಾಟಕ ವಾರ್ತೆ): ಮೈಸೂರು ಮಿಲಿಟರಿ ಬಾಲಕರ ವಸತಿ ನಿಲಯದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಕರ್ನಾಟಕ ರಾಜ್ಯದ ಮಾಜಿ ಸೈನಿಕರ/ ಸೇವೆ ಸಲ್ಲಿಸುತ್ತಿರುವಾಗ ಮೃತರಾದ ಯೋಧರ ಮತ್ತು ಅವಲಂಬಿತರ ಗಂಡು ಮಕ್ಕಳಿಗೆ ಆದ್ಯತೆ ಹಾಗೂ ಅರ್ಹತೆ ಮೆರೆಗೆ ಉಚಿತ ಪ್ರವೇಶವನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
            ಮೈಸೂರ ನಗರದಲ್ಲಿರುವ ವಿಧ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ನಂತರವೆ ನಿಲಯದಲ್ಲಿ ಪ್ರವೇಶ ನೀಡಲಾಗುವುದು.  ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮೈಸೂರ ಇವರ ಕಾರ್ಯಾಲಯವನ್ನು ಹಾಗೂ ದೂರವಾಣಿ ಸಂಖ್ಯೆ 0821-2425240 ಗೆ ಸಂಪರ್ಕಿಸಬಹುದು.  ಭರ್ತಿ ಮಾಡಿದ ಅರ್ಜಿಗಳನ್ನು ಮೇ. 30 ರೊಳಗಾಗಿ ಸಲ್ಲಿಸಬೇಕು ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ. 20 ರಂದು ಹುಲಿಗೆಮ್ಮ ದೇವಿ ಮಹಾರಥೋತ್ಸವ


ಕೊಪ್ಪಳ ಮೇ. 19 (ಕರ್ನಾಟಕ ವಾರ್ತೆ): ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ ಮೇ. 20 ರಂದು ಸಂಜೆ 5-30 ಗಂಟೆಗೆ ಹುಲಿಗಿಯಲ್ಲಿ ನೆರವೇರಲಿದೆ.
     ಹುಲಿಗೆಮ್ಮ ದೇವಿ ವಾರ್ಷಿಕ ಜಾತ್ರೆ ಅಂಗವಾಗಿ ಮೇ. 20 ರಂದು ಸಂಜೆ 5-30 ಗಂಟೆಗೆ ಹುಲಿಗೆಮ್ಮ ದೇವಿ ಮಹಾರಥೋತ್ಸವ ಜರುಗಲಿದೆ.  ಮೇ. 21 ರಂದು ಬಾಳಿಂಡಿಗೆ, ಕೊಂಡದ ಪೂಜಾ, ಗಂಗಾದೇವಿ ಪೂಜಾ, ಶ್ರೀ ದೇವಿಗೆ ಪ್ರಸಾದ ಕಟ್ಟುವುದು, ಬಾಳಿದಂಡಿಗೆ ಆರೋಹಣ ಕಾರ್ಯಕ್ರಮಗಳು ನೆರವೇರಲಿವೆ.  ಮೇ. 22 ರಂದು ಪಾಯಸ ಅಗ್ನಿಕುಂಡ, ಕೊಂಡದ ಪೂಜಾ, ಹಿಡಿದಕ್ಷಿಣೆ ವಿತರಣೆ, ಪಡಗದ ಪೂಜಾ, ಗಂಗಾದೇವಿ ಪೂಜಾ, ಶ್ರೀ ದೇವಿಗೆ ಪ್ರಸಾದ ಕಟ್ಟುವುದು ಹಾಗೂ ನಿವೇದನೆ.  ಮೇ. 23 ರಂದು ಬೆಳಿಗ್ಗೆ 6-30 ಗಂಟೆಗೆ ಅಗ್ನಿಕುಂಡ ಕಾರ್ಯಕ್ರಮ ನೆರವೇರಲಿದೆ.   ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ  ದೇವಿಯ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.  ಜಾತ್ರೆಗೆ ಆಗಮಿಸಲಿರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು,  ವಿವಿಧ ಮಾರ್ಗಗಳಿಂದ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ದೇವಸ್ಥಾನ ಮತ್ತು ಗ್ರಾಮಪಂಚಾಯಿತಿ ವತಿಯಿಂದ ಟ್ಯಾಂಕರುಗಳ ಮೂಲಕ, ಅರವಟಿಗೆಗಳ ಮೂಲಕ ವ್ಯವಸ್ಥೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
     ಹುಲಿಗೆಮ್ಮ ದೇವಿಗೆ ಸಲ್ಲಿಸುವ  ಬೆಳ್ಳಿ, ಬಂಗಾರ, ಕಾಣಿಕೆ ಹಾಗೂ ಮುಡುಪುಗಳನ್ನು   ದೇವಸ್ಥಾನದ ಕಚೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು ಅಥವಾ ಹುಂಡಿಯಲ್ಲಿ ಹಾಕಬೇಕು. ರಶೀದಿ ಪಡೆಯದೇ ಕೊಡುವ ಕಾಣಿಕೆಗಳು ದೇವಿಯ ನಿಧಿಗೆ ಸೇರುವುದಿಲ್ಲ. ಉಚಿತ ಅನ್ನ ದಾಸೋಹಕ್ಕೆ ದವಸ ಧಾನ್ಯ ನೀಡಬಯಸುವ ಭಕ್ತಾದಿಗಳು ಗಣಕೀಕೃತ ಕೌಟರ್‍ನಲ್ಲಿ ನೀಡಿ ರಸೀದಿ ಪಡೆಯಬಹುದು.
      ಜಾತ್ರೆಯ ಸಂದರ್ಭದಲ್ಲಿ ಯಾವುದೇ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಮಹಾನಕ್ಷೆ ತಯಾರಿಸಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭಕ್ತಾದಿಗಳು ಉದಾರವಾಗಿ ತನುಮನದಿಂದ ದೇಣಿಗೆ ನೀಡಲು ಕೋರಿದೆ.  ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಮುನಿರಾಬಾದ್ ರೇಲ್ವೆ ನಿಲ್ದಾಣದಲ್ಲಿ ಇಳಿಯಬೇಕು, ಕೊಪ್ಪಳ,  ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗುವುದು.  ಹೆಚ್ಚಿನ ಮಾಹಿತಿಗೆ 8095679319 ಅಥವಾ 8151016891 ಕ್ಕೆ ಸಂಪರ್ಕಿಸಬಹುದು  ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Thursday, 18 May 2017

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ, ಮೇ. 18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳು ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೇ. 19 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದಲ್ಲಿ ಬರ ಪರಿಹಾರ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ಕೈಗೊಳ್ಳುವರು. ನಂತರ ಹಿರೇಹಳ್ಳ ಯೋಜನಾ ಪುನರ್ ವಸತಿ ಸಮಿತಿ ಸಭೆ ಕೈಗೊಂಡು, ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.
ಮೇ. 20 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಜನಮನ ಕಾರ್ಯಕ್ರಮ ಹಾಗೂ ಅನ್ನಭಾಗ್ಯ ಯೋಜನೆ ವಿಸ್ತರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 03 ಗಂಟೆಗೆ ರಾಯಚೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಮೇ. 18 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರುಗಳಾದ ಡಾ. ಆರ್. ಅಬ್ದುಲ್ ಹಮೀದ್, ಮಹಮೂದ್ ಪಟೇಲ್ ಹಾಗೂ ರಫಿ ಬಂಡಾರಿ ಅವರು ಮೇ. 20 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಆಯೋಗದ ಸದಸ್ಯರುಗಳು ಅಂದು ಬೆಳಿಗ್ಗೆ 09 ಗಂಟೆಯಿಂದ 12 ಗಂಟೆಯವರೆಗೆ ಗಂಗಾವತಿ ನಗರದಲ್ಲಿ  ಅಲ್ಪಸಂಖ್ಯಾತರರಿಗೆ ಸಂಬಂಧಿಸಿದ ದೂರುಗಳ ಕುರಿತು ಪರಿಶೀಲನೆ ನಡೆಸುವರು. ಅದೇ ದಿನ ಮಧ್ಯಾಹ್ನ 02 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ಮ. 03 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಅಲ್ಪಸಂಖ್ಯಾತರರಿಗೆ ಸಂಬಂಧಿಸಿದ ದೂರುಗಳ ಕುರಿತು ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಅಲ್ಪಸಂಖ್ಯಾತರ ವಿವಿಧ ಯೋಜನೆಗಳ ಕುರಿತು ಸಭೆ ಕೈಗೊಳ್ಳುವರು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಭರ್ಜರಿ ಯಶಸ್ವಿಯೊಂದಿಗೆ ಮಾವು ಮೇಳಕ್ಕೆ ತೆರೆ : ಸುಮಾರು 01 ಕೋಟಿ ರೂ. ವಹಿವಾಟು



ಕೊಪ್ಪಳ ಮೇ. 18 (ಕರ್ನಾಟಕ ವಾರ್ತೆ): ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವಿನ ಹಣ್ಣಿನ ವಿವಿಧ ತಳಿಗಳ ಸವಿಯನ್ನು ಸವಿಯಲು ಕೊಪ್ಪಳದಲ್ಲಿ ಮೇ. 09 ರಂದು ಪ್ರಾರಂಭವಾಗಿದ್ದ ಮಾವು ಮೇಳ ಅವಕಾಶ ಕಲ್ಪಿಸಿಕೊಟ್ಟು, ಇದೀಗ ಮೇ. 18 ರಂದು ಬುಧವಾರ ಭರ್ಜರಿ ಯಶಸ್ವಿಯೊಂದಿಗೆ ತೆರೆ ಕಂಡಿದೆ.  ಸುಮಾರು 01 ಕೋಟಿ ರೂ. ಗೂ ಹೆಚ್ಚು ವಹಿವಾಟು ಮೇಳದಲ್ಲಿ ದಾಖಲಾಗಿದೆ.

     ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಮಾರುಕಟ್ಟೆ ಮತ್ತು ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಕೊಪ್ಪಳ ನಗರದಲ್ಲಿ ಮಾವು ಮೇಳ ಆಯೋಜಿಸಲಾಗಿತ್ತು.  ಮೇ. 09 ರಿಂದ 18 ರವರೆಗೆ ಹತ್ತು ದಿನಗಳ ಕಾಲ ನಡೆದ ಮಾವು ಮೇಳದ ಸದಾವಕಾಶವನ್ನು ಕೊಪ್ಪಳ ಜಿಲ್ಲೆಯ ಜನತೆ ಚೆನ್ನಾಗಿಯೇ ಪಡೆದುಕೊಂಡಿತು.  ಮಾವು ಮೇಳದ ಅಂಗವಾಗಿ ಸುಮಾರು 120 ಕ್ಕೂ ಹೆಚ್ಚು ವಿವಿಧ ತಳಿಗಳ ಮಾವಿನ ಹಣ್ಣುಗಳ ಪ್ರದರ್ಶನ ಯಶಸ್ವಿಯಾಗಿ ನಡೆಸಿ, ಜನಮನ್ನಣೆ ಪಡೆದುಕೊಂಡಿತು.
     ಭರ್ಜರಿ ಯಶಸ್ಸಿನೊಂದಿಗೆ ಮೇ. 18 ರಂದು ಬುಧವಾರ ತೆರೆ ಕಂಡ ಮಾವು ಮೇಳದ ಸಮಾರೋಪ ಸಮಾರಂಭ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಲಾಯಿತು.  ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಮಾರೋಪ ಸಮಾರಂಭ ಸಂದರ್ಭದಲ್ಲಿ ಮಾವು ಮೇಳಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮಾವು ಮೇಳದ ಯಶಸ್ವಿಯ ಕುರಿತು ರೈತರು ಹಾಗೂ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.  ಮಾವು ಮೇಳದಲ್ಲಿ ಪಾಲ್ಗೊಂಡ ರೈತರು ಪ್ರತಿಕ್ರಿಯಿಸಿ, ಮಾವು ಮೇಳದ ಕಾರಣದಿಂದ ಯಾವುದೇ ಮದ್ಯವರ್ತಿಗಳ ಹಾವಳಿಯಿಲ್ಲದೆ, ನೇರವಾಗಿ ಗ್ರಾಹಕರಿಗೆ ಉತ್ತಮ ದರದಲ್ಲಿ ಹೆಚ್ಚಿನ ಪ್ರಮಾಣದ ಮಾವು ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಪಡೆದುಕೊಂಡಿದ್ದೇವೆ.  ಬರುವ ವರ್ಷ ಕನಿಷ್ಟ 01 ತಿಂಗಳಾದರೂ ಮಾವು ಮೇಳವನ್ನು ನಡೆಸಿದಲ್ಲಿ, ರೈತರಿಗೆ ಅನುಕೂಲವಾಗಲಿದೆ ಎಂದರು.
     ಸಂಸದ ಕರಡಿ ಸಂಗಣ್ಣ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಈ ಬಾರಿ ಕೊಪ್ಪಳದಲ್ಲಿ ಏರ್ಪಡಿಸಿರುವ ಮಾವು ಮೇಳ ರೈತರಿಗೆ ಒಳ್ಳೆಯ ಉತ್ತೇಜನ ನೀಡಿದೆ ಎಂದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಕೊಪ್ಪಳದಲ್ಲಿ ಇಷ್ಟೊಂದು ತಳಿಗಳ ಮಾವಿನ ಹಣ್ಣನ್ನು ರೈತರು ಬೆಳೆಯುತ್ತಿದ್ದಾರೆ ಎಂದು ಗೊತ್ತಿರಲಿಲ್ಲ.  ಮಾವು ಮೇಳದ ಕಾರಣದಿಂದಾಗಿ, ವೈವಿಧ್ಯಮಯ ತಳಿಗಳ ಮಾವಿನ ಹಣ್ಣು ಸವಿಯಲು ಸಾಧ್ಯವಾಯಿತು ಎಂದರು.  ಅಲ್ಲದೆ  ಮಾವು ಮೇಳದ ಯಶಸ್ವಿಗೆ ಸಹಕರಿಸಿದ ಎಲ್ಲ ರೈತರಿಗೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
     ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಮಾತನಾಡಿ, ಮೇ. 09 ರಿಂದ ಪ್ರಾರಂಭವಾದ ಮಾವು ಮೇಳದಲ್ಲಿ ಸುಮಾರು 30 ರಿಂದ 32 ರೈತರು ಪಾಲ್ಗೊಂಡಿದ್ದು, ಅಂದಾಜು 90 ಟನ್ ನಷ್ಟು ಮಾವು ಮಾರಾಟವಾಗಿದೆ.  ಸುಮಾರು 01 ಕೋಟಿ ರೂ. ಗಳಿಗೂ ಹೆಚ್ಚು ವಹಿವಾಟು ಮಾವು ಮೇಳದಲ್ಲಿ ನಡೆದಿದೆ.  ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡಿರುವುದರಿಂದ, ಮಧ್ಯವರ್ತಿಗಳ ಹಾವಳಿ ದೂರಾಗಿ, ರೈತರಿಗೆ ಯೋಗ್ಯ ಬೆಲೆ ದೊರಕಿದೆ.  ಮೇಳದ ಮೂಲಕ ನೈಸರ್ಗಿಕವಾಗಿ ಮಾಗಿಸಿದ ಹಣ್ಣಿನ ಬಗ್ಗೆ ಗ್ರಾಹಕರಿಗೂ ಅರಿವು ಮೂಡಿಸಿದಂತಾಗಿದೆ.  ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಣ್ಣಿನ ರಸ ಮಾಡಿ ಮಾರಾಟ ಮಾಡಿದ್ದು, ಮೌಲ್ಯವರ್ಧನೆ ಬಗ್ಗೆ ರೈತರಿಗೆ ತಿಳುವಳಿಕೆ ನೀಡಲಾಗಿದೆ.  ರಾಜ್ಯಾದ್ಯಂತ ಬೆಳೆಯುವ 120ಕ್ಕೂ ಹೆಚ್ಚಿನ ತಳಿಗಳ ಪ್ರದರ್ಶನ ಮತ್ತು ತಳಿಗಳ ಮಾರಾಟ ಕುರಿತು ರೈತರು ಮಾಹಿತಿ ಪಡೆಯಲು ಮೇಳವು ಉತ್ತಮ ವೇದಿಕೆಯಾಯಿತು ಎಂದರು.
     ಕಾರ್ಯಕ್ರಮದಲ್ಲಿ, ತೋಟಗಾರಿಕೆ ಇಲಾಖೆಗಳ ವಿವಿಧ ಅಧಿಕಾರಿಗಳು, ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ : ಅವಧಿ ವಿಸ್ತರಣೆ


ಕೊಪ್ಪಳ, ಮೇ. 18 (ಕರ್ನಾಟಕ ವಾರ್ತೆ): ಭಾರತೀಯ ಅಂಚೆ ಇಲಾಖೆಯು, ಕರ್ನಾಟಕ  ಅಂಚೆ   ವೃತ್ತದಲ್ಲಿ ಖಾಲಿ ಇರುವ 1048 ಗ್ರಾಮೀಣ ಅಂಚೆ ಸೇವಕರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಮೇ. 23ರ ವರೆಗೆ ವಿಸ್ತರಿಸಲಾಗಿದೆ.
     ಎಸ್‍ಎಸ್‍ಎಲ್‍ಸಿ ವಿಷಯಗಳಲ್ಲಿ ಶೇ. 30 ರಷ್ಟು ಮತ್ತು ಒಟ್ಟಾರೆ ಶೇ. 35 ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಳೆದ ಏ. 28 ರಿಂದ ತಂತ್ರಾಶದಲ್ಲಿ ಸೂಕ್ತ ಬದಲಾವಣೆ ಮಾಡಲಾಗಿದೆ. ಅಭ್ಯರ್ಥಿಗಳು  http://indiapost.gov.in   ಅಥವಾ   http://apost.in/gdsonline    ರಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.  ಉಳಿದ ವಿವರಗಳನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ನೀಡಲಾಗಿದೆ ಎಂದು ಗದಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಹಾಯವಾಣಿ ಸೌಲಭ್ಯ


ಕೊಪ್ಪಳ, ಮೇ. 18 (ಕರ್ನಾಟಕ ವಾರ್ತೆ):    ಕೊಪ್ಪಳ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುವ ವಿವಿಧ ಕಾರ್ಯಕ್ರಮಗಳ ಹಾಗೂ ಇಲಾಖೆಯ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸೌಲಭ್ಯವನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದಾರೆ. 
ಸಹಾಯವಾಣಿ ಮೂಲಕ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ, ಶುಲ್ಕ ವಿನಾಯಿತಿ ಸೌಲಭ್ಯ ಮಂಜೂರಾತಿ ಕುರಿತಂತೆ ಮತ್ತು ಇಲಾಖೆಯ ವಸತಿ ನಿಲಯಗಳ ನಿರ್ವಹಣೆ, ವಸತಿ ಶಾಲೆಗಳ ಸೌಲಭ್ಯ ಕುರಿತು ಮಾಹಿತಿಯನ್ನು ಪಡೆಯಬಹುದು.  ಕಛೇರಿ ವೇಳೆಯಲ್ಲಿ ಸಹಾಯವಾಣಿ ಸಂಖ್ಯೆ:- 08539-225900 ಮೂಲಕ ಕರೆ ಮಾಡಬಹುದು.  ಮತ್ತು ಇನ್ನಿತರ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್  www.backwardclasses.kar.nic.in  ಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೇ. 20 ರಂದು ಕೊಪ್ಪಳದಲ್ಲಿ “ಜನ-ಮನ” ಕಾರ್ಯಕ್ರಮ


ಕೊಪ್ಪಳ, ಮೇ. 18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಜನ-ಮನ” ಕಾರ್ಯಕ್ರಮ ಮೇ. 20 ರಂದು ಬೆಳಿಗ್ಗೆ 10-00 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ. 
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿವಿಧ ದತ್ತಿನಿಧಿ ಪ್ರಶಸ್ತಿ : ಪುಸ್ತಕಗಳ ಆಹ್ವಾನ


ಕೊಪ್ಪಳ, ಮೇ. 18 (ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗೆ 2016ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. 
    ದತ್ತಿನಿಧಿ ಪ್ರಶಸ್ತಿಗಳಿಗೆ ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-560 018, ಜೂನ್. 30 ರೊಳಗೆ ತಲುಪುವಂತೆ ಕಳುಹಿಸಬೇಕು.  ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ.  ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.  ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ, ಪರಿಷತ್ತು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.  ಯಾವುದೇ ವರ್ಷ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್ತಿಗೆ ಇರುತ್ತದೆ.  ಒಂದಕ್ಕಿಂತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಂಕ್ಕು ಪರಿಷತ್ತಿಗೆ ಇರುತ್ತದೆ.  ಪಿಎಚ್.ಡಿ. ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.  ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವರು ತಮ್ಮ ಹೆಸರು, ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು.  ಹೆಚ್ಚಿನ ವಿವರಗಳಿಗೆ ಸ್ವ-ವಿಳಾಸದ ಸ್ಟಾಂಪ್ ಹಚ್ಚಿದ ಲಕೋಟೆ ಇಟ್ಟು ಪತ್ರ ಬರೆಯಬಹುದು ಎಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು, ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವಕರ್ಮ ಸಮುದಾಯದವರಿಗೆ ಸಾಲ ಸೌಲಭ್ಯ : ಅರ್ಜಿ ಆಹ್ವಾನ


ಕೊಪ್ಪಳ, ಮೇ. 18 (ಕರ್ನಾಟಕ ವಾರ್ತೆ): ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿಗೆ ರಾಜ್ಯ ಸರ್ಕಾರದ ಹಾಗೂ ಎನ್.ಬಿ.ಸಿ.ಎಫ್.ಡಿ..ಸಿಯ ಯೋಜನೆಗಳಲ್ಲಿ ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. 
ರಾಜ್ಯ ಸರ್ಕಾರದ ಯೋಜನೆ : ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು.  ಸ್ವಯಂ ಉದ್ಯೋಗ ನೇರಸಾಲ ಯೋಜನೆ.  ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ.  ಅರಿವು-ಶೈಕ್ಷಣಿಕ ಸಾಲ ಯೋಜನೆ.  ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ.  ಮಹಿಳೆಯರ ಕಿರುಸಾಲ ಯೋಜನೆ.  ಕಮ್ಮಾರಿಕೆ, ಅಕ್ಕಸಾಲಿ ಮತ್ತು ಬಡಗಿ ಉದ್ಯಮಿಗಳಿಗೆ ವಿಶೇಷ ಪ್ಯಾಕೇಜ್.  ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಸಾಲ ಪಡೆಯುವರ ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ. 40,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.55,000/- ಗಳಿಗಿಂತ ಕಡಿಮೆ ಇರಬೇಕು.  ಅರಿವು ಯೋಜನೆಗೆ ವಾರ್ಷಿಕ ವರಮಾನ ರೂ. 3.50 ಲಕ್ಷಗಳ ಮಿತಿಯಲ್ಲಿರಬೇಕು. 
ಎನ್.ಬಿ.ಸಿ.ಎಫ್.ಡಿ.ಸಿ ಯೋಜನೆ : ಅವಧಿ ಸಾಲ ಯೋಜನೆ- ಕೃಷಿವಲಯ, ಸಣ್ಣ ವ್ಯಾಪಾರ, ಸೇವಾವಲಯ, ಸಾರಿಗೆ ವಲಯ.  ಶೈಕ್ಷಣಿಕ ಸಾಲ ಯೋಜನೆ- ಭಾರತದಲ್ಲಿ, ವಿದೇಶದಲ್ಲಿ.  ನ್ಯೂಸ್ವರ್ಣಿಮಾ ಸಾಲ (ಮಹಿಳಾ ಸಾಲ).  ಶಿಲ್ಪಸಂಪದ. ಸ್ವಯಂ ಸಕ್ಷಮ ಸಾಲ. ಮೈಕ್ರೋಫೈನಾನ್ಸ್. ಕೃಷಿಸಂಪದ. ಮಹಿಳಾ ಸಮೃದ್ಧಿ ಯೋಜನೆ (ಮಹಿಳಾ ಸ್ವಸಹಾಯ ಗುಂಪುಗಳಿಗೆ ಮತ್ತು ವೈಯಕ್ತಿಕ ಸಾಲ).  ಎನ್.ಬಿ.ಸಿ.ಎಫ್.ಡಿ..ಸಿಯ ಯೋಜನೆಗಳಲ್ಲಿ ಸಾಲ ಪಡೆಯುವರ ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ. 98,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/- ಗಳಿಗಿಂತ ಕಡಿಮೆ ಇರಬೇಕು.
    ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಆಯಾ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಪಡೆದು, ಅರ್ಜಿಗಳನ್ನು ಜೂನ್. 02 ರೊಳಗೆ ಪಡೆಯಬೇಕು.  ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್. 17 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಆಯಾ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಕಛೇರಿ ಮತ್ತು ಕೇಂದ್ರ ಕಛೇರಿಯಲ್ಲಿ ಸಂಪರ್ಕಿಸಬಹುದು.  ನಿಗಮದ ವೆಬ್‍ಸೈಟ್   www.kvcdcl.com ರಲ್ಲಿ (ಕೈಪಿಡಿಯಲ್ಲಿ) ಜಿಲ್ಲಾ ವ್ಯವಸ್ಥಾಪಕರ ಕಛೇರಿಯ ವಿಳಾಸ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 17 May 2017

ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿ.ಯು.ಸಿ. ವಿಜ್ಞಾನ ಕೋರ್ಸುಗಳಿಗೆ ಪ್ರವೇಶ ಆರಂಭಗೊಂಡಿದ್ದು, ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರವು ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ವಸತಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಮುಂದುವರೆದ ಶಿಕ್ಷಣ ನೀಡವ ಹಿತದೃಷ್ಟಿಯಿಂದ ಸರ್ಕಾರವು ಜಿಲ್ಲೆಗೊಂದರಂತೆ 26 ಮೊರಾರ್ಜಿ ದೇಸಾಯಿ/ 4 ಏಕಲವ್ಯ ಪದವಿ ಪೂರ್ವ ವಸತಿ ಕಾಲೇಜುಗಳನ್ನು ನಿರ್ವಹಿಸಲಾಗುತ್ತಿದೆ.  ಕಾಲೇಜುಗಳಲ್ಲಿ ವ್ಯಾಸಂಗ ಮಾಡವ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಬ್ಯಾಸ ನೀಡಲಾಗುತ್ತಿದೆ. ಪ.ಜಾತಿ/ ಪ.ವರ್ಗ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ (ವಿಜ್ಞಾನ) ಶಿಕ್ಷಣವನ್ನು ಕಲ್ಪಿಸಲಾಗಿದೆ. 
ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಶೇ.50 ಸೀಟುಗಳು ವಿದ್ಯಾರ್ಥಿನಿಯರಿಗೆ ಹಾಗೂ ಶೇ.50 ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಿವೆ.  ಇಂಗ್ಲೀಷ್ ಮಾಧ್ಯಮದಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ನೀಡಲಾಗುತ್ತದೆ.  ಕೊಪ್ಪಳದ ಹಿರೇಸಿಂದೋಗಿಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಪ.ಜಾ 30, ಪ್ರವರ್ಗದಲ್ಲಿ 01, ಪ್ರವರ್ಗ-1ರಲ್ಲಿ 01, 2ಎ ದಲ್ಲಿ 04, 2ಬಿ ದಲ್ಲಿ 01, 3ಎ ದಲ್ಲಿ 02, 3ಬಿ ದಲ್ಲಿ 01, ಹಿಗೆ ಪಿಸಿಎಂಬಿ ವಿಭಾಗದಲ್ಲಿ 40 ಮತ್ತು ಪೆಸಿಎಂಸಿಎಸ್ ವಿಭಾಗದಲ್ಲಿ 40 ಒಟ್ಟು 80 ಸೀಟುಗಳು ಲಭ್ಯವಿದೆ.
ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗದ ಪ್ರವರ್ಗ-1 ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 2,50,000 ರೂ, ಹಾಗೂ ಹಿಂದುಳಿದ ವರ್ಗ 2ಎ, 2ಬಿ, 3ಎ, 3ಬಿ ಗುಂಪಿಗೆ ಸೇರಿದ ಹಿಂದುಳಿದ ವರ್ಗದವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 1,00,000 ರೂ ಮಿತಿಯಲ್ಲಿರಬೇಕು.  ಎಸ್‍ಎಸ್‍ಎಲ್‍ಸಿ ಇರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಮತ್ತು  ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಅರ್ಜಿ ಫಾರಂ ಪಡೆದು ಮೇ.25 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳಿಗಾಗಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಹುಲಿಗೆಮ್ಮ ದೇವಿ ಜಾತ್ರೆ : ಪ್ರಾಣಿ ಬಲಿ ನಿಷೇಧ

ಕೊಪ್ಪಳ, ಮೇ. 17 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವವು ಮೇ.19 ರಿಂದ 23 ರವರೆಗೆ ಜರುಗಲಿದ್ದು, ದೇವಸ್ಥಾನ ಆವರಣದಲ್ಲಿ ಅಥವಾ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನುಗಳಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಪ್ರಾಣಿ ಬಲಿ ಕೊಡುವ ಪದ್ಧತಿಯು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳು 1963ರ ಪ್ರಕಾರ ಅಪರಾಧ ಹಾಗೂ ಶಿಕ್ಷಾರ್ಹವಾಗಿರುತ್ತದೆ.  ಪ್ರಾಣಿ ಬಲಿ ಪದ್ಧತಿಯು ಅತ್ಯಂತ ಕ್ರೂರ ಹಾಗೂ ಅವೈಜ್ಞಾನಿಕವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವುದಕ್ಕೆ ಕಾರಣವಾಗುತ್ತದೆ.  ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವವು ಮೇ.19 ರಿಂದ 23 ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಾತ್ರೆ ಸಮಯದಲ್ಲಿ ಹುಲಿಗೆಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಅಥವಾ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನುಗಳಲ್ಲಿ ಭಕ್ತಾದಿಗಳು, ಸಾರ್ವಜನಿಕರು ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುವುದು ಕಾನೂನಿನ ವಿರೋಧವಾಗಿರುವುದರಿಂದ ದೇವಸ್ಥಾನದ ಆವರಣದಲ್ಲಿ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನುಗಳಲ್ಲಿ ಪ್ರಾಣಿಗಳ ಬಲಿ ನಿಷೇಧಿಸಿದ್ದು, ಭಕ್ತಾಧಿಗಳು, ಸಾರ್ವಜನಿಕರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನ


ಕೊಪ್ಪಳ, ಮೇ. 17 (ಕರ್ನಾಟಕ ವಾರ್ತೆ): ಸರ್ಕಾರವು ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಯನ್ನು ಪ್ರಸಕ್ತ ಸಾಲಿಗೂ ಮುಂದುವರೆಸಿದ್ದು, ಈ ಸೌಲಭ್ಯ ಪಡೆಯಲು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಯೋಜನೆಯ ಗರಿಷ್ಠ ವೆಚ್ಚ ರೂ.25.00 ಲಕ್ಷ ಇರುವ ತಯಾರಿಕ ಮತ್ತು ರೂ.10.00 ಲಕ್ಷ ಇರುವ ಸೇವಾ ಚಟುವಟಿಕೆಗಳಿಗೆ ಬ್ಯಾಂಕುಗಳು ನೀಡುವ ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಪಟ್ಟಣ ಫಲಾನುಭವಿಗಳಿಗೆ ಶೇ. 15% ರಿಂದ 25% ಮತ್ತು ವಿಶೇಷ ವರ್ಗದ (ಪ.ಜಾತಿ/ ಪ.ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿ ಸೈನಿಕ/ಮಹಿಳೆ), ಗ್ರಾಮೀಣ ಫಲಾನುಭವಿಗಳಿಗೆ ಶೇ. 25% ರಿಂದ 35% ಸಹಾಯಧನ ಸೌಲಭ್ಯ ಇರುತ್ತದೆ.  ಉದ್ದಿಮೆಯನ್ನು ಪ್ರಾರಂಭ ಮಾಡುವ ಸಾಮಾನ್ಯ ವರ್ಗದವರು ಯೋಜನಾ ವೆಚ್ಚದ ಶೇ. 10% ಮತ್ತು ವಿಶೇಷ ವರ್ಗದವರಿಗೆ ಶೇ. 5% ರಷ್ಟು ಸ್ವಂತ ಭಂಡವಾಳ ಹೂಡಬೇಕಾಗಿರುತ್ತದೆ. 
ಯೋಜನೆಯು ಹೊಸ ಘಟಕಗಳಿಗೆ ಮಾತ್ರ ಲಭ್ಯವಿರುತ್ತದೆ.  ಮತ್ತು ಅಭ್ಯರ್ಥಿಯ ಯೋಜನಾ ವೆಚ್ಚ ರೂ. 10.00 ಲಕ್ಷ ಮೇಲ್ಪಟ್ಟ ಘಟಕಗಳಿಗೆ ವಿದ್ಯಾರ್ಹತೆ 8ನೇ ತರಗತಿ ಪಾಸಾಗಿರಬೇಕು, ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ ಸಂಸ್ಥೆಯಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೋಮಾ ಪದವಿ ಹೊಂದಿರಬೇಕು.  ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಮೂಲಕ ವೈಬ್‍ಸೈಟ್  www.kvic.org.in / www.pmegp.in ಸಲ್ಲಿಸಿ, ಅರ್ಜಿ ಪ್ರತಿ ಹಾಗೂ ನಿಗಧಿತ ದಾಖಲಾತಿಯೊಂದಿಗೆ ಕಛೇರಿ ದ್ವಿಪ್ರತಿಯಲ್ಲಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ, ದೂರವಾಣಿ ಸಂಖ್ಯೆ 08539-231548 ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಮೇ. 23 ರಿಂದ ‘ಸಿ’ ವರ್ಗದ ಸಿಬ್ಬಂದಿಗಳಿಗೆ ತರಬೇತಿ


ಕೊಪ್ಪಳ, ಮೇ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಸಕ್ತ ಸಾಲಿನ ವಾರ್ಷಿಕ ತರಬೇತಿ ಕಾರ್ಯಕ್ರಮದಂತೆ ವಿವಿಧ ಇಲಾಖೆಯ ‘ಸಿ’ ವೃಂದದ ಸಿಬ್ಬಂದಿಗಳಿಗೆ ಮೇ. 23 ರಿಂದ 27 ರವರೆಗೆ ತರಬೇತಿಗಳನ್ನು ಏರ್ಪಡಿಸಲಾಗಿದೆ.
       ವಿವಿಧ ಇಲಾಖೆಯ ‘ಸಿ’ ವೃಂದದ ಸಿಬ್ಬಂದಿಗಳಿಗೆ  ಗಣಕ ಯಂತ್ರ ಹಾಗೂ ಇ-ಕನ್ನಡ ಕಂಪ್ಯೂಟರಿಂಗ್ ಬಗ್ಗೆ ಮೇ. 23 ರಿಂದ 27 ರವರೆಗೆ 5 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು.  ಮತ್ತು ಹೆಚ್.ಆರ್.ಎಂ.ಎಸ್. ಹಾಗೂ ಇ-ಕನ್ನಡ ಕಂಪ್ಯೂಟರಿಂಗ್ ಬಗ್ಗೆ ಮೇ. 26 ರಿಂದ 27 ರವರೆಗೆ 2ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು.
‘ಸಿ’ ವರ್ಗದ ಸಿಬ್ಬಂದಿಗಳಿಗೆ ತರಬೇತಿ ಪಡೆಯಲು ಅರ್ಜಿಯಲ್ಲಿ ಕಡ್ಡಾಯವಾಗಿ ಆಧಾರ ಸಂಖ್ಯೆಯನ್ನು ನಮೂದಿಸಿರಬೇಕು.  ತರಬೇತಿ ದಿನದಂದು ಬೆಳಿಗ್ಗೆ 8-00 ಗಂಟೆಗೆ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಹುಲಿಗೆಮ್ಮ ದೇವಿ ಜಾತ್ರೆ : ಮದ್ಯ ಮಾರಾಟ ನಿಷೇಧ


ಕೊಪ್ಪಳ ಮೇ. 17 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮೇ. 20 ರಂದು ಮಹಾರಥೋತ್ಸವ ಜರುಗಲಿದ್ದು, ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.
     ಹುಲಿಗೆಮ್ಮ ದೇವಿ ಮಹಾರಥೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಮೇ. 20 ರ ಬೆಳಿಗ್ಗೆ 06 ಗಂಟೆಯಿಂದ ಮೇ. 21 ರ ಬೆಳಿಗ್ಗೆ 06 ಗಂಟೆಯವರೆಗೆ ಹುಲಿಗಿ ಗ್ರಾಮದಲ್ಲಿ ಎಲ್ಲ ವೈನ್‍ಶಾಪ್, ಬಾರ್‍ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ನಿರುದ್ಯೋಗಿ ಯುವಕ/ ಯುವತಿಯರಿಗೆ ವಿವಿಧ ಯೋಜನೆ : ತರಬೇತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ, ಮೇ. 17 (ಕರ್ನಾಟಕ ವಾರ್ತೆ): ಕೊಪ್ಪಳ ನಗರ ಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರುದ್ಯೋಗಿ ಯುವಕ/ ಯುವತಿಯರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು 18 ರಿಂದ 35 ವರ್ಷ ವಯೋಮಿತಿಯಲ್ಲಿರಬೇಕು.  ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳ ನೊಂದಣಿಗಾಗಿ, ಪ್ರತ್ಯಕವಾದ ಕೌಂಟರನ್ನು ನಗರಸಭೆ ಕಚೇರಿಯಲ್ಲಿ ತೆರೆಯಲಾಗಿದ್ದು, ಮೇ.17 ರಿಂದ 22 ರ ವರೆಗೆ ನೋಂದಣಿ ಕಾರ್ಯ ಬೆಳಿಗ್ಗೆ 8-00 ಗಂಟೆಯಿಂದ ಮಧ್ಯಾಹ್ನ 2-00 ಗಂಟೆಯವರೆಗೆ ಮಾಡಲಾಗುವುದು.  ಇದರ ಸದುಪಯೋಗ ಪಡೆದುಕೊಳ್ಳಲು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕಾ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ, ಮೇ. 17 (ಕರ್ನಾಟಕ ವಾರ್ತೆ): ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಯುವಕ/ ಯುವತಿಯರಿಗೆ 10 ದಿನಗಳ ಉಚಿತ “ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕಾ”  ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ಅರ್ಜಿ ವಿತರಿಸುವ ಹಾಗೂ ಸ್ವೀಕರಿಸುವ ಕೊನೆಯ ದಿನಾಂಕ ಮೇ. 27 ಆಗಿರುತ್ತದೆ.  ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೇ. 28 ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ನಡೆಸಲಾಗುವುದು.  ಮೇ. 29 ರಿಂದ ತರಬೇತಿಗಳು ಪ್ರಾರಂಭಗೊಳ್ಳುವುದು.  ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂ. 08539-231038, ಇಲ್ಲಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ. ಆರ್‍ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಸತಿ ನಿಲಯಕ್ಕೆ ಕಟ್ಟಡ ಬಾಡಿಗೆಗೆ ಬೇಕಾಗಿದೆ


ಕೊಪ್ಪಳ, ಮೇ. 17 (ಕರ್ನಾಟಕ ವಾರ್ತೆ): ಕೊಪ್ಪಳ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹೊಸದಾಗಿ ಮೆಟ್ರಿಕ ನಂತರದ ವೃತ್ತಿಪರ ಬಾಲಕರ ವಸತಿ ನಿಲಯ ಪ್ರಾರಂಭಿಸಬೇಕಾಗಿದ್ದು, ಎಲ್ಲಾ ಮೂಲಭೂತ ಸೌಕರ್ಯಗಳುಳ್ಳ ಒಂದು ಬಾಡಿಗೆ ಕಟ್ಟಡವು ಬೇಕಾಗಿದ್ದು,  ಕಟ್ಟಡ ಹೊಂದಿರುವ ಆಸಕ್ತರು ಮೇ. 25 ರೊಳಗಾಗಿ ಕಟ್ಟದ ದಾಖಲಾತಿಗಳೊಂದಿಗೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಕಚೇರಿಗೆ ಸಲ್ಲಿಬೇಕು.
     ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08539-220590 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 15 May 2017

ಮೇ. 20 ರಂದು ಜನ-ಮನ’ ಕಾರ್ಯಕ್ರಮ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ


ಕೊಪ್ಪಳ ಮೇ. 15 (ಕರ್ನಾಟಕ ವಾರ್ತೆ): ಸರ್ಕಾರ ಜಾರಿಗೊಳಿಸಿರುವ ಹಲವು ಜನಪರ ಯೋಜನೆಗಳ ಬಗ್ಗೆ ಫಲಾನುಭವಿಗಳ ಅನಿಸಿಕೆ ಅಭಿಪ್ರಾಯ ಸಂಗ್ರಹ ಮಾಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಫಲಾನುಭವಿಗಳ ಅನಿಸಿಕೆಗಳನ್ನು ಪಡೆಯುವ ‘ಜನ-ಮನ’ ಕಾರ್ಯಕ್ರಮ ಮೇ. 20 ರಂದು ಕೊಪ್ಪಳದಲ್ಲಿ ನಡೆಸಲು ದಿನಾಂಕ ನಿಗದಿಪಡಿಸಲಾಗಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ‘ಜನ-ಮನ’ ಹಾಗೂ ಅನ್ನಭಾಗ್ಯ ಯೋಜನೆ ಕಾರ್ಯಕ್ರಮದ ಸಿದ್ಧತೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ರಾಜ್ಯದ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ‘ಜನ-ಮನ’ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಮೇ. 20 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲು ನಿದಗಿಪಡಿಸಲಾಗಿದೆ.   ಜಿಲ್ಲಾ ಉಸ್ತುವಾರಿ ಮಂತ್ರಿಗಳು ಯೋಜನೆಗಳ ಕುರಿತು ಫಲಾನುಭವಿಗಳ ಅಭಿಪ್ರಾಯ- ಅನಿಸಿಕೆಗಳನ್ನು ಆಲಿಸಲಿದ್ದಾರೆ.  ಪ್ರಸ್ತುತ ಸರ್ಕಾರ ಹಲವಾರು  ಅನ್ನಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯ, ಕೃಷಿಭಾಗ್ಯ, ಬಿದಾಯಿ, ರಾಜೀವ್ ಆರೋಗ್ಯ ಭಾಗ್ಯ, ಹರೀಶ್ ಸಾಂತ್ವನ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಮನಸ್ವಿನಿ, ಮೈತ್ರಿ, ವಸತಿ ಭಾಗ್ಯ ಹೀಗೆ ಅನೇಕ ಜನಪರ ಯೋಜನೆಗಳು ಜಾರಿಗೊಂಡಿವೆ.  ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಫಲಾನುಭವಿಗಳಿಂದಲೇ ನೇರವಾಗಿ ಕೇಳಿ ತಿಳಿದುಕೊಳ್ಳುವ ಸಲುವಾಗಿ ಜನ-ಮನ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ.  ಈ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕೊಪ್ಪಳಕ್ಕೆ ಕರೆತರುವ ಜವಾಬ್ದಾರಿ ಆಯಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವಹಿಸಲಾಗಿದೆ.  ಅನ್ನಭಾಗ್ಯ- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕ್ಷೀರಭಾಗ್ಯ- ಸಾರ್ವಜನಿಕ ಶಿಕ್ಷಣ ಇಲಾಖೆ, ವಿದ್ಯಾಸಿರಿ- ಹಿಂದುಳಿದ ವರ್ಗಗಳ ಕಲ್ಯಾಣ, ರಾಜೀವ್ ಆರೋಗ್ಯಭಾಗ್ಯ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮನಸ್ವಿನಿ-ಮೈತ್ರಿ- ಕಂದಾಯ, ಪಸು ಭಾಗ್ಯ- ಪಶುಸಂಗೋಪನೆ, ಕೃಷಿಭಾಗ್ಯ- ಕೃಷಿ ಇಲಾಖೆ ಹೀಗೆ ವಿವಿಧ ಇಲಾಖೆಗಳು ಸಂಬಂಧಪಟ್ಟ ಫಲಾನುಭವಿಗಳನ್ನು ಕೊಪ್ಪಳಕ್ಕೆ ಕರೆತರುವ ವ್ಯವಸ್ಥೆ ಮಾಡಬೇಕು, ಇದರ ಸಂಪೂರ್ಣ ಹೊಣೆಗಾರಿಕೆ ಆಯಾ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳದ್ದಾಗಿರುತ್ತದೆ. ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮುತುವರ್ಜಿ ವಹಿಸಿ, ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು. ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸಿ, ಫಲಾನುಭವಿಗಳನ್ನು  ತಾಲೂಕುಗಳಿಂದ ಕೊಪ್ಪಳಕ್ಕೆ ಕರೆತರಲು  ಆಯಾ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.  ಆಯಾ ಇಲಾಖಾ ಅಧಿಕಾರಿಗಳಿಗೆ ವಹಿಸಿಕೊಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನ್ನಭಾಗ್ಯ : ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರ ಪ್ರತಿ ಸದಸ್ಯರಿಗೆ ಉಚಿತವಾಗಿ ನೀಡಲಾಗುತ್ತಿದ್ದ  ಅಕ್ಕಿಯ ಪ್ರಮಾಣವನ್ನು 05 ಕೆ.ಜಿ. ಯಿಂದ 07 ಕೆ.ಜಿ.ಗೆ ಹೆಚ್ಚಿಸಲಾಗಿದ್ದು, ಈ ಯೋಜನೆಯ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮವನ್ನು ಕೂಡ ಜನ-ಮನ ಕಾರ್ಯಕ್ರಮದ ಸಂದರ್ಭದಲ್ಲೇ ನೆರವೇರಿಸಲಾಗುವುದು.  ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ ಅಕ್ಕಿ ನೀಡುವ ಮೂಲಕ ಉದ್ಘಾಟನೆ ನೆರವೇರಿಸುವರು.  ಈ ಕಾರ್ಯಕ್ರಮ ಕುರಿತು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
      ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು, ಜನ-ಮನ  ಕಾರ್ಯಕ್ರಮದ ಕುರಿತು ಸಭೆಗೆ ವಿವರಣೆ ನೀಡಿದರು.  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೆಹಮೂದ್, ಸರ್ವ ಶಿಕ್ಷಣ ಅಭಿಯಾನದ ಡಿವೈಪಿಸಿ ವೆಂಕಟೇಶ್, ಸೇರಿದಂತೆ  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಪ್ಪಳಕ್ಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಮಂಜೂರು- ಬಸವರಾಜ ರಾಯರಡ್ಡಿ



ಕೊಪ್ಪಳ ಮೇ. 15 (ಕರ್ನಾಟಕ ವಾರ್ತೆ): ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಕೊಪ್ಪಳಕ್ಕೆ ಮಂಜೂರು ಮಾಡಲಾಗಿದ್ದು, ಇದಕ್ಕಾಗಿ 90 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಕರ್ನಾಟಕ ಕಾರ್ಯಕ್ರಮದಡಿ ಕೌಶಲ್ಯ ತರಬೇತಿ ಆಕಾಂಕ್ಷಿತ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ ಕುರಿತು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರದಂದು ವೆಬ್‍ಪೋರ್ಟಲ್ ಉದ್ಘಾಟಿಸಿ ಅವರು ಮಾತನಾಡಿದರು.

     ಜಿಲ್ಲೆಯಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್‍ನಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಮಂಜೂರು ಮಾಡಲಾಗಿದ್ದು, ಇದಕ್ಕಾಗಿ 90 ಕೋಟಿ ರೂ. ಅನುದಾನ ಒದಗಿಸಲಾಗಿದೆ.  10 ಎಕರೆ ಜಮೀನು ಹೆಚ್ಚುವರಿಯಾಗಿ ಬೇಕಾಗಿದೆ.  ತಳಕಲ್‍ನಲ್ಲಿ ಪ್ರಾರಂಭವಾಗಲಿರುವ ಇಂಜಿನಿಯರಿಂಗ್ ಕಾಲೇಜು ಜೊತೆ ಜೊತೆಗೆ ಈ ಕೌಶಲ್ಯಾಭಿವೃದ್ಧಿ ಕೇಂದ್ರ ಸಹ ನಿರ್ಮಾಣವಾಗಲಿದೆ.  ಯುವಕರು ನಮ್ಮ ದೇಶದ ಸಂಪತ್ತು.  ಜಗತ್ತಿನಲ್ಲಿ ಅತಿ ಹೆಚ್ಚು ಯುವಜನತೆಯನ್ನು ಹೊಂದಿರುವ ದೇಶ ಭಾರತ.    30 ಕೋಟಿಗೂ ಹೆಚ್ಚು ಯುವಕರು ನಮ್ಮ ದೇಶದಲ್ಲಿದ್ದಾರೆ.  ಯುವಶಕ್ತಿ ದೇಶದಲ್ಲಿ ಸಮರ್ಪಕ ಬಳಕೆಯಾದರೆ ಮಾತ್ರ ದೇಶದ ಆಂತರಿಕ ಉತ್ಪನ್ನ ಹಾಗೂ ಆರ್ಥಿಕ ವ್ಯವಸ್ಥೆ ಶಕ್ತಿಯುತವಾಗಲಿದೆ.  ಜಾಗತೀಕರಣ ಮತ್ತು ಔದ್ಯೋಗೀಕರಣ ಜಾರಿಗೆ ಬಂದ ನಂತರ ನಮ್ಮ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಉದ್ಯಮ ಶೀಲತೆ ಹೆಚ್ಚಾಗಿದ್ದು, ಜಿಡಿಪಿ ಕೂಡ ಹೆಚ್ಚಾಗಿದೆ.  ಚೀನಾ ದೇಶ ಜಾಗತೀಕರಣ ಒಪ್ಪಿಕೊಂಡ ನಂತರ ಅಲ್ಲಿ ಆರ್ಥಿಕ ಕ್ರಾಂತಿಯಾಗಲು ಸಾಧ್ಯವಾಯಿತು.  ಇದರ ಪರಿಣಾಮವಾಗಿ ಅಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದ್ದು, ನಮ್ಮ ದೇಶದಲ್ಲೂ ಇದೇ ರೀತಿ ಆಗಬೇಕಿದೆ.  ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಮಾತ್ರವಲ್ಲ, ಉದ್ಯಮಶೀಲತೆಯನ್ನೂ ಕಲಿಸಬೇಕಿದೆ.  ಯುವ ಜನರಿಗೆ ಉದ್ಯೋಗ ಕೌಶಲ್ಯವನ್ನು ನೀಡಿ, ಅವರ ಸಬಲಿಕರಣ ಕೈಗೊಳ್ಳಲು ರಾಜ್ಯದಲ್ಲಿ ಈ ವರ್ಷ 05 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಗುರಿಯನ್ನು ನಿಗದಿಪಡಿಸಿದೆ.  ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ 11 ಸಾವಿರ ಯುವಜನರಿಗೆ ಕೌಶಲ್ಯ ತರಬೇತಿ ನೀಡಲಾಗುವುದು.  ಇದಕ್ಕಾಗಿ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಕರ್ನಾಟಕ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಯುವಜನರು ತಮ್ಮ ಹೆಸರನ್ನು ನೋಂದಾಯಿಸಲು ವೆಬ್‍ಪೋರ್ಟಲ್ ಮೇ. 15 ರಿಂದ ಪ್ರಾರಂಭಿಸಲಾಗಿದೆ.  ಯುವಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕೌಶಲ್ಯಾಭಿವೃದ್ಧಿ ವಿವಿ ಸ್ಥಾಪನೆ :
************ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 80 ಸಾವಿರ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾರೆ.  ಶಿಕ್ಷಣ ಪಡೆದ ಎಲ್ಲರಿಗೂ ಸರ್ಕಾರಿ ನೌಕರಿ ದೊರೆಯಲು ಸಾಧ್ಯವಿಲ್ಲ. ಈಗಿನ ಯುವಪೀಳಿಗೆ ಟೇಬಲ್ ವರ್ಕ್‍ಗೆ ಆದ್ಯತೆ ನೀಡುತ್ತಾರೆಯೇ ಹೊರತು, ವೃತ್ತಿ ಕೌಶಲ ಆಧಾರಿತ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ.  ಕುಂಬಾರಿಕೆ, ಕಮ್ಮಾರಿಕೆ, ಕಸೂತಿ ಕಲೆಗಳು, ಶಿಲ್ಪ ಕೆತ್ತನೆ ಹೀಗೆ ವೃತ್ತಿ ಆಧಾರಿತ ಕೌಶಲ್ಯಗಳನ್ನು ಯಾರೂ ಕಲಿಯಲು ಮುಂದಾಗುತ್ತಿಲ್ಲ.  ಆದರೆ ವಾಸ್ತವವಾಗಿ ವೃತ್ತಿ ಆಧಾರಿತ ಉದ್ಯೋಗಕ್ಕೆ ಇತ್ತೀಚೆಗೆ ವ್ಯಾಪಕ ಬೇಡಿಕೆ ಇದೆ.  5 ಸಾವಿರಕ್ಕೂ ಹೆಚ್ಚು ಗ್ರಾಮೀಣ ಕೌಶಲ್ಯ ಆಧಾರಿತ ವೃತ್ತಿಗೆ ದೇಶದಲ್ಲಿ ವಿಫುಲ ಅವಕಾಶಗಲಿವೆ.  ಯುವಜನರಿಗೆ ಕೌಶಲ್ಯ ಅಭಿವೃದ್ಧಿಗಾಗಿಯೇ 2017-18 ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಸ್ಥಾಪಿಸಲು ಈಗಾಗಲೆ ಟಾಟಾ ಕಂಪನಿಯಂತಹವರ ಸಹಭಾಗಿತ್ವ ಪಡೆಯಲು ಮಾತುಕತೆ ನಡೆಸಲಾಗಿದೆ.  ಇದೇ ವರ್ಷ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂತ್ರಿಗಳು ಹೇಳಿದರು.
ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ :
*************** ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವವರ ಸಂಖ್ಯೆ ಕಡಿಮೆ ಇದ್ದು, ಉನ್ನತ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ವರ್ಷ ಸರ್ಕಾರಿ ಕಾಲೇಜುಗಳಲ್ಲಿ ಮೊದಲ ವರ್ಷದ ಬಿಎ, ಬಿಕಾಂ, ಬಿಎಸ್‍ಸಿ ಹೀಗೆ ಪದವಿ ಶಿಕ್ಷಣ ಪಡೆಯುವ 1. 5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಿದೆ.  ಅದೇ ರೀತಿ ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ವಸತಿ   ಸಹಿತ ಕಾಲೇಜುಗಳನ್ನು ಈ ವರ್ಷ ರಾಜ್ಯದ 20 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುವುದು.  ಹೈದ್ರಾಬಾದ್-ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇದೇ ವರ್ಷ ಪ್ರಾರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಸಂಸದ ಕರಡಿ ಸಂಗಣ್ಣ ಮಾತನಾಡಿ, ನಿರುದ್ಯೋಗ ಸಮಸ್ಯೆಯು ದೇಶಕ್ಕೆ ಸವಾಲಿನ ವಿಷಯವಾಗಿದ್ದು, ಕೌಶಲ್ಯ ತರಬೇತಿ ಪಡೆದುಕೊಂಡರೆ, ಅಂತಹವರು ಬದುಕು ಕಟ್ಟಿಕೊಳ್ಳಲು ಸಾಧ್ಯ.  ಶಿಕ್ಷಣ ಕೇವಲ ಸರ್ಕಾರಿ ನೌಕರಿಗಾಗಿ ಎಂಬ ಮನಸ್ಥಿತಿ ಬದಲಾಗಬೇಕಿದೆ. ಯಾವುದೇ ಉದ್ಯೋಗವನ್ನು ಕೀಳು ಎಂದು ಯಾರೂ ಭಾವಿಸಬಾರದು. ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿಗೆ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ಮಂಜೂರು ಮಾಡಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ ಕೌಶಲ್ಯಾಬಿವೃದ್ಧಿ ವೆಬ್‍ಪೋರ್ಟಲ್‍ನಲ್ಲಿ ನೋಂದಣಿ ಮಾಡುವ ಕುರಿತು ಮಾಹಿತಿ ನೀಡಿ, 18 ರಿಂದ 35 ವರ್ಷದೊಳಗಿನ ಯಾವುದೇ ಯುವಜನರು ಕೌಶಲ್ಯಾಭಿವೃದ್ಧಿಗೆ ನೋಂದಣಿ ಮಾಡಿಸಬಹುದು. ವಿದ್ಯಾರ್ಹತೆಯ ಯಾವುದೇ ಮಿತಿ ಇದರಲ್ಲಿ ಇಲ್ಲ.  ನಾಡಕಚೇರಿ, ನಗರಸಭೆ, ಪುರಸಭೆ, ಪ.ಪಂಚಾಯತಿ ಅಥವಾ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮನೆ ವಿಳಾಸ ಇಷ್ಟು ನೀಡಿ, ನೋಂದಣಿ ಮಾಡಿಸಬಹುದು.  225 ವಿಷಯಗಳಲ್ಲಿ ತರಬೇತಿ ನೀಡಲು ಅವಕಾಶವಿದ್ದು, ಈ ಪೈಕಿ ಗರಿಷ್ಠ 05 ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.  ತರಬೇತಿಗೆ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  ಜಿಲ್ಲೆಯ ನಿರುದ್ಯೋಗಿ ಯುವಜನರು ಇಂತಹ ವಿಶೇಷ ಯೋಜನೆಯ ಸವಲತ್ತು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
     ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಮೇ. 15 ರಿಂದ 22 ರವರೆಗೆ ನೋಂದಣಿ ನಡೆಯಲಿದೆ.  ಜಿಲ್ಲಾ ಉದ್ಯೋಗವಿನಿಮಯ ಕಚೇರಿಯಲ್ಲಿ ವರ್ಷಪೂರ್ತಿ ನೊಂದಣಿ ಮಾಡಿಸಲು ಅವಕಾಶವಿದೆ.  ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಉಮಾ ಮಹದೇವನ್, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಪ್ರಮೋದ್ ಗಾಯಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಉಪಸ್ಥಿತರಿದ್ದರು.  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಲ್ಲೇಶ್ ಸ್ವಾಗತಿಸಿದರು.

Saturday, 13 May 2017

ಮೇ. 15 ರಿಂದ 22 ರವರೆಗೆ ಕೌಶಲ ತರಬೇತಿಗೆ ನಿರುದ್ಯೋಗಿ ಯುವಕರ ನೊಂದಣಿ : ಕೌಶಲ್ಯ ಮೇಳ ಮೇ. 15 ಕ್ಕೆ ವೆಬ್ ಪೋರ್ಟಲ್ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ಉದ್ಘಾಟನೆ


ಕೊಪ್ಪಳ ಮೇ. 13 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳ ಮಹತ್ವಕಾಂಕ್ಷಿಯ ಕೌಶಲ ಕರ್ನಾಟಕ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಮೇ. 15 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಚಾಲನೆ ನೀಡುವರು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
     ಕೌಶಲ್ಯ ಮೇಳ ಕುರಿತಂತೆ ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ನಿರುದ್ಯೋಗವು ದೇಶದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದು ಭಾರತದ ಪ್ರಗತಿಯ ವೇಗಕ್ಕೆ ಪ್ರಮುಖ ತಡೆಯಾಗಿ ಪರಿಣಮಿಸಿದೆ.  ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರವು ಸಹ ಗುರುತರವಾದ ಜವಾಬ್ದಾರಿಯನ್ನು ಹೊಂದಿದ್ದು, ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿದೆ ಹಾಗೂ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿದೆ.  ಇದರ ಒಂದು ಭಾಗವಾಗಿ ವಿವಿಧ ಯೋಜನೆಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೇ ಇಲಾಖೆಯ ಸೂರಿನಡಿ ತರುವುದರ ಮೂಲಕ “ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ” ಯನ್ನು ಪ್ರಾರಂಭಿಸಿರುತ್ತಾರೆ.  ಸದರಿ ಇಲಾಖೆಯಡಿ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಕರ್ನಾಟಕ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸಿರುತ್ತಾರೆ.  ನಿರುದ್ಯೋಗಿ ಯುವಕ-ಯುವತಿಯರು ಮೇ. 15 ರಿಂದ 22 ರವರೆಗೆ  kaushalkar.com  ವೆಬ್ ಪೋರ್ಟಲ್ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.  ಆಧುನಿಕ ಸಮಾಜದಲ್ಲಿ ಮಹತ್ವಕಾಂಕ್ಷಿಯೊಂದಿಗೆ ಮುನ್ನಡೆಯುತ್ತಿರುವ ಯುವಜನತೆ ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ನೆರವಾಗುವುದು ಸರ್ಕಾರದ ಉದ್ದೇಶವಾಗಿದೆ.  ಬದಲಾವಣೆಯ ಕಾಲದಲ್ಲಿ ಯುವ ಜನತೆ ಉದ್ಯೋಗದ ಅವಕಾಶಗಳನ್ನು ಪಡೆಯಲು ಅವರನ್ನು ಅವಶ್ಯಕ ಕೌಶಲ ಮತ್ತು ಸಾಮಥ್ರ್ಯದೊಂದಿಗೆ ಸನ್ನದ್ಧಗೊಳಿಸಬೇಕಾಗಿದೆ.  ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಕಾರ್ಯಕ್ರಮಕ್ಕೆ ಮೇ. 15 ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದರೆ, ಕೊಪ್ಪಳ ಜಿಲ್ಲೆಯಲ್ಲಿ ಅಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಚಾಲನೆ ನೀಡುವರು. ಕೌಶಲ ತರಬೇತಿ ಬಯಸಿ ನೊಂದಣಿ ಮಾಡಿಕೊಳ್ಳಲು ಬಯಸುವ ಯುವಕ, ಯುವತಿಯರಿಗೆ ಅವಕಾಶವಿದೆ.  ಕೌಶಲ ತರಬೇತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಆಗಮಿಸಿ, ನೊಂದಣಿ ಮಾಡಿಕೊಳ್ಳುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ಕೌಶಲ ತರಬೇತಿ ಪಡೆಯಲು 18 ರಿಂದ 35 ವರ್ಷ ವಯೋಮಿತಿಯೊಳಗಿರಬೇಕು.  ಯಾವುದೇ ವಿದ್ಯಾರ್ಹತೆಯ ಮಿತಿ ಇದಕ್ಕಿಲ್ಲ. ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಜರುಗುವ ಕೌಶಲ್ಯ ಮೇಳ ಕಾರ್ಯಕ್ರಮದಲ್ಲಿ ಆಸಕ್ತ ಅಭ್ಯರ್ಥಿಗಳು ಭಾಗವಹಿಸಿ ತಮ್ಮ ಹೆಸರನ್ನು ಆಧಾರ ನಂಬರ್ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬೇಕು.
ಕೊಪ್ಪಳ ಜಿಲ್ಲೆಯ ಉಳಿದ ತಾಲೂಕು ಕೇಂದ್ರಗಳಲ್ಲಿ ಆಯಾ ಶಾಸಕರ ನೇತೃತ್ವದಲ್ಲಿ ವೆಬ್ ಪೋರ್ಟಲನ್ನು ಮೇ. 15 ರಂದೇ ಚಾಲನೆ ದೊರಕಿಸಲು ಹಾಗೂ ನಿರುದ್ಯೋಗ ಯುವಕ ಯುವತಿಯರಿಗೆ ನೋಂದಣಿಗಾಗಿ ಅನುವು ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಛೇರಿಗಳಲ್ಲಿ ಹಾಗೂ ಎಲ್ಲಾ ನಾಡ ಕಛೇರಿಗಳಲ್ಲಿ 18 ರಿಂದ 35 ವರ್ಷದೊಳಗಿನ ನಿರುದ್ಯೋಗ ಯುವಜನರು  kaushalkar.com  ಪೋರ್ಟಲ್‍ನಲ್ಲಿ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.  ನೋಂದಣಿ ಬಯಸಿ ಬರುವ ಅಭ್ಯರ್ಥಿಗಳು ಆಧಾರ ಯುಐಡಿ ನಂಬರ್ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಹೇಳಿದರು.
 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ  ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  

Friday, 12 May 2017

ಮೆ. 16 ರಿಂದ ವಿಶೇಷ ದಾಖಲಾತಿ ಹಾಗೂ ಜೂನ. 01 ರಿಂದ ಸಾಮಾನ್ಯ ದಾಖಲಾತಿ ಆಂದೋಲನ


ಕೊಪ್ಪಳ, ಮೇ. 12 (ಕರ್ನಾಟಕ ವಾರ್ತೆ): ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸದೇ ವಿವಿಧ ಕಾರಣಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಉದ್ದೇಶದಿಂದ ಮೇ. 16 ರಿಂದ 31ರ ವರೆಗೆ ಸಾಮಾನ್ಯ ದಾಖಲಾತಿ ಆಂದೋಲನವನ್ನು ಹಾಗೂ ಜೂನ. 01 ರಿಂದ 30 ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. 
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009 ರನ್ವಯ 6 ರಿಂದ 14 ವಯೋಮಾನದ ಎಲ್ಲಾ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಕಡ್ಡಾಯ, ಉಚಿತ ಹಾಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಒದಗಿಸಬೇಕಿದೆ.  ಪ್ರತಿ ವರ್ಷದಂತೆ ಈ ವರ್ಷವೂ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 05 ವರ್ಷ 10 ತಿಂಗಳು ತುಂಬಿದ ಮಕ್ಕಳನ್ನು ನೇರವಾಗಿ ಶಾಲೆಗೆ ದಾಖಲಿಸಲು, ಶಾಲೆಗೆ ಬರುತ್ತಿರುವ ಎಲ್ಲಾ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಿಂದೇ ಶಾಲೆಗೆ ಹಾಜರಾಗುವಂತೆ ಮಾಡಲು ಹಾಗೂ ವಿವಿಧ ಕಾರಣಗಳಿಂದ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸದೇ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಉದ್ದೇಶದಿಂದ ಮೇ. 16 ರಿಂದ 31ರ ವರೆಗೆ ಸಾಮಾನ್ಯ ದಾಖಲಾತಿ ಆಂದೋಲನವನ್ನು ಹಾಗೂ ಜೂನ. 01 ರಿಂದ 30 ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನವನ್ನು ನಡೆಸಲಾಗುತ್ತಿದೆ. 
    ಕಾರ್ಯಕ್ರಮದಲ್ಲಿ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲಿಸುವಲ್ಲಿ ಪೂರ್ಣ ಪ್ರಮಾಣದ ಸಹಕಾರ ನಿಡಲು ಕೊಪ್ಪಳ ಸರ್ವ ಶಿಕ್ಷಣ ಅಭಿಯಾನ ಉಪನಿರ್ದೇಶಕ ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕುಷ್ಟಗಿ : ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 12 (ಕರ್ನಾಟಕ ವಾರ್ತೆ): ಕುಷ್ಟಗಿ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಣೆಯಾಗುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ/ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಅರ್ಹರಿಂದ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರೂ. 44,500/- ರೊಳಗಿರಬೇಕು.  ಪ್ರವರ್ಗ 1ಕ್ಕೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರೂ. 1 ಲಕ್ಷದೊಳಗಿರಬೇಕು.  ಪರಿಶಿಷ್ಟ ಜಾತಿ/ ಪ.ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರೂ. 2 ಲಕ್ಷದೊಳಗಿರಬೇಕು.  ವ್ಯಾಸಂಗ ಮಾಡುವ ಶಾಲೆಯಿಂದ 5 ಕಿ.ಮೀ ವ್ಯಾಪ್ತಿಯ ಹೊರಗೆ ಇರುವ ವಿದ್ಯಾರ್ಥಿಗಳು ಮಾತ್ರ ಸೌಲಭ್ಯಕ್ಕೆ ಅರ್ಹರಿರುತ್ತಾರೆ.  ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮತ್ತು ಪ್ರವೇಶ ಮೀಸಲಾತಿ ನಿಯಮಾನುಸಾರ ಆಯ್ಕೆ ಸಮಿತಿಯ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು.  ಶಾಲೆಯಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಮುಖ್ಯೋಪಾಧ್ಯರಿಂದ ಪ್ರವೇಶ ದೃಢಿಕರಣ ಪತ್ರ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.  ವಿದ್ಯಾರ್ಥಿ ನಿಲಯಕ್ಕೂ ಗ್ರಾಮಕ್ಕೂ ಇರುವ ಅಂತರದ (5ಕಿ.ಮೀ) ಸರ್ಟಿಫಿಕೇಟನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು/ ಕಾರ್ಯದರ್ಶಿಗಳಿಂದ ನಮೂನೆಯಲ್ಲಿ ದಾಖಲಿಸಿ ಅರ್ಜಿಗೆ ಲಗತ್ತಿಸಬೇಕು.  ಇತ್ತೀಚಿನ ಪಾಸಪೋರ್ಟ ಅಳತೆಯ ಎರಡು ಭಾವಚಿತ್ರ ಲಗತ್ತಿಸಬೇಕು.  
    ಅರ್ಹ ವಿದ್ಯಾರ್ಥಿಗಳು ನಿಗಧಿತ ಅರ್ಜಿ ನಮೂನೆಯನ್ನಯ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ, 3ನೇ ವಾರ್ಡ (ಕಛೇರಿ ವೇಳೆಯಲ್ಲಿ) ಪಡೆದು ಭರ್ತಿ ಮಾಡಿದ ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಣ ಮಾಡಿಸಿ, ಅಗತ್ಯ ದಾಖಲೆಗಳೊಂದಿಗೆ ಮೇ. 15 ರೊಳಗಾಗಿ ಕುಷ್ಟಗಿ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ. 

ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಮೇ. 10 (ಕರ್ನಾಟಕ ವಾರ್ತೆ): ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಿದೆ.
      ಗ್ರಾಮೀಣ ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿಎಂಎಸ್‍ಇಜಿಪಿ) ಯನ್ನು ಜಾರಿಗೊಳಿಸಿದ್ದು ಸೌಲಭ್ಯ ಪಡೆಯಲು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಯೋಜನೆಯ ಗರಿಷ್ಠ ವೆಚ್ಚ ರೂ.10 ಲಕ್ಷ ಇರುವ ಉತ್ಪಾದನೆ ಮತ್ತು ಸೇವಾ ಚಟುವಟಿಕೆಗಳಿಗೆ, ಬ್ಯಾಂಕುಗಳು ನೀಡುವ ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 25% (ಗರಿಷ್ಠ ಮೊತ್ತ ರೂ.2.50 ಲಕ್ಷ) ಮತ್ತು ವಿಶೇಷ ವರ್ಗದ (ಪ.ಜಾತಿ/ ಪ.ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿ ಸೈನಿಕ/ಮಹಿಳೆ) ಫಲಾನುಭವಿಗಳಿಗೆ ಶೇ. 35% (ಗರಿಷ್ಠ ಮೊತ್ತ ರೂ.3.50 ಲಕ್ಷ) ಸಹಾಯಧನ ಸೌಲಭ್ಯ ಇರುತ್ತದೆ.  ಉದ್ದಿಮೆಯನ್ನು ಪ್ರಾರಂಭ ಮಾಡುವ ಸಾಮಾನ್ಯ ವರ್ಗದವರು ಯೋಜನಾ ವೆಚ್ಚದ ಶೇ. 10% ಮತ್ತು ವಿಶೇಷ ವರ್ಗದವರಿಗೆ ಶೇ. 5% ರಷ್ಟು ಸ್ವಂತ ಬಂಡವಾಳ ಹೂಡಬೇಕಾಗಿರುತ್ತದೆ. 
     ಅರ್ಜಿ ಸಲ್ಲಿಸಲು ವಯೋಮಿತಿ 21 ವರ್ಷ ಆಗಿರಬೇಕು.  ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ, ವಿಶೇಷ ವರ್ಗದವರಿಗೆ (ಪ.ಜಾತಿ/ ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕ ಮತ್ತು ಮಹಿಳೆಯರು) ಗರಿಷ್ಠ 45 ವರ್ಷ.  ಯೋಜನೆಯು ಹೊಸದಾಗಿ ಪ್ರಾರಂಭಿಸುವ ಘಟಕಗಳಿಗೆ ಮಾತ್ರ ಅನ್ವಯಿಸುತ್ತದೆ.  ವಿದ್ಯಾರ್ಹತೆ 8ನೇ ತರಗತಿ ಪಾಸಾಗಿರಬೇಕು, ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ ಸಂಸ್ಥೆಯಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೋಮಾ ಪದವಿ ಹೊಂದಿರಬೇಕು.  ಯೊಜನೆಯನ್ನು ಕೊಪ್ಪಳ ಜಿಲ್ಲಾ ಕೈಗಾರಿಕ ಕೇಂದ್ರ ಮತ್ತು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯ ಖಾದಿ ಮಂಡಳಿ ಮುಖಾಂತರ ಯೋಜನೆಯ ಸೌಲಭ್ಯ ಪಡೆಯಲು ಅಪೇಕ್ಷಿಸುವ ಆಸಕ್ತ ಅಭ್ಯರ್ಥಿಗಳು ವೆಬ್‍ಸೈಟ್  http://cmegp.kar.nic.in ನಲ್ಲಿ ಅರ್ಜಿ ಸಲ್ಲಿಸಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ ಕೊಪ್ಪಳ ಇವರಿಗೆ, ಅರ್ಜಿಯ ಪ್ರತಿ ಅಗತ್ಯ ದಾಖಲಾತಿಗಳ ಯಥಾ ಪ್ರತಿಯೊಂದಿಗೆ ದ್ವಿಪ್ರತಿಯಲ್ಲಿ ಜೂನ್. 12 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳನ್ನು 08539-231473 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ


ಕೊಪ್ಪಳ, ಮೇ. 10 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ವೈಜ್ಞಾನಿಕ ಚಿಂತನ ಮಂಥನ, ನಂಬಿಕೆ ವರ್ಸಸ್ ಮೌಢ್ಯತೆ ಮುಖಾಮುಖಿ ಶೀರ್ಷಿಕೆಯಡಿಯಲ್ಲಿ, ಸಾಮಾಜಿಕ ಮೌಢ್ಯಗಳ ನಿವಾರಣೆಗಾಗಿ ಮೇ. 19 ಮತ್ತು 20 ರಂದು ಮಾರುತಿ ವಿದ್ಯಾ ಮಂದಿರ (ಎಂ.ವಿ.ಎಂ ಶಾಲೆ), ಕನ್ನಮಂಗಲ ಗೇಟ್ ನಿಲ್ದಾಣ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟೋಲ್ ಹತ್ತಿರ, ಯಲಹಂಕ- ದೇವನಹಳ್ಳಿ ಮಧ್ಯದಲ್ಲಿ, ದೇವನಹಳ್ಳಿ ತಾ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ರಾಜ್ಯ ಮಟ್ಟದ ಎರಡು ದಿನಗಳ ವಿಶೇಷ ವೈಜ್ಞಾನಿಕ ಚಿಂತನ ಮಂಥನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. 
    ಕಾರ್ಯಗಾರದಲ್ಲಿ ವೈಜ್ಞಾನಿಕ ಚಿಂತಕರು, ಶಿಕ್ಷಕರು ಹಾಗೂ ಜನಸಾಮಾನ್ಯರಿಗೆ ಅಗತ್ಯವಾಗಿ ಹೊಂದಿರಲೇಬೆಕಾಗಿರುವ ವೈಜ್ಞಾನಿಕ ಮನೋಭಾವನೆ ಹಾಗೂ ಪ್ರಚಲಿತ ಸಾಮಾಜಿಕ ಮೌಢ್ಯಗಳ ಕುರಿತು ಜಾಗೃತಿ ಮೂಡಿಸಲು ಆಯೋಜಿಸಲಾಗಿದೆ.  ಉದ್ದೇಶಿತ ಕಾರ್ಯಾಗಾರದಲ್ಲಿ ರಾಜ್ಯದ ವೈಜ್ಞಾನಿಕ ಚಿಂತಕರು, ವಿಜ್ಞಾನಿಗಳು, ಪವಾಡ ಬಯಲು ತಜ್ಞರು ಭಾಗವಹಿಸಲಿದ್ದು, ಸಾಮಾಜಿಕ ಮೌಢ್ಯಗಳ ಬೇರೂರುವಿಕೆಯನ್ನು ತಡೆಗಟ್ಟುವ ದಿಸೆಯಲ್ಲಿ ಜಾಗೃತಿ ಮೂಡಿಸಲಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ    ಸಾಮಾಜಿಕ ಮೌಢ್ಯಗಳ ನಿವಾರಣೆ ಕಾರ್ಯಕ್ರಮದ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿತ್ತಿರುವ ಡಾ. ಹುಲಿಕಲ್ ನಟರಾಜ್ ಅವರು ಕಾರ್ಯಗಾರದಲ್ಲಿ ಪವಾಡ ರಹಸ್ಯ ಬಯಲು ತರಬೇತಿಯನ್ನು 2 ದಿನಗಳ ಕಾಲ ನೀಡಲಿದ್ದಾರೆ.  ಕಾರ್ಯಗಾರದ ದಿನದಂದು ಊಟೋಪಚಾರ ಹಾಗೂ ವಸತಿ ವ್ಯವಸ್ಥೆಯನ್ನು ಕರಾವಿಪವು ಉಚಿತವಾಗಿ ಒದಗಿಸುತ್ತದೆ.  ರಾಜ್ಯದ ಆಸಕ್ತ ಸಾರ್ವಜನಿಕರು ತರಬೇತಿಯಲ್ಲಿ ಭಾಗವಹಿಸಲು ಮೇ.12 ರೊಳಗಾಗಿ ತಮ್ಮ ಸ್ವವಿವರಗಳೊಂದಿಗೆ ಗೌರವ ಕಾರ್ಯದರ್ಶಿ, ಕರಾವಿಪ, ವಿಜ್ಞಾನ ಭವನ, ನಂ.24/2, 21ನೇ ಮುಖ್ಯ ರಸ್ತೆ, ಬನಶಂಕರಿ, 2ನೇ ಹಂತ, ಬೆಂಗಳೂರು-560 070 ಇಲ್ಲಿ ಪತ್ರ ಮುಖೇನ ಅಥವಾ ಇ-ಮೇಲ್ krvp.info@gmail.com ಮೂಲಕ ನೋಂದಣಿ ಮಾಡಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ದೂ. 080-26718939, ಮೊ. 9483549159 ಗೆ ಸಂಪರ್ಕಿಸಲು ಕರಾವಿಪ ಗೌರವ ಕಾರ್ಯದರ್ಶಿ ಗಿರೀಶ್ ಬಿ. ಕಡ್ಲೇವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.