Friday, 17 March 2017

ಕಾರಟಗಿ : ನೀರಿನ ಮಿತ ಬಳಕೆಗೆ ಸೂಚನೆ

ಕೊಪ್ಪಳ ಮಾ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯು ಬರಗಾಲ ಪ್ರದೇಶ ಘೋಷಿತ ಪ್ರದೇಶ ಆಗಿರುವುದರಿಂದ ಹಾಗೂ ಕಳೆದ 3 ವರ್ಷಗಳಿಂದ ಮಳೆ ಅಭಾವದಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಅಂತರ್ಜಲ ಕಡಿಮೆಯಾಗಿದ್ದು, ಕಾರಟಗಿ ಪುರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿದೆ.  ಈ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸಲು ಕಾರಟಗಿ ಪಟ್ಟಣದ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
     ಪುರಸಭೆಯಿಂದ ನೀರಿನ ಮೂಲ ಶೋಧಿಸಿ ಪರ್ಯಾಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ನೀರು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಹೊಸ ಕೊಳವೆಬಾವಿ ಕೊರೆಸಲಾಗುತ್ತಿದೆ. ಅಂತರ್ಜಲ ಮಟ್ಟ ಕಡಿಮೆ ಇರುವುದರಿಂದ ಬಹಳಷ್ಟು ಕೊಳವೆಬಾವಿಗಳು ವಿಫಲವಾಗುತ್ತಿವೆ.  ಕೆಲವು ವಾರ್ಡಗಳಲ್ಲಿ ನಿಗದಿಯಂತೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.  ಬೇಸಿಗೆಯಲ್ಲಿ ನೀರಿನ ಅಭಾವ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಾಗಬಹುದು. ಸಾರ್ವಜನಿಕರು ಲಭ್ಯವಿರುವ ಕುಡಿಯುವ ನೀರನ್ನು ಬರುವ ಮಳೆಗಾಲದವರೆಗೂ ಮಿತವಾಗಿ ಬಳಸಬೇಕು ಎಂದು ಕಾರಟಗಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Post a Comment