Wednesday, 15 March 2017

ಸುಗ್ಗಿ-ಹುಗ್ಗಿ ಜಾನಪದ ಸಂಭ್ರಮ ಸವಿದ ಮುದ್ದಾಬಳ್ಳಿ ಗ್ರಾಮಸ್ಥರು


ಕೊಪ್ಪಳ, ಮಾ.15 (ಕರ್ನಾಟಕ ವಾರ್ತೆ): ಕೊಪ್ಪಳ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಮಂಗಳವಾರದಂದು ಏರ್ಪಡಿಸಿದ ಸುಗ್ಗಿ-ಹುಗ್ಗಿ ಜಾನಪದ ಸಂಭ್ರಮದಲ್ಲಿ ವಿವಿಧ ಜಾನಪದ ಕಲಾಪ್ರಕಾರ ಪ್ರದರ್ಶನ ಜನರ ಮನಸೂರೆಗೊಂಡಿತು.

       ಮುದ್ದಾಬಳ್ಳಿ ಗ್ರಾಮದ ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ  ಸುಗ್ಗಿ-ಹುಗ್ಗಿ ಕಾರ್ಯಕ್ರಮ ಆಯೋಜಿಸಿತ್ತು.  ಕಾರ್ಯಕ್ರಮವನ್ನು ತಾ.ಪಂ. ಸದಸ್ಯ ರಾಜು ಮಾದಿನೂರು ಉದ್ಘಾಟಿಸಿದರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಗ್ರಾ.ಪಂ. ಅಧ್ಯಕ್ಷ ಶರಣಪ್ಪ ಭಾವಿಕಟ್ಟಿ, ಉಪಾಧ್ಯಕ್ಷೆ ರೇಣುಕಾ ಶರಣಪ್ಪ ನಾಯಕ, ಕೊಪ್ಪಳ ವಿಶೇಷ ಪೊಲಿಸ್ ಠಾಣೆ ಸಿಪಿಐ ರುದ್ರೇಶ್ ಉಜ್ಜನಕೊಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಜ್ಞಾನಗಂಗೋತ್ರಿ ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷ ಸುರೇಶರಡ್ಡಿ ಮಾದಿನೂರ, ಮುಖ್ಯೋಪಾಧ್ಯಾಯ ಚಂದ್ರಶೇಖರ ಹತ್ತಿಕಟಗಿ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
     ನಂತರ ನಡೆದ ಜಾನಪದ ಕಲಾತಂಡಗಳ ಪ್ರದರ್ಶನದಲ್ಲಿ ನಿಂಗಪ್ಪ ಮೋರನಾಳ ತಂಡದಿಂದ ಡೊಳ್ಳು ಕುಣಿತ. ಬಸವರಾಜ ವಿಭೂತಿ ತಂಡದಿಂದ ಹಗಲು ವೇಷ.  ಹನುಮಂತಪ್ಪ ಡಿ. ಬಬ್ಬಲ್ ತಂಡದಿಂದ ಮೋಜಿನ ಗೊಂಬೆ.  ಬಿನ್ನಾಳದ ಯಮನಪ್ಪ ಭಜಂತ್ರಿ ತಂಡದಿಂದ ಹಲಗೆ ಮಜಲು.  ಲಿಂಗದಹಳ್ಳಿಯ ಹನುಮಪ್ಪ ಗುಡದಪ್ಪ ತಂಡದಿಂದ ಕೋಲಾಟ ಪ್ರದರ್ಶನಗೊಂಡಿತು.
      ಕೊಪ್ಪಳದ ಸದಾಶಿವ ಪಾಟೀಲ್ ತಂಡದಿಂದ ತತ್ವ ಪದ.  ಧಾರವಾಡ ಜಿಲ್ಲೆಯ ಬಸವ್ವ ಚ. ಹೊಳೆಯಣ್ಣವರ ತಂಡದಿಂದ ಸಂಪ್ರದಾಯ ಪದ.  ರ್ಯಾವಣಿಕಿ ಕರಿಯವ್ವ ಮುತ್ತಾಳ ತಂಡದಿಂದ ಜೋಗುಳ ಪದ.  ಗಿಣಿಗೇರಿಯ ಲಕ್ಷ್ಮಮ್ಮ ತಂಡದಿಂದ ಜಾನಪದ ಸಂಗೀತ.  ದೇವವ್ವ ಬಾರಕೇರ ತಂಡದಿಂದ ಜೋಕುಮಾರ ಪದ.  ಕಾಸೀಂ ಅಲಿ ಮುದ್ದಾಬಳ್ಳಿ ತಂಡದಿಂದ ಜಾನಪದ ಸಂಗೀತ.  ಪರಶುರಾಮ ಅಂಗೂರ್ ತಂಡದಿಂದ ಸುಗ್ಗಿಯ ಹಾಡುಗಳು.  ರುದ್ರೇಶ ಎಸ್. ಉಜ್ಜನಕೊಪ್ಪ ತಂಡದಿಂದ ಗೀ ಗೀ ಪದ.  ಸಿ.ವಿ. ಜಡಿಯವರ ತಂಡದಿಂದ ಜಾನಪದ ಸಂಗೀತ.  ದೀಕ್ಷಾ ಹೆಗಡೆ ತಂಡದಿಂದ ಜಾನಪದ ನೃತ್ಯ.  ವಾಲ್ಮೀಕಿ ಹೆಚ್. ಯಕ್ಕರನಾಳ ತಂಡದಿಂದ ಮೊಹರಂ ಪದ.  ಕುಷ್ಟಗಿಯ ರಾಮಣ್ಣ ಗ್ಯಾನಪ್ಪ ಪರಿಯವರ್ ತಂಡದಿಂದ ಸಿದ್ಧರ ಆಟ.  ಶರಣಪ್ಪ ವಡಿಗೇರಿ ತಂಡದಿಂದ ತತ್ವ ಪದ.  ಧಾರವಾಡಜಿಲ್ಲೆಯ ಮಣಕವಾಡ ಮಹಾತ್ಮ ಯುವಕ ಕ್ರೀಡಾ ಸಂಘದಿಂದ ಅಲಾಯಿ .ಹೆಚ್. ಮೇಳ.  ಭಾಗ್ಯನಗರ ರಾಮಚಂದ್ರಪ್ಪ ಉಪ್ಪಾರ ತಂಡದಿಂದ ಜಾನಪದ ಸಂಗೀತ.  ರಾಮಣ್ಣ ಮಾದಿನೂರ ತಂಡದಿಂದ ತತ್ವ ಪದ.  ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ಸಮೂಹ ನೃತ್ಯ.  ಕುಣಿಕೇರಿಯ ಈಶಪ್ಪ ಸೋಂಪುರ ತಂಡದಿಂದ ಹಂದಿ ಪದ.  ಈಶಪ್ಪ ಓಜನಹಳ್ಳಿ ತಂಡದಿಂದ ಜಾನಪದ ಸಂಗೀತ.  ಕೇಶಪ್ಪ ಮೋರನಾಳ ತಂಡದಿಂದ ತೋಗಲುಗೊಂಬೆ ಆಟ ಪ್ರದರ್ಶನ ಜನರನ್ನು ಆಕರ್ಷಿಸಿತು.  ಮುದ್ದಾಬಳ್ಳಿಯ ಈಶಪ್ಪ ಯಂಕಪ್ಪ ನಾಯಕ ತಂಡದಿಂದ ಜರುಗಿದ ಬಯಲಾಟ ಸನ್ನಿವೇಶ ಜನರ ಮನಸೂರೆಗೊಂಡಿತು.
Post a Comment