Thursday, 9 March 2017

ಉಪ ನಿರ್ದೇಶಕರ ಹುದ್ದೆ : ನಿವೃತ್ತ ಸೈನ್ಯಾಧಿಕಾರಿಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ, ಮಾ.09 (ಕರ್ನಾಟಕ ವಾರ್ತೆ):  ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗಳಿಗೆ ನಿವೃತ್ತ ಸೈನ್ಯಾಧಿಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 04 ಉಪ ನಿರ್ದೇಶಕರ ಹುದ್ದೆಗಳಲ್ಲಿ 01- ಪ್ರ. ವರ್ಗ(ಎ), 01- ಸಾಮಾನ್ಯ ಅಭ್ಯರ್ಥಿ ಮತ್ತು 02-ಪರಿಶಿಷ್ಟ ಜಾತಿಗೆ ಮೀಸಲಿದೆ.  52 ವರ್ಷ ವಯೋಮಿತಿಯೊಳಗಿನ ನಿವೃತ್ತ ಸೈನ್ಯಾಧಿಕಾರಿಗಳು  (Major, Lt Col or equivalent from Navy and Air force, or short service commissioned Officers)  ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಲು ಜಾತಿ ಪ್ರಮಾಣಪತ್ರ, ಸಿ.ವಿ. & ಸರ್ವೀಸ್ ವಿವರಗಳೊಂದಿಗೆ, ಮಾ.15 ರೊಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು-560025 ಇವರಿಗೆ ಸಲ್ಲಿಸುವಂತೆ ಕೋರಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ದೂರವಾಣಿ ಸಂಖ್ಯೆ 08354-235434 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
Post a Comment