Saturday, 18 March 2017

ಯುವ ಪರಿವರ್ತಕರ ತರಬೇತಿಗೆ ಅರ್ಜಿ ಆಹ್ವಾನ


ಕೊಪ್ಪಳ, ಮಾ.18 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು, ಬೆಂಗಳೂರು ಜನ ಆರೋಗ್ಯ ಸಂಸ್ಥೆ, ಎಪಿಡೀಯಾಲಜಿ ವಿಭಾಗ, ನಿಮ್ಹಾನ್ಸ್ ಇವರಿಂದ ಅನುಷ್ಠಾನಗೊಳ್ಳತ್ತಿರುವ ಹೊಸ ಯೋಜನೆ “ಯುವ ಸ್ಪಂದನ” ಕಾರ್ಯಕ್ರಮದಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ 2 ಮಹಿಳೆ ಮತ್ತು 02 ಪುರುಷ, ಒಟ್ಟು 04 ಜನ ಯುವ ಪರಿವರ್ತಕರನ್ನು ತರಬೇತಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ.
    ಅರ್ಜಿ ಸಲ್ಲಿಸುವವರು, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು.  ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಬಲ್ಲ, ಕೊಪ್ಪಳ ಜಿಲ್ಲೆಯ ನಿವಾಸಿಯಾಗಿರಬೇಕು.  ಒಂದು ಬಿಳಿ ಹಾಳಿಯಲ್ಲಿ ತಮ್ಮ ಸಂಪೂರ್ಣ ವಿಳಾಸ, ವಯಸ್ಸು, ವಾಸಿಸುತ್ತಿರುವ ವಿಳಾಸ, ವೈಯಕ್ತಿಕ ಮಾಹಿತಿಯೊಂದಿಗೆ (ಬಯೋಡೇಟಾ) ಮಾ.27ರ ಸಂಜೆ 4.00 ಗಂಟೆಯೊಳಗಾಗಿ ಪ್ರಸ್ತಾವನೆಯನ್ನು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಛೇರಿಗೆ ಸಲ್ಲಿಸಬಹುದಾಗಿದೆ. 
ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಅಥವಾ ಜಿಲ್ಲಾ ಯುವ ಸಮಾಲೋಚಕ ಭೀಮೇಶ ಕುರಿ ಮೊಬೈಲ್ ಸಂಖ್ಯೆ 9845858494 ಕ್ಕೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment