Tuesday, 21 March 2017

ಮಾ.26 ರಂದು ಕ್ರೀಡಾಶಾಲೆಗೆ ಕೊಪ್ಪಳದಲ್ಲಿ ಜಿಲ್ಲಾಮಟ್ಟದ ಆಯ್ಕೆ ಪ್ರಕ್ರಿಯೆ

ಕೊಪ್ಪಳ, ಮಾ.21 (ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾ ವಸತಿ ನಿಲಯಕ್ಕೆ 2017-18ನೇ ಸಾಲಿಗೆ 5ನೇ ಹಾಗೂ 8ನೇ ತರಗತಿಗಳಿಗೆ ಅಥ್ಲೆಟಿಕ್ಸ್ ಮತ್ತು ವಾಲಿಬಾಲ್ ಕ್ರೀಡೆಗೆ ಮಾತ್ರ ಜಿಲ್ಲಾಮಟ್ಟದ ಆಯ್ಕೆ ಪ್ರಕ್ರಿಯೆ ಮಾ.26 ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
    5ನೇ ತರಗತಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು 01-06-2017ಕ್ಕೆ 11 ವರ್ಷ ಮೀರಬಾರದು.  5ನೇ ತರಗತಿಗೆ ಸೇರಲು ಅರ್ಹತೆ (ಕಡ್ಡಾಯವಾಗಿ 4ನೇ ತರಗತಿ ಉತ್ತೀರ್ಣ) ಹೊಂದಿರಬೇಕು.  ಹಾಗೂ ಕಿರಿಯ ವಿಭಾಗದ ಪ್ರವೇಶ ಬಯಸುವ ಬಾಲಕ ಅಥವಾ ಬಾಲಕಿಯರು 11 ವರ್ಷ ವಯೋಮಿತಿ ಮೀರಿರಬಾರದು.  8ನೇ ತರಗತಿಗೆ ಸೇರಲು ಅರ್ಹತೆ ಹೊಂದಿರುಬೇಕು.  ಹೆಚ್ಚಿನ ಮಾಹಿತಿಗಾಗಿ ಸುರೇಶ ಯಾದವ್ 9901527333, ತಿಪ್ಪಣ್ಣ ಎಸ್. ಮಾಳಿ 8746933921 ಅಥವಾ ಹನುಮೇಶ ಪೂಜಾರ 8095936395 ಗೆ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment