Saturday, 18 March 2017

ಮಾ.20 ರಂದು ಕೊಪ್ಪಳದಲ್ಲಿ ಟಿಡಿಎಸ್ ಜಾಗೃತಿ ಕಾರ್ಯಕ್ರಮ

ಕೊಪ್ಪಳ, ಮಾ.18 (ಕರ್ನಾಟಕ ವಾರ್ತೆ): ಆದಾಯ ತೆರಿಗೆ ಇಲಾಖೆ, ಬಳ್ಳಾರಿಯ ಟಿಡಿಎಸ್ ವಿಭಾಗ ಹಾಗೂ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಇವರ ಸಹಯೋಗದಲ್ಲಿ ಟ್ಯಾಕ್ಸ್ ಡಿಡಕ್ಷನ್ ಅಟ್ ಸೋರ್ಸ್ (ಟಿಡಿಎಸ್) ಹಾಗೂ ಅದಕ್ಕೆ ಸಂಬಂಧಿಸಿದ ಹಲವು ಆಯಾಮಗಳ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾ. 20 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
     ಟಿಡಿಎಸ್ ಕುರಿತಂತೆ ಆದಾಯ ತೆರಿಗೆ ಇಲಾಖೆ, ಬಳ್ಳಾರಿಯ ಟಿಡಿಎಸ್ ವಿಭಾಗದ ಅಧಿಕಾರಿ ಲೋಕೇಶ್ ಮತ್ತು ತಂಡದ ಸದಸ್ಯರು ವಿವರವಾದ ಮಾಹಿತಿಯನ್ನು ಒದಗಿಸಲಿದ್ದಾರೆ ಅಲ್ಲದೆ ಟಿಡಿಎಸ್ ಕುರಿತ ಯಾವುದೇ ಗೊಂದಲ, ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದ್ದಾರೆ.  ಕೊಪ್ಪಳ ಜಿಲ್ಲೆಯಲ್ಲಿನ ಆಸಕ್ತ ಬ್ಯಾಂಕ್ ಅಧಿಕಾರಿ, ಸಿಬ್ಬಂದಿಗಳು, ಟಿಡಿಎಸ್ ಕಡಿತ ಮಾಡುವ ವ್ಯವಸ್ಥೆ ಇರುವ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಅಲ್ಲದೆ ಸಂಬಂಧಿಸಿದ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಕೊಪ್ಪಳ ಪ್ರಾದೇಶಿಕ ಪ್ರಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment