Monday, 13 March 2017

ಮಾ.14 ರಂದು ಮುದ್ದಾಬಳ್ಳಿಯಲ್ಲಿ ಸುಗ್ಗಿ-ಹುಗ್ಗಿ ಜಾನಪದ ಸಂಭ್ರಮ

ಕೊಪ್ಪಳ, ಮಾ.13 (ಕರ್ನಾಟಕ ವಾರ್ತೆ): ಕೊಪ್ಪಳ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸುಗ್ಗಿ-ಹುಗ್ಗಿ ಜಾನಪದ ಸಂಭ್ರಮ ಕಾರ್ಯಕ್ರಮ ಮಾ.14 ರಂದು ಸಂಜೆ 5-00 ಗಂಟೆಗೆ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ.
      ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ತಾ.ಪಂ. ಸದಸ್ಯ ರಾಜು ಮಾದಿನೂರ, ಗೊಂಡಬಾಳ ಗ್ರಾ.ಪಂ. ಅಧ್ಯಕ್ಷ ಶರಣಪ್ಪ ಬಾವಿಕಟ್ಟಿ, ಉಪಾಧ್ಯಕ್ಷೆ ರೇಣುಕಾ ಶರಣಪ್ಪ ನಾಯಕ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮೂರ್ತಿ, ಕೊಪ್ಪಳ ಸಿ.ಪಿಐ. ರುದ್ರೇಶ ಎಸ್. ಉಜ್ಜನಕೊಪ್ಪ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ವಕೀಲರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಮುದ್ದಾಬಳ್ಳಿ ಜ್ಞಾನ ಗಂಗೋತ್ರಿ ವಿ.ವಿ. ಟ್ರಸ್ಟ್ ಹಾಗೂ ಬೆಂಗಳೂರು ಕೆ.ವೈ.ಎಫ್. ನಿರ್ದೇಶಕ ಸುರೇಶರಡ್ಡಿ ಮಾದಿನೂರ, ಹೆಚ್.ಪಿ.ಎಸ್. ಶಾಲೆ ಮುಖ್ಯೋಪಾಧ್ಯಾಯ ಚಂದ್ರಶೇಖರ ಹತ್ತಿಕಟಗಿ, ಗ್ರಾಮದ ಮುಖಂಡ ಕೆ.ಎಫ್. ಮುದ್ದಾಬಳ್ಳಿ  ಸೇರಿದಂತೆ ಗೊಂಡಬಾಳ ಗ್ರಾ.ಪಂ. ಸರ್ವ ಸದಸ್ಯರು ಪಾಲ್ಗೊಳ್ಳುವರು.
ಜಾನಪದ ಕಲಾ ತಂಡಗಳ ಪ್ರದರ್ಶನ : ನಿಂಗಪ್ಪ ಮೋರನಾಳ ತಂಡದಿಂದ ಡೊಳ್ಳು ಕುಣಿತ. ಬಸವರಾಜ ವಿಭೂತಿ ತಂಡದಿಂದ ಹಗಲು ವೇಷ.  ಹನುಮಂತಪ್ಪ ಡಿ. ಬಬ್ಬಲ್ ತಂಡದಿಂದ ಮೋಜಿನ ಗೊಂಬೆ.  ಬಿನ್ನಾಳದ ಯಮನಪ್ಪ ಭಜಂತ್ರಿ ತಂಡದಿಂದ ಹಲಗೆ ಮಜಲು.  ಲಿಂಗದಹಳ್ಳಿಯ ಹನುಮಪ್ಪ ಗುಡದಪ್ಪ ತಂಡದಿಂದ ಕೋಲಾಟ ಪ್ರದರ್ಶನಗೊಳ್ಳಲಿದೆ.
ಸಾಂಸ್ಕøತಿಕ ಕಾರ್ಯಕ್ರಮ :  ಕೊಪ್ಪಳದ ಸದಾಶಿವ ಪಾಟೀಲ್ ತಂಡದಿಂದ ತತ್ವ ಪದ.  ಧಾರವಾಡ ಜಿಲ್ಲೆಯ ಬಸವ್ವ ಚ. ಹೊಳೆಯಣ್ಣವರ ತಂಡದಿಂದ ಸಂಪ್ರದಾಯ ಪದ.  ರ್ಯಾವಣಿಕಿ ಕರಿಯವ್ವ ಮುತ್ತಾಳ ತಂಡದಿಂದ ಜೋಗುಳ ಪದ.  ಗಿಣಿಗೇರಿಯ ಲಕ್ಷ್ಮಮ್ಮ ತಂಡದಿಂದ ಜಾನಪದ ಸಂಗೀತ.  ದೇವವ್ವ ಬಾರಕೇರ ತಂಡದಿಂದ ಜೋಕುಮಾರ ಪದ.  ಕಾಸೀಂ ಅಲಿ ಮುದ್ದಾಬಳ್ಳಿ ತಂಡದಿಂದ ಜಾನಪದ ಸಂಗೀತ.  ಪರಶುರಾಮ ಅಂಗೂರ್ ತಂಡದಿಂದ ಸುಗ್ಗಿಯ ಹಾಡುಗಳು.  ರುದ್ರೇಶ ಎಸ್. ಉಜ್ಜನಕೊಪ್ಪ ತಂಡದಿಂದ ಗೀ ಗೀ ಪದ.  ಮೋರನಾಳ ಅಂದಪ್ಪ ಎಸ್. ಚಿಲ್ಲಗೋಡ್ರ ತಂಡದಿಂದ ತತ್ವ ಪದ.  ಸಿ.ವಿ. ಜಡಿಯವರ ತಂಡದಿಂದ ಜಾನಪದ ಸಂಗೀತ.  ದೀಕ್ಷಾ ಹೆಗಡೆ ತಂಡದಿಂದ ಜಾನಪದ ನೃತ್ಯ.  ವಾಲ್ಮೀಕಿ ಹೆಚ್. ಯಕ್ಕರನಾಳ ತಂಡದಿಂದ ಮೊಹರಂ ಪದ.  ಕುಷ್ಟಗಿಯ ರಾಮಣ್ಣ ಗ್ಯಾನಪ್ಪ ಪರಿಯವರ್ ತಂಡದಿಂದ ಸಿದ್ಧರ ಆಟ.  ಶರಣಪ್ಪ ವಡಿಗೇರಿ ತಂಡದಿಂದ ತತ್ವ ಪದ.  ಧಾರವಾಡಜಿಲ್ಲೆಯ ಮಣಕವಾಡ ಮಹಾತ್ಮ ಯುವಕ ಕ್ರೀಡಾ ಸಂಘದಿಂದ ಅಲಾಯಿ .ಹೆಚ್. ಮೇಳ.  ಭಾಗ್ಯನಗರ ರಾಮಚಂದ್ರಪ್ಪ ಉಪ್ಪಾರ ತಂಡದಿಂದ ಜಾನಪದ ಸಂಗೀತ.  ರಾಮಣ್ಣ ಮಾದಿನೂರ ತಂಡದಿಂದ ತತ್ವ ಪದ.  ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ಸಮೂಹ ನೃತ್ಯ.  ಕುಣಿಕೇರಿಯ ಈಶಪ್ಪ ಸೋಂಪುರ ತಂಡದಿಂದ ಹಂದಿ ಪದ.  ಈಶಪ್ಪ ಓಜನಹಳ್ಳಿ ತಂಡದಿಂದ ಜಾನಪದ ಸಂಗೀತ.  ಕೇಶಪ್ಪ ಮೋರನಾಳ ತಂಡದಿಂದ ತೋಗಲುಗೊಂಬೆ ಆಟ.  ಮುದ್ದಾಬಳ್ಳಿಯ ಈಶಪ್ಪ ಯಂಕಪ್ಪ ನಾಯಕ ತಂಡದಿಂದ ಬಯಲಾಟ ಸನ್ನಿವೇಶನ ಹಾಗೂ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.
Post a Comment