Thursday, 6 October 2016

ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿ ಮತ್ತು ನಿರೂಪಣಾ ಕೌಶಲ್ಯ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ಅ. 6 (ಕರ್ನಾಟಕ ವಾರ್ತೆ) :  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಇವರಿಂದ ಅಂಗೀಕೃತ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮೊ ಇನ್ ಜರ್ನಲಿಸಂ,  ಹಾಗೂ ಅಡಿಯೋ ವಿಷುಯಲ್   ಪದವಿ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ ಪಡೆದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ 7 ದಿವಸಗಳ ವೃತ್ತಿ ಮತ್ತು ನಿರೂಪಣಾ ಕೌಶಲ್ಯ ತರಬೇತಿ ಶಿಬಿರವನ್ನು ಏರ್ಪಡಿಸಲು ಉದ್ದೇಶಿಸಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.
      ಅರ್ಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಬೆಂಗಳೂರಿನ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಇಲ್ಲವೆ  ವೆಬ್‍ಸೈಟ್  www.karnatakavarthe.org  ನಿಂದ ಅರ್ಜಿಯನ್ನು ಡೌನ್‍ಲೋಡ್    ಮಾಡಿಕೊಳ್ಳಬಹುದು.
      ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ (ಉಪ ಜಾತಿ), ಶೇಕಡವಾರು ಅಂಕ, ವಾರ್ಷಿಕ ಆದಾಯ, ಉದ್ಯೋಗ ವಿವರ, ಈ ಹಿಂದೆ ಯಾವುದಾದರೂ ತರಬೇತಿ ಪಡೆದ ವಿವರ, ಸ್ವ-ವಿವರಗಳ ಮಾಹಿತಿಯನ್ನು ಭರ್ತಿಮಾಡಿ ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.  ಈ ಪ್ರಕಟಣೆಗೆ ಮುನ್ನ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಬೇಕು.  ಹಳೆಯ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
    ಸದರಿ ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ, ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು  ದಿನಾಂಕ: 28-10-2016  ಸಂಜೆ 5-00 ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, "ವಾರ್ತಾಸೌಧ", ಭಗವಾನ್ ಮಹಾವೀರ ರಸ್ತೆ, ಬೆಂಗಳೂರು  - 560 001 ಇವರಿಗೆ ಸಲ್ಲಿಸಬೇಕು  ಸದರಿ ಲಕೋಟೆಯ ಮೇಲ್ಭಾಗದಲ್ಲಿ " ಪತ್ರಿಕೋದ್ಯಮ ವೃತ್ತಿ ಮತ್ತು ನಿರೂಪಣಾ ಕೌಶಲ್ಯ ತರಬೇತಿ" ಎಂದು ನಮೂದಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080 – 22028034/37 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment