Wednesday, 19 October 2016

ವಾಣಿಜ್ಯ ಸಂಸ್ಥೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ

ಕೊಪ್ಪಳ, ಅ.19 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ ವಿಭಾಗದಿಂದ ಕಲಬುರಗಿ ವ್ಯಾಪ್ತಿಯ ವಾಣಿಜ್ಯ ಶಾಲೆಗಳಿಂದ/ನೋಂದಾಯಿತ ಸಂಸ್ಥೆ/ ಟ್ರಸ್ಟ್ ಅಥವಾ ಸಾರ್ವಜನಿಕರಿಂದ ವಾಣಿಜ್ಯ (ಬೆರಳಚ್ಚು, ಶೀಘ್ರಲಿಪಿ ಮತ್ತು ಗಣಕಯಂತ್ರ ಕೋರ್ಸ್) ಸಂಸ್ಥೆ ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಅಪರ ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ ವಿಭಾಗ, ಕಲಬುರಗಿ ಇವರ ಹೆಸರಿನಲ್ಲಿ ರೂ.2000 ಗಳ ಡಿ.ಡಿ. (ಪ.ಜಾತಿ ಹಾಗೂ ಪ.ಪಂಗಡ ಅಭ್ಯರ್ಥಿಗಳು 1000 ರೂ.ಗಳ ಡಿ.ಡಿ) ಯೊಂದಿಗೆ ಕರ್ನಾಟಕ ಶಿಕ್ಷಣ ಸಂಸ್ಥೆಗಳು(ವಾಣಿಜ್ಯ ಸಂಸ್ಥೆಗಳ ನೋಂದಣಿ ಮತ್ತು ಮಾನ್ಯತೆ) ಇದರ ನಿಯಮದಂತೆ ಅಗತ್ಯ ದಾಖಲಾತಿಗಳೊಂದಿಗೆ ಅ.28 ರೊಳಗಾಗಿ ಅರ್ಜಿ ಸಲ್ಲಸಿಸಬಹುದು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು  http://www.schooleducation.kar.nic.in/secedn/seccommerceedu.html ಅಥವಾ  http://cpigulbarga.kar.nic.in/ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ, ಕಲಬುರಗಿ ವಿಭಾಗ, ಕಲಬುರಗಿಯ ವಾಣಿಜ್ಯ ಶಿಕ್ಷಣ ಶಾಖೆಯನ್ನು ಸಂಪರ್ಕಿಸಿ   ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment