Tuesday, 18 October 2016

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಅ. 18 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅ. 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅ. 21 ರಂದು ಬೆಳಿಗ್ಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ಅ. 21 ರಿಂದ 23 ರವರೆಗೆ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ನಾನಾ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಅ. 21 ರಂದು  ಹೊಸಹಳ್ಳಿ, ರೇಶಮನಗರ, ಚಿಕ್ಕೊಪ್ಪ, ಕರಮುಡಿ, ಕಾತ್ರಾಳ, ಸಿರಗುಂಪಿ, ಸಂಕನೂರ, ಹೊಸೂರು, ಹಿರೇಮ್ಯಾಗೇರಿ ಮತ್ತು ಮುಧೋಳ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಅಂದು ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು.  ಅ. 22 ರಂದು ಯಲಬುರ್ಗಾ ತಾಲೂಕಿನ ಯಡ್ಡೋಣಿ, ಕಲ್ಲುಭಾವಿ, ತಾಳಕೇರಿ, ಹಿರೇವಂಕಲಕುಂಟ, ಉಪ್ಪಲದಿನ್ನಿ, ಮಾಟಲದಿನ್ನಿ, ಪುಟಗಮರಿ, ಬುಡಕುಂಟಿ, ಜರಕುಂಟಿ, ಬೀರಲದಿನ್ನಿ, ಗುನ್ನಾಳ, ಕೋಳಿಹಾಳ ಮತ್ತು ಮ್ಯಾದನೇರಿ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಯಲಬುರ್ಗಾದಲ್ಲಿ ವಾಸ್ತವ್ಯ ಕೈಗೊಳ್ಳುವರು.  ಅ. 23 ರಂದು ಕುದ್ರಿಕೊಟಗಿ, ಗದ್ದಿಗೇರಿ, ಆನಂದನಗರ, ಶಿವಪುರ, ಹುಲೇಗುಡ್ಡ, ಮಕ್ಕಳ್ಳಿ, ಸಾಲಭಾವಿ, ತಲ್ಲೂರು, ಮದಲೂರು, ವೀರಾಪುರ, ಹನುಮಾಪುರ, ಜರಕುಂಟಿ, ವಜ್ರಬಂಡಿ, ಕೋನಸಾಗರ, ಚಿಕ್ಕಬನ್ನಿಗೋಳ ಮತ್ತು ಕಲ್ಯಾಣ ನಗರ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು, ಅಂದು ಸಂಜೆ 05 ಗಂಟೆಗೆ ಧಾರವಾಡ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
Post a Comment