Wednesday, 5 October 2016

ಕಡಲೆ ಬೆಳೆಯಲ್ಲಿ ಬೀಜೋಪಚಾರ : ರೈತರಿಗೆ ಸಲಹೆಗಳು

ಕೊಪ್ಪಳ ಅ. 04 (ಕರ್ನಾಟಕ ವಾರ್ತೆ):  ಜಿಲ್ಲೆಯಲ್ಲಿ ರೈತರು ಕಡಲೆ ಬೆಳೆ ಬೆಳೆಯುವತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಕಡಲೆ ಬೆಳೆಯಲ್ಲಿ ಬೀಜೋಪಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಕಡಲೆ ಬಿತ್ತನೆಗೆ ಮೊದಲು ಬರ ನಿರೋಧಕತೆ ಹೆಚ್ಚಿಸಲು ಬೀಜವನ್ನು ಶೇ.2 ರ ಸುಣ್ಣದ ತಿಳಿ ನೀರಿನಲ್ಲಿ (ಕ್ಯಾಲ್ಸಿಯಂ ಕ್ಲೋರೈಡ್) 30 ನಿಮಿಷಗಳವರೆಗೆ ಅಥವಾ ಶೇ. 25 ರ ಗೋಮೂತ್ರದಲ್ಲಿ 8 ಗಂಟೆಗಳ ಕಾಲ ನೆನಸಿ, ಕನಿಷ್ಟ-7 ಗಂಟೆ ನೆರಳಲ್ಲಿ ಒಣಗಿಸಬೇಕು.  ಪ್ರತಿ ಎಕರೆ ಬೀಜಕ್ಕೆ 500 ಗ್ರಾಂ. ರೈಜೋಬಿಯಂ, 500 ಗ್ರಾಂ ರಂಜಕ ಕರಗಿಸುವ ಅಣುಜೀವಿ ಗೊಬ್ಬರ ಮತ್ತು 80 ರಿಂದ 100 ಗ್ರಾಂ. ಟ್ರೈಕೊಡರ್ಮಾದಿಂದ ಬೀಜೋಪಚಾರ ಮಾಡಬೇಕು. ನೆಟೆ ರೋಗದ ಬಾಧೆವಿರುವ ಪ್ರದೇಶಗಳಲ್ಲಿ ಪ್ರತಿ ಎಕರೆಗೆ 800 ಗ್ರಾಂ. ಟ್ರೈಕೊಡರ್ಮಾವನ್ನು 100 ಕಿ.ಗ್ರಾಂ. ಚನ್ನಾಗಿ ಕಳೆತು ಪುಡಿಯಾಗಿರುವ ಕೊಟ್ಟಿಗೆ ಗೊಬ್ಬರ ಮತ್ತು 20 ಕಿ.ಗ್ರಾಂ. ಬೇವಿನ ಬೀಜದ ಪುಡಿಯಲ್ಲಿ ಮಿಶ್ರಮಾಡಿ ಶೇಕಡಾ 50 ರಷ್ಟು ತೇವಾಂಶ ಇರುವಂತೆ ತೇವಗೊಳಿಸಿ, 7 ದಿನಗಳವರೆಗೆ ಪ್ಲಾಸ್ಟಿಕ್ ಹಾಳೆ ಹೊದಿಸಿ, ನಂತರ ಬಿತ್ತುವ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು. ಶಿಲೀಂದ್ರ ನಾಶಕಗಳಾದ ಕ್ಯಾಪ್ಟಾನ 80 ಡಬ್ಲ್ಯೂ.ಪಿ. ಅಥವಾ ಥೈರಾಮ್ 75 ಡಬ್ಲ್ಯೂ.ಪಿ. ಅಥವಾ ಮ್ಯಾಂಕೊಜೆಬ್ 75 ಡಬ್ಲ್ಯೂ.ಪಿ. ಇವುಗಳಲ್ಲಿ ಯಾವುದಾದರೊಂದನ್ನು 2 ಗ್ರಾಂ.ಪ್ರತಿ ಕೆ.ಜಿ. ಬೀಜಕ್ಕೆ ಬೀಜೋಪಚಾರ ಮಾಡಬಹುದು.  ಆದರೆ, ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಶಿಲೀಂದ್ರನಾಶಕಗಳೊಂದಿಗೆ ಟ್ರೈಕೊಡರ್ಮಾವನ್ನು ಮಿಶ್ರಣ ಮಾಡಿ ಬಳಸಬಾರದು.   ಆಸ್ಕೋಕೈಟಾ / ಮಚ್ಚೆರೋಗ (ಆಸ್ಕೋಕೈಟಾ ರ್ಯಾಬೀ) ನಿಯಂತ್ರಣಕ್ಕೆ ಪ್ರತಿ ಕೆ.ಜಿ. ಬೀಜಕ್ಕೆ ಥೈರಾಮ್ 75 ಡಬ್ಲ್ಯೂ.ಪಿ/ಬೆನಾಮಿಲ್ @2 ಗ್ರಾಂ. ಪುಡಿಯಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ಬಿತ್ತನೆ ವಿಧಾನ: ಬಿತ್ತನೆಗೆ ಸಿದ್ದಗೊಳಿಸಿದ ಜಮೀನುಗಳಲ್ಲಿ 30 ಸೆಂ.ಮೀ. ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ 8 ರಿಂದ 10 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಬಿತ್ತನೆ ಮಾಡುವಾಗ ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಬೀಜದ ಸಾಲಿನಿಂದ 7.5 ಸೆಂ.ಮೀ ಅಂತರದಲ್ಲಿ ಹಾಕಬೇಕು.
ಕೊಟ್ಟಿಗೆ ಗೊಬ್ಬರ ಮತ್ತು ರಸಗೊಬ್ಬರ: ಪ್ರತಿ ಎಕರೆಗೆ 2 ಟನ್‍ಗಳಷ್ಟು ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಷ್ಟ ಗೊಬ್ಬರವನ್ನು ಬಿತ್ತುವ ಮೂರು ವಾರಗಳ ಮುಂಚೆ ಮಣ್ಣಿಗೆ ಸೇರಿಸಬೇಕು ಮತ್ತು ಪ್ರತಿ ಎಕರೆಗೆ 10 ಕೆ.ಜಿ. ಸಾರಜನಕ, 20 ಕೆ.ಜಿ. ರಂಜಕ ಹಾಗೂ 10 ಕೆ.ಜಿ. ಪೊಟ್ಯಾಷ್ ಗೊಬ್ಬರಗಳನ್ನು ಬಿತ್ತುವಾಗ ಕೊಡಬೇಕು.
ಹೆಚ್ಚಿನ ಇಳುವರಿಗೆ ಸೂಕ್ತ ಕ್ರಮಗಳು: ಕಡಲೆ ಹೂವಾಡುವ ಪ್ರಾರಂಭಿಕ ಹಂತದಲ್ಲಿ ಶೇ.2 ರ ಯೂರಿಯಾ (20ಗ್ರಾಂ./ಲೀ. ನೀರಿಗೆ ಬೆರಸಿ) ಸಿಂಪರಣೆ ಮಾಡುವದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.   ಕಡಲೆ ಬಿತ್ತನೆಯಾದ 35 ರಿಂದ 40 ದಿನಗಳ ನಂತರ ಕುಡಿ ಚಿವುಟುವದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.  ಬಿತ್ತಿದ 35 ದಿನಗಳ ನಂತರ 20 ಪಿ.ಪಿ.ಎಮ್ (100 ಲೀ. ನೀರಿನಲ್ಲಿ 2 ಮಿ.ಲೀ. ಎನ್‍ಎಎ ಬೆರೆಸುವುದು) ನ್ಯಾಪ್ತಲಿಕ್ ಆ್ಯಸಿಟಿಕ್ ಆಮ್ಲ (ಎನ್.ಎ.ಎ.) ಸಿಂಪಡಿಸಬೇಕು. ಇದರಿಂದ ಗಿಡಗಳು ಸಧೃಢ ಮತ್ತು ಆರೋಗ್ಯವಾಗಿ ಬೆಳೆಯುತ್ತದೆ.  ಬಿತ್ತಿದ 35 ದಿನಗಳನಂತರ ಪ್ರತಿ ಲೀ. ನೀರಿನಲ್ಲಿ 1.0 ಮಿ.ಲೀ. ಟ್ರೈಕೋಂಟೆನಾಲ ಅಥವಾ 1.0 ಮಿ.ಲೀ. ನೈಟ್ರೋಬೆಂಜಿನ ಸಸ್ಯವರ್ಧಕವನ್ನು ಸಿಂಪಡಿಸುವುದರಿಂದ ಹೂವು ಮತ್ತು ಕಾಯಿಗಳ ಸಂಖ್ಯೆ ಹೆಚ್ಚಿಸಬಹುದಾಗಿದೆ.
      ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ದೂರವಾಣಿ ಸಂಖ್ಯೆ: 08539-220305 ಸಂಪರ್ಕಿಸಬಹುದು ಎಂದು
Post a Comment