Monday, 3 October 2016

ಕಾನೂನು ಪದವಿಧರರಿಗೆ ಕಾನೂನು ಪುಸ್ತಕ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ ಅ. 03 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾನೂನು ನೂತನ ಪದವಿಧರರಿಗೆ ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಒದಗಿಸುವ ಯೋಜನೆಗಾಗಿ ಅರ್ಹ ಕಾನೂನು ಪದವಿಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪ.ಜಾತಿ/ಪ.ಪಂಗಡಕ್ಕೆ ಸೇರಿದವರಾಗಿರಬೇಕು.  ರಾಜ್ಯದ ಬಾರ್ ಕೌನ್ಸಿಲ್‍ನಲ್ಲಿ 2015 ರ ಏ. 01 ರಂದು ಹಾಗೂ ನಂತರ ನೋಂದಾಯಿಸಿದ ಕಾನೂನು ಪದವಿಧರರಾಗಿರಬೇಕು.  ಕಾನೂನು ಇಲಾಖೆಯಿಂದ ಪ್ರೋತ್ಸಾಹಧನ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.  ಅಭ್ಯರ್ಥಿ ಲಭ್ಯವಾಗದಿದ್ದಲ್ಲಿ ಇದೇ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆ ಇತ್ಯಾದಿ ಇಲಾಖೆಗಳಲ್ಲಿ ಪ್ರೋತ್ಸಾಹಧನ ಪಡೆಯುತ್ತಿರುವ ಪ.ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳಿಗೆ ಪುಸ್ತಕಗಳನ್ನು ಒದಗಿಸಲಾಗುವುದು.  ಅರ್ಜಿಯೊಂದಿಗೆ ಜಾತಿ ಪ್ರಮಾಣಪತ್ರ, ಪಾಸ್‍ಪೋರ್ಟ್ ಅಳತೆಯ ಎರಡು ಫೋಟೋ, ರಾಜ್ಯ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿದ ಬಗ್ಗೆ ಪ್ರಮಾಣಪತ್ರ, ಕಾನೂನು ಪದವಿ ಪ್ರಮಾಣ ಪತ್ರಗಳನ್ನು ಅ. 25 ರ ಒಳಗಾಗಿ ಸಲ್ಲಿಸುವಂತೆ ಉಪನಿರ್ದೇಶಕ ಬಿ. ಕಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment