Monday, 3 October 2016

ಶ್ರೇಷ್ಠ ಕೃಷಿಕ / ಕೃಷಿ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ ಅ. 03 (ಕರ್ನಾಟಕ ವಾರ್ತೆ): ಕೃಷಿ ವಿಶ್ವವಿದ್ಯಾಲಯ, ರಾಯಚೂರು ಇವರ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ/ ಕೃಷಿ ಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ಯುವ ಕೃಷಿ ಮಹಿಳೆ ಪ್ರಶಸ್ತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
      ಕೃಷಿ ವಿಶ್ವವಿದ್ಯಾಲಯ ರಾಯಚೂರು ಆವರಣದಲ್ಲಿ ನವೆಂಬರ್ 05 ರಿಂದ 08 ರವರೆಗೆ ನಾಲ್ಕು ದಿನಗಳ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ಯುವ ಕೃಷಿ ಮಹಿಳೆ ಯರನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲು ಆಸಕ್ತ ರೈತ ಮತ್ತು ರೈತಮಹಿಳೆಯರಿಂದ ನಿಗದಿತ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
      ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ಯುವ ಕೃಷಿ ಮಹಿಳೆ ಆಯ್ಕೆ ಮಾಡುವ ವಿವರ ಇಂತಿದೆ. ವಯಸ್ಸು ಕನಿಷ್ಠ 18 ರಿಂದ 35 ವರ್ಷದ ಒಳಗಿರಬೇಕು.  ಕನಿಷ್ಠ 3 ವರ್ಷ ಕೃಷಿಯಲ್ಲಿ ಅನುಭವವಿದ್ದು ಸ್ವತ: ಕೃಷಿಯನ್ನು ಮಾಡುತ್ತಿರಬೇಕು. ಇತರ ರೈತರಿಗೆ ಮಾರ್ಗದರ್ಶಿಯಾಗಿ ಮಾದರಿ ಯುವಕ / ಯುವತಿ ಎನಿಸಿಕೊಂಡಿರಬೇಕು.
      ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ಯುವ ಕೃಷಿ ಮಹಿಳೆ ಪ್ರಶಸ್ತಿಗೆ ಎಲ್ಲ ವರ್ಗದ ಕೃಷಿಕರು, ಕೃಷಿ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲ ವರ್ಗದ ರೈತರಿಗೆ ಪ್ರಾತಿನಿಧ್ಯ ನೀಡಲಾಗುವುದು.  ಈಗಾಗಲೇ ಇಂತಹ ಪುರಸ್ಕಾರಗಳು/ಪ್ರಶಸ್ತಿಗಳು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪಡೆದಿದ್ದರೆ ಅಂದರೆ ಕೃಷಿಗೆ ಸಂಬಂಧಿಸಿದ ಪ್ರಶಸ್ತಿ ಪಡೆದ ರೈತರ / ರೈತ ಮಹಿಳೆಯರ / ಯುವ ರೈತ / ಯುವ ರೈತ ಮಹಿಳೆ ನಾಮ ನಿರ್ದೇಶನವನ್ನು ಪರಿಗಣಿಸಲಾಗುವುದಿಲ್ಲ.  ಭರ್ತಿ ಮಾಡಿದ ಅರ್ಜಿಗೆ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿರಬೇಕು.
      ಆಸಕ್ತ ರೈತ ಮತ್ತು ರೈತಮಹಿಳೆಯರು ನಿಗದಿತ ಅರ್ಜಿ ನಮೂನೆ-1 ನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತಾ.ಪಂ. ಆವರಣ, ಕೊಪ್ಪಳ ಅಥವಾ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿ, ಅ. 15 ರೊಳಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಅಥವಾ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇಲ್ಲಿಗೆ ಸಲ್ಲಿಸಬೇಕು.
      ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ದೂರವಾಣಿ ಸಂಖ್ಯೆ: 08359 220305 ಅಥವಾ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ದೂರವಾಣಿ ಸಂಖ್ಯೆ: 08533 272518 ಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಅವರು ತಿಳಿಸಿದ್ದಾರೆ.
Post a Comment