Wednesday, 19 October 2016

ಗಂಗಾವತಿ : ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ, ಅ.19 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆಯು 2015-16 ಹಾಗೂ 2016-17 ನೇ ಸಾಲಿನ ನಲ್ಮ್ ಯೋಜನೆಯ ಇ.ಎಸ್.ಟಿ & ಪಿ ಉಪಯೋಜನೆಯಡಿ ವಿವಿಧ ಉಚಿತ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    2015-16 ನೇ ಸಾಲಿಗಾಗಿ ಗಾರ್ಮೆಂಟ್ ಪ್ಯಾಪರ್ ಮತ್ತು ಐರಾನ್ ಮಷಿನ್ ಟೆಕ್ನಿಷಿಯನ್ ತರಬೇತಿಗಾಗಿ 160 ಹಾಗೂ ಹೊಲಿಗೆ ಯಂತ್ರ ಆಪರೇಟರ್ ತರಬೇತಿಗಾಗಿ 168 ಹೀಗೆ ಒಟ್ಟು 328 ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.
    2016-17 ನೇ ಸಾಲಿಗಾಗಿ ಬಾರ್ ಬೆಂಡರ್-25, ಮಷಿನ್ ವರ್ಕ-25, ಮೂಲ ಬಡಿಗಿ-25, ಪ್ಲಂಬರ್ ತರಬೇತಿಗಾಗಿ 25 ಹೀಗೆ ಒಟ್ಟು 100 ಜನರಿಗೆ ವಿವಿಧ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
     ಅರ್ಜಿ ಸಲ್ಲಿಸುವವರು ಗಂಗಾವತಿ ನಗರಸಭೆ ವ್ಯಾಪ್ತಿಯ ಬಿಪಿಎಲ್ ರಶಿವಾಶಿಗಾಳಾಗಿರಬೇಕು. ನಿಗದಿತ ಅರ್ಜಿ ನಮೂನೆಯನ್ನು ಕಾರ್ಯಲಯದ ನಲ್ಮ್ ವಿಭಾಗದಲ್ಲಿ ಪಡೆದು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಬಿಪಿಎಲ್ ಪಡಿತರ ಚೀಟಿ, ಆಧಾರ ಕಾರ್ಡ್ ಜರಾಕ್ಸ್ ಪ್ರತಿಗಳೊಂದಿಗೆ ಅ.31 ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದು. ಅವಧಿ ಮೀರಿಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಗದಿತ ಗುರಿಗೆ ಅನುಗುಣವಾಗಿ ಅರ್ಜಿಗಳನ್ನು ಸ್ವೀಕರಿಸುವ ಕುರಿತು ಆಯುಕ್ತರ ನಿರ್ಧಾರವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊ.ಸಂ : 9900475927 ಹಾಗೂ 9880652783 ಗೆ ಕರೆಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment