Wednesday, 31 August 2016

ಸೆ. 03 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೊಪ್ಪಳಕ್ಕೆ

ಕೊಪ್ಪಳ (ಕರ್ನಾಟಕ ವಾರ್ತೆ)  ಆಗಸ್ಟ 31: ಭಾರತ ಸರ್ಕಾರದ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಬಂದರು ಖಾತೆ ಸಚಿವ ನಿತಿನ್ ಗಡ್ಕರಿ ಅವರು ಸೆ. 03 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಂದು ಬೆಳಿಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಹೊರಟು, 10-45 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಬೆಳಿಗ್ಗೆ 11-30 ಗಂಟೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-63 ಅನ್ನು ಚತುಷ್ಪಥಗೊಳಿಸುವ ಕಾಮಗಾರಿ ಹಾಗೂ ವಿವಿಧ ರಸ್ತೆ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಸಚಿವ ನಿತಿನ್ ಗಡ್ಕರಿ ಅವರು ಅದೇ ದಿನ ಮಧ್ಯಾಹ್ನ 01 ಗಂಟೆಗೆ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಪಶು ಭಾಗ್ಯ ಯೋಜನೆ ಅನುಷ್ಠಾನ: ಅರ್ಜಿ ಆಹ್ವಾನ

ಕೊಪ್ಪಳ, ಆ.31 (ಕರ್ನಾಟಕ ವಾರ್ತೆ) : ಜಿಲ್ಲಾ ಪಶುಪಾಲನಾ ಇಲಾಖೆಯಿಂದ ಪ್ರಸಕ್ತ ಸಾಲಿನ ಪಶುಭಾಗ್ಯ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
       ಪಶುಭಾಗ್ಯ ಯೋಜನೆಯಡಿ ಹೈನುಗಾರಿಕೆ ಚಟುವಟಿಕೆಗಾಗಿ (2 ಹಾಲು ಹಿಂಡುವ ಎಮ್ಮೆ/ಹಸು) ರೂ.1,20,000 ಘಟಕ ವೆಚ್ಚ ನಿಗದಿಪಡಿಸಿದೆ.  ಕುರಿ/ಮೇಕೆ ಸಾಕಾಣಿಕೆ ಚಟುವಟಿಕೆಗಳಿಗೆ (10+1) ರೂ.67440 ಘಟಕ ವೆಚ್ಚ ನಿಗದಿಪಡಿಸಿದ್ದು, ಪ.ಜಾ ಪ.ಪಂ ಅಭ್ಯರ್ಥಿಗಳಿಗೆ ಶೇ.50 ಹಾಗೂ ಇತರೆ ಅಭ್ಯರ್ಥಿಗಳಿಗೆ ಶೇ.25 ರಷ್ಟು ಸಹಾಯಧನ ಒದಗಿಸಲಾಗುವುದು.
     ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ತರಬೇತಿ ಪಡೆಯಬೇಕು. ಮಹಿಳೆಯರು, ಅಲ್ಪಸಂಖ್ಯಾತರು, ವಿಕಲಚೇತನರು ಹಾಗೂ ಇತ್ಯಾದಿ ಅಭ್ಯರ್ಥಿಗಳನ್ನು ಸರ್ಕಾರದ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ವಿಧವೆಯರು, ದೇವದಾಸಿ ಮಹಿಳೆಯರಿಗೆ ಮತ್ತು ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
     ತಾಲೂಕವಾರು ನಿಗದಿಪಡಿಸಿದ ಭೌತಿಕ ಗುರಿಗಳ ವಿವರ ಇಂತಿದೆ: ಎಸ್‍ಡಿಪಿ ಹೈನುಗಾರಿಕೆ ಘಟಕ ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿಗೆ-24, ಗಂಗಾವತಿ-9, ಕುಷ್ಟಗಿ-45, ಯಲಬುರ್ಗಾ-46 ಒಟ್ಟು 124 ಭೌತಿಕ ಗುರಿ ನಿಗದಿಪಡಿಸಲಾಗಿದೆ.  ಆರ್‍ಕೆವಿವೈ ಹೈನುಗಾರಿಕೆ ಕಾರ್ಯಕ್ರಮದಡಿ ಕೊಪ್ಪಳ-53, ಗಂಗಾವತಿ-53, ಕುಷ್ಟಗಿ-55, ಯಲಬುರ್ಗಾ-53 ಒಟ್ಟು 214 ಭೌತಿಕ ಗುರಿ ನಿಗದಿಪಡಿಸಲಾಗಿದೆ.  ಮಹಿಳೆಯರಿಗಾಗಿ ಹೈನುಗಾರಿಕೆ (ಅಮೃತ) ಕಾರ್ಯಕ್ರಮದಡಿ ಕೊಪ್ಪಳ-13, ಗಂಗಾವತಿ-10, ಕುಷ್ಟಗಿ-14, ಯಲಬುರ್ಗಾ-14 ಒಟ್ಟು 51 ಗುರಿ ನಿಗದಿಪಡಿಸಲಾಗಿದೆ. ಆರ್‍ಕೆವಿವೈ ಕುರಿ/ಮೇಕೆ ಸಾಕಾಣಿಕೆ ಯೋಜನೆಯಡಿ ಕೊಪ್ಪಳ-7, ಗಂಗಾವತಿ-6, ಕುಷ್ಟಗಿ-9, ಯಲಬುರ್ಗಾ-8 ಒಟ್ಟು 30 ಗುರಿ ನಿಗದಿ ಪಡಿಸಲಾಗಿದೆ. ಹಾಗೂ ಕುಕ್ಕಟ ಯೋಜನೆಯಡಿ ಕೊಪ್ಪಳ-10, ಗಂಗಾವತಿ-10, ಕುಷ್ಟಗಿ-10, ಯಲಬುರ್ಗಾ-10 ಒಟ್ಟು 40 ಭೌತಿಕ ಗುರಿ ನಿಗದಿಪಡಿಸಲಾಗಿದೆ. 
     ನಿಗದಿತ ಅರ್ಜಿ ನಮೂನೆ ಹಾಗೂ ಮೀಸಲಾತಿ ಕುರಿತ ಹೆಚ್ಚಿನ ವಿವರಗಳಿಗಾಗಿ ಆಯಾ ತಾಲೂಕ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ ಪಡೆಯಬಹುದು. ಅರ್ಜಿ ಸಲ್ಲಿಸಲು ಸೆ.25 ಕೊನೆಯ ದಿನವಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.30 ರೊಳಗೆ ಪಹಣಿಯಲ್ಲಿ ಬೆಳೆ ಮಾಹಿತಿ ಹಾಗೂ ವಿಸ್ತೀರ್ಣ ದಾಖಲಿಸಲು ಸೂಚನೆ

ಕೊಪ್ಪಳ, ಆ.31 (ಕರ್ನಾಟಕ ವಾರ್ತೆ) : ರೈತರು ಬೆಳದ ಎಲ್ಲಾ ತರಹದ ಬೆಳಗೆಳ ಮಾಹಿತಿ ಮತ್ತು ವಿಸ್ತೀರ್ಣವನ್ನು ಪಹಣಿ ಪತ್ರಿಕೆಯಲ್ಲಿ ಕಡ್ಡಾಯವಾಗಿ ದಾಖಲಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
     ಜಿಲ್ಲೆಯ ಎಲ್ಲಾ ಗ್ರಾಮಗಳ ಗ್ರಾಮಲೆಕ್ಕಾಧಿಕರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರು ಬೆಳೆದ ಎಲ್ಲಾ ತರಹದ ಬೆಳೆಗಳ ಮಾಹಿತಿ ಹಾಗೂ ವಿಸ್ತೀರ್ಣವನ್ನು ಪಹಣಿ ಪತ್ರಿಕೆಗಳಲ್ಲಿ ಸೆ. 30 ರೊಳಗಾಗಿ ಕಡ್ಡಾಯವಾಗಿ ದಾಖಲಿಸಬೇಕು.  ಅಲ್ಲದೆ ಜಿಲ್ಲೆಯ ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಎಲ್ಲಾ ತರಹದ ಬೆಳಗಳ, ತೋಟಗಾರಿಕೆ ಬೆಳೆ, ಹಣ್ಣು ಮತ್ತು ತರಕಾರಿ ಬೆಳಗೆಳ ವಿವರದ ವರದಿಯನ್ನು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳನ್ನು ಖುದ್ದಾಗಿ ಭೇಟಿ ನೀಡಿ ತಮ್ಮ ಪಹಣಿ ಪತ್ರಿಕೆಗಳಲ್ಲಿ ದಾಖಲು ಮಾಡಿಸಬೇಕು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಕಲಚೇತನರ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕೊಪ್ಪಳ, ಆ.31 (ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರದ ವತಿಯಿಂದ  ವಿಕಲಚೇತನ ವಿದ್ಯಾರ್ಥಿಗಳಿಗಾಗಿ ಪ್ರಸಕ್ತ ಸಾಲಿನ ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್   ಇಲ್ಲಿ ಸೆ.30 ರೊಳಗಾಗಿ ಭರ್ತಿ ಮಾಡಬೇಕು. ವಿದ್ಯಾರ್ಥಿ ವೇತನ ಯೋಜನೆಯ ಹೆಚ್ಚಿನ ಮಾಹಿತಿಯನ್ನು  www.scholarships.gov.in ಇಲ್ಲಿ ಪಡಯಬಹುದು.
     ಹೆಚ್ಚಿನ ಮಾಹಿತಿಗಾಗಿ www.disabilityaffairs.gov.in ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಕೊಪ್ಪಳ ದೂ.ಸಂ:08539-225460 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆ ಕುರಿತು ಕೊಪ್ಪಳದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ

ಕೊಪ್ಪಳ ಆ. 31 (ಕರ್ನಾಟಕ ವಾರ್ತೆ): ಕೊಪ್ಪಳದ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ವತಿಯಿಂದ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ‘ಭ್ರಷ್ಟಾಚಾರ ನಿರ್ಮೂಲನೆ’ ಹಾಗೂ ಎ.ಸಿ.ಬಿ. ಕಾರ್ಯ ವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಬುಧವಾರದಂದು ಜರುಗಿತು.
     ಭ್ರಷ್ಟಾಚಾರ ನಿಗ್ರಹ ದಳದ ಬಳ್ಳಾರಿ ವಲಯದ ಪೊಲೀಸ್ ಅಧೀಕ್ಷಕರಾದ ಅನಿತಾ ಹದ್ದಣ್ಣವರ್ ಅವರು ಎ.ಸಿ.ಬಿ. ಕಾರ್ಯ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.  ಭ್ರಷ್ಟಾಚಾರ ನಿರ್ಮೂಲನೆ ಕುರಿತು ಕೊಪ್ಪಳ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.  ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ತಿಮ್ಮಾರೆಡ್ಡಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಕೊಪ್ಪಳ ಎಸಿಬಿ ಪೊಲೀಸ್ ಠಾಣೆಯ ಅಧಿಕಾರಿ ಮೌನೇಶ್ವರ ಮಾಲಿ ಪಾಟೀಲ್, ಕರಿಯಪ್ಪ ಬನ್ನೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಸೆ. 03 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ 07-30 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ನಂತರ 12 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-63  ಚತುಷ್ಪಥಗೊಳಿಸುವ ಕಾಮಗಾರಿ ಹಾಗೂ ವಿವಿಧ ರಸ್ತೆ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಕೇಂದ್ರ ಹೆದ್ದಾರಿ ಮತ್ತು ಬಂದರು ಖಾತೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಪಾಲ್ಗೊಳ್ಳುವರು.  ಸಂಜೆ 04 ಗಂಟೆಗೆ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಕೈಗೊಳ್ಳುವರು.  ಸಚಿವರು ಅದೇ ದಿನ ರಾತ್ರಿ 08 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.

ಗೌರಿ-ಗಣೇಶ ಹಬ್ಬ : ಸೆ. 01 ರಂದು ಕೊಪ್ಪಳದಲ್ಲಿ ಶಾಂತಿ ಸಭೆ

ಕೊಪ್ಪಳ ಆ. 31 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಗೌರಿ-ಗಣೇಶ ಹಬ್ಬದ ಆಚರಣೆ ಸಂಬಂಧಿಸಿದಂತೆ, ಶಾಂತಿ ಸಭೆ ಸೆ. 01 ರಂದು ಬೆಳಿಗ್ಗೆ 11-30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ನಡೆಯಲಿದೆ.
     ಕೊಪ್ಪಳದಲ್ಲಿ ಹಬ್ಬದ ಅಂಗವಾಗಿ ಗಣೇಶ ಮೂರ್ತಿಯನ್ನು ಕೂರಿಸುವವರು, ಸಾರ್ವಜನಿಕರು ಈ ಶಾಂತಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ

ಕೊಪ್ಪಳ, ಸೆ. 01 (ಕರ್ನಾಟಕ ವಾರ್ತೆ) : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ಅಲ್ಪಸಂಖ್ಯಾತರ 1 ರಿಂದ 10 ನೇ ತರಗತಿಯ ಪ್ರಿ ಮೆಟ್ರಿಕ್ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್  www.scholarships.gov.in ಇಲ್ಲಿ ಸಲ್ಲಿಸಿ ಭರ್ತಿಮಾಡಿದ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಆಯಾ ಶಾಲೆಗಳಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು  www.gokdom.kar.nic.in ಇಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ನಾಗರಿಕರಿಗಾಗಿ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು

ಕೊಪ್ಪಳ, ಸೆ. 01 (ಕರ್ನಾಟಕ ವಾರ್ತೆ) : ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಪ್ರಸಕ್ತ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸೆ. 6 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜಿಲ್ಲೆಯ ಹಿರಿಯ ನಾಗರಿಕರಿಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆ ಏರ್ಪಡಿಸಲಾಗಿದೆ.
      ಪುರುಷರಿಗಾಗಿ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ  100 ಮೀ ಓಟ, 800 ಮೀ ನಡಿಗೆ, 400 ಮೀ ನಡಿಗೆ, ಗುಂಡು ಎಸೆತ, ತ್ರೋಯಿಂಗ್ ಕ್ರಿಕೆಟ್ ಬಾಲ್ ಕ್ರೀಡೆಗಳು ನಡೆಯಲಿವೆ. ಮ.2 ಗಂಟೆಯಿಂದ ನೀತಿ ಕಥೆ ಹೇಳುವುದು ಹಾಗೂ ಜಾನಪದ ಗೀತೆ ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿವೆ.
      ಮಹಿಳೆಯರಿಗಾಗಿ ಜಿಲ್ಲಾ ಪೊಲೀಸ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ 100 ಮೀ ನಡಿಗೆ, 200 ಮೀ ನಡಿಗೆ, 400 ಮೀ ನಡಿಗೆ, ಹಾಗೂ ಥ್ರೋಯಿಂಗ್ ಕ್ರಿಕೆಟ್ ಬಾಲ್ ಕ್ರೀಡೆ ನಡೆಯಲಿವೆ. ಮ.2 ಗಂಟೆಗೆ ನೀತಿ ಹೇಳುವುದು ಹಾಗೂ ಜಾನಪದ ಗೀತೆಗಳ ಸಾಂಸ್ಕøತಿಕ ಸ್ಪರ್ಧೆ ನಡೆಯಲಿವೆ. ಈ ಕ್ರೀಡೆಗಳಲ್ಲಿ 60 ರಿಂದ 70, 71 ರಿಂದ 80 ಹಾಗೂ 81 ವರ್ಷ ಮೇಲ್ಪಟ್ಟ ವಯೋಮಾನದ ಮೂರು ವಿಭಾಗಗಳಲ್ಲಿ ಹಿರಿಯ ನಾಗರಿಕರು ಭಾಗವಹಿಸಬಹುದು.
     ಸ್ಪರ್ಧೆಗಳಲ್ಲಿ ಭಾಗÀವಹಿಸಲಿಚ್ಛಿಸುವ ಹಿರಿಯ ನಾಗರಿಕರು ತಮ್ಮ ಹಿರಿಯ ನಾಗರಿಕರ ಗುರುತಿನ ಚೀಟಿ ಅಥವಾ ವಯಸ್ಸಿನ ದಾಖಲೆ, ವಾಸಸ್ಥಳ ದಾಖಲೆ ತರಬೇಕು. ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರು ಸೆ.15 ರಂದು ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯವ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುತ್ತಾರೆ.
     ಸಾಂಸ್ಕøತಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರು ಸೆ.16 ರಂದು ಬೆಂಗಳೂರಿನ ಜವಾಹರ ಬಾಲಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಿಗೆ ಭಾಗವಹಿಸುವವರಿಗೆ ಇಲಾಖೆ ವತಿಯಿಂದ ಪ್ರಯಾಣ ಭತ್ಯೆ ಭರಿಸಲಾಗುವುದು.
     ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕರಿಗಳ ಕಚೇರಿ ದೂ.ಸಂ:08539-220596, 225460 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Tuesday, 30 August 2016

ಆರೋಗ್ಯ ಜಾಗೃತಿ ಅಭಿಯಾನಕ್ಕೆ ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಚಾಲನೆ

ಕೊಪ್ಪಳ (ಕರ್ನಾಟಕ ವಾರ್ತೆ)  ಆಗಸ್ಟ 30: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಕನಕಗಿರಿ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ ಅವರು ಮಂಗಳವಾರದಂದು ಕನಕಗಿರಿಯ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

     ಆರೋಗ್ಯ ಜಾಗೃತಿ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನಕಗಿರಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ರವಿ ಭಜಂತ್ರಿ ಅವರು ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ.  ಪರಿಶಿಷ್ಟ ಜನರಿಗೆ, ಬಡವರಿಗೆ ಆರೋಗ್ಯ ಸಮಸ್ಯೆಗಳು ಬಂದಾಗ ಉಚಿತವಾಗಿ ಚಿಕಿತ್ಸೆ ದೊರೆಯುವಂತಹ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ.  ಬಿಪಿಎಲ್ ಕುಟುಂಬಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ದೊರೆಯುವ ವಾಜಪೇಯಿ ಆರೋಗ್ಯಶೀ ಯೋಜನೆ, ಎಪಿಎಲ್ ಕುಟುಂಬಗಳಿಗೆ ಚಿಕಿತ್ಸೆ ಲಭ್ಯವಾಗಲು ರಾಜೀವ್ ಆರೋಗ್ಯ ಭಾಗ್ಯ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕವಾಗಿ ಅನುಷ್ಠಾನಗೊಳ್ಳುತ್ತಿದೆ.  ಆದರೆ ಸಾಮಾನ್ಯ ಜನರಿಗೆ ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಜನರಿಗೆ ಸರ್ಕಾರದ ಈ ಯೋಜನೆಗಳ ಬಗ್ಗೆ ಅರಿವಿನ ಕೊರತೆ ಇದೆ.  ಈ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಸಹಯೋಗದಲ್ಲಿ ಗ್ರಾಮೀಣ ಜನರಿಗೆ ಆರೋಗ್ಯ ಯೋಜನೆಗಳ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡಿರುವ ಆರೋಗ್ಯ ಅಭಿಯಾನ ನಿಜಕ್ಕೂ ಶ್ಲಾಘನೀಯವಾಗಿದೆ.  ಸ್ವಚ್ಛತೆ ಇದ್ದಲ್ಲಿ, ಆರೋಗ್ಯವೂ ಇರುತ್ತದೆ.  ಈ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬಗಳೂ ವಯಕ್ತಿಕ ಶೌಚಾಲಯವನ್ನು ಹೊಂದಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.

     ಕನಕಗಿರಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ ಗಡಾದ ಅವರು ಮಾತನಾಡಿ, ಬಡವರು, ಮಾರಕ ರೋಗಗಳಿಗೆ ತುತ್ತಾದಾಗ, ಬಡಜನರಿಗಾಗಿಯೇ ಸರ್ಕಾರ ರೂಪಿಸಿರುವಂತಹ ಅನೇಕ ಯೋಜನೆಗಳ ಅರಿವಿಲ್ಲದೆ, ಚಿಕಿತ್ಸೆ ಕೊಡಿಸಲು ಹಣಕಾಸಿನ ತೊಂದರೆ ಎದುರಿಸುತ್ತಾರೆ.  ಸರ್ಕಾರಿ ಯೋಜನೆಗಳ ಬಗ್ಗೆ ಅರಿವನ್ನು ಹೊಂದಿದರೆ, ಸುಗಮವಾಗಿ ಉಚಿತ ಚಿಕಿತ್ಸೆ ಪಡೆಯಬಹುದು.  ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಪ್ರಮುಖವಾಗಿ ಮಹಿಳೆಯರಿಗೆ ತಲುಪಬೇಕು.  ಈ ನಿಟ್ಟಿನಲ್ಲಿ ಕಾರ್ಯಕ್ರಮ ಪರಿಣಾಮಕಾರಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.

     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಅಭಿಯಾನವನ್ನು ಮೊದಲ ಹಂತದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ 70 ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಅಧಿಕ ಸಂಖ್ಯೆಯಲ್ಲಿರುವ ಗ್ರಾಮಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದಲೇ ಆಯ್ಕೆ ಮಾಡಲಾಗಿದೆ.  ಆ. 30 ರಿಂದ ಸೆ. 04 ರವರೆಗೆ 06 ದಿನಗಳ ಕಾಲ ಜಾಗೃತಿ ಕಾರ್ಯಕ್ರಮ ವಿಶೇಷವಾಗಿ ಸಿದ್ಧಪಡಿಸಲಾಗಿರುವ 06 ವಾಹನಗಳ ಮೂಲಕ ನಡೆಯಲಿದ್ದು, ಪ್ರತಿ ವಾಹನ ದಿನಕ್ಕೆ 02 ಗ್ರಾಮಗಳಲ್ಲಿ ಸಂಚರಿಸಿ, ಬೀದಿನಾಟಕ, ಕಿರುಚಿತ್ರ ಪ್ರದರ್ಶನ, ಯೋಜನೆಗಳ ಕಿರುಹೊತ್ತಿಗೆ ವಿತರಣೆ ಮೂಲಕ ಅರಿವನ್ನು ಮೂಡಿಸಲಾಗುವುದು ಎಂದರು.

     ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ್, ಪ.ಪಂ. ಸದಸ್ಯ ಹುಲುಗಪ್ಪ ವಾಲಿಕಾರ್, ತಾಲೂಕು ವೈದ್ಯಾಧಿಕಾರಿ ಡಾ. ಗೌರಿಶಂಕರ್, ಗಣ್ಯರಾದ ಸಿದ್ದಪ್ಪ ನೀರಲೂಟಿ, ವೈದ್ಯಾಧಿಕಾರಿ ಡಾ. ಅಭಿಜಿತ್ ಗೌಡ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ನೋಡಲ್ ಅಧಿಕಾರಿ ಸಂಜಯ್, ಕಿರಿಯ ಆರೋಗ್ಯ ಸಹಾಯಕ ಗುರುರಾಜ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.  ಸುವರ್ಣ ಸುರಕ್ಷಾ ಟ್ರಸ್ಟ್ ವತಿಯಿಂದ ನಿರ್ವಹಿಸಲಾಗುವ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಕುರಿತ ಕಿರುಹೊತ್ತಿಗೆ, ತಳ ಸಮುದಾಯದ ಅಭ್ಯುದಯ, ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಕಿರಹೊತ್ತಿಗೆಯನ್ನು ಕಾರ್ಯಕ್ರಮದ ಸಂದರ್ಭದಲ್ಲಿ ವಿತರಿಸಲಾಯಿತು.  ರಾಯಚೂರು ಜಿಲ್ಲೆಯ ಸಿಂಚನ ಕಲಾ ತಂಡದವರು ಆರೋಗ್ಯ ಜಾಗೃತಿ ಗೀತೆಗಳನ್ನು ಇದೇ ಸಂದರ್ಭದಲ್ಲಿ ಹಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಂಕೀರ್ಣ ಕಾಮಗಾರಿಗೆ ಸಚಿವ ಬಸವರಾಜ ರಾಯರಡ್ಡಿ ಭೂಮಿ ಪೂಜೆ

ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ  ಕಛೇರಿ ಹಾಗೂ ವಾಣಿಜ್ಯ ಸಂಕೀರ್ಣದ ಕಟ್ಟಡ ಕಾಮಗಾರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕೊಪ್ಪಳದಲ್ಲಿ ಸೋಮವಾರದಂದು ಭೂಮಿಪೂಜೆ ನೆರವೇರಿಸಿದರು.
     ಅಂದಾಜು 04 ಕೋಟಿ ರೂ. ವೆಚ್ಚದಲ್ಲಿ  ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ  ಕಛೇರಿ ಹಾಗೂ ವಾಣಿಜ್ಯ ಸಂಕೀರ್ಣದ ಕಟ್ಟಡ ಕೊಪ್ಪಳದಲ್ಲಿ ನಿರ್ಮಾಣವಾಗಲಿದೆ.  
    ಈ ಸಂದರ್ಭದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಜಿ.ಪಂ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿ.ಪಂ. ಸದಸ್ಯ ಕೆ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ,  ಲೊಕೊಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಲಷ್ಕರ ನಾಯ್ಕ, ಸಹಾಯಕ ಅಭಿಯಂತರ ಪೊಬಾಲನ್, ಗಣ್ಯರಾದ ಶಾಂತಣ್ಣ ಮುದಗಲ್, ಹನಮರಡ್ಡಿ ಹಂಗನಕಟ್ಟಿ. ಅಮ್ಜದ ಪಟೇಲ್, ಮುತ್ತುರಾಜ ಕುಷ್ಟಗಿ. ಕೃಷ್ಣ ಇಟ್ಟಂಗಿ, ಕುರಗೂಡ ರವಿ,  ಅಕ್ಬರ ಪಾಷ ಪಲ್ಟನ ಉಪಸ್ಥಿತರಿದ್ದರು.

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ, ಆ.30 (ಕರ್ನಾಟಕ ವಾರ್ತೆ) : ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ ಇವರಿಂದ ಡೆಹರಾಡೂನ್‍ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನಲ್ಲಿ 8ನೇ ತರಗತಿ ಪ್ರವೇಶಕ್ಕಾಗಿ ರಾಜ್ಯದ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.
       ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ 2016 ರ ಡಿಸೆಂಬರ್ 1 ಮತ್ತು 2 ರಂದು ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರು ದೂ.ಸಂ:080-25589459 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಹಕಾರ ಬ್ಯಾಂಕುಗಳಿಂದ ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆಯಲ್ಲಿ ಸಾಲ ಸೌಲಭ್ಯ

ಕೊಪ್ಪಳ, ಆ.30 (ಕರ್ನಾಟಕ ವಾರ್ತೆ) : ಸಹಕಾರ ಇಲಾಖೆಯು ಸಹಕಾರ ಬ್ಯಾಂಕುಗಳಿಂದ ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆಯಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದೆ. ಹಾಗೂ ಸುಸ್ತಿ ಸಾಲಗಾರರಿಗೆ ಸೆ.31 ರವರೆಗೆ ಅಸಲು ಪಾವತಿಸಲು ಕಾಲವಕಾಶ ನೀಡಲಾಗಿದೆ.
     ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇವರಿಂದ ವಿತರಿಸುವ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಸೌಲಭ್ಯದಲ್ಲಿ ಶೇ.3 ರ ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲಗಳಿಗೆ ಗರಿಷ್ಟ 10 ಲಕ್ಷ ರೂ ವರೆಗೆ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳು ಸಾಲ ಸೌಲಭ್ಯ ಪಡೆದು ಆಯಾ ವರ್ಷದ ನಿಗದಿತ ಅವಧಿಯೊಳಗಾಗಿ ಕಂತು ಮರು ಪಾವತಿ ಮಾಡಿ ಬಡ್ಡಿ ರಿಯಾಯ್ತಿ ಸೌಲಭ್ಯ ಪಡೆಉಕೊಳ್ಳಬಹುದಾಗಿದೆ.
     ಸಾಲ ಸೌಲಭ್ಯ ಒದಗಿಸಲಾಗುವ ಯೋಜನೆಗಳ ವಿವರ ಇಂತಿದೆ: ಸಣ್ಣ ನೀರಾವರಿ ಯೋಜನೆ, ಕೃಷಿ ಯಾಂತ್ರೀಕರಣ (ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್), ತೋಟಗಾರಿಕೆ, ರೇಷ್ಮೆ ಸಾಕಾಣಿಕೆ, ಗ್ರಾಮೀಣ ಉಗ್ರಾಣ, ಕೃಷಿ ಪೂರಕ ಚಟುವಟಿಕೆಗಳಾದ  ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ, ಎತ್ತು ಮತ್ತು ಚಕ್ಕಡಿ, ಜಮೀನು ಖರೀದಿ, ಸರ್ಕಾರದ ಸಹಾಯಧನದ ಯೋಜನೆಯಲ್ಲಿ ಸೌರಶಕ್ತಿ ಪಂಪ್‍ಸೆಟ್ ಖರೀದಿ, ಸೌರಶಕ್ತಿ ಮನೆ ದೀಪಗಳ ಘಟಕಗಳಿಗಾಗಿ ಸೌಲಭ್ಯ ಒದಗಿಸಲಾಗುವುದು.
     ಕೃಷಿ ಮತ್ತು ಕೃಷಿ ಆಧಾರಿತ ಸುಸ್ತಿ ಸಾಲಗಾರರು ಸೆ.30 ರೊಳಗಾಗಿ ಕೇವಲ ಅಸಲು ಪಾವತಿಸಿದಲ್ಲಿ ರಾಜ್ಯ ಸರ್ಕಾರದ ಸಂಪೂರ್ಣ ಬಡ್ಡಿ ಮನ್ನಾ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ ಯೋಜನೆಯ ಲಾಭವನ್ನು ಸುಸ್ತಿ ಸಾಲಗಾರರು ಪಡೆದುಕೊಂಡು ಸಾಲದಿಂದ

ಸರ್ಕಾರಿ ಐಟಿಐ ಕಾಲೇಜಿನಲ್ಲಿ ಅತಿಥಿ ಬೋಧಕರಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ, ಆ.30 (ಕರ್ನಾಟಕ ವಾರ್ತೆ) : ಕೊಪ್ಪಳ ಸಮೀಪದ ಟಣಕನಕಲ್‍ನಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವಿಷಯಗಳ ಬೋಧನೆಗಾಗಿ ಅತಿಥಿ ಬೋಧಕರನ್ನು ನೇಮಿಸಿಕೊಳ್ಳಲಾಗುತ್ತಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಡಿಪ್ಲೋಮಾ ಇನ್ ಅಟೋಮೊಬೈಲ್ ಇಂಜಿನಿಯರಿಂಗ್ ವಿತ್ ಎಲ್‍ಎಂವಿ ಲೈಸೆನ್ಸ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯಗಳಿಗೆ ಅತಿಥಿ ಬೋಧಕರನ್ನು ನೇಮಿಸಿಕೊಳ್ಳಲಾಗುವುದು.
     ವಿದ್ಯಾರ್ಹತೆ ಮತ್ತು ಕನಿಷ್ಟ 2 ವರ್ಷಗಳ ಇಂಡಸ್ಟ್ರೀಯಲ್/ ಟೀಚಿಂಗ್ ಅನುಭವವಿರುವ ಅಭ್ಯರ್ಥಿಗಳನ್ನು ಗರಿಷ್ಟ 11 ತಿಂಗಳಿಗೆ ಮಾತ್ರ ಅತಿಥಿ ಬೋಧಕರಾಗಿ ಕಾರ್ಯ ನಿರ್ವಹಿಸಲು ನೇಮಿಸಿಕೊಳ್ಳಲಾಗುವುದು.  ಅರ್ಜಿ ಸಲ್ಲಿಸಲು ಸೆ.3 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಟಣಕನಕಲ್-ಕೊಪ್ಪಳ ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹುಲಿಗಿಯ ವಯೋವೃದ್ಧ ಬಸಯ್ಯ ಎನ್ನುವ ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹುಲಿಗಿ ಗ್ರಾಮದ 73 ವರ್ಷದ ಬಸಯ್ಯ ಎನ್ನುವ ವ್ಯಕ್ತಿ ಆ. 17 ರಂದು ಹುಲಿಗಿಯಿಂದ ಕಾಣೆಯಾಗಿದ್ದು, ನಾಪತ್ತೆಯಾಗಿರುವ ಈ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆ ಪೊಲಿಸ್ ಸಬ್ ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.
     ಹುಲಿಗಿ ಗ್ರಾಮದ ಬಸಯ್ಯ ತಂದೆ ಚೆನ್ನಯ್ಯ ಹಿರೇಮಠ (73) ಆ. 17 ರಂದು ಬೆಳಿಗ್ಗೆ 08 ಗಂಟೆ ಸುಮಾರಿಗೆ ಮನೆಯಿಂದ ಹೊರ ಹೋದವರು, ಕಾಣೆಯಾಗಿರುತ್ತಾರೆ ಎಂದು ಬಸಯ್ಯನ ಪುತ್ರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.  ಕಾಣೆಯಾದ ವ್ಯಕ್ತಿಯ ಚಹರೆ ವಿವರ ಇಂತಿದೆ.  ಹೆಸರು : ಬಸಯ್ಯ, ವಯಸ್ಸು 73, ಜಾತಿ- ಜಂಗಮ, ಎತ್ತರ-5 ಅಡಿ 04 ಇಂಚು. ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು-ಬಿಳಿ ಕೂದಲು, ಕೋಲು ಮುಖ ಹೊಂದಿರುತ್ತಾರೆ.  ಊರು- ಹುಲಿಗಿ, ಕನ್ನಡ ಭಾಷೆ ಮಾತನಾಡುತ್ತಾರೆ.  ಕಂದು ಬಣ್ಣದ ಅಂಗಿ, ಬಿಳಿ ದೋತ್ರಾ ಧರಿಸಿದ್ದು, ಕೈಯಲ್ಲಿ ಕೋಲು ಹಿಡಿದು ನಡೆಯುತ್ತಾರೆ.  ಈ ಚಹರೆಯ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮುನಿರಾಬಾದ್ ಪೊಲೀಸ್ ಠಾಣೆ ಪೊಲಿಸ್ ಸಬ್ ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.

ಶಿಕ್ಷಕರ ದಿನಾಚರಣೆ : ಜಿಲ್ಲೆಯಲ್ಲಿ ಸೆ. 08 ರಂದು ಆಚರಣೆ

ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಇದೇ ಸೆ. 05 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಬೇಕಾಗಿದ್ದು, ಅಂದು ಗಣೇಶ ಚತುರ್ಥಿ ಹಬ್ಬ ಇರುವ ಕಾರಣ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸೆ. 05 ರ ಬದಲಿಗೆ ಸೆ. 08 ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.
     ಸೆ. 05 ರಂದು ಗಣೇಶ ಚತುರ್ಥಿ ಹಬ್ಬ ಇರುವ ಕಾರಣ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ. 05 ರ ಬದಲಿಗೆ 08 ರಂದು ಆಚರಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರು.  ಮನವಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ.  ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆ. 05 ರ ಬದಲಿಗೆ ಸೆ. 08 ರಂದು ಆಚರಿಸಲಾಗುವುದು ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.

ಬಾಲಮಂದಿರ ಸಂಸ್ಥೆಗಳಿಗೆ ಅರೆಕಾಲಿಕ ಸಿಬ್ಬಂದಿ ನೇಮಕ: ಅರ್ಜಿ ಆಹ್ವಾನ

ಕೊಪ್ಪಳ, ಆ.30 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರಗಳಲ್ಲಿ ಅರೆಕಾಲಿಕ ಸಿಬ್ಬಂದಿಗಳ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಬಾಲಕಿಯರ ಬಾಲಮಂದಿರಗಳಲ್ಲಿನ ಹುದ್ದೆಗಳ ವಿವರ ಇಂತಿದೆ: ಗಣಿತ,ವಿಜ್ಞಾನ ಶಿಕ್ಷಕರು-01 ಹುದ್ದೆ ವಿದ್ಯಾರ್ಹತೆ ಬಿಎಸ್‍ಸಿ ಬಿ.ಎಡ್ ಅನುಭವ-3 ವರ್ಷ, ವಯೋಮಿತಿ 25 ರಿಂದ 35 ರೊಳಗಿರಬೇಕು.
ಇಂಗ್ಲಿಷ್ ಶಿಕ್ಷಕರು-01 ಹುದ್ದೆ, ವಿದ್ಯಾರ್ಹತೆ ಬಿಎ.ಬಿಎಡ್, ಅಥವಾ ಬಿಎಸ್ಸಿ.ಬಿಎಡ್, 3 ವರ್ಷಗಳ ಅನುಭವ ಹೊಂದಿರಬೇಕು. ವಯೋಮಿತಿ 25 ರಿಂದ 35 ವರ್ಷದೊಳಗಿರಬೇಕು. ದೈಹಿಕ ಹಾಗೂ ಯೋಗ ಶಿಕ್ಷಕರು-01 ಹುದ್ದೆ, ವಿದ್ಯಾರ್ಹತೆ ಸಿಪಿ.ಎಡ್ ಅಥವಾ ಬಿಪಿ.ಎಡ್ 3 ವಷ್ ಅನುಭವ ಹೊಂದಿರಬೇಕು, ವಯೋಮಿತಿ 25 ರಿಂದ 35 ವರ್ಷದೊಳಗಿರಬೇಕು. ಕಂಪ್ಯೂಟರ್ ಆಪರೇಟರ್ 01 ಹುದ್ದೆ, ವಿದ್ಯಾರ್ಹತೆ ಯಾವುದೇ ಪದವಿ ಜೊತೆಗೆ ಒಂದು ವರ್ಷದ ಸರ್ಟಿಫಿಕೆಟ್ ಕೋರ್ಸ್, 3 ವರ್ಷದ ಅನುಭವ ಹೊಂದಿರಬೇಕು, ವಯೋಮಿತಿ 25 ರಿಂದ 35 ವರ್ಷಗೊಳಗಿರಬೇಕು.
     ಬಾಲಕರ/ಬಾಲಕಿಯರ ಬಾಲಮಂದಿರದಲ್ಲಿ ಕಲೆ, ಕ್ರಾಪ್ಟ್ ಹಾಗೂ ಸಂಗೀತ ಶಿಕ್ಷಕರಿಗಾಗಿ ತಲಾ ಒಂದು ಹುದ್ದೆ, ವಿದ್ಯಾರ್ಹತೆ ಸಂಗೀತ/ವಾಧ್ಯ, ಸಂಗೀತ ಹಾಗೂ ಕಲೆ ವಿಷಯದಲ್ಲಿ ಅಂಗೀಕೃತ ಸಂಸ್ಥೆಯಿಂದ ಪಡೆದ ಸರ್ಟಿಫಿಕೆಟ್ ಕೋರ್ಸ್, 3 ವರ್ಷ ಅನುಭವ, ವಯೋಮಿತಿ 25 ರಿಂದ 35 ವರ್ಷದೊಳಗಿರಬೇಕು.
     ಅರ್ಜಿ ಸಲ್ಲಿಸುವವರು ಅಂಗೀಕೃತ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಿಂದ ಸಂಬಂಧಿಸಿದ ತರಬೇತಿ/ಪದವಿ ಪಡೆದಿರಬೇಕು. ಬಾಲಕಿಯರ ಬಾಲಮಂದಿರದ ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಗೌರವಧನ ಆಧಾರದ ಮೇಲೆ ಪ್ರಸಕ್ತ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ಅರೆಕಾಲಿಕ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಹುದ್ದೆಯನ್ನು ಸಕ್ರಮಗೊಳಿಸುವುದಿಲ್ಲ. ನೇಮಕಗೊಂಡ ಸಿಬ್ಬಂದಿಗಳ ಸೇವೆಯು ಸರ್ಕಾರದ ಅನುದಾನದ ಲಭ್ಯತೆಯ ಆಧಾರದ ಮೇಲಿರುತ್ತದೆ. ಸ್ಥಳೀಯ ಅಭ್ಯರ್ಥಿಗಳಿಗೆ ಹಾಗೂ ಹೆಚ್ಚಿನ ಶೈಕ್ಷಣಿಕ ಅರ್ಹತೆಗೆ ಆದ್ಯತೆ ನೀಡಲಾಗುವುದು.  ಸ್ವ-ವಿವರದೊಂದಿಗೆ ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಅಂಗನವಾಡಿ ಹುದ್ದೆಗಳ ನೇಮಕಾತಿ : ಮದ್ಯವರ್ತಿಗಳಿಂದ ದೂರವಿರಲು ಎಚ್ಚರಿಕೆ

ಕೊಪ್ಪಳ, ಆ.30 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕಾತಿಯು ಪಾರದರ್ಶಕವಾಗಿ ನಡೆಯಲಿದ್ದು, ಯಾವುದೇ ಮದ್ಯವರ್ತಿಗಳ ಹಾವಳಿಗೆ ಒಳಗಾಗಬಾರದು ಹಾಗೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು   ತಿಳಿಸಿದ್ದಾರೆ.
     ಅಂಗನವಾಡಿ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿದ್ದು ವಿಧವೆ, ಅಂಗವಿಕಲರಿಗೆ ಆದ್ಯತೆ ಹಾಗೂ ಮೆರಿಟ್ ಆಧಾರದ ಮೇಲೆ ಇಲಾಖೆಯ ಮಾರ್ಗಸೂಚಿ ಅನ್ವಯ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಮಾಡಿ ಸಂಬಂಧಿಸಿದ ತಾಲೂಕುಗಳಲ್ಲಿ ಪ್ರಕಟಿಸಲಾಗಿದೆ.  ಈ ನೇಮಕಾತಿ ಸಂಬಂಧಿಸಿ ಮಧ್ಯವರ್ತಿಗಳು ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಈ ಕುರಿತು ಸಾರ್ವಜನಿಕರು ಹಾಗೂ ಅಭ್ಯರ್ಥಿಗಳು ಎಚ್ಚರ ವಹಿಸಬೇಕು.  ತಾತ್ಕಾಲಿಕ ಪಟ್ಟಿ ಕುರಿತು ಆಕ್ಷೇಪಣೆಗಳಿದ್ದಲ್ಲಿ ದಾಖಲೆಯೊಂದಿಗೆ ಆಯಾ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು.  ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಹೆಚ್ಚಿನ ವಿವರಗಳನ್ನು ಉಪನಿರ್ದೇಶಕರ ಕಚೇರಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಂದ ಅಥವಾ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ. 

Monday, 29 August 2016

ಕೃಷಿ ಭಾಗ್ಯ ಯೋಜನೆ ಸಾಕ್ಷ್ಯಚಿತ್ರದ ಸಿ.ಡಿ. ಮುಖ್ಯಮಂತ್ರಿಗಳಿಂದ ಬಿಡುಗಡೆ

ಕೃಷಿ ಭಾಗ್ಯ ಯೋಜನೆ, ಕೃಷಿ ಯಂತ್ರಧಾರೆ ಮತ್ತು ಮಣ್ಣು ಆರೋಗ್ಯ ಅಭಿಯಾನ ಯೋಜನೆ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಯಾರಿಸಿದ ಸಾಕ್ಷ್ಯಚಿತ್ರದ ಸಿ.ಡಿ. ಯನ್ನು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಕೊಪ್ಪಳದಲ್ಲಿ ಬಿಡುಗಡೆ ಮಾಡಿದರು.
ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ಸ್ವಾವಲಂಬಿ-ಸ್ವಾಬಿಮಾನಿ ರೈತರ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಸಾಕ್ಷ್ಯಚಿತ್ರದ ಸಿಡಿ ಬಿಡುಗಡೆ ಮಾಡಿದರು. ಕೃಷಿ ಸಚಿವ ಕೃಷ್ಣ ಭೈರೇಗೌಡ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಜಿ.ಪಂ. ಅಧ್ಯಕ್ಷ ಶೇಖರಪ್ಪ ಬಿ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಜಿ.ಎಸ್. ಪಾಟೀಲ್, ಡಿ.ಆರ್. ಯಾವಗಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಶ್ರೀನಿವಾಸ್ ಮಾನೆ, ಕೃಷಿ ಆಯುಕ್ತ ಪಾಂಡುರಂಗ ನಾಯಕ್ ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೃಷಿ, ನೀರಾವರಿ, ರೈತರ ಅಭಿವೃದ್ಧಿ ಆದ್ಯತೆ, ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ- ಮುಖ್ಯಮಂತ್ರಿ ಸಿದ್ದರಾಮಯ್ಯ


ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ರೈತ ಸ್ವಾವಲಂಬಿಯಾಗದಿದ್ದರೆ, ದೇಶದ ಅಭಿವೃದ್ಧಿ ಸಾಧ್ಯವಿಲ್ಲ.  ಕೃಷಿ, ನೀರಾವರಿ ಮತ್ತು ರೈತರ ಅಭಿವೃದ್ಧಿಗೆ ಆದ್ಯತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ರೈತ ಸಮಾವೇಶ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ, ಮಳೆ ರೈತರಿಗೆ ಶುಭ ಸಂಕೇತವಾಗಿದೆ ಎಂದು ತಮ್ಮ ಮಾತನ್ನು ಪ್ರಾರಂಭಿಸಿದ ಮುಖ್ಯಮಂತ್ರಿಗಳು, 12 ಜಿಲ್ಲೆಗಳಿಂದ ರೈತರು ಬಂದಿದ್ದೀರಿ, ಕೃಷಿ ಸಚಿವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಶ್ರಮದಿಂದ ಸಮಾವೇಶ ಅದ್ಭುತ ಯಶಸ್ಸನ್ನು ಕಂಡಿದೆ.  ರೈತ ಸಮಾವೇಶವು ಯಾವುದೇ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮವಾಗಿಲ್ಲ. ಅಲ್ಲದೆ ಈ ಕಾರ್ಯಕ್ರಮವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಿಲ್ಲ. ಇದು ಸ್ವಾವಲಂಬಿ-ಸ್ವಾಭಿಮಾನಿ ರೈತರ ಸಮಾವೇಶವಾಗಿ ಬಿಂಬಿತವಾಗಿದ್ದು ಸಂತೋಷ ತಂದಿದೆ.  ನಮ್ಮ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರೈತರಿಗಾಗಿ ಏನನ್ನು ಮಾಡಿದ್ದೇವೆ ಎಂಬುದನ್ನು ತಿಳಿಸಬೇಕಿತ್ತು.  2015-16 ರಲ್ಲಿ ಮೊದಲ ಬಾರಿಗೆ ನಮ್ಮ ಸರ್ಕಾರ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರ ಆಸಕ್ತಿಯಿಂದ ರೂಪಿತವಾಗಿದ್ದೇ ಕೃಷಿ ಭಾಗ್ಯ ಯೋಜನೆಯಾಗಿದೆ.  ಕೃಷಿ ಭಾಗ್ಯ ಯೋಜನೆಯಿಂದ ರಾಜ್ಯದ 01 ಲಕ್ಷ ಕುಟುಂಬಕ್ಕೆ ಅನುಕೂಲವನ್ನು ತಂದಿದೆ ಎಂದರು.  ಕೃಷಿ ಹೊಂಡ ಯೋಜನೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ ಎಂಬುದಾಗಿ ಕೃಷಿಕರೇ ಹೇಳಿಕೊಳ್ಳುತ್ತಿದ್ದಾರೆ.  ಆದ್ದರಿಂದಲೇ ಕೃಷಿ ಭಾಗ್ಯ ಯೋಜನೆಯನ್ನು ರೈತರಿಗೇ ಸಮರ್ಪಣೆ ಮಾಡುತ್ತಿದ್ದೇವೆ.  

      ಕೃಷಿ ಭಾಗ್ಯ ಯೋಜನೆ ನಿಮಗೆಲ್ಲ ಅನುಕೂಲವನ್ನು ತಂದಿದೆಯೇ ಇಲ್ಲವೋ ಎಂದು ರೈತ ಸಮೂಹಕ್ಕೆ ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗೆ, ಹೌದು, ಅನುಕೂಲವಾಗಿದೆ ಎಂಬ ಹರ್ಷೋದ್ಘಾರ ರೈತರಿಂದ ಕೇಳಿಬಂದಿತು.

     ರೈತ ಸ್ವಾವಲಂಬಿಯಾಗದಿದ್ದರೆ, ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.  ರೈತರನ್ನು ನಾವು ಮರೆತರೆ, ಆಹಾರ ಉತ್ಪಾದನೆ ಸಾಧ್ಯವಿಲ್ಲ.  ರಾಜಸ್ಥಾನ ರಾಜ್ಯ ಬಿಟ್ಟರೆ ಅತಿ ಹೆಚ್ಚು ಒಣಭೂಮಿ ಇರುವುದು ಕರ್ನಾಟಕದಲ್ಲಿಯೇ.  ರಾಜ್ಯದಲ್ಲಿ 1. 21 ಲಕ್ಷ ಹೆ. ಕೃಷಿ ಯೋಗ್ಯ ಭೂಮಿ ಇದೆ.  ಈ ಪೈಕಿ ಶೇ. 66 ರಿಂದ 70 ರಷ್ಟು ಒಣಭೂಮಿ ಬೇಸಾಯಕ್ಕೆ ಒಳಪಟ್ಟಿದೆ.  ಮಳೆಯಾಶ್ರಿತ ರೈತರೇ ಹೆಚ್ಚಾಗಿ ಇರುವುದರಿಂದ, ದೊಡ್ಡ ಸಂಖ್ಯೆಯಲ್ಲಿರುವ ರೈತರ ಅಭಿವೃದ್ಧಿ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧ್ಯಯನ ನಡೆಸಿಯೇ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.  ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಪಂಪ್‍ಸೆಟ್, ಸ್ಪ್ರಿಂಕ್ಲರ್ ಅಳವಡಿಸಿಕೊಂಡು ರೈತರು ನೀರು ಬಳಸುತ್ತಿದ್ದಾರೆ.  ಒಣಭೂಮಿ ಆಶ್ರಿತ ರೈತರಿಗೆ ಕೃಷಿ ಭಾಗ್ಯ ಯೋಜನೆ ವರದಾನವಾಗಿದ್ದು, ಕೃಷಿ ಭಾಗ್ಯ ಯೋಜನೆಗಾಗಿಯೇ 1121 ಕೋಟಿ ರೂ. ಅನುದಾನವನ್ನು ನಮ್ಮ ಸರ್ಕಾರ ಒದಗಿಸಿದೆ.  ಕೃಷಿ ಹೊಂಡ ಮಾಡಿಕೊಂಡಿರುವ ರೈತರು ಕನಿಷ್ಟ 03 ರಿಂದ 08 ಎಕರೆಗೆ ನೀರು ಪೂರೈಸಿಕೊಂಡು, ಬೆಳೆಯನ್ನು ಪಡೆಯುತ್ತಿದ್ದಾರೆ.  ಕೃಷಿ ಭಾಗ್ಯ ಯೋಜನೆಯ ಬಗ್ಗೆ ಕೃಷಿಕರೇ ಕೊಂಡಾಡುತ್ತಿದ್ದಾರೆ.  ರಾಜ್ಯದಲ್ಲಿ ಕೃಷಿಹೊಂಡ, ಪಾಲಿಹೌಸ್, ನೆರಳು ಪರದೆ ಘಟಕಕ್ಕೆ ವ್ಯಾಪಕ ಬೇಡಿಕೆ ಸಿಗುತ್ತಿದೆ.  ಬೇರೆ ಇಲಾಖೆಗೆ ಅನುದಾನದ ಕೊರತೆಯಾದರೂ ಚಿಂತೆಯಿಲ್ಲ, ಕೃಷಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಲಾಗಿದೆ.  ಕೃಷಿ ಇಲಾಖೆಯಿಂದ ಹೆಚ್ಚುವರಿಯಾಗಿ 600 ಕೋಟಿ ರೂ. ಗೆ ಬೇಡಿಕೆ ಸಲ್ಲಿಸಿದ್ದು, ಈಗಾಗಲೆ ಹೆಚ್ಚುವರಿಯಾಗಿ 300 ಕೋಟಿ ರೂ. ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕೃಷಿಕರು ಯಂತ್ರೋಪಕರಣ ಬಳಸಿ : ರೈತ ಸ್ವಾವಲಂಬಿಯಾಗದಿದ್ದರೆ, ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.  ಕೃಷಿಯನ್ನು ನಾವು ಮರೆತರೆ, ಆಹಾರ ಉತ್ಪಾದನೆ ಸಾಧ್ಯವಿಲ್ಲ.  ಕೃಷಿ ಯಂತ್ರಧಾರೆ ಕಾರ್ಯಕ್ರಮ ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ.  ಲಕ್ಷಾಂತರ ರೈತರಿಗೆ ನಾವು ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸುತ್ತಿದ್ದೇವೆ.  ಎಲ್ಲೆಲ್ಲಿ ಕೃಷಿ ಯಂತ್ರವನ್ನು ಬಳಸಬೇಕಾಗಿದೆಯೋ, ಅಲ್ಲಲ್ಲಿ, ಯಂತ್ರೋಪಕರಣಗಳನ್ನು ರೈತರು ಬಳಸಬೇಕು.  ಕಡಿಮೆ ಖರ್ಚು, ಅಧಿಕ ಇಳುವರಿ ಇದೇ ರೈತರ ಮೂಲ ಮಂತ್ರವಾಗಬೇಕು.  ಕೃಷಿ ಭಾಗ್ಯ ಯೋಜನೆಯಲ್ಲಿ ಪಾಲಿಹೌಸ್, ನೆರಳು ಪರದೆ ಘಟಕ ಕಾರ್ಯಕ್ರಮ ನೀಡಿದ್ದು, ಕಡಿಮೆ ನೀರನ್ನು ಬಳಸಿ ಎರಡರಿಂದ ನಾಲ್ಕು ಪಟ್ಟು ಹೆಚ್ಚು ಇಳುವರಿ ಪಡೆಯಲು ಇದು ಅತ್ಯುಪಯುಕ್ತ ಯೋಜನೆಯಾಗಿದೆ.  ರೈತರು ಇಂತಹ ಯೋಜನೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು. 

ಮೂರು ವರ್ಗದವರ ನೆನೆದು : ದೇಶಕ್ಕೆ ಅನ್ನವನ್ನು ಕೊಡುವ ಅನ್ನದಾತ, ಗಡಿ ಕಾಯುವ ಸೈನಿಕರು ಹಾಗೂ ಶಿಕ್ಷಕ ವರ್ಗ ಈ ಮೂರೂ ವರ್ಗದವರು ನಾಡನ್ನು ಕಟ್ಟುವವರು.  ರೈತ ನಮ್ಮ ನಾಡಿಗೆ ಅನ್ನದಾತ, ಮಳೆ, ಬೆಳೆ ಸಮೃದ್ಧಿಯಾಗಿದ್ದರೆ ಅದೇ ಅವರಿಗೆ ಸ್ವರ್ಗ, ಇನ್ಯಾವ ಸಂತೋಷವನ್ನೂ ಅವರು ಬಯಸುವುದಿಲ್ಲ.  ಗಡಿ ಕಾಯುವ ಸೈನಿಕರಿಗೂ ಸಹ ಗೌರವಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ.  ಅದೇ ರೀತಿ ನಾಡಿನ ಭವಿಷ್ಯ ರೂಪುಗೊಳ್ಳುವುದು ಶಿಕ್ಷಕರಿಂದಲೇ ಆದ್ದರಿಂದ ಈ ಮೂರೂ ವರ್ಗ ನಾಡನ್ನು ಕಟ್ಟುವ ಪ್ರಮುಖ ವರ್ಗವಾಗಿದೆ.   ದೇಶವನ್ನು ರಕ್ಷಿಸುವವರು ಹಾಗೂ ದೇಶಕ್ಕೆ ಅನ್ನವನ್ನು ನೀಡುವವರು ಅನ್ನದಾತರು ಅದಕ್ಕಾಗಿಯೇ ನಮ್ಮ ಸರ್ಕಾರ ರೈತ ಪರ ಸರ್ಕಾರವಾಗಿದೆ.  ಕೃಷಿ ಬೆಳೆಗಳಿಗೆ ಸರಿಯಾದ ಬೆಲೆ ಕೊಡಿಸುವ ಸಲುವಾಗಿಯೇ ಕೃಷಿ ಬೆಲೆ ಆಯೋಗವನ್ನು ರಚಿಸಲಾಗಿದೆ ಎಂದರು.
23 ಲಕ್ಷ ರೈತರಿಗೆ 10 ಸಾವಿರ ಕೊಟಿ ರೂ. ಸಾಲ : ಕಳೆದ ವರ್ಷ ಭೀಕರ ಬರಗಾಲ ರಾಜ್ಯವನ್ನು ಆವರಿಸಿತ್ತು.  ರಾಜ್ಯದ 136 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿತ್ತು.  ರೈತರ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಅವರ ತೊಂದರೆಗಳಿಗೆ ಸ್ಪಂದಿಸುವ ಸಲುವಾಗಿಯೇ 18 ತಾಲೂಕುಗಳಿಗೆ ಭೇಟಿ ಕೊಟ್ಟು, ರೈತರೊಂದಿಗೆ ಚರ್ಚೆ ನಡೆಸಿ, ಸಮಸ್ಯೆಯನ್ನು ಕಂಡುಕೊಂಡೆ.  ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುವ ಮೂಲಕ ಈಗಾಗಲೆ ಬೆಳೆ ಪರಿಹಾರವನ್ನು ಸಹ ಕೊಡಲಾಗಿದೆ.  2015 ರ ಸೆ. 30 ರವರೆಗಿನ ಎಲ್ಲ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಸಾಲ ವಸೂಲಾತಿಯನ್ನು 01 ವರ್ಷ ಕಾಲ ಮುಂದೂಡಲಾಗಿದೆ.  ರೈತರ ಆತ್ಮಹತ್ಯೆಗೆ ಪರಿಹಾರ ಮೊತ್ತವನ್ನು 05 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ 2000 ರೂ. ಗಳ ಮಾಸಾಶನವನ್ನು ನೀಡಲಾಗುತ್ತಿದೆ.  ಪ್ರಸಕ್ತ ವರ್ಷ 23 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲವನ್ನು ನೀಡಲು ಕ್ರಮ ಕೈಗೊಂಡಿದ್ದು, 10 ಸಾವಿರ ಕೋಟಿ ರೂ. ಗಳ ಸಾಲವನ್ನು ನೀಡಲಾಗುತ್ತಿದೆ.  ಇದು ನಮ್ಮ ಸರ್ಕಾರ ರೈತರಿಗಾಗಿ ಕೊಡಮಾಡಿರುವ ಅತ್ಯಲ್ಪ ಕಾಣಿಕೆಯಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.    ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲ 29 ಸಾವಿರ ಕೋಟಿ ರೂ. ಇದೆ.  ಕೇಂದ್ರ ಸರ್ಕಾರ ಈ ಪೈಕಿ ಅರ್ಧದಷ್ಟು ಸಾಲವನ್ನು ಮನ್ನಾ ಮಾಡಿದರೆ, ಸೊಸೈಟಿಯಲ್ಲಿ ರೈತರು ಪಡೆದಿರುವ ಸಾಲದ ಪೈಕಿ ಅರ್ಧದಷ್ಟು ಸಾಲವನ್ನು ಮನ್ನಾ ಮಾಡಲು ನಾವು ಬದ್ಧರಿದ್ದೇವೆ ಎಂಬುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ; ಕೊಪ್ಪಳ ಏತನೀರಾವರಿ ಯೋಜನೆಗಾಗಿ 1300 ಕೋಟಿ ರೂ. ಗೂ ಹೆಚ್ಚು ಅನುದಾನವನ್ನು ನಮ್ಮ ಸರ್ಕಾರ ಒದಗಿಸಿದೆ.  ಮೂರು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 30 ಸಾವಿರ ಕೊಟಿ ರೂ. ಗೂ ಹೆಚ್ಚು ಅನುದಾನವನ್ನು ಒದಗಿಸಿದ್ದು, ಒಟ್ಟಾರೆ ಐದು ವರ್ಷಗಳಲ್ಲಿ 60 ಸಾವಿರ ಕೋಟಿ ರೂ. ಗೂ ಹೆಚ್ಚಿನ ಅನುದಾನವನ್ನು ನಮ್ಮ ಸರ್ಕಾರ ಒದಗಿಸಲಿದೆ.  ಕೊಪ್ಪಳ ಮತ್ತು ಯಲಬುರ್ಗಾ ತಾಲೂಕುಗಳ ಕೆರೆ ತುಂಬಿಸುವ ಯೋಜನೆ, ಕೃಷ್ಣಾ ಮೂರನೆ ಹಂತದ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಿ, ಹಾಗೂ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಕುರಿತಂತೆ ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ನುಡಿದಂತೆ ನಡೆದಿದ್ದೇವೆ : ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಜನರಿಗೆ ನೀಡಿದ್ದ 165 ಭರವಸೆಗಳ ಪೈಕಿ ಈಗಾಗಲೆ 125 ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ.  ದೇವರಾಜ ಅರಸು ಅವರ ಕಾಲದಲ್ಲಿ ಪ್ರಾರಂಭವಾದ ಬದಲಾವಣೆಯ ಪರ್ವವನ್ನು ನಮ್ಮ ಸರ್ಕಾರವೂ ಕೂಡ ಮುಂದುವರೆಸಿದೆ.  ಜನರ ನಿರೀಕ್ಷೆಗೆ ತಕ್ಕಂತೆ ನಾವು ನಡೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
     ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಸಹಕಾರ ಸಚಿವ ಹೆಚ್.ಎಸ್. ಮಹದೇವಪ್ರಸಾದ್, ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಜಿ.ಪಂ. ಅಧ್ಯಕ್ಷ ಶೇಖರಪ್ಪ ಬಿ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಜಿ.ಎಸ್. ಪಾಟೀಲ್, ಡಿ.ಆರ್. ಯಾವಗಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಶ್ರೀನಿವಾಸ್ ಮಾನೆ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.  ಕೃಷಿ ಆಯುಕ್ತ ಪಾಂಡುರಂಗ ನಾಯಕ್ ಸ್ವಾಗತಿಸಿದರು.

ಕೃಷಿ ಇಲಾಖೆ ಮತ್ತು ರೈತರ ನಡುವಿನ ಸಂಬಂಧವನ್ನು ನಮ್ಮ ಸರ್ಕಾರ ವೃದ್ಧಿಸುತ್ತಿದೆ- ಕೃಷ್ಣ ಭೈರೇಗೌಡ


ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ಕೃಷಿ ಇಲಾಖೆ ರೈತರ ಶ್ರೇಯೋಭಿವೃದ್ಧಿಗಾಗಿಯೇ ಇದ್ದು, ಹೆಚ್ಚು, ಹೆಚ್ಚು ರೈತರು ಸುಸ್ಥಿರ ಕೃಷಿಯನ್ನು ಅಳವಡಿಸಿಕೊಂಡು, ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ಕೃಷಿ ಇಲಾಖೆ ಮತ್ತು ರೈತರ ನಡುವಿನ ಸಂಬಂಧ ವೃದ್ಧಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶದದಲ್ಲಿ ಪಾಲ್ಗೊಂಡು ಮಾತನಾಡಿದರು.

       ಸ್ವಾವಲಂಬಿ-ಸ್ವಾಭಿಮಾನಿ ರೈತ ಫಲಾನುಭವಿಗಳ ಇಂದಿನ ಸಮಾವೇಶದ ಅದ್ಭುತ ಯಶಸ್ಸು ಕಂಡಿದೆ.  ಇದರ ಕೀರ್ತಿ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಸಲ್ಲಬೇಕು.  ಕಾರ್ಯಕ್ರಮದ ಅದ್ಭುತ ಯಶಸ್ಸಿಗೆ ಸಹಕಾರ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ಶ್ರಮ ಶ್ಲಾಘನೀಯವಾಗಿದೆ.  ಈ ಕಾರ್ಯಕ್ರಮವು ರೈತರ ಬಾಯಿಂದ ಬಾಯಿಗೆ ಹರಿದಾಡಿಯೇ ಹೆಚ್ಚಿನ ಪ್ರಚಾರ ಗಳಿಸಿದೆ.  ರೈತರ ಸುಸ್ಥಿರ ಕೃಷಿ ಬದುಕಿಗಾಗಿ ಬೇಕಾಗಿರುವ ನೂತನ ತಂತ್ರಜ್ಞಾನ, ಆಧುನಿಕ ಕೃಷಿ ಪದ್ಧತಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವುದು, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಬೆಳೆಯನ್ನು ಉಳಿಸಿಕೊಳ್ಳುವುದು ಮುಂತಾದ ತಾಂತ್ರಿಕತೆಯನ್ನು ರೈತರಿಗೆ ತಿಳಿಸುವುದು ಹಾಗೂ ತಲುಪಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ.  ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಳೆ ಆಶ್ರಿತ ರೈತರ ಕೃಷಿ ಪದ್ಧತಿಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ ನಂತರವೇ, ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ.  ಕೇವಲ ಸಬ್ಸಿಡಿ ಅಥವಾ ಧನ ಸಹಾಯ ಮಾಡುವ ಮೂಲಕ ರೈತರ ಬದುಕನ್ನು ಸರ್ಕಾರ ಕಟ್ಟಿಕೊಡಲು ಸಾಧ್ಯವಿಲ್ಲ.  ಅವರಿಗೆ ಆಧುನಿಕ ಕೃಷಿ ಪದ್ಧತಿಗೆ ಬೇಕಾಗಿರುವ ತಾಂತ್ರಿಕತೆ, ಕೃಷಿ ಯಂತ್ರೋಪಕರಣಗಳನ್ನು ಪೂರೈಸಿದಾಗ ಮಾತ್ರ ರೈತರು ಕೃಷಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ.   ಕಳೆದ ಮೂರು ವರ್ಷಗಳಲ್ಲಿ ಬಿತ್ತನೆ ಬೀಜ ಅಥವಾ ಗೊಬ್ಬರಕ್ಕೆ ಯಾವುದೇ ಕೊರತೆ ಬಾರದ ರೀತಿಯಲ್ಲಿ ನಮ್ಮ ಸರ್ಕಾರ ನಿರ್ವಹಿಸಿದೆ.  ಪ್ರಸಕ್ತ ವರ್ಷ  2964 ಕೋಟಿ ರೂ. ಅನುದಾನವನ್ನು ಸರ್ಕಾರ ಕೃಷಿ ಇಲಾಖೆಗೆ ಒದಗಿಸಿದೆ.  ಕಳೆದ ಮೂರು ವರ್ಷಗಳಲ್ಲಿ ಹೋಲಿಸಿದಾಗ ಈ ವರ್ಷ ಮೂರು ಪಟ್ಟು ಅನುದಾನವನ್ನು ಹೆಚ್ಚಿಸಲಾಗಿದೆ.  ಕೃಷಿ ಭಾಗ್ಯ ಯೋಜನೆ ರೈತರಿಗೆ ಶಕ್ತಿಯನ್ನು ಕೊಡುವಂತಹ ಯೋಜನೆಯಾಗಿದೆ.  ಕೃಷಿ ಭಾಗ್ಯ ಯೋಜನೆಯಡಿ ಒಣ ಬೇಸಾಯ ಅವಲಂಬಿತ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಹೊಂಡ ಕಾರ್ಯಕ್ರಮವಿದೆ.  ಅದೇ ರೀತಿ ಅತ್ಯಂತ ಕಡಿಮೆ ನೀರು ಬಳಸಿ, ಹೆಚ್ಚು ಇಳುವರಿ ಪಡೆಯುವಂತಹ ಪಾಲಿಹೌಸ್ ನಿರ್ಮಾಣದ ಕಾರ್ಯಕ್ರಮವಿದೆ.  ಬರ ಪರಿಸ್ಥಿತಿಯನ್ನು ರೈತರು ಸಮರ್ಥವಾಗಿ ನಿಭಾಯಿಸಲು  ಕೃಷಿ ಭಾಗ್ಯ ಯೋಜನೆ ಹೆಚ್ಚು ಪ್ರಸ್ತುತವೆನಿಸಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
     ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಕೃಷಿ ಭಾಗ್ಯ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಜನಪ್ರಿಯಗೊಂಡಿದೆ.  ಅದರಲ್ಲೂ ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂದಾಗುತ್ತಿದ್ದಾರೆ.  ಯಲಬುಗಾ ತಾಲುಕು ಒಂದರಲ್ಲೇ 1000 ಕ್ಕೂ ಹೆಚ್ಚು ಕೃಷಿ ಹೊಂಡಗಳು ನಿರ್ಮಾಣಗೊಂಡಿವೆ.  ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೃಷಿ ಹಾಗೂ ನೀರಾವರಿಗೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಿದೆ.  ಕೃಷ್ಣ ಬಿ ಸ್ಕೀಂ ನಲ್ಲಿ 13 ಟಿಎಂಸಿ ನೀರನ್ನು ಬಳಸಿ 2 ಲಕ್ಷ ಎಕರೆಗೂ ಹೆಚ್ಚು ಜಮೀನಿಗೆ ಹನಿ ನೀರಾವರಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.  ಗಂಗಾವತಿಯಲ್ಲಿ ಕೃಷಿ ಕಾಲೇಜಿಗಾಗಿ ಅಗತ್ಯ ಭೂಮಿ ಲಭ್ಯವಿದ್ದು, ಗಂಗಾವತಿಯಲ್ಲಿ ಕೃಷಿ ಕಾಲೇಜು ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕಿದೆ.  ಕೊಪ್ಪಳದ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಈಗಿರುವ 200 ಬೆಡ್ ಆಸ್ಪತ್ರೆ ಅನ್ನು 500 ಬೆಡ್ ಆಸ್ಪತ್ರೆಗೆ ಉನ್ನತೀಕರಿಸಲು ಅಗತ್ಯ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
     ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಮಾತನಾಡಿ, ರೈತರ ಕೃಷಿ ಬದುಕಿಗೆ ಅಗತ್ಯವಿರುವ ಆಧುನಿಕ ಕೃಷಿ ಪದ್ಧತಿಗಳನ್ನು ಸಮಾವೇಶ ಸ್ಥಳದಲ್ಲಿಯೇ ಪರಿಚಯಿಸುತ್ತಿರುವುದು, ಸಮಾವೇಶ ಅರ್ಥಪೂರ್ಣವಾಗಿದೆ ಎಂದರು.
     ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಿಡಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಸಹಕಾರ ಸಚಿವ ಹೆಚ್.ಎಸ್. ಮಹದೇವಪ್ರಸಾದ್, ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಜಿ.ಪಂ. ಅಧ್ಯಕ್ಷ ಶೇಖರಪ್ಪ ಬಿ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಜಿ.ಎಸ್. ಪಾಟೀಲ್, ಡಿ.ಆರ್. ಯಾವಗಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಶ್ರೀನಿವಾಸ್ ಮಾನೆ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.  ಕೃಷಿ ಆಯುಕ್ತ ಪಾಂಡುರಂಗ ನಾಯಕ್ ಸ್ವಾಗತಿಸಿದರು.

ಸಮಾವೇಶಕ್ಕೆ ಹರಿದು ಬಂದ ಸ್ವಾವಲಂಬಿ-ಸ್ವಾಭಿಮಾನಿ ರೈತ ಸಾಗರ

 ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಭಾಗ್ಯ ಯೋಜನೆ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳ ಸಮಾವೇಶಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾವಲಂಬಿ-ಸ್ವಾಭಿಮಾನಿ ರೈತ ಸಾಗರ ಹರಿದು ಬಂದಿತು.

     ಕೊಪ್ಪಳ ನಗರದ ಹೊರ ವಲಯದಲ್ಲಿನ ವಿಶಾಲವಾದ ಮೈದಾನದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ ಸ್ವಾವಲಂಬಿ-ಸ್ವಾಭಿಮಾನಿ ರೈತ ಫಲಾನುಭವಿಗಳ ಸಮಾವೇಶಕ್ಕೆ ರೈತ ಸಾಗರವೇ ಹರಿದು ಬಂದಿತು.  ಉತ್ತರ ಕರ್ನಾಟಕದ 12 ಜಿಲ್ಲೆಗಳ ಸುಮಾರು 25 ರಿಂದ 30 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯನ್ನು ಕಾರ್ಯಕ್ರಮದ ಆಯೋಜಕರು ಇಟ್ಟುಕೊಂಡಿದ್ದರು.  ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದ್ದು ಮಾತ್ರ ರೈತರು.  ಸುಮಾರು 40 ರಿಂದ 50 ಸಾವಿರ ರೈತರು ಸಮಾವೇಶದಲ್ಲಿ ಪಾಲ್ಗೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.  ಇದಕ್ಕೆ ಕಾರಣವೂ ಇಲ್ಲದಿಲ್ಲ.  ರಾಜ್ಯದಲ್ಲಿ ಮಳೆಯನ್ನೇ ಆಶ್ರಯಿಸಿರುವ ರೈತರ ಸಂಖ್ಯೆ ಶೇ. 70 ರಷ್ಟಿದೆ.  ಈ ರೈತರ ಸುಸ್ಥಿರ ಕೃಷಿ ಬದುಕಿಗಾಗಿ ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆಯಡಿ ಜಾರಿಗೊಳಿಸಿರುವ ಕೃಷಿ ಹೊಂಡ, ಪಾಲಿ ಹೌಸ್, ನೆರಳು ಪರದೆ ಘಟಕ ಮುಂತಾದ ಕಾರ್ಯಕ್ರಮಗಳು ಅದ್ಭುತ ಯಶಸ್ಸನ್ನು ಕಂಡಿವೆ.  ರೈತರೂ ಸಹ ಈ ಯೋಜನೆಗೆ ಮಾರು ಹೋಗಿದ್ದಾರೆ.  ರಾಜ್ಯದಲ್ಲಿ ಪದೇ ಪದೇ ಆವರಿಸುತ್ತಿರುವ ಬರ ಪರಿಸ್ಥಿತಿ, ಕೃಷಿಕರನ್ನು ಕಂಗೆಡಿಸಿದೆ.  ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆದು, ನಿಲ್ಲಿಸುವಂತಹ ಕೃಷಿ ಹೊಂಡ ಯೋಜನೆ ರೈತರನ್ನು ಹೆಚ್ಚು ಆಕರ್ಷಿಸಿದೆ.  ಈ ಯೋಜನೆಯಿಂದ ಮಳೆ ವಿಫಲವಾದರೂ, 03 ರಿಂದ 08 ಎಕರೆಯಷ್ಟು ಜಮೀನಿನ ಬೆಳೆಯನ್ನು ಕೃಷಿ ಹೊಂಡದ ನೀರನ್ನು ಬಳಸಿಕೊಂಡು, ಉಳಿಸಿಕೊಂಡು, ಉತ್ತಮ ಬೆಳೆ ಪಡೆಯಲು ಅವಕಾಶವಿದೆ.  ಇನ್ನು ಪಾಲಿಹೌಸ್ ಮತ್ತು ನೆರಳು ಪರದೆ ಘಟಕವೂ ಕೂಡ ಅತ್ಯಲ್ಪ ನೀರನ್ನು ಮಾತ್ರ ಬಳಸಿಕೊಂಡು ಮೂರು ಪಟ್ಟು ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುವಂತಹ ಯೋಜನೆ.  ಇದೂ ಸಹ ರೈತರ ಮನಸೂರೆಗೊಂಡಿದೆ.  ರೈತ ಫಲಾನುಭವಿಗಳ ಸಮಾವೇಶ ಸ್ಥಳದಲ್ಲಿ ಕೃಷಿ ಭಾಗ್ಯದ ಈ ಎಲ್ಲ ಯೋಜನೆಗಳ ಲೈವ್ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು.  ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಅನೇಕ ಕಂಪನಿಗಳು ಇಲ್ಲಿ ಪ್ರದರ್ಶನಕ್ಕೆ ಇಟ್ಟು, ಅದರ ಬಳಕೆಯ ಬಗ್ಗೆಯೂ ರೈತರಿಗೆ ತೋರಿಸಲು ವ್ಯವಸ್ಥೆಗೊಳಿಸಿದ್ದವು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭತ್ತ ನಾಟಿ ಯಂತ್ರವನ್ನು ತಾವೇ ಏರಿ, ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕುತೂಹಲದಿಂದ ಗಮನಿಸಿದರು.  ಈ ಸಂದರ್ಭದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.  

     ರೈತ ಸಮಾವೇಶಕ್ಕಾಗಿ ತೆರೆಯಲಾಗಿದ್ದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಮಾಹಿತಿಯನ್ನು ಪಡೆದರು.  ನಂತರ ಭತ್ತದ ಬಂಡಲ್ ಕಟ್ಟುವ ಯಂತ್ರ, ಜಲಾನಯನ ಗ್ರಾಮ ಮಾದರಿ, ಪಾಲಿಹೌಸ್ ಮುಂತಾದ ಘಟಕಗಳಿಗೆ ಭೇಟಿ ನೀಡಿದರು.  ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಮುಖ್ಯಮಂತ್ರಿಗಳ ಜೊತೆಗಿದ್ದು, ಸಮಗ್ರ ಮಾಹಿತಿ ನೀಡಿದರು.  ಸಮಾವೇಶ ಆಯೋಜನೆಯ ವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆಯ ಮಾತುಗಳನ್ನಾಡಿದರು.

ರೈತರನ್ನು ಆಕರ್ಷಿಸಿದ ವಾರ್ತಾ ಇಲಾಖೆಯ ವಸ್ತುಪ್ರದರ್ಶನ ಮಳಿಗೆ



ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ಕೃಷಿ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ಸ್ವಾವಲಂಬಿ-ಸ್ವಾಭಿಮಾನಿ ರೈತ ಸಮಾವೇಶ ಸ್ಥಳದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೃಷಿಕರಿಗೆ ಅತ್ಯುಪಯುಕ್ತ ಮಾಹಿತಿ ಒದಗಿಸುವ ಸಲುವಾಗಿ ತೆರೆಯಲಾಗಿದ್ದ ವಸ್ತುಪ್ರದರ್ಶನ ಮಳಿಗೆ ರೈತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

     ರೈತ ಸಮಾವೇಶಕ್ಕಾಗಿ ಸುಮಾರು 40 ಸಾವಿರಕ್ಕೂ ಹೆಚ್ಚು ರೈತರು ಕಾರ್ಯಕ್ರಮದ ಮೈದಾನದಲ್ಲಿ ಸೇರಿದ್ದರು.  ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರಾರಂಭಿಸಲಾದ ವಸ್ತು ಪ್ರದರ್ಶನ ಮಳಿಗೆಗೆ ಸಾವಿರಾರು ರೈತರು ಭೇಟಿ ನೀಡಿ, ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ಸೇರಿದಂತೆ ಕೃಷಿಕರಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.  ಕೃಷಿ ಯೋಜನೆಗಳ ಬಗ್ಗೆ ವಾರ್ತಾ ಇಲಾಖೆ ಪ್ರಕಟಿಸಿರುವ ಮಡಿಕೆ ಪತ್ರಗಳನ್ನು ವಸ್ತು ಪ್ರದರ್ಶನ ಮಳಿಗೆಯಲ್ಲಿ ರೈತರಿಗೆ ವಿತರಿಸಲು ವ್ಯವಸ್ಥೆಗೊಳಿಸಲಾಗಿತ್ತು.  ಆಕರ್ಷಕ ವಸ್ತು ಪ್ರದರ್ಶನ ಮಳಿಗೆಯ ವಿನ್ಯಾಸಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.  ಮಳಿಗೆ ಮುಂಭಾಗದಲ್ಲಿ ಎತ್ತುಗಳೊಂದಿಗೆ ಬೇಸಾಯದಲ್ಲಿ ನಿರತ ರೈತನ ಮಾದರಿಯನ್ನು ಇರಿಸಲಾಗಿತ್ತು.  ಈ ಮಾದರಿ ಕಟೌಟ್‍ನಲ್ಲಿನ ಎತ್ತುಗಳು ಹಾಗೂ ರೈತನ ಚಿತ್ರದ ಮುಂದೆ ನಿಂತು ರೈತರು ಫೋಟೋ ಪಡೆಯುವುದು, ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.  ರೈತರು ಸರದಿ ಸಾಲಿನಲ್ಲಿ ನಿಂತು ವಸ್ತು ಪ್ರದರ್ಶನ ಮಳಿಗೆಯ ಒಳಗೆ ಪ್ರವೇಶಿಸಿ, ಕೃಷಿ ಇಲಾಖೆಗೆ ಸಂಬಂಧಿತ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.

Sunday, 28 August 2016

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ನಲ್ಲಿ ಗಮನ ಸೆಳೆದ ಕೊಪ್ಪಳ ಜಿಲ್ಲೆಯ ಮಲ್ಲಮ್ಮ

ಶೌಚಾಲಯಕ್ಕಾಗಿ ಉಪವಾಸ ಕುಳಿತು, ಶೌಚಾಲಯ ಗಿಟ್ಟಿಸಿಕೊಂಡ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ಮಲ್ಲಮ್ಮ ವಿದ್ಯಾರ್ಥಿನಿ ಕುರಿತಂತೆ ಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಆ. 28 ರಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ, ಬಾಲಕಿಯ ಸ್ವಾಭಿಮಾನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಬಾಲಕಿಯ ಸ್ವಾಭಿಮಾನ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಪದ ಮಾಸಿಕ ಪತ್ರಿಕೆಯ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ನಮ್ಮ ಲೇಖನ ಪ್ರಕಟಗೊಂಡಿರುವುದು.

ಆ. 29 ರಂದು ಕೊಪ್ಪಳದಲ್ಲಿ ಸ್ವಾವಲಂಬಿ-ಸ್ವಾಭಿಮಾನಿ ರೈತ ಸಮಾವೇಶ

ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ಭಾಗ್ಯ ಯೋಜನೆ ಸಮರ್ಪಣೆ ಮತ್ತು ಸ್ವಾವಲಂಬಿ-ಸ್ವಾಭಿಮಾನಿ ರೈತ ಸಮಾವೇಶ ಆ. 29 ರಂದು ಬೆಳಿಗ್ಗೆ 11-30 ಗಂಟೆಗೆ ಕೊಪ್ಪಳ ಆರ್.ಟಿ.ಓ. ಕಚೇರಿ ಎದುರುಗಡೆ, ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-63 ಪಕ್ಕದ ವಿಶಾಲವಾದ ಮೈದಾನದಲ್ಲಿ ಜರುಗಲಿದೆ.
     ರೈತ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.  ಕೃಷಿ ಭಾಗ್ಯ ಯೋಜನೆಯ ಯಶೋಗಾಥೆಗಳ ಕಿರುಹೊತ್ತಿಗೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಬಿಡುಗಡೆ ಮಾಡುವರು.  ಹೈಟೆಕ್ ಕೃಷಿ ಯಂತ್ರೋಪಕರಣಗಳ ವಸ್ತುಪ್ರದರ್ಶನ ಹಾಗೂ ಮಾದರಿ ಪ್ರಾತ್ಯಕ್ಷಿಕೆಗಳ ಉದ್ಘಾಟನೆಯನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಜಿ. ಪರಮೇಶ್ವರ್, ಸಣ್ಣ ನೀರಾವರಿ, ಕಾನೂನು ಮತ್ತು ನ್ಯಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್, ಅರಣ್ಯ ಹಾಗೂ ಪರಿಸರ ಸಚಿವ ಬಿ. ರಮಾನಾಥ ರೈ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ ಸೇಠ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಸಂಸದೀಯ ಕಾರ್ಯದರ್ಶಿ ಸಿ.ಎಸ್. ಶಿವಳ್ಳಿ, ಅಬಕಾರಿ ಸಚಿವ ಹೆಚ್.ವೈ. ಮೇಟಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಪ್ರಮೋದ ಮಧ್ವರಾಜ್, ಪೌರಾಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ಸಂಸದೀಯ ಕಾರ್ಯದರ್ಶಿ ಡಾ. ಉಮೇಶ್ ಜಿ. ಜಾಧವ್, ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ, ಪಶುಪಾಲನೆ ಮತ್ತು ರೇಷ್ಮೆ ರಾಜ್ಯ ಸಚಿವ ಎ. ಮಂಜು, ಗಣಿ ಮತ್ತು ಭೂವಿಜ್ಞಾನ ರಾಜ್ಯ ಸಚಿವ ವಿನಯ ಆರ್ ಕುಲಕರ್ಣಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್. ನಾಡಗೌಡ (ಅಪ್ಪಾಜಿ), ಸಂಸದೀಯ ಕಾರ್ಯದರ್ಶಿಗಳಾದ ರಾಜು ಅಲಗೂರ್, ಇ. ತುಕಾರಾಮ್, ರಾಮಕೃಷ್ಣ ದೊಡ್ಡಮನಿ, ಮಕ್ಬುಲ್ ಬಾಗವಾನ, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಪಾಲ್ಗೊಳ್ಳುವರು.  ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಗಸಿ ಮುಂದಿನ ಭೀಮಣ್ಣ, ನಗರಸಭೆ ಅಧ್ಯಕ್ಷ ಮಹೇಂದ್ರಕುಮಾರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಲತಾ ಕೃಷ್ಣರಾವ್, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲಾ, ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಮಹೇಶ್ವರರಾವ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎಸ್. ವಸ್ತ್ರದ್, ಕೃಷಿ ಆಯುಕ್ತ ಪಾಂಡುರಂಗ ನಾಯಕ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಜಿಲ್ಲಾ ಅಧ್ಯಕ್ಷ ಶಿವಣ್ಣ ಮೂಲಿಮನಿ ಅವರು ಭಾಗವಹಿಸುವರು.

ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆ. 29 ರಂದು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರವಾಸ ಕಾರ್ಯಕ್ರಮ ಪರಿಷ್ಕøತಗೊಂಡಿದೆ. 
     ಪರಿಷ್ಕøತ ಪ್ರವಾಸ ಕಾರ್ಯಕ್ರಮದನ್ವಯ ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಹೊರಟು, ಬೆಳಿಗ್ಗೆ 10-20 ಗಂಟೆಗೆ ಕೊಪ್ಪಳ ತಾಲೂಕು ಗಿಣಿಗೇರಾ ಏರ್‍ಸ್ಟ್ರಿಪ್ ಗೆ (ಎಂಎಸ್‍ಪಿಎಲ್ ವಿಮಾನ ನಿಲ್ದಾಣ) ಆಗಮಿಸುವರು.  ನಂತರ 10-30 ಗಂಟೆಗೆ ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮಕ್ಕೆ ತೆರಳಿ, ಕೃಷಿ ಭಾಗ್ಯ ಯೋಜನೆ ಫಲಾನುಭವಿಯ ರೈತನ ಹೊಲಕ್ಕೆ ಭೇಟಿ ನೀಡುವರು.  11-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಕೃಷಿ ಭಾಗ್ಯ ಹಾಗೂ ಇತರೆ ಯೋಜನೆಗಳ ವಿವಿಧ ಘಟಕಗಳ ಪ್ರಯೋಜನ ಪಡೆದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಫಲಾನುಭವಿಗಳ ರಾಜ್ಯ ಮಟ್ಟದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮುಖ್ಯಮಂತ್ರಿಗಳು ಮಧ್ಯಾಹ್ನ 2-30 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ತೆರಳಿ ವಿಶೇಷ ವಿಮಾನ ಮೂಲಕ ಮೈಸೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.

ರೈತ ಫಲಾನುಭವಿಗಳ ಸಮಾವೇಶ : ಕೃಷಿಭಾಗ್ಯ ಯೋಜನೆ ಸಾಕ್ಷ್ಯಚಿತ್ರ ಆ. 29 ರಂದು ಬಿಡುಗಡೆ


ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆ. 29 ರಂದು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿರುವ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೃಷಿ ಭಾಗ್ಯ ಯೋಜನೆಯ ಯಶಸ್ಸು ಕುರಿತಂತೆ ತಯಾರಿಸಿರುವ ಕೃಷಿಭಾಗ್ಯ- ಸಾಕ್ಷ್ಯಚಿತ್ರ ಸಿ.ಡಿ. ಯನ್ನು ಆ. 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳದಲ್ಲಿ ಬಿಡುಗಡೆ ಮಾಡಲಿದ್ದಾರೆ.

     ರಾಜ್ಯದ ಒಣ ಬೇಸಾಯ ಅವಲಂಬಿತ ರೈತರು, ಮಳೆ ಕೊರತೆಯಾಗಿ ಸಂಕಷ್ಟ ಅನುಭವಿಸುವ ರೈತರ ನೆರವಿಗೆ ಬರಬೇಕೆಂಬ ಉದ್ದೇಶದಿಂದ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.  ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಕೃಷಿ ಹೊಂಡಗಳ ಮೂಲಕ ಸಂಗ್ರಹಿಸಿ, ಮಳೆಯ ಕೊರತೆ ಸಂದರ್ಭದಲ್ಲಿ ಈ ನೀರು ಉಪಯೋಗಿಸಿಕೊಂಡು, ಬೆಳೆ ಉಳಿಸಿಕೊಳ್ಳುವುದು, ಅದೇ ರೀತಿ ಪಾಲಿಹೌಸ್ ಘಟಕ ಮುಂತಾದ ಕಾರ್ಯಕ್ರಮಗಳು ರೈತರಿಗೆ ವರದಾನವಾಗಿ ಪರಿಣಮಿಸಿವೆ.  ಕೃಷಿಭಾಗ್ಯ ಯೋಜನೆಯ ಯಶಸ್ವಿ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾಕ್ಷ್ಯಚಿತ್ರವನ್ನು ತಯಾರಿಸಿದ್ದು, ಅದರ ಸಿಡಿ ಯನ್ನು ಆ. 29 ರಂದು ಕೊಪ್ಪಳದಲ್ಲಿ ಜರುಗಲಿರುವ ರೈತ ಫಲಾನುಭವಿಗಳ ಸಮಾವೇಶ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡುವರು.

ವಾರ್ತಾ ಇಲಾಖೆಯಿಂದ ವ್ಯಾಪಕ ಪ್ರಚಾರ : ಇದೇ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳ ಸಮಾವೇಶದ ಯಶಸ್ವಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಚಾರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ.  ಈಗಾಗಲೆ ಕಾರ್ಯಕ್ರಮ ಕುರಿತಂತೆ ಟಿ.ವಿ. ವಾಹಿನಿಗಳಲ್ಲಿ ಹಾಗೂ ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ವ್ಯಾಪಕ ಪ್ರಚಾರ ಕೈಗೊಂಡಿದೆ.  ಅದೇ ರೀತಿ ಕೊಪ್ಪಳದಲ್ಲಿ 10 ಕ್ಕೂ ಹೆಚ್ಚು ಹೆದ್ದಾರಿ ಫಲಕಗಳಲ್ಲಿಯೂ ಜಾಹೀರಾತು ಅಳವಡಿಸಿದೆ.  
ಚಂದನದಲ್ಲಿ ಕಿರುಚಿತ್ರ ಪ್ರಸಾರ :  ವಾರ್ತಾ ಇಲಾಖೆಯಿಂದ ರೂಪಿಸಿರುವ ಕೃಷಿ ಭಾಗ್ಯ ಯೋಜನೆಗೆ ಸಂಬಂಧಿತ ಕಿರು ಚಿತ್ರ  ಆ. 29 ರಂದು ದೂರದರ್ಶನದ ಚಂದನ ವಾಹಿನಿಯಲ್ಲಿ ಸಂಜೆ 6-45 ಗಂಟೆಯಿಂದ 07 ಗಂಟೆಯವರೆಗೆ ಪ್ರಸಾರವಾಗಲಿದ್ದು, ಸಾರ್ವಜನಿಕರು ಕಾರ್ಯಕ್ರಮವನ್ನು ಚಂದನ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.  ಅಲ್ಲದೆ ರಾಜ್ಯಾದ್ಯಂತ ಕೇಬಲ್ ನೆಟ್‍ವರ್ಕ್ ಮೂಲಕವೂ ಕೃಷಿಭಾಗ್ಯ ಕಿರು ಚಿತ್ರ ಪ್ರಸಾರವಾಗಲಿದೆ. 
ಕೃಷಿಭಾಗ್ಯ ಮಡಿಕೆ ಪತ್ರ ವಿತರಣೆ : ವಾರ್ತಾ ಇಲಾಖೆಯು ಕೃಷಿ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಹಾಗೂ ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿರುವ ಮಡಿಕೆ ಪತ್ರವನ್ನು ರೈತ ಸಮಾವೇಶ ಸಂದರ್ಭದಲ್ಲಿ ರೈತರಿಗೆ ವಿತರಿಸಲು ಇಲಾಖೆಯು ಕ್ರಮ ಕೈಗೊಂಡಿದೆ.
ಆಕರ್ಷಕ ವಸ್ತುಪ್ರದರ್ಶನ ಮಳಿಗೆ : ರಾಜ್ಯ ಸರ್ಕಾರ ಕೃಷಿಭಾಗ್ಯ ಯೋಜನೆ ಮೂಲಕ ರೈತರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿದ್ದು, ರೈತ ಬಾಂಧವರಿಗೆ ಸರಳವಾಗಿ ಯೋಜನೆಗಳ ಮಾಹಿತಿ ದೊರೆಯುವಂತೆ ಮಾಡಲು ವಾರ್ತಾ ಇಲಾಖೆಯು ರೈತ ಫಲಾನುಭವಿಗಳ ಸಮಾವೇಶ ನಡೆಯುವ ಮೈದಾನದಲ್ಲಿ ವಿಶೇಷ ಆಕರ್ಷಕ ವಸ್ತು ಪ್ರದರ್ಶನ ಮಳಿಗೆಯನ್ನು ಸ್ಥಾಪಿಸಿದ್ದು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ತಿಳಿಸಿದ್ದಾರೆ.

ಕೃಷಿ ಸಚಿವರಿಂದ ಸಮಾವೇಶದ ಅಂತಿಮ ಸಿದ್ಧತೆ ಪರಿಶೀಲನೆ


ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಇದೇ ಆ. 29 ರಂದು ಕೊಪ್ಪಳದಲ್ಲಿ ಜರುಗಲಿರುವ ಕೃಷಿ ಭಾಗ್ಯ ಯೋಜನೆ ರೈತ ಬಾಂಧವರಿಗೆ ಸಮರ್ಪಣೆ ಹಾಗೂ ಸ್ವಾವಲಂಬಿ-ಸ್ವಾಭಿಮಾನಿ ರೈತ ಸಮಾವೇಶ ಕಾರ್ಯಕ್ರಮದ ಅಂತಿಮ ಸಿದ್ಧತೆಯ ಕುರಿತು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಕೊಪ್ಪಳದಲ್ಲಿ ಪರಿಶೀಲನೆ ನಡೆಸಿದರು.

     ಕೊಪ್ಪಳ-ಹೊಸಪೇಟೆ ರಸ್ತೆಯಲ್ಲಿ ರೈತ ಸಮಾವೇಶಕ್ಕಾಗಿ ನಿರ್ಮಿಸಲಾಗಿರುವ ಬೃಹತ್ ವೇದಿಕೆ ಹಾಗೂ ವಿವಿಧ ಮಳಿಗೆಗಳು, ಊಟದ ಕೌಂಟರ್ ನಿರ್ಮಾಣ ಕುರಿತಂತೆ ಕೃಷಿ ಸಚಿವರು ಪರಿಶೀಲನೆ ನಡೆಸಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಭಾಗ್ಯ ಯೋಜನೆ ರಾಜ್ಯದಲ್ಲಿ ಸುಮಾರು 01 ಲಕ್ಷ ರೈತ ಕುಟುಂಬಗಳಿಗೆ ತಲುಪಿದೆ. ಸಮಾವೇಶಕ್ಕಾಗಿ 25 ರಿಂದ 30 ಸಾವಿರ ಆಸನ ವ್ಯವಸ್ಥೆ, ಕೃಷಿ ಯೋಜನೆಗಳ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ, ಬೃಹತ್ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಅವುಗಳ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ.  ಸಮಾವೇಶಕ್ಕೆ ಆಗಮಿಸುವ ರೈತರು ಕೇವಲ ಭಾಷಣ ಕೇಳಿಕೊಂಡು ಹೋಗುವುದಲ್ಲ, ಕೃಷಿ ಯೋಜನೆಗಳು, ಅದರ ಮಹತ್ವ, ಕೃಷಿ ಪದ್ಧತಿಯಲ್ಲಿ ಸುಧಾರಣೆ ತರುವಂತಹ ಯೋಜನೆಗಳ ಬಗ್ಗೆ ರೈತರು ಅರಿವನ್ನು ಪಡೆದುಕೊಂಡು ಹೋಗುವ ರೀತಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ.  ಮುಖ್ಯಮಂತ್ರಿಗಳು ಆ. 29 ರಂದು ಬೆಳಿಗ್ಗೆ 10-30 ಗಂಟೆಗೆ ಟಣಕನಲ್ ಗ್ರಾಮಕ್ಕೆ ತೆರಳಿ, ಕೃಷಿ ಭಾಗ್ಯ ಯೋಜನೆಯ ಸವಲತ್ತು ಪಡೆದು, ತೊಗರಿ ಬೆಳೆಯನ್ನು ಉಳಿಸಿಕೊಂಡು, ಉತ್ತಮವಾಗಿ ಬೆಳೆ ಪಡೆಯುತ್ತಿರುವ ರೈತನ ಹೊಲಕ್ಕೆ ಖುದ್ದು ಭೇಟಿ ನೀಡಿ, ರೈತನೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.  ನಂತರ ನೇರವಾಗಿ ಕೊಪ್ಪಳದಲ್ಲಿನ ರೈತ ಸಮಾವೇಶದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.


      ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಸೇರಿದಂತೆ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Saturday, 27 August 2016

ರೈತ ಫಲಾನುಭವಿಗಳ ಸ್ವಾಗತಕ್ಕೆ ಸಜ್ಜಾಗುತ್ತಿರುವ ಕೊಪ್ಪಳ ನಗರ



ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದಲ್ಲಿಯೇ ಇದೇ ಮೊಟ್ಟ ಮೊದಲ ಬಾರಿಗೆ ಆ. 29 ರಂದು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿರುವ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶಕ್ಕೆ ರೈತರನ್ನು ಸ್ವಾಗತಿಸಲು ಕೊಪ್ಪಳ ನಗರ ಸಜ್ಜಾಗುತ್ತಿದೆ.

     ಕೊಪ್ಪಳ-ಹೊಸಪೇಟೆ ರಸ್ತೆಯಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಜ್ಜಾಗುತ್ತಿದೆ.  ಉತ್ತರ ಕರ್ನಾಟಕದ 12 ಜಿಲ್ಲೆಗಳ ಸುಮಾರು 25 ರಿಂದ 30 ಸಾವಿರ ರೈತ ಫಲಾನುಭವಿಗಳು ಆ. 29 ರಂದು ಕೊಪ್ಪಳ ನಗರದತ್ತ ಮುಖ ಮಾಡಲಿದ್ದಾರೆ.  ಈ ಎಲ್ಲ ಜಿಲ್ಲೆಗಳ ರೈತರ ಚಿತ್ತ ಕೊಪ್ಪಳದತ್ತ ನೆಟ್ಟಿದೆ.  ಕೃಷಿ ಭಾಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರ 2014-15 ನೇ ಸಾಲಿನಿಂದ ಜಾರಿಗೆ ತಂದಿದ್ದು, ರಾಜ್ಯದ 25 ಜಿಲ್ಲೆಗಳ 131 ತಾಲೂಕುಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ.  ಈ ಯೋಜನೆಯಡಿ ಮಳೆ ನೀರಿನ ಸಮರ್ಥ ಬಳಕೆ ಮತ್ತು ಸಂರಕ್ಷಿತ ಕೃಷಿಗೆ ಆದ್ಯತೆ ನೀಡಿದ್ದು, ಜಮೀನಿನಲ್ಲಿ ಮಳೆ ನೀರು ಕೊಯ್ಲು, ನೀರಿನ ಸಂಗ್ರಹಣೆ, ನೀರು ಎತ್ತಿವಿಕೆ, ಲಘು ನೀರಾವರಿ, ಉತ್ತಮ ಆದಾಯ ತರುವ ತೋಟಗಾರಿಕೆ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ಕೃಷಿ ಭಾಗ್ಯ ಯೋಜನೆ ಒಳಗೊಂಡಿದೆ.  ಒಟ್ಟಾರೆಯಾಗಿ ಮಳೆಯಾಶ್ರಿತ ಕೃಷಿಯನ್ನು ಸಂರಕ್ಷಿತ ನೀರಾವರಿ ಮೂಲಕ ಸುಸ್ಥಿರ ಕೃಷಿಗೆ ಪರಿವರ್ತಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.  ಈ ಯೋಜನೆಯ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆ ಉತ್ತಮ ಸಾಧನೆ ತೋರಿದ್ದು, ಈ ಹಿಂದೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರು ಕೊಪ್ಪಳ ಜಿಲ್ಲೆಯಲ್ಲಿನ ಯೋಜನೆಯ ಯಶಸ್ವಿ ಅನುಷ್ಠಾನ ಹಾಗೂ ಸಾಫಲ್ಯತೆಯನ್ನು ಗಮನಿಸಿದ್ದರು.  ಈ ಹಿನ್ನೆಲೆಯಲ್ಲಿ ಕೊಪ್ಪಳ ದಲ್ಲಿಯೇ ರೈತ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಬೇಕೆನ್ನುವುದು ಮುಖ್ಯಮಂತ್ರಿಗಳು, ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಆಶಯವಾಗಿದೆ.   


      ಈಗಾಗಲೆ ಕೊಪ್ಪಳ-ಹೊಸಪೇಟೆ ರಸ್ತೆಯಲ್ಲಿನ ಬೃಹತ್ ಮೈದಾನದಲ್ಲಿ ಸಮಾವೇಶಕ್ಕಾಗಿ ಈಗಾಗಲೆ ಪೆಂಡಾಲ್ ನಿರ್ಮಾಣ ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದ್ದು, ಪೆಂಡಾಲ್ ಅಕ್ಕ-ಪಕ್ಕದಲ್ಲಿ ಹಲವಾರು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ರೈತ ಸಮಾವೇಶ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಸರ್ಕಾರದ ಸಾಧನೆಯನ್ನು ಬಿಂಬಿಸಲಿದ್ದು, ರೈತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲಿವೆ.  ಬೃಹತ್ ಪೆಂಡಾಲ್ ವೇದಿಕೆಯ ಇನ್ನೊಂದು ಬದಿಯಲ್ಲಿ, ಕೃಷಿ ಹೊಂಡದ ಮಹತ್ವ ಹಾಗೂ ಉಪಯುಕ್ತತೆ ಹಾಗೂ ಮಳೆ ವಿಫಲಗೊಂಡಾಗ ಕೃಷಿ ಹೊಂಡಗಳನ್ನು ಬಳಸಿ ಬೆಳೆ ರಕ್ಷಿಸಿಕೊಳ್ಳುವ ಕುರಿತು, ನೂತನ ತಂತ್ರಜ್ಞಾನದ ಆಧುನಿಕ ಭತ್ತ ನಾಟಿ ಯಂತ್ರಗಳ ಬಳಕೆ, ಬೃಹತ್ ಕೃಷಿ ಯಂತ್ರೋಪಕರಣಗಳ ಬಳಕೆ ಕುರಿತಂತೆ ರೈತರಿಗೆ ಲೈವ್ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ದೊರೆಯಲಿದೆ.  ಇದರ ಜೊತೆಗೆ ಸಮಾವೇಶದ ಸ್ಥಳದಲ್ಲಿ ಗ್ರಾಮದ ಮಾದರಿಯನ್ನು ನಿರ್ಮಿಸಲಾಗುತ್ತಿದ್ದು, ಜಲಾನಯನ ಬಳಕೆ, ನಾಲಾ ಬಂಡ್, ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಾಣ, ಅರಣ್ಯೀಕರಣ ಮುಂತಾದ ಮಾದರಿಯನ್ನು ಇಲ್ಲಿ ರೈತರಿಗೆ ಮಾಹಿತಿ ನೀಡಲು ಅಳವಡಿಸಲಾಗುತ್ತಿದೆ.

ಬಿರುಸುಗೊಂಡ ಪ್ರಚಾರ : ರೈತ ಫಲಾನುಭವಿಗಳ ಸಮಾವೇಶ ಕುರಿತಂತೆ ಮಾಧ್ಯಮಗಳಲ್ಲಿ ಪೂರಕವಾಗಿ ವ್ಯಾಪಕ ಪ್ರಚಾರ ದೊರೆಯುತ್ತಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೊಪ್ಪಳ ನಗರದಲ್ಲಿ ಸುಮಾರು 10 ಕ್ಕೂ ಹೆಚ್ಚು ಹೆದ್ದಾರಿ ಫಲಕಗಳಲ್ಲಿ ಕೃಷಿ ಭಾಗ್ಯ ಯೋಜನೆ ಸಮರ್ಪಣೆ, ಹಾಗೂ ಸ್ವಾವಲಂಬಿ, ಸ್ವಾಭಿಮಾನ ರೈತ ಸಮಾವೇಶಕ್ಕೆ ಬನ್ನಿ ಎಂಬ ಘೋಷ ವಾಕ್ಯದೊಂದಿಗೆ ರೈತರನ್ನು ಆಹ್ವಾನಿಸುತ್ತಿದೆ. 
ವಾರ್ತಾ ಇಲಾಖೆಯಿಂದ ವಸ್ತುಪ್ರದರ್ಶನ ಮಳಿಗೆ : ರೈತ ಫಲಾನುಭವಿಗಳ ಸಮಾವೇಶಕ್ಕೆ 25 ರಿಂದ 30 ಸಾವಿರಕ್ಕೂ ಹೆಚ್ಚು ರೈತರು ಒಂದೆಡೆ ಸೇರಲಿದ್ದು, ಇದೇ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವೇದಿಕೆಯ ಮೈದಾನಕ್ಕೆ ಆಗಮಿಸುವ ಸ್ಥಳದಲ್ಲಿಯೇ 40*20 ಅಡಿ ಅಳತೆಯಲ್ಲಿ ವಸ್ತು ಪ್ರದರ್ಶನ ಮಳಿಗೆಯನ್ನು ನಿರ್ಮಿಸುತ್ತಿದ್ದು, ಕೃಷಿ ಭಾಗ್ಯವೂ ಸೇರಿದಂತೆ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಕ್ರಮ ಕೈಗೊಂಡಿದೆ.  ಇದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಮಡಿಕೆ ಪತ್ರಗಳನ್ನು ವಸ್ತು ಪ್ರದರ್ಶನ ಮಳಿಗೆಯಲ್ಲಿರಿಸಿ, ಸಾರ್ವಜನಿಕರಿಗೆ ವಿತರಿಸಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ.
ಸಜ್ಜಾಗುತ್ತಿರುವ ಕೊಪ್ಪಳ ನಗರ : ರೈತ ಫಲಾನುಭವಿಗಳ ಸಮಾವೇಶ ಉದ್ಘಾಟನೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ. 29 ರಂದು ಕೊಪ್ಪಳ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ರಸ್ತೆಯಲ್ಲಿ ಉಂಟಾಗಿದ್ದ ತೆಗ್ಗುಗಳನ್ನು ಡಾಂಬರೀಕರಣ ಕಾಮಗಾರಿ ಮೂಲಕ ಮುಚ್ಚಿ ಸಮತಟ್ಟುಗೊಳಿಸುವ ಕಾರ್ಯವೂ ನಡೆದಿದೆ.
     ಆ. 29 ರಂದು ಕೊಪ್ಪಳದಲ್ಲಿ ಜರುಗಲಿರುವ ರೈತ ಫಲಾನುಭವಿಗಳ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿಶೇಷ ಕಾಳಜಿ ವಹಿಸಿ, ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸುತ್ತಿದ್ದು, ವಿವಿಧ ಇಲಾಖಾಧಿಕಾರಿಗಳು ಸಮಾವೇಶ ಮುಕ್ತಾಯವಾಗುವವರೆಗೂ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಲಸಂಪನ್ಮೂಲ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆ. 27 (ಕರ್ನಾಟಕ ವಾರ್ತೆ): ರಾಜ್ಯ ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ ನೀರಾವರಿ) ಸಚಿವ ಎಂ.ಬಿ. ಪಾಟೀಲ್ ಅವರು ಆ. 29 ರಂದು ಕೊಪ್ಪಳ ಜಿಲ್ಲೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ ವಿಜಯಪುರದಿಂದ ಹೊರಟು ಬೆ. 11 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಕೊಪ್ಪಳದಲ್ಲಿ ಕೃಷಿ ಭಾಗ್ಯ ಹಾಗೂ ಇತರೆ ಯೋಜನೆಗಳ ವಿವಿಧ ಘಟಕಗಳ ಪ್ರಯೋಜನ ಪಡೆದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಫಲಾನುಭವಿಗಳ ರಾಜ್ಯ ಮಟ್ಟದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಸಚಿವರು ಮಧ್ಯಾಹ್ನ 2-30 ಗಂಟೆಗೆ ಮುಖ್ಯಮಂತ್ರಿಗಳೊಂದಿಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ತೆರಳಿ ವಿಶೇಷ ವಿಮಾನ ಮೂಲಕ ಮೈಸೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ರೈತ ಫಲಾನುಭವಿಗಳಿಗೆ ಸೌಜನ್ಯಯುತ ಒಳ್ಳೆಯ ಆತಿಥ್ಯ ನೀಡಿ- ಡಿ.ಸಿ. ಕನಗವಲ್ಲಿ ಸೂಚನೆ


ಕೊಪ್ಪಳ ಆ. 27 (ಕರ್ನಾಟಕ ವಾರ್ತೆ): ಕೃಷಿ ಭಾಗ್ಯ ಯೋಜನೆ ಸಮರ್ಪಣೆ, ಹಾಗೂ ಸ್ವಾವಲಂಬಿ, ಸ್ವಾಭಿಮಾನ ರೈತ ಸಮಾವೇಶಕ್ಕಾಗಿ ಕೊಪ್ಪಳ ಜಿಲ್ಲೆಗೆ ಆ. 29 ರಂದು ಆಗಮಿಸುತ್ತಿರುವ ಉತ್ತರ ಕರ್ನಾಟಕದ ಜಿಲ್ಲೆಗಳ ರೈತರಿಗೆ ಕೊಪ್ಪಳದಲ್ಲಿ ಎಲ್ಲ ಅಧಿಕಾರಿಗಳು, ಪೊಲೀಸರು, ಸಿಬ್ಬಂದಿಗಳು ಸೌಜನ್ಯಯುತ ಆತಿಥ್ಯ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತ ಫಲಾನುಭವಿಗಳ ಸಮಾವೇಶದ ಅಂತಿಮ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದಲ್ಲಿಯೇ ಇದೇ ಮೊಟ್ಟ ಮೊದಲ ಬಾರಿಗೆ ಆ. 29 ರಂದು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿರುವ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶಕ್ಕೆ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತರು ಕೊಪ್ಪಳಕ್ಕೆ ಆಗಮಿಸುತ್ತಿದ್ದಾರೆ. ಜಿಲ್ಲೆಗೆ ಬರುವ ರೈತರು ಕೊಪ್ಪಳ ಜಿಲ್ಲೆಯ ಅತಿಥಿಗಳಾಗಿರುವುದರಿಂದ, ರೈತರೊಂದಿಗೆ ಜಿಲ್ಲೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸರು ಸೌಜನ್ಯಯುತವಾಗಿ ವರ್ತಿಸಬೇಕು. ಒಳ್ಳೆಯ ಮಾತುಗಳನ್ನಾಡಿ, ಒಳ್ಳೆಯ ಆತಿಥ್ಯ ನೀಡಿ. ಜಿಲ್ಲೆಯಿಂದ ತೆರಳುವ ರೈತರು, ಕೊಪ್ಪಳದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಕಟ್ಟಿಕೊಂಡು ತೆರಳುವಂತಾಗಬೇಕು. ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಮತ್ತಿತರೆ ಇಲಾಖೆಗಳು ಕೃಷಿಕರಿಗಾಗಿ ಇರುವ ಯೋಜನೆಗಳ ಬಗ್ಗೆ ಹಾಗೂ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳುವ ಬಗೆಯನ್ನು ತಾಂತ್ರಿಕತೆಯ ವಿವರದೊಂದಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾನುವಾರವೇ ಸಿದ್ಧತೆ ಪೂರ್ಣಗೊಳಿಸಿ : ರೈತ ಫಲಾನುಭವಿಗಳ ಸಮಾವೇಶಕ್ಕೆ ಈಗಾಗಲೆ ಕೊಪ್ಪಳ-ಹೊಸಪೇಟೆ ರಸ್ತೆಯಲ್ಲಿನ ವಿಶಾಲವಾದ ಮೈದಾನದಲ್ಲಿ ಬೃಹತ್ ವೇದಿಕೆ, ಪ್ರಾತ್ಯಕ್ಷಿಕೆಯ ಮೈದಾನ, ಮಳಿಗೆಗಳು ಸೇರಿದಂತೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವರು ಹಾಗೂ ಕೃಷಿ ಸಚಿವರು ಭಾನುವಾರದಂದು ಕೊಪ್ಪಳಕ್ಕೆ ಆಗಮಿಸಿ, ಸಮಾವೇಶದ ಅಂತಿಮ ಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ. ಹೀಗಾಗಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಭಾನುವಾರದಂದು ಸಮಾವೇಶ ಸ್ಥಳಕ್ಕೆ ಆಗಮಿಸಿ, ತಮಗೆ ವಹಿಸಿರುವ ಜವಾಬ್ದಾರಿಯ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಭಾನುವಾರದಂದೇ ಸಮಾವೇಶದ ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಮರ್ಪಕ ಊಟದ ವ್ಯವಸ್ಥೆಗೆ ಸೂಚನೆ :
*****************ರೈತ ಫಲಾನುಭವಿಗಳ ಸಮಾವೇಶಕ್ಕೆ ಉತ್ತರ ಕರ್ನಾಟಕದ 12 ಜಿಲ್ಲೆಗಳ ಸುಮಾರು 25 ರಿಂದ 30 ಸಾವಿರ ರೈತರು ಜಿಲ್ಲೆಗೆ ಆಗಮಿಸಲಿದ್ದು, ಸಮಾವೇಶದ ಸ್ಥಳಕ್ಕೆ ಹತ್ತಿರದಲ್ಲಿ ಎಲ್ಲ ರೈತರಿಗೆ ಸಮರ್ಪಕವಾಗಿ ಊಟದ ವ್ಯವಸ್ಥೆ ಕೈಗೊಳ್ಳಬೇಕು. ವ್ಯವಸ್ಥೆಯು ಅಚ್ಚುಕಟ್ಟಾಗಿರಬೇಕು. ಒಳ್ಳೆಯ ಊಟ ಒದಗಿಸಬೇಕು. ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಗೊಳಿಸಬೇಕು. ಇದಕ್ಕಾಗಿ ಊಟ ಪೂರೈಕೆಯ ಕನಿಷ್ಟ 80 ರಿಂದ 100 ಕೌಂಟರ್‍ಗಳನ್ನು ಸ್ಥಾಪಿಸಿ, ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಪೊಲೀಸ್ ಬಂದೋಬಸ್ತ್ :
***************ಸಮಾವೇಶ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಫಲಾನುಭವಿಗಳು ಹಾಗೂ ಸಾರ್ವಜನಿಕರು ಸೇರುವುದರಿಂದ, ಜನರಿಗೆ ಯಾವುದೇ ಗೊಂದಲ ಉಂಟಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ವಾಹನ ಸಂಚಾರ ದಟ್ಟಣೆಯಾಗಿ ಟ್ರಾಫಿಕ್‍ಜಾಮ್ ಆಗದಂತೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾದಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಆ.29 ರಂದು ರೈತ ಫಲಾನುಭವಿಗಳ ಸಮಾವೇಶ : ಸಂಚಾರ ಮಾರ್ಗ ಬದಲಾವಣೆ

ಕೊಪ್ಪಳ, ಆ.27 (ಕರ್ನಾಟಕ ವಾರ್ತೆ) : ಕೃಷಿ ಭಾಗ್ಯ ಯೋಜನೆ ಸಮರ್ಪಣೆ, ಹಾಗೂ ಸ್ವಾವಲಂಬಿ, ಸ್ವಾಭಿಮಾನ ರೈತ ಸಮಾವೇಶ ಕೊಪ್ಪಳ ನಗರದಲ್ಲಿ ಆ.29 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆಯು ಕೆಲವೊಂದು ಸಂಚಾರ ಮಾರ್ಗಗಳ ಬದಲಾವಣೆ ಮಾಡಿದೆ.
ರೈತ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮಕ್ಕೆ ಆ. 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಅಲ್ಲದೆ ಕೊಪ್ಪಳ ನಗರದ ಹೊರವಲಯದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಂದು 12 ಜಿಲ್ಲೆಗಳ ರೈತ ಫಲಾನುಭವಿಗಳು ವಾಹನಗಳ ಮೂಲಕ ಆಗಮಿಸುತ್ತಿರುವುದರಿಂದ ಕೊಪ್ಪಳದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯು ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿದೆ.
ಸಮಾರಂಭಕ್ಕೆ ಆಗಮಿಸುವ ವಾಹನಗಳು ನಿಗದಿಪಡಿಸುವ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಸೂಚನೆ ನೀಡಲಾಗಿದೆ.
ಮಾರ್ಗ ಬದಲಾವಣೆ ವಿವರ ಇಂತಿದೆ:
******************ಆ.29 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಮಾರಂಭಕ್ಕೆ ಆಗಮಿಸುವ ವಾಹನಗಳನ್ನು ಹೊರತುಪಡಿಸಿ ಹೊಸಪೇಟೆ ಕಡೆಯಿಂದ ಗದಗ ಮತ್ತು ಯಲಬುರ್ಗಾ ಕಡೆಗೆ ಸಂಚರಿಸುವ ಭಾರಿ ವಾಹನಗಳು, ಗಿಣಿಗೇರಾ ಬೈ-ಪಾಸ್ ರಸ್ತೆ ಮೂಲಕ ಬಗಾನಾಳ, ಸಿಂದೋಗಿ ಮಾರ್ಗವಾಗಿ ಹಲಗೇರಿ ಕಡೆಯಿಂದ ಪ್ರಯಾಣಿಸಬೇಕು. ಗದಗ ಮತ್ತು ಯಲಬುರ್ಗಾ ಕಡೆಯಿಂದ ಹೊಸಪೇಟೆ ಮತ್ತು ಗಂಗಾವತಿ ಕಡೆಗೆ ಸಂಚರಿಸುವ ಭಾರಿ ವಾಹನಗಳು, ಹಲಗೇರಿ ಕ್ರಾಸ್‍ನಿಂದ ಸಿಂದೋಗಿ, ಬಗನಾಳ ಮತ್ತು ಗಿಣಿಗೇರಾ ಮಾರ್ಗವಾಗಿ ಪ್ರಯಾಣಿಸಬೇಕು. ಬೀದರ್ ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ, ಬಾಗಲಕೋಟ ಕಡೆಯಿಂದ ಸಮಾರಂಭ ಸ್ಥಳಕ್ಕೆ ಆಗಮಿಸುವ ಕೆಎಸ್‍ಆರ್‍ಟಿಸಿ ಬಸ್ಸುಗಳು ಹಾಗೂ ಇತರೆ ವಾಹನಗಳು ಗಿಣಿಗೇರಾ ಕ್ರಾಸ್ ಹೈವೇ ಮುಖಾಂತರ ಆಗಮಿಸಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಕು. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಂದ ಸಮಾರಂಭಕ್ಕೆ ಆಗಮಿಸುವ ಕೆಎಸ್‍ಆರ್‍ಟಿಸಿ ಬಸ್ಸುಗಳು ಹಾಗೂ ಇತರೆ ವಾಹನಗಳು ಹಲಗೇರಿ ಕ್ರಾಸ್‍ನಿಂದ ಸಿಂದೋಗಿ, ಬಗನಾಳ ಮತ್ತು ಗಿಣಿಗೇರಾ ಮಾರ್ಗವಾಗಿ ಪ್ರಯಾಣಿಸಿ, ಸಮಾರಂಭದ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಂದ ಸಮಾರಂಭಕ್ಕೆ ಬರುವ ಲಘು ವಾಹನಗಳು (ನಾಲ್ಕು ಚಕ್ರ ವಾಹನಗಳು) ಕೊಪ್ಪಳ ನಗರ ದಾಟಿ ಅಭಯ ಸಾಲ್ವೆಂಟ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಗದಗ ಕಡೆಯಿಂದ ಹೊಸಪೇಟೆ, ಗಂಗಾವತಿ ಕಡೆಗೆ ಸಂಚರಿಸುವ ಕೆಎಸ್‍ಆರ್‍ಟಿಸಿ ಸಾರಿಗೆ ವಾಹನಗಳು ಹಾಗೂ ಲಘು ವಾಹನಗಳು ಕಿಡದಾಳ, ಬಸಾಪೂರ, ಗಿಣಿಗೇರ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ವಾಹನಗಳ ಪಾರ್ಕಿಂಗ್ ಸ್ಥಳದ ಮಾಹಿತಿ:
*****************ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೆ ಸಂಬಂಧಿಸಿದಂತೆ, ಹೊಸಪೇಟೆ ಕಡೆಯಿಂದ ಸಮಾವೇಶಕ್ಕೆ ಆಗಮಿಸುವ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಲಘು ವಾಹನಗಳು ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-63 ರಲ್ಲಿ ಸಮಾವೇಶ ಸ್ಥಳದ ಎದುರುಗಡೆ ಜಾಗೆಯಲ್ಲಿ ಬೇವಿನಾಳ ಕ್ರಾಸ್ ಹತ್ತಿರ ಪಾರ್ಕಿಂಗ್ ಮಾಡಬೇಕು. ಗದಗ ಕಡೆಯಿಂದ ಆಗಮಿಸುವ ಲಘು ವಾಹನಗಳಿಗೆ ಕೊಪ್ಪಳ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-63 ರಲ್ಲಿ ಬರುವ ಫಿಶ್ ಲ್ಯಾಂಡ್ ಡಾಬಾ ಪಕ್ಕದ ಬಯಲು ಜಾಗೆಯಲ್ಲಿ ಹಾಗೂ ಅಭಯ್ ಸಾಲ್ವೆಂಟ್ ಎದುರುಗಡೆಯ ಚರ್ಚ್ ಪಕ್ಕದ ಲೇಔಟ್ ಜಾಗೆ ಮತ್ತು ಆರ್‍ಟಿಓ ಕಛೇರಿ ಪಕ್ಕದ ಬಯಲು ಜಾಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಚುನಾಯಿತ ಪ್ರತಿನಿಧಿಗಳ ವಾಹನಗಳ ಪಾರ್ಕಿಂಗ್ ಸ್ಥಳದ ವಿವರ:
******************ಚುನಾಯಿತ ಪ್ರತಿನಿಧಿಗಳ ವಾಹನಗಳಿಗೆ ಸಮಾವೇಶ ಸ್ಥಳದ ಹತ್ತಿರ ಬಲಬಾಗದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿಗಳು ಹಮ್ಮಿಕೊಳ್ಳಲಿರುವ ಜನ ಸ್ಪಂದನ ಕಾರ್ಯಕ್ರಮದ ಸ್ಥಳ:
********************ಜಿಲ್ಲಾಧಿಕಾರಿಗಳ ಕಛೇರಿ ಮುಖ್ಯದ್ವಾರದ ಪಕ್ಕದ ಜಾಗೆಯಲ್ಲಿ ಸ್ಥಳ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಆ.29 ರಂದು ಮದ್ಯಾಹ್ನ 2 ಗಂಟೆಗೆ ಅಹವಾಲು ಸಲ್ಲಿಸಬಹುದು ಎಂದು ಕೊಪ್ಪಳ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

Friday, 26 August 2016

ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆ. 29 ರಂದು ಕೊಪ್ಪಳ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಹೊರಟು, ಬೆಳಿಗ್ಗೆ 10-50 ಗಂಟೆಗೆ ಕೊಪ್ಪಳ ತಾಲೂಕು ಗಿಣಿಗೇರಾ ಏರ್‍ಸ್ಟ್ರಿಪ್ ಗೆ (ಎಂಎಸ್‍ಪಿಎಲ್ ವಿಮಾನ ನಿಲ್ದಾಣ) ಆಗಮಿಸುವರು.  ನಂತರ ಕೊಪ್ಪಳದಲ್ಲಿ ಕೃಷಿ ಭಾಗ್ಯ ಹಾಗೂ ಇತರೆ ಯೋಜನೆಗಳ ವಿವಿಧ ಘಟಕಗಳ ಪ್ರಯೋಜನ ಪಡೆದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಫಲಾನುಭವಿಗಳ ರಾಜ್ಯ ಮಟ್ಟದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮುಖ್ಯಮಂತ್ರಿಗಳು ಮಧ್ಯಾಹ್ನ 2-30 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ತೆರಳಿ ವಿಶೇಷ ವಿಮಾನ ಮೂಲಕ ಮೈಸೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಸಹಕಾರ ಮತ್ತು ಸಕ್ಕರೆ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ರಾಜ್ಯ ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ಅವರು ಆ. 29 ರಂದು ಕೊಪ್ಪಳಕ್ಕೆ ಆಗಮಿಸುವರು.
     ಸಚಿವರು ಅಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಮುಖ್ಯಮಂತ್ರಿಗಳೊಂದಿಗೆ ವಿಶೇಷ ವಿಮಾನದಲ್ಲಿ ಹೊರಟು, ಬೆಳಿಗ್ಗೆ 10-50 ಗಂಟೆಗೆ ಕೊಪ್ಪಳ ತಾಲೂಕು ಗಿಣಿಗೇರಾ ಏರ್‍ಸ್ಟ್ರಿಪ್ ಗೆ (ಎಂಎಸ್‍ಪಿಎಲ್ ವಿಮಾನ ನಿಲ್ದಾಣ) ಆಗಮಿಸುವರು.  ನಂತರ ಕೊಪ್ಪಳದಲ್ಲಿ ಕೃಷಿ ಭಾಗ್ಯ ಹಾಗೂ ಇತರೆ ಯೋಜನೆಗಳ ವಿವಿಧ ಘಟಕಗಳ ಪ್ರಯೋಜನ ಪಡೆದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಫಲಾನುಭವಿಗಳ ರಾಜ್ಯ ಮಟ್ಟದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಸಚಿವರು ಮಧ್ಯಾಹ್ನ 2-30 ಗಂಟೆಗೆ ಮುಖ್ಯಮಂತ್ರಿಗಳೊಂದಿಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ತೆರಳಿ ವಿಶೇಷ ವಿಮಾನ ಮೂಲಕ ಮೈಸೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ, ಆ.25 (ಕರ್ನಾಟಕ ವಾರ್ತೆ) : ಪರಿಶಿಷ್ಟ ವರ್ಗದ ಜನರಿಗೆ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳಿಗೆ ಮಹರ್ಷಿ ವಾಲ್ಮೀಕಿ ಜಯಂತಿಯಂದು ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯ ಮಟ್ಟದಲ್ಲಿ ನೀಡಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಪ್ರಶಸ್ತಿಯನ್ನು ಅಕ್ಟೋಬರ್ 15 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯಂದು ವಿತರಿಸಲಾಗುವುದು. ಅರ್ಜಿ ಸಲ್ಲಿಸುವವರು ಕನಿಷ್ಟ 35 ವರ್ಷ ಆಗಿರಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರಬಾರದು. ಪ್ರಶಸ್ತಿಯು 20 ಗ್ರಾಂ ಬಂಗಾರದ ಪದಕ, ಪ್ರಶಂಸಾ ಪತ್ರ, ಶಾಲು, ಗಂಧದ ಹಾರ, ಫಲಪುಷ್ಪ ಹಾಗೂ ರೂ.5 ಲಕ್ಷ ನಗದನ್ನೊಳಗೊಂಡಿರುತ್ತದೆ. ಕೊಪ್ಪಳ ಜಿಲ್ಲೆಯಿಂದ ಒಬ್ಬರನ್ನು ಮಾತ್ರ ಶಿಫಾರಸ್ಸು ಮಾಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ ವಯಸ್ಸಿನ ಆಧಾರದ ಮೇಲೆ ಶಿಫಾರಸ್ಸು ಮಾಡಿ ರಾಜ್ಯಮಟ್ಟದ ಆಯ್ಕೆ ಸಮಿತಿಗೆ ಸಲ್ಲಿಸಲಾಗುವುದು. ಆಯ್ಕೆ ಮಾಡಲಾಗುವ ವ್ಯಕ್ತಿಯು ಸಾಮಾಜಿಕ ಕ್ಷೇತ್ರದಲ್ಲಿ, ಮುಖ್ಯವಾಗಿ ಪರಿಶಿಷ್ಟ ವರ್ಗದ ಜನರಿಗೆ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದು, ಜನಸಾಮಾನ್ಯರಲ್ಲಿ ಸ್ವಯಂಸೇವಕರಾಗಿ ಮಾನ್ಯತೆ, ಕೀರ್ತಿ, ಪ್ರಖ್ಯಾತಿ ಹೊಂದಿರಬೇಕು. ಸಾಧನೆ ಮಾಡಿರುವ ಕುರಿತ ದಾಖಲಾತಿ ಹೊಂದಿರಬೇಕು. ಪ್ರಮುಖವಾಗಿ ಪರಿಶಿಷ್ಟ ವರ್ಗದವರ ಶೈಕ್ಷಣಿಕ ಪ್ರಗತಿ ಹಾಗೂ ಆರ್ಥಿಕವಾಗಿ ಸಧೃಢಗೊಳಿಸಲು ಸ್ವಯಂ ಪ್ರೇರಣೆಯಿಂದ ದುಡಿಯುವ ವ್ಯಕ್ತಿಯಾಗಿರಬೇಕು. ಪರಿಶಿಷ್ಟ ಪಂಗಡಗಳ ಮೇಲೆ ನಡೆಯುವ ದೌರ್ಜನ್ಯ ಇವುಗಳ ನಿರ್ಮೂಲನೆ ಹಾಗೂ ಸಮಾಜದಲ್ಲಿ ಸಾಮರಸ್ಯ ವಾತಾವರಣ ಮೂಡಿಸುವುದು ಅಥವಾ ದೌರ್ಜನ್ಯ ನಿಯಂತ್ರಿಸಲು ಸಹಕಾರಿಯಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಶ್ರಮಿಸುವ ವ್ಯಕ್ತಿಯಾಗಿರಬೇಕು. ಮಹರ್ಷಿ ವಾಲ್ಮೀಕಿ ಅವರ ತತ್ವ ಹಾಗೂ ಆದರ್ಶಗಳನ್ನು ಸಾಕಾರಗೊಳಿಸುವಂತಹ ಯಾವುದೇ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪರಿಶಿಷ್ಟ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸುವ ವ್ಯಕ್ತಿಯಾಗಿರಬೇಕು.
     ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರು/ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆ.27 ರೊಳಗಾಗಿ ಸಲ್ಲಿಸಬಹುದು.  ಹೆಚ್ಚಿನ ವಿವರಗಳನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಕೊಪ್ಪಳ ಇವರಿಂದ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಕೊಪ್ಪಳ ತಾಲೂಕಿನ ಗ್ರಾಮ ಪಂಚಾಯತಿಗಳ ಜಮಾಬಂದಿ ದಿನಾಂಕ ನಿಗದಿ

ಕೊಪ್ಪಳ, ಆ.26 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ 2015-16 ನೇ ಸಾಲಿನ ಜಮಾಬಂದಿ ನಡೆಸಲಾಗುವ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
       ಜಮಾಬಂದಿ ನಡೆಸಲಾಗುವ ದಿನಾಂಕ ಹಾಗೂ ಗ್ರಾ.ಪಂಗಳ ವಿವವರ ಇಂತಿದೆ.   ಆ. 29 ರಂದು ಅಳವಂಡಿ, ಕಾತರಕಿ ಗುಡ್ಲಾನೂರ. ಆ.30 ರಂದು ಬೆಟಗೇರಿ, ಕೋಳೂರು, ಆ.31 ರಂದು ಬೋಚನಳ್ಳಿ, ಬಿಸರಳ್ಳಿ. ಸೆ.1 ರಂದು ಲೇಬಗೇರಿ, ಇರಕಲ್‍ಗಡಾ. ಮುನಿರಾಬಾದ್ ಡ್ಯಾಂ.  ಸೆ.2 ರಂದು ಬಹದ್ದೂರಬಂಡಿ, ಚಿಕ್ಕಬೊಮ್ಮನಾಳ, ಹಾಲವರ್ತಿ, ಕಲ್‍ತಾವರಗೇರಾ. ಸೆ. 3 ರಂದು ಬೂದಗುಂಪಾ, ಗಿಣಿಗೇರಾ, ಕುಣಿಕೇರಿ. ಸೆ.6 ರಂದು  ಗೊಂಡಬಾಳ, ಹಟ್ಟಿ, ಓಜಿನಹಳ್ಳಿ. ಬಂಡಿಹರ್ಲಾಪುರ.  ಸೆ. 7 ರಂದು ಹಾಸಗಲ್, ಹಿರೇಬಗಾನಾಳ, ಮತ್ತೂರು, ಗುಳದಳ್ಳಿ. ಸೆ.8 ರಂದು ಹಿರೇಸಿಂದೋಗಿ, ಹಲಗೇರಿ, ಅಗಳಕೇರಾ, ಹುಲಗಿ. ಸೆ.13 ರಂದು ಹೊಸಹಳ್ಳಿ, ಶಿವಪುರ, ವನಬಳ್ಳಾರಿ. ಸೆ.14 ರಂದು ಹಿಟ್ನಾಳ, ಕವಲೂರ, ಕಲಕೇರಿ. ಸೆ.15 ರಂದು ಇಂದರಗಿ, ಮಾದಿನೂರ, ಬೇವಿನಹಳ್ಳಿ ಗ್ರಾಮ ಪಂಚಾಯತಿಗಳ ಜಮಾಬಂದಿ ನಡೆಯಲಿದೆ.
     ಜಮಾಬಂದಿ ಕಾರ್ಯಕ್ರಮ ನಡೆಸುವ ಹೊಣೆಗಾರಿಕೆಯನ್ನು ತಾಲೂಕ ಮಟ್ಟದ ವಿವಿಧ ಅಧಿಕಾರಿಗಳಿಗೆ ನೀಯೋಜಿಸಲಾಗಿದೆ ಎಂದು ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ 01 ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಸೆ. 07 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಸಂಸದ ಕರಡಿ ಸಂಗಣ್ಣ ಅವರು ವಹಿಸುವರು.  ಸಭೆಯಲ್ಲಿ ಕೇಂದ್ರ ಹಾಗೂ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಆ. 28 ರಂದು ಸಂಜೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 08 ಗಂಟೆಗೆ ಕೊಪ್ಪಳಕ್ಕೆ ಬಂದು ವಾಸ್ತವ್ಯ ಮಾಡುವರು.  ಆ. 29 ರಂದು ಬೆಳಿಗ್ಗೆ 10-30 ಗಂಟೆಗೆ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಎಂಎಸ್‍ಪಿಎಲ್ ವಿಮಾನ ನಿಲ್ದಾಣಕ್ಕೆ ತೆರಳುವರು.  ನಂತರ ಕೊಪ್ಪಳದಲ್ಲಿ ಕೃಷಿ ಭಾಗ್ಯ ಹಾಗೂ ಇತರೆ ಯೋಜನೆಗಳ ವಿವಿಧ ಘಟಕಗಳ ಪ್ರಯೋಜನ ಪಡೆದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಫಲಾನುಭವಿಗಳ ರಾಜ್ಯ ಮಟ್ಟದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಸಂಜೆ 04 ಗಂಟೆಗೆ ಯಲಬುರ್ಗಾಕ್ಕೆ ತೆರಳಿ ವಾಸ್ತವ್ಯ ಮಾಡುವರು.

ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ ಸಾವಯುವ ಕೀಟ ನಿರ್ವಹಣೆ - ಕಾರ್ಯಗಾರ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಕೃಷಿಕರಿಗೆ ಸಾವಯುವ ಪದ್ಧತಿಯಲ್ಲಿ ಕೀಟ ನಿರ್ವಹಣಾ ಕ್ರಮಗಳ ಬಗ್ಗೆ ಸಂಪೂರ್ಣ ತಂತ್ರಜ್ಞಾನಗಳ ಮಾಹಿತಿ ನೀಡಲು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 31 ರಂದು ಸಾವಯುವ ಪದ್ಧತಿಗಳಲ್ಲಿ ಕೀಟ ನಿರ್ವಹಣೆಯ ವಿಚಾರ ಸಂಕಿರಣ / ಕಾರ್ಯಗಾರವನ್ನು ಏರ್ಪಡಿಸಲಾಗಿದೆ.
     ಕರ್ನಾಟಕ ರಾಜ್ಯದ ಸಾವಯುವ ಕೃಷಿಕರು ಹಣ್ಣು, ಹೂವು ಮತ್ತು ತರಕಾರಿಗಳನ್ನು ಸಾವಯುವ ಪದ್ಧತಿಯಲ್ಲಿ ಬೇಸಾಯ  ಮಾಡುತ್ತಿದ್ದು, ಉತ್ಕøಷ್ಠ ಫಸಲನ್ನು ಪಡೆಯುತ್ತಿದ್ದಾರೆ. ಆದರೆ ಇತ್ತೀಚಿನ ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯ ಹಾಗೂ ರಫ್ತು ವಹಿವಾಟಿಗಾಗಿ ಇನ್ನೂ ಹಲವಾರು ಸಾವಯುವ ಪದ್ಧತಿಗಳಲ್ಲಿ ಕೀಟಗಳ ನಿರ್ವಹಣೆಯಿಂದ ಹೆಚ್ಚಿನ ಹಾಗೂ ಉತ್ತಮ ಇಳುವರಿ ಪಡೆಯಬಹುದಾಗಿದೆ.  ಆಸಕ್ತ ಸಾವಯುವ ಕೃಷಿಕರು ಕೂಡಲೇ ತಮ್ಮ ನೊಂದಣಿಯನ್ನು ವಿಸ್ತರಣಾ ಮುಂದಾಳು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಇವರ ಕಚೇರಿಗೆ (9742419012/08354230102) ದೂರವಾಣಿ ಮುಖಾಂತರ ನೊಂದಾಯಿಸಿ ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ತಿಳಿಸಲಾಗಿದೆ.
     ಕಾರ್ಯಗಾರದಲ್ಲಿ ಸಾವಯುವ ಕೃಷಿಯಲ್ಲಿ ಪರಿಣಿತಿ ಹೊಂದಿದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು, ರಾಷ್ಟ್ರೀಯ ಪ್ರಮುಖ ಕೃಷಿ ಕೀಟ ಸಂಪನ್ಮೂಲ ಕೇಂದ್ರ, ಬೆಂಗಳೂರು, ಪ್ರಾಧ್ಯಾಪಕರು ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ವಿಜ್ಞಾನಿಗಳು ಬಯೋ ಕಂಟ್ರೋಲ್ ರಿಸರ್ಚ ಲ್ಯಾಬರೋಟರಿ ಬೆಂಗಳೂರು ಅಲ್ಲದೇ ಪ್ರಗತಿಪರ ರಫ್ತುವಹಿವಾಟಿನ ಅನುಭವಸ್ತ ಕೃಷಿಕರು ಪಾಲ್ಗೊಳಲಿದ್ದು, ಎಲ್ಲಾ ಸಾವಯುವ ಕೃಷಿಕರಿಗೆ ಹೆಚ್ಚಿನ ಮಾಹಿತಿ ದೊರೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

ಆ. 28 ರಂದು ಈಶಾನ್ಯದ ಐಸಿರಿ ಸರಣಿಯ 50 ನೇ ಸಂಚಿಕೆ ಪ್ರಸಾರ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 50 ನೇ ಸಂಚಿಕೆ ಆಗಸ್ಟ್ 28 ರಂದು ಬೆಳಿಗ್ಗೆ 9-54 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 50 ನೇ  ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.   ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಜಮೀನು ಪರಬಾರೆ ಮಾಡುವ ಕಾನೂನಿನ ಕುರಿತು ಸೇಡಂ ತಾಲೂಕಿನ ಸಹಾಯಕ ಆಯುಕ್ತರಾಗಿರುವ ಭೀಮಾಶಂಕರ ತೆಗ್ಗಳ್ಳಿಯವರಿಂದ ಮಾಹಿತಿ.  ಕಲಬುರಗಿಯ ಪ್ರೊ. ಖ.ಏ. ಹುಡಗಿಯವರಿಂದ ಫ್ರಾನ್ಸೆನ ಕಾದಂಬರಿಕಾರ ವಿಕ್ಟರ್ ಹ್ಯೂಗೋ ಬರೆದಿರುವ ‘ಲ’ ಮಿಸರೇಬಲ್ ಕಾದಂಬರಿಯ ಪರಿಚಯ.   ನೀಟ್ ಪರೀಕ್ಷೆಯಲ್ಲಿ ಅಂಗವಿಕಲ ಕೊಟಾದಡಿ ರಾಷ್ಟ್ರಕ್ಕೆ ಮೊದಲ ರ್ಯಾಂಕ ಪಡೆದಿರುವ ಕಲಬುರಗಿಯ ಶಿವಾನಂದ ಸೋನಾವಾಣಿ ಅವರ ಸಾಧನೆಯ ಪರಿಚಯ.  ಕಲಬುರಗಿ ತಾ. ತಾವರಗೇರಾದ ಆದಿ ಜಾಭವ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರ ಸ್ವಾವಲಂಬಿ ಜೀವನದ ಪರಿಚಯ. ಊರು-ಟೂರಿನಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ದರ್ಶನ.  ಬೀದರ ಜಿಲ್ಲೆ ಬಗದರ್ ಗ್ರಾಮದ ಹಾಸ್ಯ ಕಲಾವಿದ ವೈಜನಾಥ ಸಜ್ಜನ ಶೆಟ್ಟಿ ಅವರಿಂದ ನಗೆ ಹನಿ. 
      ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.   ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆ : ಪರಿಣಾಮಕಾರಿ ಅನುಷ್ಠಾನಕ್ಕೆ ಆರ್.ರಾಮಚಂದ್ರನ್ ಸೂಚನೆ

ಕೊಪ್ಪಳ, ಆ.26 (ಕರ್ನಾಟಕ ವಾರ್ತೆ) : ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳಡಿ ಸೌಲಭ್ಯ ಕಲ್ಪಿಸಲು ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಏಕ ಗವಾಕ್ಷಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
      ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಏಕ ಗವಾಕ್ಷಿ ಸೇವೆ ಅಡಿ 12 ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಸೇವೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಜಾರಿಗೆ ತಂದಿರುವ ಸಾಮಾಜಿಕ ಭದ್ರತಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಹಾಗೂ ಜರ್ಮನ್ ಅಭಿವೃದ್ಧಿ ಸಹಕಾರ ಸಂಸ್ಥೆ(ಜಿಐಝಡ್) ಜಂಟಿಯಾಗಿ ಏಕ ಗವಾಕ್ಷಿ ಯೋಜನೆ ಅನುಷ್ಠನಗೊಳಿಸುತ್ತಿದೆ.  ಕಾರ್ಮಿಕ ಇಲಾಖೆಯು ಯೋಜನೆಯ ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸಲಿದೆ. ಜಿಐಝಡ್ ಸಂಸ್ಥೆಯು ಸಾಮಥ್ರ್ಯ ಬಲವರ್ಧನೆ, ತರಬೇತಿ, ಮಾಹಿತಿ ಶಿಕ್ಷಣ ಮತ್ತು ಸಂವಹನ, ಸಾಮಗ್ರಿ ವಿನ್ಯಾಸ, ಅಧ್ಯಯನ, ಕಾರ್ಯಾಗಾರ ಇನ್ನಿತರ ಕಾರ್ಯಕ್ರಮಗಳನ್ನು ಸಂಘಟಿಸಲಿದೆ. 
     ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದು ತಾಲೂಕು ಆಯ್ಕೆ ಮಾಡಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕನ್ನು ಆಯ್ಕೆ ಮಾಡಿ, ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಏಕ ಗವಾಕ್ಷಿ ಕೇಂದ್ರ ಆರಂಭಿಸಲಾಗಿದೆ.  ಏಕ ಗವಾಕ್ಷಿ ಕೇಂದ್ರದಲ್ಲಿ 5 ವಿವಿಧ ಇಲಾಖೆಗಳ ವ್ಯಾಪ್ತಿಯ 13 ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ನೀಡಲಾಗುವುದು. ಅಸಂಘಟಿತ ಕಾರ್ಮಿಕರಿಗೆ ಅರ್ಜಿ ಸಲ್ಲಿಸುವಲ್ಲಿ ಸಹಾಯ, ಸಂಬಂಧಿಸಿದ ದಾಖಲಾತಿ ಸಂಗ್ರಹಕ್ಕೆ ಮಾರ್ಗದರ್ಶನ, ಮಂಜೂರಾದ ಬಳಿಕ ಫಲಾನುಭವಿಗಳಿಗೆ ಮಾಹಿತಿ ನೀಡುವ ಕಾರ್ಯ ನಡೆಯಲಿದೆ. ಇದರಿಂದ ಅಸಂಘಟಿತ ಕಾರ್ಮಿಕರಿಗೆ ಒಂದೇ ಕಡೆ ಎಲ್ಲಾ ಮಾಹಿತಿ ಸಿಗುವುದಲ್ಲದೆ ಅಗತ್ಯ ಮಾರ್ಗದರ್ಶನ ಲಭಿಸಲಿದೆ. ಅಲ್ಲದೆ ಯೋಜನೆಯ ಪ್ರಯೋಜನ ಪಡೆಯಲು ತಮ್ಮ ಕೆಲಸಗಳನ್ನು ಬಿಟ್ಟು ವಿವಿಧ ಇಲಾಖೆಗಳಿಗೆ ಅಲೆದಾಡುವುದು ತಪ್ಪಲಿದೆ.
    ಏಕ ಗವಾಕ್ಷಿ ಕೇಂದ್ರದಲ್ಲಿ ದೊರೆಯಲಿರುವ ಸೌಲಭ್ಯಗಳು ಇಂತಿವೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯಕ್ರಮಗಳು. ಹೊಸ ಪಿಂಚಣಿ ಯೋಜನೆ (ಎನ್‍ಪಿಎಸ್ ಲೈಟ್). ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ (ಆರ್ ಎಸ್ ಬಿ ವೈ). ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ವೃದ್ದಾಪ್ಯ ವೇತನ. ವಿಧವಾ ವೇತನ ಪಿಂಚಣಿ ಯೋಜನೆ. ವಿಕಲಚೇತನರ ಪಿಂಚಣಿ ಯೋಜನೆ. ಮೈತ್ರಿ ಯೋಜನೆ. ಮನಸ್ವಿನಿ ಯೋಜನೆ. ವಾಜಪೇಯಿ ಆರೋಗ್ಯ ಶ್ರೀ ಯೋಜನೆ. ಸಂಧ್ಯಾ ಸುರಕ್ಷಾ ಯೋಜನೆ ಸೌಲಭ್ಯಗಳು ದೊರಕಲಿವೆ. ಹೆಚ್ಚಿನ ಮಾಹಿತಿಯನ್ನು ಗ್ರಾ.ಪಂ ಕಾರ್ಯದರ್ಶಿಗಳು/ ಪಿಡಿಒ ಗಳನ್ನು ಸಂಪರ್ಕಿಸಬಹುದು.
 ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯಿತಿ ಕಾರ್ಯದರ್ಶಿಗಳು, ವಾರ್ಡ್ ಮಟ್ಟದಲ್ಲಿ ಸಮುದಾಯ ಸಂಘಟಕರು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುವರು. ಇವರಿಗೆ ಈಗಾಗಲೇ ಮೈಸೂರಿನ ಅಬ್ದುಲ್‍ನಜೀರ್‍ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಗ್ರಾಮ ಪಂಚಾಯಿತಿ ಮತ್ತು ನಗರ ಸಭೆಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸಮುದಾಯಗಾರರಿಗೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ 12 ಯೋಜನೆಗಳ ಬಗ್ಗೆ ಕಿರು ಮಾಹಿತಿ ಕೈಪಿಡಿಯನ್ನು ತಯಾರಿಸಲಾಗಿದ್ದು ಅದನ್ನು ಎಲ್ಲಾ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ಈಗಾಗಲೇ ತರಬೇತಿಯ ಸಂದರ್ಭದಲ್ಲಿ ವಿತರಿಸಲಾಗಿದೆ. ಕುಷ್ಟಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.  ಹಾಗೂ ಕುಷ್ಟಗಿ ತಾಲೂಕಿನ ಫಲಾನುಭವಿಗಳು ಏಕ ಗವಾಕ್ಷಿ ಕೇಂದ್ರದ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನೆ ಪಡೆದುಕೊಳ್ಳುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Thursday, 25 August 2016

ರಾಜ್ಯದ ಕೃಷಿಭಾಗ್ಯ ಯೋಜನೆ ದೇಶಕ್ಕೆ ಮಾದರಿ- ಕೃಷ್ಣ ಭೈರೇಗೌಡ

ಕೊಪ್ಪಳ ಆ. 25 (ಕರ್ನಾಟಕ ವಾರ್ತೆ): ರಾಜ್ಯದ ಒಣ ಬೇಸಾಯ ಅವಲಂಬಿತ ರೈತರಿಗಾಗಿ ನಮ್ಮ ಸರ್ಕಾರ ಜಾರಿಗೊಳಿಸಿರುವ ಕೃಷಿ ಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ನೆರೆ ಹೊರೆಯ ರಾಜ್ಯದವರೂ ಈ ಯೋಜನೆ ಅಳವಡಿಕೆಗೆ ಉತ್ಸುಕರಾಗಿದ್ದಾರೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

     ಇದೇ ಆಗಸ್ಟ್ 29 ರಂದು ಕೊಪ್ಪಳದಲ್ಲಿ ಕೃಷಿ ಭಾಗ್ಯ ಯೋಜನೆಯ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿ ಸಮಾವೇಶ ನಡೆಯುವ ಸ್ಥಳದ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

     ರಾಜ್ಯದ ಒಣ ಬೇಸಾಯ ಅವಲಂಬಿತ ರೈತರು, ಮಳೆ ಕೊರತೆಯಾಗಿ ಸಂಕಷ್ಟ ಅನುಭವಿಸುವ ರೈತರ ನೆರವಿಗೆ ಬರಬೇಕೆಂಬ ಉದ್ದೇಶದಿಂದ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.  ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಕೃಷಿ ಹೊಂಡಗಳ ಮೂಲಕ ಸಂಗ್ರಹಿಸಿ, ಮಳೆಯ ಕೊರತೆ ಸಂದರ್ಭದಲ್ಲಿ ಈ ನೀರು ಉಪಯೋಗಿಸಿಕೊಂಡು, ರೈತರು ಆರ್ಥಿಕವಾಗಿ ಸಬಲರಾಗಬಹುದಾಗಿದೆ.  ನಂತರ ಪಾಲಿ ಹೌಸ್ ಅಳವಡಿಸಿಕೊಂಡು, ಕಡಿಮೆ ನೀರು ಬಳಸಿ, ಶೇ. 30 ರಿಂದ 40 ರಷ್ಟು ಹೆಚ್ಚು ಇಳುವರಿ ಪಡೆಯಬಹುದಾಗಿದೆ.  ಈಗಾಗಲೆ ಕೃಷಿ ಭಾಗ್ಯ ಯೋಜನೆ ಜಾರಿಯಾಗಿ ಸುಮಾರು ಎರಡು ವರ್ಷಗಳಾಗಿದ್ದು, ರಾಜ್ಯದ ಅಂದಾಜು 01 ಲಕ್ಷ ರೈತ ಕುಟುಂಬಗಳು ಈ ಯೋಜನೆಯ ಸವಲತ್ತು ಪಡೆದುಕೊಂಡಿದ್ದಾರೆ.  ಅದರಲ್ಲೂ ಹೆಚ್ಚಾಗಿ ಉತ್ತರ ಕರ್ನಾಟಕ ರಾಜ್ಯದಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ರೈತರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.  ದೇಶದಲ್ಲಿಯೇ ಇಂತಹ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೊಳಿಸಿರುವ ಕೀರ್ತಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ.  ಇಡೀ ದೇಶಕ್ಕೆ ಈ ಯೋಜನೆ ಮಾದರಿಯಾಗಿದ್ದು, ಈಗಾಗಲೆ ಈ ಯೋಜನೆಯನ್ನು ನೆರೆಯ ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳು ಅಳವಡಿಸಿಕೊಳ್ಳಲು ಉತ್ಸುಕವಾಗಿವೆ.  ಕೇಂದ್ರ ಸರ್ಕಾರವೂ ಕೂಡ ಈ ಯೋಜನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಯೋಜನೆಯ ರೂಪುರೇಷೆಗಳನ್ನು ರಾಜ್ಯ ಸರ್ಕಾರದಿಂದ ಪಡೆದಿದೆ.  ಕೃಷಿ ಭಾಗ್ಯ ಯೋಜನೆಯನ್ನು ರೈತರಿಗಾಗಿ ಸಮರ್ಪಣೆಗೊಳಿಸಲು, ಈ ಯೋಜನೆಯ ಸೌಲಭ್ಯ ಪಡೆದು, ಲಾಭ ಕಂಡುಕೊಂಡಿರುವ ರೈತರು, ಇನ್ನಷ್ಟು ರೈತರಿಗೆ ಪ್ರೇರೇಪಣೆ ನೀಡಲಿ, ಪ್ರಗತಿಪರ ರೈತರು ತಮ್ಮ ತಮ್ಮ ನಡುವೆ ವಿಚಾರ ವಿನಿಮಯ ಮಾಡಿಕೊಂಡು, ಕೃಷಿ ಕ್ಷೇತ್ರವನ್ನು ಇನ್ನಷ್ಟು ಸಬಲಗೊಳಿಸಲು ಎನ್ನುವ ಉದ್ದೇಶಕ್ಕಾಗಿಯೇ ಉತ್ತರ ಕರ್ನಾಟಕದ ಒಟ್ಟು 12 ಜಿಲ್ಲೆಗಳ ರೈತ ಫಲಾನುಭವಿಗಳನ್ನು ಒಂದೆಡೆ ಸೇರಿಸಲು ವಿಶೇಷ ಸಮಾವೇಶವನ್ನು ಆ. 29 ರಂದು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ.  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಕೂಡ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಲಿದ್ದಾರೆ.  ಸುಮಾರು 25 ರಿಂ 30 ಸಾವಿರ ರೈತ ಫಲಾನುಭವಿಗಳು ಅಂದು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.  ಸಮಾವೇಶದ ಆವರಣದಲ್ಲಿ ಕೃಷಿಭಾಗ್ಯ ಯೋಜನೆಗೆ ಸಂಬಂಧಿತ ಕಾರ್ಯಕ್ರಮಗಳನ್ನು ಲೈವ್ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಕೊಡಲಾಗುವುದು.  ಇದಕ್ಕಾಗಿ ಈಗಾಗಲೆ ಮಾದರಿ ಕೃಷಿ ಹೊಂಡ ನಿರ್ಮಾಣ, ಭತ್ತ ನಾಟಿ ಪ್ರದೇಶವನ್ನು ಸಮಾವೇಶದ ಸ್ಥಳದಲ್ಲಿಯೇ ನಿರ್ಮಿಸಲಾಗುವುದು.  ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಪರಿಚಯಿಸಲಾಗುವುದು.  ಒಟ್ಟಾರೆ ರೈತ ಫಲಾನುಭವಿಗಳ ಸಮಾವೇಶವು ಒಂದು ರೈತೋಪಯೋಗಿ ವೈವಿಧ್ಯಮಯ ಕಾರ್ಯಕ್ರಮವಾಗಿ ಮೂಡಿ ಬರಲಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಅಭಿಪ್ರಾಯಪಟ್ಟರು.

     ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು, ರೈತ ಫಲಾನುಭವಿಗಳ ಸಮಾವೇಶಕ್ಕಾಗಿ ನಿರ್ಮಿಸಲಾಗುತ್ತಿರುವ ಬೃಹತ್ ವೇದಿಕೆ, ಕೃಷಿ ಹೊಂಡ ಮುಂತಾದ ಕಾಮಗಾರಿಗಳನ್ನು ಪರಿಶೀಲಿಸಿದರು.
     ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಅಪರ ಕೃಷಿ ನಿರ್ದೇಶಕ ಎನ್. ಗಂಗಪ್ಪ, ಕೃಷಿ ಆಯುಕ್ತ ಬಿ. ಪಾಂಡುರಂಗ ನಾಯಕ್, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.