Thursday, 21 July 2016

ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ ಕೌಶಲ್ಯ ಕಲಾ ಕಮ್ಮಟ ಶಿಬಿರ : ಅರ್ಜಿ ಆಹ್ವಾನ

ಕೊಪ್ಪಳ ಜು.21 (ಕರ್ನಾಟಕ ವಾರ್ತೆ): ಕರ್ನಾಟಕ ಶಿಲ್ಪಕಲಾ ಅಕಾಡಿಮೆಯಿಂದ ಶಿಲ್ಪಕಲೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಶಿಲ್ಪ ಕಲೆಯಲ್ಲಿ ಆಸಕ್ತಿಯಿರುವ  ಪ.ಜಾತಿ ಹಾಗೂ ಪ.ಪಂಗಡದ ಯುವ ಜನತೆಗೆ ಕೌಶಲ್ಯ ಕಲಾ ಕಮ್ಮಟ ಶಿಬಿರ ಹಮ್ಮಿಕೊಳ್ಳಲಾಗಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರು ಕರ್ನಾಟಕದವರಾಗಿದ್ದು, 18 ರಿಂದ 30 ವರ್ಷದೊಳಗಿರಬೇಕು, ಕನಿಷ್ಠ ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಪಡೆದವರಾಗಿರಬೇಕು, ಶಿಲ್ಪಕಲೆಯಲ್ಲಿ ಆಸಕ್ತಿವುಳ್ಳವರಾಗಿರಬೇಕು.  ಆಸಕ್ತರು ಸ್ವ-ವಿವರವುಳ್ಳ ಅರ್ಜಿಯೊಂದಿಗೆ ಬಾವಚಿತ್ರ ಲಗತ್ತಿಸಿ ಆಗಸ್ಟ್ 31 ರೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಸಲ್ಲಿಸಬಹುದು.
     ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1 ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002. ದೂ.ಸಂ : 080-22278725 ಕ್ಕೆ ಸಂಪರ್ಕಿಸಬಹುದು ಎಂದು ರಿಜಿಸ್ಟ್ರಾರ್ ಇಂದ್ರಮ್ಮ ಹೆಚ್.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment