Saturday, 23 July 2016

ಜೇನು ಕೃಷಿ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ಜು.23 (ಕರ್ನಾಟಕ ವಾರ್ತೆ): ಅಖಿಲ ಭಾರತ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಸ್ವಯಂ ಉದ್ಯೋಗ ಕೈಗೊಳ್ಳುವ ಆಸಕ್ತ ಉದ್ಯಮಶೀಲರಿಗಾಗಿ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿರುವ  ಸೆಂಟ್ರಲ್ ರಿಸರ್ಚ ಆಂಡ್ ಟ್ರೇನಿಂಗ್ ಇನ್ಸ್‍ಟ್ಯೂಟ್ ನಲ್ಲಿ ಪ್ರಸಕ್ತ ಸಾಲಿನ ಜೇನು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
    ತರಬೇತಿಯು 5 ದಿನಗಳು, 15 ದಿನಗಳು ಹಾಗೂ 1 ತಿಂಗಳ ಅವಧಿಯದ್ದಾಗೊವೆ. ತರಬೇತಿ ವೇಳೆ ತರಬೇತಿ ಶುಲ್ಕ  ಮತ್ತು ವಾಸ್ತವ್ಯದ ವೆಚ್ಚವನ್ನು ಅಭ್ಯರ್ಥಿಗಳೆ ಭರಿಸಬೇಕು.
    ಹೆಚ್ಚಿನ ಮಾಹಿತಿಗಾಗಿ ಕೇಂದ್ರಿಯ ಜೇನು ಸಂಶೋಧನೆ ಮತ್ತು ತರಬೇತಿ ಕೇಂದ್ರ ಸಂ,1153 ಗಣೇಶಖಿಂಡ್ ರಸ್ತೆ ಪುಣೆ-411016 ಮಹಾರಾಷ್ಟ್ರ. ದೂ ಸಂ: 020-26575865 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment