Saturday, 16 July 2016

ಗದಗ-ವಾಡಿ ರೈಲ್ವೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭ : ಸಂಸದ ಕರಡಿ ಸಂಗಣ್ಣ

ಕೊಪ್ಪಳ, ಜು.16 (ಕರ್ನಾಟಕ ವಾರ್ತೆ) : ಗದಗ-ವಾಡಿ ನೂತನ ರೈಲ್ವೆ ಕಾಮಗಾರಿಗೆ ಸಂಬಂಧಿಸಿದಂತೆ  ನೈರುತ್ಯ ರೈಲ್ವೆ ವಿಭಾಗವು ಮೊದಲ ಹಂತವಾಗಿ ತಳಕಲ್-ಕುಷ್ಟಗಿ 57 ಕಿ.ಮೀ ಉದ್ದದ ರೂ.555.96 ಕೋಟಿಯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ.
     ಹುಬ್ಬಳ್ಳಿಯ ನೈರುತ್ಯ ರೈಲೈಯು ತಳಕಲ್-ಕುಷ್ಟಗಿ ಮಾರ್ಗದ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಂಡಿದ್ದು, ಯಲಬುರ್ಗಾ ತಾಲೂಕಿನ ತಳಕಲ್‍ನಿಂದ ಸಂಗನಾಳ ವರೆಗೆ 21.40 ಕಿ,ಮೀ ಉದ್ದದ ರೈಲ್ವೆ ಕಾಮಗಾರಿಯನ್ನು ರೂ.43. 369 ಕೋಟಿ ವೆಚ್ಚದಲ್ಲಿ ನೆಲಮಟ್ಟದ ಕಾಮಗಾರಿ ಹಾಗೂ ಸಣ್ಣ ಸೇತುವೆ ಕಾಮಗಾರಿಗಳು ಹಾಗೂ ಯಲಬುರ್ಗಾ ತಾಲೂಕಿನ ಸಂಗನಾಳ ದಿಂದ ಕುಷ್ಟಗಿ ವರೆಗೆ 32.40 ಕಿ.ಮೀ ಉದ್ದದ ರೂ.56. 249 ಕೋಟಿ ರೂ. ವೆಚ್ಚದಲ್ಲಿ ನೆಲಮಟ್ಟದ ಕಾಮಗಾರಿ ಮತ್ತು ಸಣ್ಣ ಸೇತುವೆಗಳ ಕಾಮಗಾರಿಗೆ ಜುಲೈ 11 ಕ್ಕೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದ್ದು,  ಆಗಸ್ಟ್ 10 ಕ್ಕೆ ಟೆಂಡರ್ ಪ್ರಕ್ರಿಯೆ ಪೂಣ್ಣಗೊಳ್ಳುವುದಾಗಿ ಸಂಸದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ ಎಂದು ಸಂಸದರ ಕಛೇರಿ ಪ್ರಕಟಣೆ ತಿಳಿಸಿದೆ.
Post a Comment