Wednesday, 20 July 2016

ಯಲಬುರ್ಗಾ, ಮುಧೋಳ, ಯಡ್ಡೋಣಿ ಐಟಿಐ : ಖಾಲಿ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಜು.20 (ಕರ್ನಾಟಕ ವಾರ್ತೆ) : ಯಲಬುರ್ಗಾದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹಾಗೂ ಅದೇ ತಾಲೂಕಿನ ಮುಧೋಳ ಮತ್ತು ಯಡ್ಡೋಣಿಯಲ್ಲಿ  ಪ್ರಸಕ್ತ ಸಾಲಿನ ವಿವಿಧ ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿ ಮೂರು ಸುತ್ತುಗಳ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕೆಲವು ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಕ್ಯಾಜುವಲ್ ಸುತ್ತುಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  ಎಸ್‍ಎಸ್‍ಎಲ್‍ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಯಲಬುರ್ಗಾ ಐಟಿಐ ನಲ್ಲಿ ಎಲೆಕ್ಟ್ರಿಷಿಯನ್-01, ಇ/ಎಂ (ಎನ್‍ಸಿವಿಟಿ)-04, ಹಾಗೂ ಐ & ಚಿಟಿಎಸ್‍ಎಂ (ಎನ್‍ಸಿವಿಟಿ)-25 ಸ್ಥಾನಗಳು ಖಾಲಿ ಉಳಿದಿವೆ.  ಮುಧೋಳ   ಐಟಿಐ ನಲ್ಲಿ ಎಲೆಕ್ಟ್ರಿಷಿಯನ್  -02, ಫಿಟ್ಟರ್ -12 ಸ್ಥಾನಗಳು ಖಾಲಿ ಉಳಿದಿವೆ.  ಯಡ್ಡೋಣಿ ಐಟಿಐ ನಲ್ಲಿ ಎಲೆಕ್ಟ್ರಿಷಿಯನ್ (ಎನ್‍ಸಿವಿಟಿ)-14, ಫಿಟ್ಟರ್ -17 ಸ್ಥಾನಗಳು ಖಾಲಿ ಉಳಿದಿದ್ದು ಕ್ಯಾಜುವಲ್ ಸುತ್ತುಗಳ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಜು. 24 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಯನ್ನು ಆಯಾ ಸರಕಾರಿ ತರಬೇತಿ ಸಂಸ್ಥೆಗಳಲ್ಲಿ ಪಡೆಯಬಹುದು ಅಥವಾ ದೂರವಾಣಿ ಸಂಖ್ಯೆ: ಯಲಬುರ್ಗಾ-08534-220470.  ಮುಧೋಳ- 08534-220470 ಹಾಗೂ ಯಡ್ಡೋಣಿ-9972334671 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment