Tuesday, 19 July 2016

ಭಾಗ್ಯನಗರ: ಸರ್ವರಿಗೂ ಸೂರು ಯೋಜನೆಗೆ ಅರ್ಜಿ ಸಲ್ಲಿಸಲು ಜು. 30 ಕೊನೆಯ ದಿನ

ಕೊಪ್ಪಳ, ಜು.18 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತಿಯಿಂದ ಪ.ಪಂ ವ್ಯಾಪ್ತಿಯ ಕೊಳಚೇತರ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಸರ್ವರಿಗೂ ಸೂರು ಯೋಜನೆಯಡಿ ಮನೆ ನಿರ್ಮಾಣ ಸೌಲಭ್ಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಜು. 30 ಕೊನೆಯ ದಿನವಾಗಿದೆ.
    ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ಪ್ರತಿ ನಾಗರಿಕರಿಗೂ ಸೂರು ಒದಗಿಸುವ ಉದ್ದೇಶದಿಂದ ಹೌಸಿಂಗ್ ಫಾರ್ ಆಲ್ (ಸರ್ವರಿಗೂ ಸೂರು) ಯೋಜನೆ ಜಾರಿಗೊಳಿಸಿದ್ದು, ಯೋಜನೆಯಡಿ ನಿವೇಶನ ಹೊಂದಿರುವ ಅಭ್ಯರ್ಥಿಗಳು ಮನೆ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು.
ನಿಗದಿತ ಅರ್ಜಿ ನಮೂನೆಯನ್ನು ಭಾಗ್ಯನಗರ  ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಪಡೆದು ಭರ್ತಿ ಮಾಡಿ, ಹಕ್ಕುಪತ್ರ-ಕ್ರಯ ಪತ್ರ/ ಕೊಡುಗೆಯಾಗಿ ಬಂದ ಸ್ವತ್ತಿನ ಅಸಲು ಪ್ರತಿ, ಯಾವುದಾದರೂ ವಸತಿ/ಗೃಹ ನಿರ್ಮಾಣ ಸಂಸ್ಥೆಗಳಿಂದ ನಿವೇಶನ ಮಂಜೂರಾಗಿದ್ದಲ್ಲಿ ಮಂಜೂರಾತಿ ಅಸಲು ಪ್ರತಿ, ಚಾಲ್ತಿ ಸಾಲಿನ ಖಾತಾ ನಕಲು, ಆಧಾರ ಕಾರ್ಡ್, ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಎಲ್ಲಾ ದಾಖಲಾತಿಗಳ ಪ್ರತಿಗಳೊಂದಿಗೆ ಜು.30 ರೊಳಗಾಗಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಯನ್ನು ಭಾಗ್ಯನಗರ ಪ.ಪಂ ಕಾರ್ಯಾಲದಲ್ಲಿ ಪಡೆಯಬಹುದು ಎಂದು ಭಾಗ್ಯನಗರ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment