Saturday, 30 May 2015

ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನ

ಕೊಪ್ಪಳ, ಮೇ.30 (ಕರ್ನಾಟಕ ವಾರ್ತೆ) : ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡದ ಪುಸ್ತಕಗಳ ಸೂಚಿಯೊಂದನ್ನು ಸಿದ್ಧಪಡಿಸುತ್ತಿದ್ದು, 2014 ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಪಡಿಸಿದ ಪುಸ್ತಕಗಳನ್ನು ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕನ್ನಡ ಪುಸ್ತಕ ಪ್ರಾಧಿಕಾರವು ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಕನ್ನಡ ಪುಸ್ತಕಗಳ ಸೂಚಿಯೂ ಒಂದಾಗಿದೆ. ಪ್ರಾಧಿಕಾರವು ನೇಮಿಸುವ ತಜ್ಞರು ಆಯ್ಕೆ ಮಾಡಿದ ಪುಸ್ತಕಗಳನ್ನು ಪಟ್ಟಿ ಮಾಡಿ, ಸೂಕ್ತ ಸಂಕ್ಷಿಪ್ತ ಟಿಪ್ಪಣಿಯನ್ನು ಪುಸ್ತಕದ ಮುಖಪುಟದೊಡನೆ ಪ್ರಾಧಿಕಾರದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ಇದು ಪುಸ್ತಕ ಸೂಚಿಯ ಉದ್ದೇಶವಾಗಿದೆ. ಇದೊಂದು ದಾಖಲಾತಿ ಮಾತ್ರವಾಗಿರದೆ, ಹಲವು ಸಂಘ, ಸಂಸ್ಥೆಗಳಿಗೆ ಪುಸ್ತಕಗಳ ಆಯ್ಕೆ, ಖರೀದಿ, ಪುರಸ್ಕಾರಗಳಿಗೆ ಶಿಫಾರಸ್ಸು ಮುಂತಾದವುಗಳಿಗೂ ಉಪಯೋಗವಾಗಲಿದೆ. ಪುನರ್ ಮುದ್ರಣಗೊಂಡ ಪುಸ್ತಕಗಳನ್ನು ಪ್ರತ್ಯೇಕ ಪಟ್ಟಿಯಲ್ಲಿ ಸೇರಿಸುವ ಕಾರಣದಿಂದ ಪುಸ್ತಕ ಸೂಚಿಯಲ್ಲಿ ಅವಕಾಶವಿರುವುದಿಲ್ಲ.
 ಅರ್ಜಿ ನಮೂನೆಯನ್ನು ಪ್ರಾಧಿಕಾರದ ವೆಬ್‍ಸೈಟ್ www.kannadapustakapradhikara.com ನಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಪಡೆಯಬಹುದಾಗಿದೆ. ಲೇಖಕರು ಅಥವಾ ಪ್ರಕಾಶಕರು ಪುಸ್ತಕ ಮತ್ತು ಅರ್ಜಿಯನ್ನು ಜೂ.15 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ಇವರಿಗೆ ಸಲ್ಲಿಸಬಹುದಾಗಿದೆ. ಆನಂತರ ಬಂದ ಪುಸ್ತಕಗಳನ್ನು ಸ್ವೀಕರಿಸುವುದಿಲ್ಲ ಹಾಗೂ ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಒಂದೊಮ್ಮೆ ಪ್ರಕಾಶಕರು ಅಥವಾ ಲೇಖಕರು ದೋಷಪೂರ್ಣ ಮಾಹಿತಿ ನೀಡಿ ಪುಸ್ತಕಗಳನ್ನು ಸಲ್ಲಿಸಿದ್ದು ಪ್ರಾಧಿಕಾರದ ಗಮನಕ್ಕ ಬಂದಲ್ಲಿ ಅಂತಹ ಪುಸ್ತಕಗಳ ಪ್ರಕಾಶಕರನ್ನು ಪ್ರಕಾಶಕರನ್ನು ಹಾಗೂ ಮಾಲೀಕರನ್ನು ಕಪ್ಪುಪಟ್ಟಿಗೆ ಸೇರಿಸಿ, ಸರ್ಕಾರದ ಯಾವ ಸಂಸ್ಥೆಗಳಲ್ಲೂ ಪುಸ್ತಕ ಖರೀದಿಗೆ ಪರಿಗಣಿಸದಂತೆ ಪತ್ರ ಬರೆಯಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22107704 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹುಲಿಗಿ: ನವಜಾತ ಗಂಡು ಶಿಶು ಪತ್ತೆ : ಪೋಷಕರ ಪತ್ತೆಗೆ ಮನವಿ

ಕೊಪ್ಪಳ, ಮೇ.30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ 05 ದಿನಗಳ ನವಜಾತ ಗಂಡು ಶಿಶುವೊಂದು ಮೇ.26 ರಂದು ಪತ್ತೆಯಾಗಿದ್ದು ಪೋಷಕರ ಪತ್ತೆಗೆ ಸಹಕರಿಸುವಂತೆ ಸರ್ಕಾರಿ ಬಾಲಕರ ಬಾಲಮಂದಿರ ಕೊಪ್ಪಳದ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
     ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ 05 ದಿನಗಳ ನವಜಾತ ಗಂಡು ಶಿಶುವನ್ನು ಯಾರೋ ಬಿಟ್ಟು ಹೋಗಿದ್ದು,  ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಷಕರು ಪತ್ತೆಯಾಗದ ಕಾರಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಶಿಶುವಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ(ಎಸ್.ಎನ್.ಸಿ.ಯು)ದಲ್ಲಿ  ದಾಖಲಿಸಲಾಗಿದೆ. ಶಿಶು ಗೋದಿ ಮೈಬಣ್ಣ ಹೊಂದಿದ್ದು, ಅಗಲವಾದ ದುಂಡುಮುಖವನ್ನು ಹೊಂದಿದೆ. ಶಿಶುವಿಗೆ ಸಂಬಂಧಪಟ್ಟ ಪೋಷಕರು ಯಾರಾದರೂ ಇದ್ದಲ್ಲಿ 60 ದಿನಗಳೊಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಥವಾ ಸರಕಾರಿ ಬಾಲಕರ ಬಾಲ ಮಂದಿರ, ರೋಟರಿ ಕ್ಲಬ್ ಬಿಲ್ಡಿಂಗ್, ಭಾಗ್ಯನಗರ ರಸ್ತೆ, ಕೊಪ್ಪಳ. ದೂರವಾಣಿ ಸಂಖ್ಯೆ 08539-200755, 234135 ಇವರಲ್ಲಿ ಬಂದು ಶಿಶುವನ್ನು ಪಡೆಯಬಹುದಾಗಿದೆ. ಪೋಷಕರು ಪತ್ತೆಯಾಗದಿದ್ದಲ್ಲಿ ಶಿಶುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08539-225030, 7259374868 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಗ್ರಾ.ಪಂ. ಚುನಾವಣೆ : 7,14,633 ಮತದಾರರು, 405 ವಾಹನಗಳು

ಕೊಪ್ಪಳ ಮೇ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ 148 ಗ್ರಾಮ ಪಂಚಾಯತಿಗಳಲ್ಲಿ  ಸಾರ್ವತ್ರಿಕ ಚುನಾವಣೆ ನಡೆಸಲಾಗುತ್ತಿದ್ದು, ಜೂ. 02 ರಂದು ಮತದಾನ ನಡೆಯಲಿದೆ.  ಈ ಬಾರಿಯ ಚುನಾವಣೆಯಲ್ಲಿ 7,14,633 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.  ಇದಕ್ಕಾಗಿ ಒಟ್ಟು 1003 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ.
ಮತದಾರರು :  ಜಿಲ್ಲೆಯಲ್ಲಿ 360323 ಪುರುಷ ಮತದಾರರು ಹಾಗೂ 354310 ಮಹಿಳಾ ಮತದಾರರು ಸೇರಿದಂತೆ ಒಟ್ಟು 714633 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ಪುರುಷ ಮತದಾರರು 100005 ಹಾಗೂ ಮಹಿಳಾ ಮತದಾರರು- 97634 ಸೇರಿದಂತೆ ಒಟ್ಟು 197639 ಮತದಾರರಿದ್ದಾರೆ.  ಅದೇ ರೀತಿ ಗಂಗಾವತಿಯಲ್ಲಿ ಪುರುಷ- 96306, ಮಹಿಳೆ- 98201, ಒಟ್ಟು 194507 ಮತದಾರರಿದ್ದಾರೆ.  ಕುಷ್ಟಗಿ ತಾಲೂಕಿನಲ್ಲಿ ಪುರುಷ- 83525, ಮಹಿಳೆ- 80855, ಒಟ್ಟು- 164380 ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಯಲಬುರ್ಗಾ ತಾಲೂಕಿನಲ್ಲಿ ಪುರುಷ- 80487, ಮಹಿಳೆ- 77620 ಒಟ್ಟು 158107 ಮತದಾರರು ಮತ ಚಲಾಯಿಸಲಿದ್ದಾರೆ.
ಚುನಾವಣೆಗೆ 405 ವಾಹನಗಳ ಬಳಕೆ : ಈ ಬಾರಿಯ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯನ್ನು ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಅನುಕೂಲವಾಗುವಂತೆ 114-ಬಸ್, 93-ಕ್ರೂಸರ್, 192-ಜೀಪ್ ಹಾಗೂ 06-ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 405 ವಾಹನಗಳನ್ನು ಬಳಸಲಾಗುತ್ತಿದೆ.  ಕೊಪ್ಪಳ ತಾಲೂಕಿನಲ್ಲಿ 32-ಬಸ್, 19-ಕ್ರೂಸರ್, 64-ಜೀಪ್ ಸೇರಿದಂತೆ ಒಟ್ಟು 115 ವಾಹನಗಳು.  ಗಂಗಾವತಿ ತಾಲೂಕಿನಲ್ಲಿ 27-ಬಸ್, 32-ಕ್ರೂಸರ್, 72-ಜೀಪ್ ಸೇರಿದಂತೆ ಒಟ್ಟು 131 ವಾಹನಗಳು.  ಕುಷ್ಟಗಿ ತಾಲೂಕಿನಲ್ಲಿ 30-ಬಸ್, 19-ಕ್ರೂಸರ್, 31-ಜೀಪ್ ಸೇರಿದಂತೆ ಒಟ್ಟು 80 ವಾಹನಗಳು.  ಯಲಬುರ್ಗಾ ತಾಲೂಕಿನಲ್ಲಿ 25-ಬಸ್, 23-ಕ್ರೂಸರ್, 25-ಜೀಪ್ ಹಾಗೂ 06-ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 79 ವಾಹನಗಳನ್ನು ಬಳಸಲಾಗುತ್ತಿದೆ.
7203 ಅಭ್ಯರ್ಥಿಗಳು ಕಣದಲ್ಲಿ :  ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೊಪ್ಪಳ ತಾಲೂಕಿನಲ್ಲಿ 2181 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-443, ಪ.ಪಂಗಡ-197, ಹಿಂದುಳಿದ ಅ ವರ್ಗ- 324, ಹಿಂದುಳಿದ ಬ ವರ್ಗ-71 ಮತ್ತು ಸಾಮಾನ್ಯ ವರ್ಗದ 1146 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 1821 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-388, ಪ.ಪಂಗಡ-306, ಹಿಂದುಳಿದ ಅ ವರ್ಗ- 155, ಹಿಂದುಳಿದ ಬ ವರ್ಗ-33 ಮತ್ತು ಸಾಮಾನ್ಯ ವರ್ಗದ 939 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಕುಷ್ಟಗಿ ತಾಲೂಕಿನಲ್ಲಿ 1569 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-246, ಪ.ಪಂಗಡ-229, ಹಿಂದುಳಿದ ಅ ವರ್ಗ- 228, ಹಿಂದುಳಿದ ಬ ವರ್ಗ-53 ಮತ್ತು ಸಾಮಾನ್ಯ ವರ್ಗದ 1569 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಯಲಬುರ್ಗಾ ತಾಲೂಕಿನಲ್ಲಿ 1632 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-345, ಪ.ಪಂಗಡ-181, ಹಿಂದುಳಿದ ಅ ವರ್ಗ- 199, ಹಿಂದುಳಿದ ಬ ವರ್ಗ-51 ಮತ್ತು ಸಾಮಾನ್ಯ ವರ್ಗದ 1632 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 
171 ಅವಿರೋಧ ಆಯ್ಕೆ :  ಜಿಲ್ಲೆಯಲ್ಲಿ ಈ ಬಾರಿಯ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 171 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 23, ಗಂಗಾವತಿ- 73, ಕುಷ್ಟಗಿ-54 ಮತ್ತು ಯಲಬುರ್ಗಾ ತಾಲೂಕಿನಲ್ಲಿ 21 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.  ಇದರಿಂದಾಗಿ ಕೊಪ್ಪಳ ತಾಲೂಕಿನ 736 ಸದಸ್ಯ ಸ್ಥಾನಗಳ ಪೈಕಿ 706 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.  ಗಂಗಾವತಿ ತಾಲೂಕಿನಲ್ಲಿ 750 ಸದಸ್ಯ ಸ್ಥಾನಗಳ ಪೈಕಿ 677 ಸ್ಥಾನಗಳಿಗೆ.  ಕುಷ್ಟಗಿ ತಾಲೂಕಿನಲ್ಲಿ 607 ಸದಸ್ಯ ಸ್ಥಾನಗಳ ಪೈಕಿ 551 ಸ್ಥಾನಗಳಿಗೆ ಹಾಗೂ ಯಲಬುರ್ಗಾ ತಾಲೂಕಿನಲ್ಲಿ 584 ಸ್ಥಾನಗಳ ಪೈಕಿ 552 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮತಗಟ್ಟೆಗಳು :  ಗ್ರಾಮ ಪಂಚಾಯತಿ ಚುನಾವಣೆ ಸಂಬಂಧ ಮತದಾನ ಪ್ರಕ್ರಿಯೆ ಸುಗಮವಾಗಿ ಸಾಗಲು ಜಿಲ್ಲೆಯಲ್ಲಿ 1003  ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಆ ಪೈಕಿ 183 ಮತಗಟ್ಟೆಗಳನ್ನು ಸೂಕ್ಷ್ಮ, 73 ಮತಗಟ್ಟೆಗಳನ್ನು ಅತಿಸೂಕ್ಷ್ಮ ಹಾಗೂ 747 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ 269 ಮತಗಟ್ಟೆಗಳಿದ್ದು, ಆ ಪೈಕಿ ಸೂಕ್ಷ್ಮ- 54, ಅತಿಸೂಕ್ಷ್ಮ- 27 ಹಾಗೂ ಸಾಮಾನ್ಯ- 188 ಮತಗಟ್ಟೆಗಳಿವೆ.  ಗಂಗಾವತಿ ತಾಲೂಕಿನಲ್ಲಿ 279 ಮತಗಟ್ಟೆಗಳಿದ್ದು, ಆ ಪೈಕಿ ಸೂಕ್ಷ್ಮ- 58, ಅತಿಸೂಕ್ಷ್ಮ- 24 ಹಾಗೂ ಸಾಮಾನ್ಯ- 197 ಮತಗಟ್ಟೆಗಳನ್ನು ಗುರುತಿಸಲಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ 221 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ ಸೂಕ್ಷ್ಮ- 26, ಸಾಮಾನ್ಯ- 195 ಮತ್ತು ಕುಷ್ಟಗಿ ತಾಲೂಕಿನ ಒಟ್ಟು 234 ಮತಗಟ್ಟೆಗಳ ಪೈಕಿ ಸೂಕ್ಷ್ಮ- 45, ಅತಿ ಸೂಕ್ಷ್ಮ- 22 ಹಾಗೂ ಸಾಮಾನ್ಯ- 167 ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಚುನಾವಣಾ ಸಿಬ್ಬಂದಿ : ಜಿಲ್ಲೆಯಲ್ಲಿ ಒಟ್ಟು 1003 ಮತಗಟ್ಟೆಗಳಿರುವುದರಿಂದ ಪ್ರತಿ ಮತಗಟ್ಟೆಗೆ ತಲಾ ಒಬ್ಬರಂತೆ ಪ್ರಿಸೈಡಿಂಗ್ ಆಫೀಸರ್, ಮೊದಲನೆ ಪೋಲಿಂಗ್ ಆಫೀಸರ್, ಎರಡನೆ ಪೋಲಿಂಗ್ ಆಫೀಸರ್, ಮೂರನೆ ಪೋಲಿಂಗ್ ಆಫೀಸರ್ ಹಾಗೂ ಒಬ್ಬರು ಗ್ರೂಪ್ ‘ಡಿ’ ದರ್ಜೆಯ ನೌಕರರು ಸೇರಿ ಒಟ್ಟು 5015 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ 269 ಮಟಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗಳಿಗೆ ತಲಾ ಒಬ್ಬರಂತೆ ಪ್ರಿಸೈಡಿಂಗ್ ಆಫೀಸರ್, ಮೊದಲನೆ ಪೋಲಿಂಗ್ ಆಫೀಸರ್, ಎರಡನೆ ಪೋಲಿಂಗ್ ಆಫೀಸರ್, ಮೂರನೆ ಪೋಲಿಂಗ್ ಆಫೀಸರ್ ಹಾಗೂ ಗ್ರೂಪ್ ‘ಡಿ’ ದರ್ಜೆಯ ನೌಕರರು ಸೇರಿ ಒಟ್ಟು 1345 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.  ಗಂಗಾವತಿ ತಾಲೂಕಿನಲ್ಲಿ 279 ಮತಗಟ್ಟೆಗಳಿದ್ದು, 1395 ಸಿಬ್ಬಂದಿಗಳು, ಯಲಬುರ್ಗಾ ತಾಲೂಕಿನಲ್ಲಿ 221 ಮತಗಟ್ಟೆಗಳಿದ್ದು 1105 ಸಿಬ್ಬಂದಿಗಳು ಹಾಗೂ ಕುಷ್ಟಗಿ ತಾಲೂಕಿನಲ್ಲಿ 234 ಮತಗಟ್ಟೆಗಳಿದ್ದು ಒಟ್ಟು 1170 ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ.
ಈ ಬಾರಿ ಕಡ್ಡಾಯ ಮತದಾನ : ಸಾರ್ವಜನಿಕರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಬಲಪಡಿಸಿ, ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ, ಸರ್ಕಾರ ಕರ್ನಾಟಕ ಪಂಚಾಯತಿ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ಮಾಡಿದ್ದು, ಇದರ ಅನ್ವಯ ಗ್ರಾಮ ಪಂಚಾಯತಿ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇರುವ ಪ್ರತಿಯೊಬ್ಬ ವ್ಯಕ್ತಿಯು ಈ ಬಾರಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾನ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.  ಈ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಸಹ ಸರ್ಕಾರ ವ್ಯಾಪಕ ಕ್ರಮ ಕೈಗೊಂಡಿದೆ.
      ಗ್ರಾಮ ಪಂಚಾಯತಿ ಚುನಾವಣೆ ಯಶಸ್ವಿಗೊಳಿಸಲು ಮದ್ಯ ಮಾರಾಟ ನಿಷೇಧ, ಸಂತೆ-ಜಾತ್ರೆಗಳ ಮುಂದೂಡಿಕೆಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.  ಜೂ. 02 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎಲ್ಲ ಮತದಾರರು ತಪ್ಪದೆ ತಮ್ಮ ಮತ ಚಲಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮನವಿ ಮಾಡಿದ್ದಾರೆ.

ಪರಿಹಾರ ಪಡೆದ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಇಲ್ಲ

ಕೊಪ್ಪಳ, ಮೇ.29 (ಕರ್ನಾಟಕ ವಾರ್ತೆ): ಅಕಾಲಿಕ ಬೆಳೆ ಹಾನಿಯಿಂದಾಗಿ ಭತ್ತದ ಬೆಳೆ ಹಾನಿಗೆ ಒಳಗಾದ ರೈತರು ಸರ್ಕಾರದಿಂದ ಬೆಳೆ ಪರಿಹಾರ ಪಡೆದುಕೊಂಡಿದ್ದರೆ ಅಂತಹ ರೈತರಿಂದ ಬೆಂಬಲ ಬೆಲೆ ಕೇಂದ್ರಗಳಲ್ಲಿ ಭತ್ತ ಖರೀದಿ ಮಾಡಲಾಗುವುದಿಲ್ಲ ಎಂದು ಸೂಚನೆ ನೀಡಲಾಗಿದೆ.
     ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಿಂದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಭತ್ತವನ್ನು ಖರೀದಿಸಲು ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಮೇ.29 ರಿಂದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಜೂ.30 ರವರೆಗೂ ಖರೀದಿ ಪ್ರಕ್ರಿಯೆ ನಡೆಯಲಿದೆ.  ಈಗಾಗಲೆ ಅಕಾಲಿಕ ಮಳೆಯಿಂದ ಹಾನಿಗೊಂಡಿರುವ ಭತ್ತದ ಬೆಳೆಗೆ ಸರ್ಕಾರ ಪ್ರತಿ ಹೆಕ್ಟೆರ್‍ಗೆ 25,000 ರೂ. ಬೆಳೆ ಪರಿಹಾರ ಘೋಷಿಸಿದೆ.  ಸರ್ಕಾರದ ಸೂಚನೆಯಂತೆ ಭತ್ತದ ಬೆಳೆ ಹಾನಿಗೊಳಗಾದ ರೈತರು ಸರ್ಕಾರದ ಈ ಬೆಳೆ ಪರಿಹಾರ ಪಡೆದುಕೊಂಡಿದ್ದಲ್ಲಿ ಅಂತಹ ರೈತರಿಂದ ಭತ್ತ ಖರೀದಿಸಲಾಗುವುದಿಲ್ಲ.  ಬೆಳೆ ಪರಿಹಾರ ಪಡೆದುಕೊಳ್ಳದೇ ಇರುವ ರೈತರು ಕಂದಾಯ ಇಲಾಖೆಯಿಂದ ಬೆಳೆ ಹಾನಿ ಪರಿಹಾರ ಪಡೆದಿಲ್ಲ ಎನ್ನುವ ಬಗ್ಗೆ ಧೃಢೀಕರಣ ಪತ್ರ ಹಾಜರುಪಡಿಸಿದಲ್ಲಿ ಮಾತ್ರ ಅಂತಹ ಭತ್ತದ ಎಫ್.ಎ.ಕ್ಯೂ ಗುಣಮಟ್ಟ ಪರೀಕ್ಷಿಸಿ, ಖರೀದಿಸಲಾಗುವುದು.  ರೈತ ಬಾಂಧವರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಟಿ ಹತ್ತಿಗೆ ಸೊರಗು ರೋಗ : ನಿರ್ವಹಣೆಗಾಗಿ ರೈತರಿಗೆ ಸಲಹೆಗಳು



ಕೊಪ್ಪಳ, ಮೇ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಬಿಟಿ- ಹತ್ತಿ ಬೆಳೆಗೆ ಸೊರಗು ರೋಗ (ಪಾರಾವಿಲ್ಟ್) ಬಾಧೆ ಕಾಡುತ್ತಿದ್ದು, ಇದರ ನಿರ್ವಹಣೆಗಾಗಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಜಿಲ್ಲೆಯಲ್ಲಿ ಕಳೆದ ಮಾರ್ಚ್-ಏಪ್ರಿಲ್ ತಿಂಗಳವರೆಗೆ ಬಿಟಿ-ಹತ್ತಿಯನ್ನು ನೀರಾವರಿ ಆಶ್ರಯದಲ್ಲಿ ಬಿತ್ತನೆ ಮಾಡಿ ಬೆಳೆಯುವುದು ವಾಡಿಕೆ. ಆದರೆ ಕಳೆದ ವರ್ಷದಿಂದ ಬಿಟಿ-ಹತ್ತಿ ಬೆಳೆಗೆ ಬಾಧಿಸಿರುವ ಸೊರಗು ರೋಗ (ಪಾರಾವಿಲ್ಟ್) ದಿಂದಾಗಿ  ಹತ್ತಿ ಬೆಳೆದವರ ಪರಿಸ್ಥಿತಿ ಗಂಭೀರವಾಗಿದೆ.  ಬಿ.ಟಿ ಹತ್ತಿ ಬೆಳೆಗೆ ಬಾಧಿಸುವ ಸೊರಗು ರೋಗ(ಪಾರಾವಿಲ್ಟ್)ವು ಯಾವುದೇ ರೋಗಾಣುವಿನಿಂದಾಗಲಿ ಅಥವಾ ಕೀಟಗಳಿಂದಾಗಲಿ ಕಾಣಿಸುವುದಿಲ್ಲ. ಇದು ಬೆಳೆಯಲ್ಲಿನ ಶಾರೀರಿಕ ಕ್ರಿಯೆಯ ಕ್ರಮ ತಪ್ಪಿದ ಅಸಮತೋಲನದಿಂದ ಆಗುವ ಪರಿಣಾಮವಾಗಿದೆ. ಇದನ್ನು  physiological disorder  ಎಂದು ವೈಜ್ಞಾನಿಕವಾಗಿ ಕರೆಯಲಾಗಿದೆ. ಈ ಬಾಧೆಯು ಆಂದ್ರಪ್ರದೇಶ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ಬಿಟಿ-ಹತ್ತಿಯಲ್ಲಿ ಸಾಕಷ್ಟು ಹಾನಿಮಾಡಿದ ವರದಿಗಳಿವೆ. ವಿಶೇಷವಾಗಿ ಈ ಬಾಧೆಯು ಬಿಟಿ-ಹತ್ತಿ ಬಂದಾಗಿನಿಂದ ಹೆಚ್ಚಾಗಿದೆ.
ರೋಗದ ಲಕ್ಷಣಗಳು : ಹತ್ತಿ ಬೆಳೆಯು ಯಾವುದೇ ಹಂತದಲ್ಲಿ ಸೊರಗುವುದು ಕಂಡುಬರುತ್ತದೆ. ಹತ್ತಿ ಗಿಡವು ಮೊದ ಮೊದಲು ಹಸಿರು ಬಣ್ಣಕ್ಕೆ ತಿರುಗಿ, ನಂತರ ಹಳದಿಯಾಗಿ, ಕ್ರಮೇಣ ಕೆಂಪಾಗುತ್ತಾ ಸಾಗುತ್ತದೆ. ಹೂವು ಅಥವಾ ಕಾಯಿ ಬಿಡುವ ಹಂತದಲ್ಲಿ ಕಂಡುಬಂದರೆ ಇನ್ನೂ ಹೆಚ್ಚಿನ ಹಾನಿಯಾಗುವ ಸಾಧ್ಯತೆಯುಂಟು. ಇದು ಹೊಲದಲ್ಲಿ ಬೇರೆ ಬೇರೆ ಭಾಗದಲ್ಲಿ ಹಂತ-ಹಂತವಾಗಿ ಕಂಡು ಬರುತ್ತದೆ. ಬೇರುಗಳನ್ನು ಕಿತ್ತು ನೋಡಿದಾಗ ಯಾವುದೇ ರೋಗ ಅಥವಾ ಕೀಟದ ಬಾಧೆಯ ಲಕ್ಷಣ ಕಂಡುಬರುವುದಿಲ್ಲ.
ರೋಗ ಬಾಧಿಸುವಿಕೆಗೆ ಕಾರಣಗಳು :  ಕೇಂದ್ರೀಯ ಹತ್ತಿ ಸಂಶೋಧನ ಸಂಸ್ಥೆ ಹಾಗೂ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ಸಂಸ್ಥೆಗಳು ನಡೆಸಿದ ಸಂಶೋಧನೆಗಳ ವರದಿಗಳು ತಿಳಿಸುವಂತೆ ಇದು ಯಾವುದೇ ರೋಗಾಣು, ಜಂತು ಅಥವಾ ಕೀಟಗಳಿಂದ ಬರುವುದಿಲ್ಲ. ಬದಲಾಗಿ ಇದೊಂದು ಬೆಳೆಯ ಆಂತರಿಕ ಶರೀರ ಕ್ರಿಯೆ, ಕಿಣ್ವಗಳಲ್ಲಿ ಆಗುವ ಏರು-ಪೇರಿನಿಂದ ಬರುವ ಸಾಧ್ಯತೆ ಇದೆ. ಬೆಳೆ – ಮಣ್ಣು - ನೀರು ಹಾಗೂ ಮೇಲ್ಮೈ ವಾತಾವರಣಗಳಲ್ಲಿ ಸೂಕ್ತವಾದ ಹೊಂದಾಣಿಕೆ ಉಂಟಾಗದೇ ಇರುವುದು ಬೆಳೆ ರೋಗಕ್ಕೀಡಾಗಲು ಕಾರಣವಾಗಿದೆ. ವಿಶೇಷವಾಗಿ ಬೇಸಿಗೆ ಬೆಳೆಯಲ್ಲಿ ವಾತಾವರಣದ ಪ್ರತಿಕೂಲತೆ ಇದ್ದು, ಬಿಸಿಲಿನ ತಾಪದಿಂದ ತಪ್ಪಿಸಲು, ರೈತರು ಬೆಳೆಗೆ ಹೆಚ್ಚಿನ ನೀರು ಉಣಿಸಲು ಪ್ರಯತ್ನಿಸಿದಾಗ ಈ ಕ್ರಿಯೆ ಉಂಟಾಗುತ್ತದೆ. ಬೇರಿನಲ್ಲಿ ನೀರು ಹೆಚ್ಚುವುದರಿಂದ, ಆಮ್ಲಜನಕದ ಕೊರತೆ ಉಂಟಾಗಿ ಬೆಳೆಯಲ್ಲಿನ ಭಾಷ್ಪೀಕರಣ, ಕಿಣ್ವ, ಲಘು ಪೋಷಕಾಂಶ ಮತ್ತು ಲವಣಗಳ ಉಪಲಭ್ಧತೆಯಲ್ಲಿ ಮತ್ತು ಪ್ರಕ್ರಿಯೆಯಲ್ಲಿ ಏರುಪೇರು ಉಂಟಾಗುತ್ತದೆ. ಈ ಕ್ರಿಯೆಯಿಂದ ಬೆಳೆಯಲ್ಲಿ ಇಥಿಲಿನ್ ಎಂಬ ರಸಾಯನಿಕ ವಸ್ತುವಿನ ಅಧಿಕ ಉತ್ಪಾದನೆಯಾಗಿ ಬೆಳೆಯ ಪ್ರಕ್ರಿಯೆಗಳು ಯಥಾವತ್ತಾಗಿ ನಡೆಯದೇ, ಮುಪ್ಪಿನಾವಸ್ಥೆಗೆ ತಲುಪುತ್ತವೆ.  ಅದನ್ನೇ ಸೊರಗು ರೋಗ ಎನ್ನಲಾಗುತ್ತದೆ. ಬಿಟಿ-ಹತ್ತಿಯಲ್ಲಿ ಕ್ರಮೇಣವಾಗಿ ಕುಂದುತ್ತಿರುವ ಪ್ರತಿಕೂಲ ವಾತಾವರಣದ ಬಾಧೆಯ ನಿರೋಧಕ ಮತ್ತು ಹೊಂದಿಕೊಳ್ಳುವ ಶಕ್ತಿ, ನಿಖರತೆ ಇಲ್ಲದ ನೀರಾವರಿ ಪದ್ಧತಿ ಹಾಗೂ ಬಿತ್ತನೆ ಪದ್ಧತಿಯಿಂದಾಗಿ ರೋಗ ಪಸರಿಸಲು ಇನ್ನೊಂದು ಕಾರಣವಾಗಿದೆ.
ಸೊರಗು ರೋಗದ ಪರಿಣಾಮಗಳು :  ವಿಶೇಷವಾಗಿ ಈ ವರ್ಷದಲ್ಲಿ ಬೆಳೆದ ಜಿಲ್ಲೆಯ ಅನೇಕ ರೈತರ ಹೊಲಗಳಿಗೆ ಭೇಟಿ ನೀಡಿದಾಗ ಕಂಡುಬಂದ ಸಾಮಾನ್ಯ ಅಂಶವೆಂದರೆ, ಬಿಟಿ-ಹತ್ತಿಯ ಯಾವುದೇ ಹೈಬ್ರಿಡ್, ಈ ವ್ಯಾಧಿಯಿಂದ ಹೊರತಾಗಿಲ್ಲದಿರುವುದು. ರೈತರನ್ನು ವಿಚಾರಿಸಿದಾಗ, ಇದೇ ಬಿಟಿ-ಹತ್ತಿ (ಹೈಬ್ರಿಡ್) ಹೋದ ವರ್ಷ ಚೆನ್ನಾಗಿ ಬಂದಿದ್ದು, ಈ ವರ್ಷ ಹೀಗೇಕೆ? ಎಂದು ಕೇಳುತ್ತಿದ್ದಾರೆ.  ಎಲ್ಲಾ ರೀತಿಯ ಮುಂಜಾಗ್ರತಾ ಬೇಸಾಯ ಕ್ರಮಗಳನ್ನು ಅನುಸರಿಸಿದ್ದರೂ ಇದು ಹೇಗೆ ಬರುತ್ತದೆ ಎಂಬುದು ಅವರನ್ನು ಕಂಗಾಲಾಗಿ ಮಾಡಿದೆ. ಇದರಿಂದ ತಿಳಿಯುವುದೇನೆಂದರೆ, ಈ ಬಾರಿ ವಾತಾವರಣದಲ್ಲಿ ಧಿಢೀರ್ ಬದಲಾವಣೆ, ಹೈಬ್ರಿಡ್‍ಗಳಲ್ಲಿ ಕ್ರಮೇಣವಾಗಿ ಕುಂದುತ್ತಿರುವ ನಿರೋಧಕ ಶಕ್ತಿ. ಈ ವರ್ಷ ಬಿತ್ತಿದ ಬೆಳೆಯಲ್ಲಿ ಅನೇಕ ಗಿಡಗಳು ಇತ್ತ ಸೊರಗದೆ, ಅತ್ತ ಬೆಳವಣಿಗೆ ಇಲ್ಲದೆ ಯಥಾಸ್ಥಿತಿಯಲ್ಲಿ ಇರುವುದು ರೈತರನ್ನು ಚಿಂತೆಗೀಡುಮಾಡಿದೆ. ಇದನ್ನು ರೈತರು ಕಳಪೆ ಗುಣಮಟ್ಟದ ಬೀಜಗಳ ಮಿಶ್ರಣದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಮತ್ತು ಸರಿಯಾದ ಕಾರಣ ತಿಳಿಯದೇ ಹಣ ಖರ್ಚು ಮಾಡಿ ಅನೇಕ ಅಸಂಬಂಧಿತ ಔಷಧಿಗಳನ್ನು ವ್ಯಾಪಾರಿಗಳಿಂದ ಖರೀದಿಸಿ ಸಿಂಪಡಿಸುತ್ತಿದ್ದು, ರೈತರಿಗೆ ಹೆಚ್ಚುವರಿ ವೆಚ್ಚ ಭರಿಸುವಂತೆ ಮಾಡಿದೆ.
ರೋಗ ಹತೋಟಿಗೆ ಸಲಹೆಗಳು :  ಸೊರಗು ರೋಗಕ್ಕೆ ಸಂಬಂಧಿಸಿದಂತೆ, ಕೊಬಾಲ್ಟ್ ಕ್ಲೋರೈಡ್ ಎಂಬ ರಸಾಯನಿಕವನ್ನು ಬಳಸಬೇಕು.  ಇದು ಇಥಿಲಿನ್ ಅಂಶದ ಬಿಡುಗಡೆಯನ್ನು ತಡೆಗಟ್ಟುತ್ತದೆ. ಇದನ್ನು ಪ್ರತಿ 100 ಲೀಟರ್ ನೀರಿಗೆ 1 ಗ್ರಾಂನಷ್ಟು ಬೆರೆಸಿ ಸಿಂಪಡಿಸಬೇಕು. ಇದರಿಂದ ಇಥಿಲಿನ್ ಪ್ರಮಾಣ ಕಡಿಮೆಗೊಂಡು, ಬೆಳೆಯಲ್ಲಿ ಆರೋಗ್ಯ ಮರುಕಳಿಸುವ ಸಾಧ್ಯತೆ ಇದೆ. ಇದು ರಾಷ್ಟ್ರೀಯ ಮಟ್ಟದ ಸಂಶೋಧನಾ ಆಧಾರಿತ ವರದಿಗಳಿಂದ ತಿಳಿದು ಬಂದಿದೆ. ಯಾವುದೇ ಸಂಧರ್ಭದಲ್ಲಿ ಬಿರು ಬಿಸಿಲಿನಲ್ಲಿ ನೀರು ಕಟ್ಟದೆ ಇರುವುದು. ಬೆಳೆಗಳಿಗೆ ಆದಷ್ಟೂ ಬೆಳಿಗ್ಗೆ 10 ಗಂಟೆಯೊಳಗೆ ಮತ್ತು ಸಾಯಂಕಾಲ 5 ನಂತರ ನೀರು ಕೊಡುವುದು ಒಳಿತು. ಮಣ್ಣಿನಲ್ಲಿ ಜೈವಿಕಾಧಾರಿತ ಫಲವತ್ತತೆ ಜಾಸ್ತಿಮಾಡುವುದು. ಶಿಫಾರಸ್ಸು ಮಾಡಿದಷ್ಟೆ ಬೀಜಗಳ ಬಳಕೆ ಮತ್ತು ನಿಖರವಾದ ಬಿತ್ತನೆ ಮತ್ತು ನೀರಾವರಿ ಪದ್ಧತಿ ಅನುಸರಿಸಬೇಕು. ಬೆಳೆವರ್ಧಕ ಮತ್ತು ಪೀಡೆ ನಿರ್ವಹಣೆ ಔಷಧಿಗಳನ್ನು ಕೊಂಡು ಕೊಳ್ಳುವ ಮುಂಚೆ ಕೃಷಿ ವಿಜ್ಞಾನಿಗಳ ಅಥವಾ ತಂತ್ರಜ್ಞರ ಜೊತೆ ಪರಾಮರ್ಶಿಸುವುದು ಬಲು ಸೂಕ್ತ. ಮಣ್ಣು ಮತ್ತು ನೀರಿನ ಪರೀಕ್ಷೆ ಆಧಾರದ ಮೇಲೆ ಸೂಕ್ತ ಬೆಳೆ ಮತ್ತು ಹಂಗಾಮಿನ ಆಯ್ಕೆ ಮಾಡಿಕೊಳ್ಳುವ ಮೂಲಕವೂ ರೋಗವನ್ನು ಹತೋಟಿಗೆ ತರಬಹುದಾಗಿದೆ.
      ಆಸಕ್ತ ರೈತರಿಗೆ ಕೊಬಾಲ್ಟ್ ಕ್ಲೋರೈಡ್‍ನ್ನು ಕೊಪ್ಪಳ ತಾಲೂಕಾ ಪಂಚಾಯತಿ ಆವರಣದಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಪೂರೈಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು  ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಮುಂಗಾರು ಬೀಜ ದಿನೋತ್ಸವ ಯಶಸ್ವಿ


ಕೊಪ್ಪಳ ಮೇ. 30 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಪ್ರಾದೇಶಿಕ ಎಣ್ಣೆಕಾಳು ಬೆಳೆಗಾರರ ಒಕ್ಕೂಟ ಮತ್ತು  ಕರ್ನಾಟಕ ರಾಜ್ಯ ಬೀಜ ಮತ್ತು  ಸಾವಯವ ಪ್ರಮಾಣ ಸಂಸ್ಥೆ, ರಾಯಚೂರು, ಇವರ ಸಂಯುಕ್ತ ಆಶ್ರಯದಲ್ಲಿ, ಕೊಪ್ಪಳದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಮುಂಗಾರು ಬೀಜ ದಿನೋತ್ಸವ ಮತ್ತು ಬೀಜೋಪಚಾರ ಅಂದೋಲನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
     ಕೊಪ್ಪಳ ಜಿಲ್ಲೆಯ ರೈತರು ಮತ್ತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರÀದ ತೋಟಗಾರಿಕೆ ವಿಜ್ಞಾನಿ ಸುಧಾಕರ ಟಿ. ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತರಿಗೆ ಮುಂಗಾರು ಬೆಳೆಗಳ ತಾಂತ್ರಿಕ ಮಾಹಿತಿ, ಬೀಜೋಪಚಾರದ ಮಹತ್ವ, ಸುಧಾರಿತ ಬೀಜೋತ್ಪಾದನಾ ಮತ್ತು ರೈತರ ಸಹಭಾಗಿತ್ವದ ಬೀಜೋತ್ಪಾದನಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಾಗು ವಿಜ್ಞಾನಿಗಳ ಮತ್ತು ರೈತರ ಜೊತೆ ಸಂವಾದವನ್ನು ಏರ್ಪಡಿಸಲಾಯಿತು.  ಈ ಸಂದರ್ಭದಲ್ಲಿ ಬೀಜ ಮತ್ತು ತೋಟಗಾರಿಕೆ ಬೆಳೆಗಳ ಸಸಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.  ಇಂತಹ ರೈತಪರ ತರಬೇತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು  ಡಾ|| ಎಂ. ಬಿ. ಪಾಟಿಲ ಮನವಿ ಮಾಡಿದರು.

ಚುನಾವಣೆಗೆ ಸ್ಪರ್ಧಿಸಿದ ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ, ಮೇ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ  ಗ್ರಾಮದ ಇಮಾಮಸಾಬ ಗಚ್ಚಿನಮನಿ (23) ಎಂಬ ವ್ಯಕ್ತಿ ಕಳೆದ ಮೇ. 25 ರಿಂದ ಕಾಣೆಯಾಗಿದ್ದು, ಈ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
          ಕಾಣೆಯಾದ ವ್ಯಕ್ತಿಯು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮೇ.25  ನಾಮಪತ್ರ ಹಿಂತೆಗೆದುಕೊಳ್ಳುವ ದಿನದಂದು ಮಧ್ಯಾಹ್ನ 02 ಗಂಟೆಗೆ ಮನೆಯಿಂದ ಹೊರಗೆ ಹೋದವನು ವಾಪಸ್ ಬಂದಿಲ್ಲ. ಕಾಣೆಯಾದ ವ್ಯಕ್ತಿಯ ಚಹರೆ ವಿವರ ಇಂತಿದೆ.  ವ್ಯಕ್ತಿ ಹೆಸರು : ಇಮಾಮಸಾಬ ತಂದೆ ಹುಸೇನಸಾಬ ಗಚ್ಚಿನಮನಿ, ವಯಸ್ಸು: 23, ಸಾ|| ದೋಟಿಹಾಳ ತಾ||ಜಿ||ಕೊಪ್ಪಳ, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ, ಹಣೆಯ ಮಧ್ಯಭಾಗದಲ್ಲಿ ಸಣ್ಣ ಹಳೆಯ ಗಾಯದ ಕಲೆ, ಮನೆಯಿಂದ ಹೊರಡುವಾಗ ಒಂದು ಬಿಳಿ ಬಣ್ಣದ ಚೌಕಳಿಯ ತುಂಬು ತೋಳಿನ ಅಂಗಿ, ಒಂದು ಬೂದಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. 
      ಈ ಚಹರೆಯುಳ್ಳ ವ್ಯಕ್ತಿಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಅಥವಾ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಷ್ಟಗಿ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 08536-267033, ಕೊಪ್ಪಳ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ: 08539-230222 ಇವರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Friday, 29 May 2015

ಮೇ. 31 ರ ಬೆಳಿಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ : ಆರ್.ಆರ್. ಜನ್ನು

ಕೊಪ್ಪಳ, ಮೇ.29 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಮೇ. 31 ರ ಬೆಳಿಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ನಂತರದಲ್ಲಿ ಮತದಾರರಲ್ಲದವರು, ಆಯಾ ಕ್ಷೇತ್ರದಲ್ಲಿ ಇರುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದ್ದಾರೆ.
     ಕೊಪ್ಪಳ ಜಿಲ್ಲೆಯಲ್ಲಿ ಮತದಾನವು ಜೂ. 02 ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ.  ಚುನಾವಣಾ ಪ್ರಚಾರ ಅವಧಿಯು ಮೇ. 31 ರ ಬೆಳಿಗ್ಗೆ 7 ಕ್ಕೆ ಮುಕ್ತಾಯವಾಗಲಿದ್ದು, ಪ್ರಚಾರದ ಅವಧಿ ಮುಕ್ತಾಯದ ನಂತರ ಗ್ರಾಮ ಪಂಚಾಯತಿ ಮತದಾರರಲ್ಲದವರು, ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯ ಪಕ್ಷದ ಮುಖಂಡರು, ಪಕ್ಷಗಳ ಕಾರ್ಯಕರ್ತರು, ಮೆರವಣಿಗೆ ಕಾರ್ಯ ಹಾಗೂ ಪ್ರಚಾರ ಕಾರ್ಯ ನಿರ್ವಹಿಸುವವರು, ಅಂತಹ ಪಂಚಾಯತಿ ವ್ಯಾಪ್ತಿಯಲ್ಲಿ ವಾಸ್ತವ್ಯ ಮುಂದುವರೆಸಿದಲ್ಲಿ ಚುನಾವಣೆಯನ್ನು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ನಡೆಸಲು ತೊಂದರೆಯಾಗುವ ಸಾಧ್ಯತೆ ಇರುತ್ತದೆ. 
ಕ್ಷೇತ್ರ ಬಿಟ್ಟು ಹೊರಡಿ : ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಜರುಗಿಸುವ ಉದ್ದೇಶದಿಂದ ಮೇ. 30 ರ ರಾತ್ರಿ 10 ಗಂಟೆಯ ನಂತರ ಆಯಾ ಗ್ರಾಮ ಪಂಚಾಯತಿ ಮತದಾರರಲ್ಲದ ಹೊರಗಿನ ವ್ಯಕ್ತಿಗಳು ಪಂಚಾಯತಿ ವ್ಯಾಪ್ತಿಯನ್ನು ಬಿಡಬೇಕು.  ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಸಮುದಾಯ ಭವನ, ಇತರೆ ಕಡೆಗಳಲ್ಲಿ ಪಂಚಾಯತಿ ವ್ಯಾಪ್ತಿಯ ಮತದಾರರಲ್ಲದ ಹೊರಗಿನ ವ್ಯಕ್ತಿಗಳ ಇರುವಿಕೆಯ ಬಗ್ಗೆ ತಪಾಸಣೆ ನಡೆಸಲಾಗುವುದು,  ಗ್ರಾ.ಪಂ. ವ್ಯಾಪ್ತಿಯ ಗಡಿಯಲ್ಲಿ ವಾಹನ ಹಾಗೂ ಜನ ಸಂಚಾರದ ಬಗ್ಗೆ ಪೊಲೀಸ್ ಇಲಾಖೆಯಿಂದ ಸೂಕ್ತ ನಿಗಾ ವಹಿಸಲಾಗುವುದು. 
ಸೂಕ್ಷ್ಮ ಮತಗಟ್ಟೆಯಲ್ಲಿ ಕ್ಯಾಮೆರಾ ನಿಗಾ : ಮತದಾನ ನಡೆಯುವ ಜೂ. 02 ರಂದು ಜಿಲ್ಲೆಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ಮತದಾನ ಪ್ರಕ್ರಿಯೆ ಮತ್ತು ಇತರೆ ಚಟುವಟಿಕೆಗಳ ಬಗ್ಗೆ ವಿಡಿಯೋ ಚಿತ್ರಣ ಮಾಡಲು ಸಹ ಆಯೋಗ ಸೂಚನೆ ನೀಡಿದ್ದು, ಅಗತ್ಯವಿರುವ ವಿಡಿಯೋಗ್ರಾಫರ್‍ಗಳ ನೇಮಕ ಹಾಗೂ ಅವರಿಗೆ ತರಬೇತಿ ಕುರಿತು ಈಗಾಗಲೆ ಅಗತ್ಯ ಕ್ರಮ ಜರುಗಿಸಲಾಗಿದೆ. 
     ಒಟ್ಟಾರೆ ಗ್ರಾಮ ಪಂಚಾಯತಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ.

ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕೊಪ್ಪಳ, ಮೇ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಮುಧೋಳದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿವಿಧ ವೃತ್ತಿ ತರಬೇತಿಗಳಿಗೆ  ಪ್ರಸಕ್ತ ಸಾಲಿನ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     ಯಲಬುರ್ಗಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮ)ಯಲ್ಲಿ ಎಲೆಕ್ಟ್ರಿಷಿಯನ್(ಎನ್.ಸಿ.ವಿ.ಟಿ) ವೃತ್ತಿ ತರಬೇತಿಗೆ 21 ಸೀಟುಗಳು ಲಭ್ಯವಿದ್ದು, ಇ/ಎಮ್ (ಎನ್.ಸಿ.ವಿ.ಟಿ)-26, ಐ&ಸಿ.ಟಿ.ಎಸ್.ಎಮ್ (ಎನ್.ಸಿ.ವಿ.ಟಿ)-26 ಮತ್ತು ಐ.ಡಿ.ಡಿ (ಎಸ್.ಸಿ.ವಿ.ಟಿ) ವೃತ್ತಿ ತರಬೇತಿಗೆ 52 ಸೀಟುಗಳು ಲಭ್ಯವಿವೆ. ಮುಧೋಳ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್(ಎಸ್.ಸಿ.ವಿ.ಟಿ) ವೃತ್ತಿ ತರಬೇತಿಗೆ 21 ಸೀಟುಗಳು ಲಭ್ಯವಿದ್ದು, ಫಿಟ್ಟರ್ (ಎಸ್.ಸಿ.ವಿ.ಟಿ) ವೃತ್ತಿ ತರಬೇತಿಗೆ 21 ಸೀಟುಗಳು ಲಭ್ಯವಿವೆ.    
ಈ ಮೇಲೆ ತಿಳಿಸಿದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರವೇಶ ಬಯಸುವ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ವಿದ್ಯಾರ್ಥಿಗಳು ಮೇ.20 ರಿಂದ ಜೂ.05 ರವರೆಗೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ವೆಬ್‍ಸೈಟ್   www.emptrg.kar.nic.on OR www.det-kar.com/admission-2015 ರ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08534-220470, 9164111338, 8095287843 ಅಥವಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಯಲಬುರ್ಗಾ ಹಾಗೂ ಮುಧೋಳದ ಕಾರ್ಯಾಲಯಗಳಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗ್ರಾಮ ಪಂಚಾಯತಿ ಚುನಾವಣೆ : ಮದ್ಯ ಮಾರಾಟ ನಿಷೇಧಾಜ್ಞೆ ಜಾರಿ

ಕೊಪ್ಪಳ ಮೇ.29(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಹಾಗೂ ಮತ ಎಣಿಕೆ ಕಾರ್ಯ ಸುಗಮವಾಗಿ ಜರುಗಿಸಲು ಅನುಕೂಲವಾಗುವಂತೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶ ಹೊರಡಿಸಿದ್ದಾರೆ.
     ಗ್ರಾ.ಪಂ. ಚುನಾವಣೆ ಸಂಬಂಧ ಜೂ.02 ರಂದು ಮತದಾನ ಜರುಗಲಿದ್ದು, ಜೂ.05 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ.   ಮತದಾನದ ಅಂಗವಾಗಿ ಮೇ.31 ರ ಮಧ್ಯರಾತ್ರಿಯಿಂದ ಜೂ.02 ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ನಿಮಿತ್ಯ ಜೂ.04 ರ ಮಧ್ಯರಾತ್ರಿಯಿಂದ ಜೂ.06 ರ ಬೆಳಿಗ್ಗೆ 08 ಗಂಟೆಯವರೆಗೆ ಅಬಕಾರಿ ಕಾಯ್ದೆ 1965 ಕಲಂ. 21 ರ ಅನ್ವಯ ಮದ್ಯ ಮಾರಾಟ ನಿಷೇಧಿಸಲಾಗಿದೆ. ನಿಷೇಧಾಜ್ಞೆಯನ್ವಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವೈನ್ ಶಾಪ್, ಬಾರ್‍ಗಳು ಹಾಗೂ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ಮಾಡುವಂತಿಲ್ಲ ಅಲ್ಲದೆ ಎಲ್ಲಾ ತರಹದ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ  ಆದೇಶಿಸಲಾಗಿದ್ದು, ಈ ಸಂಬಂಧವಾಗಿ ಅಬಕಾರಿ ಉಪ ಆಯುಕ್ತರ ಮುಖಂಡತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು, ಕಾರ್ಯನಿರ್ವಹಿಸಲು ಆದೇಶಿಸಿದೆ. ಈ ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷ್ಯತನ ತೋರಿದವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರ ಆದೇಶದಲ್ಲಿ ತಿಳಿಸಲಾಗಿದೆ.

ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ : ಸಂತೆ-ಜಾತ್ರೆ ಮುಂದೂಡಿಕೆ

ಕೊಪ್ಪಳ, ಮೇ.29 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜೂ.02 ರಂದು ಮತದಾನ ಜರುಗಲಿದ್ದು, ಅಂದು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಸಂತೆ-ಜಾತ್ರೆಗಳನ್ನು 01 ದಿನದ ಮಟ್ಟಿಗೆ ಮುಂದೂಡಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಆದೇಶ ಹೊರಡಿಸಿದ್ದಾರೆ.
     ಮತದಾನದಲ್ಲಿ ಮತದಾರರು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಅಲ್ಲದೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಮತ್ತು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ತಡೆಯಲು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993 ರ ಪ್ರಕರಣ 36 ರನ್ವಯ ಜೂ.02 ರಂದು ಜಿಲ್ಲೆಯಲ್ಲಿ ನಡೆಯುವ ಎಲ್ಲ ಸಂತೆ-ಜಾತ್ರೆಗಳನ್ನು 01 ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ನ್ಯೂನ್ಯತೆ ಸರಿಪಡಿಸಿಕೊಳ್ಳಲು ಮತ್ತೊಂದು ಅವಕಾಶ

ಕೊಪ್ಪಳ, ಮೇ.29 (ಕನಾಟಕ ವಾರ್ತೆ): ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕುರಿತು ಬೆಂಗಳೂರಿನ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಒಳಪಡದಿರುವ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲು ಹಾಗೂ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಯಲ್ಲಿ ಮಾಹಿತಿದಾರರ ಪ್ರಕಾರ ನ್ಯೂನ್ಯತೆಗಳಿದ್ದಲ್ಲಿ ಲಿಖಿತ ಮನವಿ ಮೂಲಕ ಸರಿಪಡಿಸಿಕೊಳ್ಳಲು  ಮೇ.30 ರವರೆಗೆ ಮತ್ತೊಂದು ಅವಕಾಶವನ್ನು ಕಲ್ಪಿಸಿದೆ.
     ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯಾದ್ಯಂತ ಕೈಗೊಳ್ಳಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಮೇ.05 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಜೂ.15 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಕ್ತಾಯಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಸಮೀಕ್ಷೆಗೆ ಒಳಪಡದಿರುವ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲು ಹಾಗೂ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಯಲ್ಲಿ ಮಾಹಿತಿದಾರರ ಪ್ರಕಾರ ಯಾವುದೇ ನ್ಯೂನ್ಯತೆಗಳಿದ್ದಲ್ಲಿ ಲಿಖಿತ ಮನವಿ ಮೂಲಕ ಸರಿಪಡಿಸಿಕೊಳ್ಳಲು ಮೇ.18 ರಿಂದ ಮೇ.27 ರವರೆಗೆ ಕಲಾವಕಾಶವನ್ನು ಕಲ್ಪಿಸಲಾಗಿತ್ತು. ಜೂ.28 ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಹೆಚ್.ಕಾಂತರಾಜ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯೋಗದ ವಿಶೇಷ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸಾರ್ವಜನಿಕರಿಗೆ ಈ ಕಾಲಾವಕಾಶವನ್ನು ಮೇ.28 ರಿಂದ ಮೇ.30 ರವರೆಗೆ ವಿಸ್ತರಿಸಲಾಗಿದೆ.
     ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಯಾವುದಾದರೂ ಕುಟುಂಬವು ಒಳಪಡದೇ ಇದ್ದಲ್ಲಿ ಅಥವಾ ಕುಟುಂಬಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿದ ಮಾಹಿತಿಯಲ್ಲಿ ಯಾವುದಾದರೂ ನ್ಯೂನ್ಯತೆಗಳಿದ್ದಲ್ಲಿ,  ನಗರ ಸಭೆಗಳಿಗೆ ಸಂಬಂಧಿಸಿದಂತೆ ಆಯುಕ್ತರು ನಗರಸಭೆ. ಪುರಸಭೆ  ಹಾಗೂ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಮುಖ್ಯಾಧಿಕಾರಿಗಳಿಗೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ತಹಶೀಲ್ದಾರರಿಗೆ ಲಿಖಿತ ಮನವಿ ಮೂಲಕ ಮಾಹಿತಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-44554444ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಯಲು ಶೌಚಾಲಯ ಮುಕ್ತ ನಗರ : ಸಹಕರಿಸಲು ಮನವಿ

ಕೊಪ್ಪಳ, ಮೇ.29 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಕೊಪ್ಪಳ ನಗರಸಭೆಯಲ್ಲಿರುವ 31 ವಾರ್ಡುಗಳ ಪೈಕಿ ವಾರ್ಡ್ ನಂ.27 ಮತ್ತು ವಾರ್ಡ್ ನಂ.29 ಪ್ರದೇಶಗಳನ್ನು ಬಯಲು ಶೌಚಾಲಯ ಮುಕ್ತ ವಾರ್ಡ್‍ಗಳೆಂದು ಘೋಷಿಲಾಗಿದ್ದು, ಅದೇ ಮಾದರಿಯಲ್ಲಿ ಇತರೆ ವಾರ್ಡ್‍ಗಳಲ್ಲಿರುವ ಸಾರ್ವಜನಿಕರು ಜನಪ್ರತಿನಿಧಿಗಳು ವೈಯಕ್ತಿಕ ಶೌಚಾಲಕ್ಕೆ ಪ್ರೇರಣೆ ನೀಡಿ, ಕೊಪ್ಪಳ ನಗರವನ್ನು ಬಯಲು ಶೌಚಾಲಯ ಮುಕ್ತ ನಗರವೆಂದು ಘೋಷಿಸಲು ಸಹಕರಿಸಬೇಕು ಎಂದು ಪೌರಾಯುಕ್ತ ರಮೇಶ ಪಟ್ಟೇದ್ ಪ್ರಕಟಣೆಯಲ್ಲಿ ಕೋರಿದ್ದಾರೆ. 

Tuesday, 26 May 2015

ಬಿ.ಎಫ್.ಎ ತರಗತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ, ಮೇ.26 (ಕರ್ನಾಟಕ ವಾರ್ತೆ): ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗೆ ಪ್ರಥಮ ಮೂಲ ತರಗತಿ ಹಾಗೂ ಪ್ರಥಮ ಬಿ.ಎಫ್.ಎ. ತರಗತಿಗಳ ಪ್ರವೇಶಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಪ್ರಥಮ ಮೂಲ ತರಗತಿ ಮತ್ತು ಪ್ರಥಮ ಬಿ.ಎಫ್.ಎ ತರಗತಿಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ (ಗ್ರಾಫಿಕ್ಸ್), ಅನ್ವಯಕಲೆ, ಛಾಯಾಚಿತ್ರ ಮತ್ತು ಛಾಯಾಪತ್ರಿಕೋದ್ಯಮ, ಕಲಾ ಇತಿಹಾಸ ತರಗತಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಪ್ರಥಮ ಮೂಲ ತರಗತಿಗೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಸಂದರ್ಶನದ ದಿನಾಂಕಕ್ಕೆ 22 ವರ್ಷ ಮೀರಿರಬಾರದು. ಪ್ರಥಮ ಬಿ.ಎಫ್.ಎ ತರಗತಿಗೆ ದ್ವಿತೀಯ ಮೂಲತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಸಂದರ್ಶನದ ದಿನಾಂಕಕ್ಕೆ 24 ವರ್ಷ ಮೀರಿರಬಾರದು.  ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣ ಪತ್ರಿಕೆಯನ್ನು ರೂ.190/- ಪಾವತಿಸಿ ಖುದ್ದಾಗಿ ಅಥವಾ ರೂ.215/- ಡಿ.ಡಿ.ಯನ್ನು ಡೀನ್, ಕಾವಾ, ಸಯ್ಯಾಜಿರಾವ್ ರಸ್ತೆ, ಸಿ.ಟಿ.ಐ. ಕಟ್ಟಡ ಮೈಸೂರು-570001 ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಕಳುಹಿಸಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಡೀನ್, ಕಾವಾ, ಸಯ್ಯಾಜಿರಾವ್ ರಸ್ತೆ, ಸಿ.ಟಿಐ. ಕಟ್ಟಡ ಮೈಸೂರು-570001 ಗೆ ಕಳುಹಿಸಬಹುದಾಗಿದೆ. ಪ್ರಥಮ ಮೂಲ ತರಗತಿಗೆ ಅರ್ಜಿ ಸಲ್ಲಿಸಲು ಜೂ.02 ಕೊನೆಯ ದಿನವಾಗಿದೆ. ಅರ್ಹತಾ ಪರೀಕ್ಷೆಯು ಜೂ.10 ರಂದು ಬೆಳಿಗ್ಗೆ 11.00 ಗಂಟೆಗೆ ಟಿ.ನರಸೀಪುರ ರಸ್ತೆಯಲ್ಲಿರುವ ಭಾರತ ಸರಕಾರದ ಪಠ್ಯಪುಸ್ತಕ ಮುದ್ರಣಾಲಯದ ಆವರಣದಲ್ಲಿ ನಡೆಯಲಿದ್ದು, ಅಂದು ಮದ್ಯಾಹ್ನ 2 ಗಂಟೆಗೆ ವೈಯಕ್ತಿಕ ಸಂದರ್ಶನ ನಡೆಯಲಿದೆ. ಕಾಲೇಜು ಶುಲ್ಕ ಪಾವತಿಸಲು ಜೂ.12 ಅಂತಿಮ ದಿನಾಂಕವಾಗಿದ್ದು, ಜೂ.15 ರಿಂದ ತರಗತಿಗಳ ಪ್ರಾರಂಭಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳ : ಬೀದಿ ವ್ಯಾಪಾರಸ್ಥರಿಗೆ ತರಬೇತಿ ಶಿಬಿರ

ಕೊಪ್ಪಳ, ಮೇ.26 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸಮೀಕ್ಷೆ ಮೂಲಕ ಗುರುತಿಸಲ್ಪಟ್ಟಿರುವ ಕೊಪ್ಪಳ ನಗರದ ಬೀದಿ ವ್ಯಾಪಾರಸ್ಥರಿಗೆ ವಿವಿಧ ವಿಷಯಗಳ ಕುರಿತು ಮೇ. 28 ಮತ್ತು 29 ರಂದು ಎರಡು ದಿನಗಳ ತರಬೇತಿ ಶಿಬಿರವನ್ನು ಕೊಪ್ಪಳದಲ್ಲಿ ಆಯೋಜಿಸಲಾಗಿದೆ.
     ತರಬೇತಿ ಶಿಬಿರವು ಮೇ.28 ಮತ್ತು 29 ರಂದು ಬೆಳಿಗ್ಗೆ 09.30 ಗಂಟೆಯಿಂದ ಸಂಜೆ 06.00 ಘಂಟೆಯವರೆಗೆ ಕೊಪ್ಪಳ ನಗರಸಭೆ ಕಾರ್ಯಾಲಯದ ಎದುರುಗಡೆ ಇರುವ ರುಡ್ ಸೆಟ್ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.  ಈಗಾಗಲೇ ನಗರಸಭೆಯಿಂದ ಬೀದಿ ವ್ಯಾಪಾರಸ್ಥರ ಗುರುತಿನ ಚೀಟಿ ಪಡೆದಿರುವವರು ಶಿಬಿರದಲ್ಲಿ ಭಾಗವಹಿಸಿ, ತರಬೇತಿಯ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಶಿಬಿರವನ್ನು ಯಶಸ್ವಿಗೊಳಿಸುವಂತೆ  ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್ ಪ್ರಕಟಣೆಯಲ್ಲಿ ಕೋರಿದ್ದಾರೆ. 

ಹುಲಿಗೆಮ್ಮ ದೇವಸ್ಥಾನ ಆವರಣದಲ್ಲಿ ಪ್ರಾಣಿಬಲಿ ನಿಷೇಧ

ಕೊಪ್ಪಳ ಮೇ. 26 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣ (ಕಾಟೇಜ್) ದಲ್ಲಿ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನುಗಳಲ್ಲಿ ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು ಅಲ್ಲದೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನಗಳಂದು ಪ್ರಾಣಿಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶ ಹೊರಡಿಸಿದ್ದಾರೆ.
     ಹುಲಿಗಿಯಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಹುಣ್ಣಿಮೆಯ ದಿನಗಳಂದು ದೇವಸ್ಥಾನದ ಆವರಣದಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದು, ನೆರೆಯ ಗ್ರಾಮಗಳು ಅಲ್ಲದೆ ರಾಜ್ಯದ ನಾನಾ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡಿ, ದೇವರ ಹರಕೆ, ಇತರೆ ಧಾರ್ಮಿಕ ವಿಧಿ ವಿಧಾನ ನೆರವೇರಿಸುತ್ತಿದ್ದು, ಕರ್ನಾಟಕ ಪಾಣಿ ಬಲಿ ನಿಷೇಧ ನಿಯಮಗಳನ್ವಯ ಇದು ಅಪರಾಧವಾಗಿರುತ್ತದೆ.  ಈ ಪದ್ಧತಿಯು ಅತ್ಯಂತ ಕ್ರೂರ ಹಾಗೂ ಅವೈಜ್ಞಾನಿಕವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವುದರ ಜೊತೆಗೆ ಅನೈರ್ಮಲ್ಯಕ್ಕೂ ಕಾರಣವಾಗುತ್ತಿದೆ.  ಪ್ರಾಣಿ ಬಲಿ ನಿಷೇಧಿಸುವಂತೆ ಪ್ರಾಣಿ ದಯಾ ಸಂಘಗಳು ಮನವಿ ಸಲ್ಲಸಿರುತ್ತಾರೆ.  ಕರ್ನಾಟಕ ಪ್ರಾಣಿ ನಿಷೇಧ ಕಾಯ್ದೆ ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳನ್ವಯ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣ (ಕಾಟೇಜ್) ದಲ್ಲಿ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನುಗಳಲ್ಲಿ ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು ಅಲ್ಲದೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನಗಳಂದು ಪ್ರಾಣಿಬಲಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಗ್ರಾ.ಪಂ. ಚುನಾವಣೆ : 2486 ಸ್ಥಾನಗಳಿಗೆ 7203 ಅಭ್ಯರ್ಥಿಗಳು ಕಣದಲ್ಲಿ

ಕೊಪ್ಪಳ ಮೇ. 26 (ಕರ್ನಾಟಕ ವಾರ್ತೆ): ಪ್ರಸಕ್ತ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ 148 ಗ್ರಾಮ ಪಂಚಾಯತಿಗಳ 2677 ಸ್ಥಾನಗಳ ಪೈಕಿ 2486 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 7203 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  171 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
     ಜಿಲ್ಲೆಯ 148 ಗ್ರಾಮ ಪಂಚಾಯತಿಗಳಿಗೆ ನಡೆಯಲಿರುವ ಚುನಾವಣೆ ಪ್ರಕ್ರಿಯೆ ಇದೀಗ ಪ್ರಮುಖ ಘಟ್ಟ ತಲುಪಿದೆ.  ಉಮೇದುವಾರಿಕೆ ಹಿಂಪಡೆಯುವಿಕೆಗೆ ಮೇ. 25 ಕೊನೆಯ ದಿನವಾಗಿತ್ತು.  ಇದೀಗ 148 ಗ್ರಾ.ಪಂ. ಗಳ 2677 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದು, ನಾಮಪತ್ರ ಸಲ್ಲಿಕೆಯಾಗದಿರುವುದು, ಅವಿರೋಧ ಆಯ್ಕೆ ಹಾಗೂ ಉಮೇದುವಾರಿಕೆ ಹಿಂಪಡೆಯುವ ಪ್ರಕ್ರಿಯೆಯ ನಂತರ 2486 ಸ್ಥಾನಗಳಿಗಾಗಿ 7203 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 706, ಗಂಗಾವತಿ-677, ಕುಷ್ಟಗಿ-551 ಮತ್ತು ಯಲಬುರ್ಗಾ ತಾಲೂಕಿನಲ್ಲಿ 552 ಸೇರಿದಂತೆ ಒಟ್ಟು 2486 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
7203 ಅಭ್ಯರ್ಥಿಗಳು ಕಣದಲ್ಲಿ : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೊಪ್ಪಳ ತಾಲೂಕಿನಲ್ಲಿ 2181 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-443, ಪ.ಪಂಗಡ-197, ಹಿಂದುಳಿದ ಅ ವರ್ಗ- 324, ಹಿಂದುಳಿದ ಬ ವರ್ಗ-71 ಮತ್ತು ಸಾಮಾನ್ಯ ವರ್ಗದ 1146 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 1821 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-388, ಪ.ಪಂಗಡ-306, ಹಿಂದುಳಿದ ಅ ವರ್ಗ- 155, ಹಿಂದುಳಿದ ಬ ವರ್ಗ-33 ಮತ್ತು ಸಾಮಾನ್ಯ ವರ್ಗದ 939 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಕುಷ್ಟಗಿ ತಾಲೂಕಿನಲ್ಲಿ 1569 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-246, ಪ.ಪಂಗಡ-229, ಹಿಂದುಳಿದ ಅ ವರ್ಗ- 228, ಹಿಂದುಳಿದ ಬ ವರ್ಗ-53 ಮತ್ತು ಸಾಮಾನ್ಯ ವರ್ಗದ 1569 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಯಲಬುರ್ಗಾ ತಾಲೂಕಿನಲ್ಲಿ 1632 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-345, ಪ.ಪಂಗಡ-181, ಹಿಂದುಳಿದ ಅ ವರ್ಗ- 199, ಹಿಂದುಳಿದ ಬ ವರ್ಗ-51 ಮತ್ತು ಸಾಮಾನ್ಯ ವರ್ಗದ 1632 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 
ನಾಮಪತ್ರವಿಲ್ಲದೆ ಖಾಲಿ ಉಳಿದಿದ್ದು : ಕೊಪ್ಪಳ ತಾಲೂಕಿನ 7 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಅದೇ ರೀತಿ ಕುಷ್ಟಗಿ ತಾಲೂಕಿನಲ್ಲಿ 02 ಮತ್ತು ಯಲಬುರ್ಗಾ ತಾಲೂಕಿನ 05 ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಉಮೇದುವಾರಿಕೆ ಹಿಂಪಡೆದ ಕಾರಣದಿಂದ ಯಲಬುರ್ಗಾ ತಾಲೂಕಿನ 06 ಸ್ಥಾನಗಳಿಗೆ ಯಾವುದೇ ಅಭ್ಯರ್ಥಿಗಳು ಕಣದಲ್ಲಿ ಇಲ್ಲದಂತಾಗಿದೆ.
171 ಅವಿರೋಧ ಆಯ್ಕೆ : ಜಿಲ್ಲೆಯಲ್ಲಿ ಈ ಬಾರಿಯ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 171 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 23, ಗಂಗಾವತಿ- 73, ಕುಷ್ಟಗಿ-54 ಮತ್ತು ಯಲಬುರ್ಗಾ ತಾಲೂಕಿನಲ್ಲಿ 21 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.  ಇದರಿಂದಾಗಿ ಕೊಪ್ಪಳ ತಾಲೂಕಿನ 736 ಸದಸ್ಯ ಸ್ಥಾನಗಳ ಪೈಕಿ 706 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.  ಗಂಗಾವತಿ ತಾಲೂಕಿನಲ್ಲಿ 750 ಸದಸ್ಯ ಸ್ಥಾನಗಳ ಪೈಕಿ 677 ಸ್ಥಾನಗಳಿಗೆ.  ಕುಷ್ಟಗಿ ತಾಲೂಕಿನಲ್ಲಿ 607 ಸದಸ್ಯ ಸ್ಥಾನಗಳ ಪೈಕಿ 551 ಸ್ಥಾನಗಳಿಗೆ ಹಾಗೂ ಯಲಬುರ್ಗಾ ತಾಲೂಕಿನಲ್ಲಿ 584 ಸ್ಥಾನಗಳ ಪೈಕಿ 552 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಜೂ. 02 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಕಳಪೆ ಗುಣಮಟ್ಟದ ಔಷಧ ಪತ್ತೆ : ಎಚ್ಚರಿಕೆ ಸೂಚನೆ

ಕೊಪ್ಪಳ, ಮೇ.26 (ಕರ್ನಾಟಕ ವಾರ್ತೆ): ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಔಷಧ ಮಾರಾಟ ಸಂಸ್ಥೆಗಳ ತಪಾಸಣೆ ಮಾಡಿ ಮಾದರಿ ಪಡೆದ ಔಷಧಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿವಿಧ ಔಷಧಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಲ್ಪಿಟ್ಟಿವೆ. ಸಾರ್ವಜನಿಕರು ಇಂತಹ ಬ್ಯಾಚ್ ಸಂಖ್ಯೆಯ ಔಷಧಗಳನ್ನು ಉಪಯೋಗಿಸಬಾರದು ಹಾಗೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ರಾಜ್ಯ ಔಷಧ ನಿಯಂತ್ರಕ ರಘುರಾಮ ಭಂಡಾರಿ ಅವರು ತಿಳಿಸಿದ್ದಾರೆ.
     ಎನ್ರೋಡ್ಯಾಕ್-10, ವೆಟ್ ಇಂಜೆಕ್ಷನ್, ಬ್ಯಾಚ್ ಸಂಖ್ಯೆ: ಝಡ್‍ಎಎಫ್-14009, ತಯಾರಕರು:  ಮೆ|| ಜಿಡಸ್ ಅನಿಮಲ್ ಹೆಲ್ತ್ ಲಿ, ಎ ಡಿವಿಷನ್ ಆಫ್ ಕ್ಯಾಡಿಲ ಹೆಲ್ತ್‍ಕೇರ್ ಲಿ, ಅಹಮದಾಬಾದ್-382445. ಇಟೋಸಿನ್, ಆಕ್ಸಿಟೋಸಿನ್ ಇಂಜೆಕ್ಷನ್ ಐ.ಪಿ, ಬ್ಯಾಚ್ ಸಂಖ್ಯೆ:054009ಎನ್‍ಎಲ್, ತಯಾರಕರು: ಮೆ||ನಿತಿನ್ ಲೈಫ್ ಸೈನ್ಸಸ್ ಲಿ,  ಹೆಚ್.ಪಿ(ಹಿಮಾಚಲ ಪ್ರದೇಶ). ಬಯೋಟೋಸಿನ್, ಆಕ್ಸಿಟೋಸಿನ್ ಇಂಜೆಕ್ಷನ್ ಐ.ಪಿ, ಬ್ಯಾಚ್ ಸಂಖ್ಯೆ: ಬಿಎನ್‍ಎಲ್-008, ತಯಾರಕರು:  ಮೆ||ಎಸ್.ಜಿ.ಎಸ್ ಫಾರ್ಮಾಸ್ಯೂಟಿಕಲ್ ಪ್ರೈ.ಲಿ, 162/1, ರೂರ್ಕಿ-247667, ಉತ್ತರಾಖಂಡ. ಬಯೋಟೋಸಿನ್, ಆಕ್ಸಿಟೋಸಿನ್ ಇಂಜೆಕ್ಷನ್ ಐ.ಪಿ, ಬ್ಯಾಚ್ ಸಂಖ್ಯೆ: ಬಿ.ಸಿ-1078, ತಯಾರಕರು:  ಮೆ|| ಇ.ಜಿ ಫಾರ್ಮಾಸ್ಯೂಟಿಕಲ್ಸ್, ವಿಲ್ ಮಂಧಲ, ತೆಹ ಕೌಸಾಲಿ, ಡಿಸ್ಟ್ರಿಕ್ಟ್ ಸೋಲಾನ್, ಹೆಚ್.ಪಿ. ಮ್ಯಾಕ್ಸಿಟೋಸಿನ್, ಆಕ್ಸಿಟೋಸಿನ್ ಇಂಜೆಕ್ಷನ್ ಐ.ಪಿ, ಬ್ಯಾಚ್ ಸಂಖ್ಯೆ: ಇಡಬ್ಲ್ಯೂಎಲ್‍ಐ-184, ತಯಾರಕರು:  ಮೆ|| ಝೀ ಲ್ಯಾಬೋರೇಟರೀಸ್ ಲಿ, ಬಿಹೈಂಡ್ 47, ಪೋಂಟ ಸಾಹಿಬ್-173025. ಎಪಿ ಅನ್ಟಾಸಿಡ್, ಚ್ಯುವೇಬಲ್ ಟ್ಯಾಬ್ಲೆಟ್, ಬ್ಯಾಚ್ ಸಂಖ್ಯೆ: 053ಎಎ11, ತಯಾರಕರು: ಮೆ||ಅಕುಮ್ಸ್ ಡ್ರಗ್ಸ್ ಆಂಡ್ ಫಾರ್ಮಾಸ್ಯೂಟಿಕಲ್ಸ್ ಲಿ, ಹರಿದ್ವಾರ್-249403. ಕ್ಲೋರ್‍ಫೆನಿರಮೈನ್, ಮ್ಯಾಲಿಯೇಟ್ ಇಂಜೆಕ್ಷನ್ ಐ.ಪಿ, ಬ್ಯಾಚ್ ಸಂಖ್ಯೆ: ಪಿ1664, ತಯಾರಕರು: ಮೆ|| ಪಾರ್ಕ್ ಬೆನ್ಜ್ ಲ್ಯಾಬೋರೆಟರೀಸ್, ಮನ್ಡಿದೀಪ್, ಡಿಸ್ಟ್ರಿಕ್ಟ್ ರೇಸೆನ್. ರಬೆಪ್ರಜೋಲ್ ಟ್ಯಾಬ್ಲೆಟ್ಸ್ ಐ.ಪಿ 20 ಎಂಜಿ(ನ್ಯೂಟ್ರಾಲ್-20), ಬ್ಯಾಚ್ ಸಂಖ್ಯೆ: ಎನ್-1303, ತಯಾರಕರು: ಮೆ|| ವ್ಯಾಕ್ಸ್‍ಮ್ಯಾನ್ ಸೆಲ್‍ಮ್ಯಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ.ಲಿ, ಅನಂತಪುರ-515004. ಫ್ಯೂರೊಕ್ಸಿ-500, ಬ್ಯಾಚ್ ಸಂಖ್ಯೆ: ಟಿ-262, ತಯಾರಕರು: ಮೆ|| ಸಾಫ್‍ನಿಕ್ಸ್ ಲೈಫ್ ಸೈನ್ಸಸ್, ವಿಲೇಜ್ ಬರೋಟಿವಾಲಾ, ಪೋಂಟ ಸಾಹಿಬ್-173025, ಹೆಚ್.ಪಿ. ಅಜಿಪ್ಯಾನ್-100 ಡಿಟಿ 100 ಎಮ್‍ಜಿ ಟ್ಯಾಬ್ಲೆಟ್ಸ್, ಬ್ಯಾಚ್ ಸಂಖ್ಯೆ: ಟಿ-140784, ತಯಾರಕರು: ಮೆ||ಮೆರಿಲ್ ಫಾರ್ಮಾ ಪ್ರೈ.ಲಿ,  ರಾಯಪುರ, ಭಗವಾನ್‍ಪುರ, ರೂರ್ಕಿ ಉತ್ತರಾಖಂಡ.  ಜಿನೆಸೆಫ್, ಮೌತ್ ಡಿಸಾಲ್ವಿಂಗ್ ಟ್ಯಾಬ್ಲೆಟ್ಸ್, ಬ್ಯಾಚ್ ಸಂಖ್ಯೆ: ಹೆಚ್‍ಟಿಬಿ467ಜಿ, ತಯಾರಕರು: ಮೆ|| ಹಿಮಾಲಯ ಮೆಡಿಕಲ್ಸ್ ಪ್ರೈ.ಲಿ, ಡೆಹರಾಡೂನ್. ರೋಲರ್ ಬ್ಯಾಂಡೇಜ್ ಶೆಡ್ಯೂಲ್ ಎಫ್(2), ಬ್ಯಾಚ್ ಸಂಖ್ಯೆ: 34, ತಯಾರಕರು: ಮೆ|| ಶ್ರೀ ಪದ್ಮಲಕ್ಷ್ಮಿ ಸರ್ಜಿಕಲ್ಸ್, 1/288/ಡಿ8, ರಾಜಾಪಾಳ್ಯಂ, ತಮಿಳುನಾಡು. ಬೆರ್ರಿಸೆಫ್ 100ಡಿಟಿ, ಸೆಫಿಕ್ಲೈಮ್ ಡಿಸ್ಪರ್ಸಿಬಲ್ ಟ್ಯಾಬ್ಲೆಟ್ಸ್ 100 ಎಂಜಿ, ಬ್ಯಾಚ್ ಸಂಖ್ಯೆ: ಟಿ-381, ತಯಾರಕರು:     ಮೆ|| ಕೇರ್‍ವೆಲ್ ಹೆಲ್ತ್ ಕೇರ್, 142, ಅಹಮದಾಬಾದ್-382210. ರಬಲ್ಕೆಮ್-20, ರಬೆಪ್ರಜೋಲ್ ಗ್ಯಾಸ್ಟ್ರೋ-ರೆಸಿಸ್ಟ್ಯಾಂಟ್ ಟ್ಯಾಬ್ಲೆಟ್ಸ್ ಐ.ಪಿ, ಬ್ಯಾಚ್ ಸಂಖ್ಯೆ: ಆರ್‍ಬಿಎಟಿ 14009, ತಯಾರಕರು: ಮೆ||ರವಿಯಾನ್ ಲೈಫ್ ಸೈನ್ಸ್ ಪ್ರೈ.ಲಿ, ಹರಿದ್ವಾರ-249403, ಉತ್ತರಾಖಂಡ. ಲಾಸಿಪ್ರೋನ್-500, ಸಿಪ್ರೊಫ್ಲೊಕ್ಸಾಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ, ಬ್ಯಾಚ್ ಸಂಖ್ಯೆ: ಎಲ್‍ಎಫ್‍ಎಫ್-1402, ತಯಾರಕರು: ಮೆ|| ಕಾನ್‍ಕೋರ್ಡ್ ಡ್ಲಗ್ಸ್ ಲಿ. ನಲ್ಹೇರ, ಅನಂತಪುರ, ರೂರ್ಕಿ-247688, ಉತ್ತರಾಖಂಡ. ಅಸೆವಾನ್ ಪ್ಲಸ್, ಅಸೆಕ್ಲೊಫೆನಾಕ್ ವಿತ್ ಪ್ಯಾರಾಸಿಟಮಾಲ್ ಟ್ಯಾಬ್ಲೆಟ್, ಬ್ಯಾಚ್ ಸಂಖ್ಯೆ: ಆರ್‍ಟಿಎ 140201, ತಯಾರಕರು: ಮೆ|| ರಾಶಿ ಫಾರ್ಮಾಸ್ಯೂಟಿಕಲ್ಸ್,  ದಾಸರಹೊಸಹಳ್ಳಿ, ಎಸ್.ಜಿ ಕೋಟೆ ಪೋಸ್ಟ್, ಬಂಗಾರಪೇಟೆ-563114, ಕೋಲಾರ ಜಿಲ್ಲೆ.  ಕ್ಯಾಲ್ಸಿಯಂ ಬೊರೊಗ್ಲುಕೋನೇಟ್ ಇಂಜೆಕ್ಷನ್ ಐ.ಪಿ,    ಬ್ಯಾಚ್ ಸಂಖ್ಯೆ: ಬಿಸಿ1410, ತಯಾರಕರು: ಮೆ||ವೆಟೆನ್ಡಿಯಾ ಫಾರ್ಮಾಸ್ಯುಟಿಕಲ್ಸ್ ಲಿ, ಎ-6/1, ಹೈದ್ರಾಬಾದ್-500062. ಆ್ಯಕ್ಸ್-200, ಸೆಫಿಕ್ಲೈಮ್ ಟ್ಯಾಬ್ಲೆಟ್ಸ್ ಐ.ಪಿ, ಬ್ಯಾಚ್ ಸಂಖ್ಯೆ: ಜಿಎಎಕ್ಸ್ 2-1402, ತಯಾರಕರು: ಮೆ|| ಕೋನಿಸ್ ಫಾರ್ಮಾಸ್ಯುಟಿಕಲ್ಸ್ ಪ್ರೈ.ಲಿ,  ಸೋಲಾನ್, ಹೆಚ್.ಪಿ-173212.  ಅಜಿರಿ-250, ಅಜಿತ್ರೊಮೈಸಿನ್ ಟ್ಯಾಬ್ಲೆಟ್ಸ್ ಐ.ಪಿ 250ಎಂಜಿ, ಬ್ಯಾಚ್ ಸಂಖ್ಯೆ : ಎಝಡ್-14002, ತಯಾರಕರು: ಮೆ|| ಆಲ್ಟ್ಸ್ ಫಾರ್ಮಾಸ್ಯುಟಿಕ್ಸ್ ಪ್ರೈ. ಲಿ,  ಅಲ್ಮೋರ್-263601, ಉತ್ತರಾಖಂಡ. ಮೆಜೋ-ಡಿ, ಒಮೆಪ್ರಜೋಲ್ & ಡಾಂಪೆರಿಡೋನ್ ಕ್ಯಾಪ್ಸೂಲ್ಸ್, ಬ್ಯಾಚ್ ಸಂಖ್ಯೆ: ಎಮ್‍ಡಿ 14057, ತಯಾರಕರು: ಮೆ|| ಎಡಿ ಲೈಫ್ ಸೈನ್ಸ್‍ಸ್, 5-67/1, ಪೆಡ್ಡ ಅಂಬೆರ್‍ಪೆಟ್, ಆರ್.ಆರ್ ಡಿಸ್ಟ್ರಿಕ್ಟ್, ಹೈದ್ರಾಬಾದ್. ಸೈನೋಕೊಬಲಾಮಿನ್ ಇಂಜೆಕ್ಷನ್ ಐಪಿ, ಬ್ಯಾಚ್ ಸಂಖ್ಯೆ: ಎಸ್‍ವಿ-172, ತಯಾರಕರು: ಮೆ|| ಓಂ ಬಯೋಮೆಡಿಕ್ ಪ್ರೈ. ಲಿ, ಹರಿದ್ವಾರ-249403, ಉತ್ತರಾಖಂಡ. ಡೈಕ್ಲೊಕಾನ್, ಡೈಕ್ಲೊಫಿನ್ಯಾಕ್ ಸೋಡಿಯಂ ಇಂಜೆಕ್ಷನ್ ಐ.ಪಿ, ಬ್ಯಾಚ್ ಸಂಖ್ಯೆ: ಎಡಿಎಫ್-541, ತಯಾರಕರು: ಮೆ|| ಆಲ್ಕೆಮಿಸ್ಟ್ ರೆಮಿಡೀಸ್ ಪ್ರೈ. ಲಿ, 138-139, ದೆವಾಸ್. ಜೆರೋಮ್ಯಾಕ್ಸ್-ಪಿ, ಅಸೆಕ್ಲೊಫೆನಾಕ್ & ಪ್ಯಾರಾಸಿಟಮೊಲ್ ಟ್ಯಾಬ್ಲೆಟ್, ಬ್ಯಾಚ್ ಸಂಖ್ಯೆ: ಎಝಡ್ 13001, ತಯಾರಕರು: ಮೆ|| ಆಲ್ಪ್ಸ್ ಫಾರ್ಮಾಸ್ಯುಟಿಕಲ್ಸ್ ಪ್ರೈ. ಲಿ,  ಅಲ್ಮೋರ-263601, ಉತ್ತರಾಖಂಡ.
     ಔಷಧಿ ವ್ಯಾಪಾರಿಗಳು, ವೈದ್ಯರು, ಆಸ್ಪತ್ರೆಗಳು ಈ ಮೇಲಿನ ಔಷಧಗಳನ್ನು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ, ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ  ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ರಾಜ್ಯ ಔಷಧ ನಿಯಂತ್ರಕ ರಘುರಾಮ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾವಿನ ಬೆಳೆಯಲ್ಲಿ ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ : ರೈತರಿಗೆ ಸಲಹೆಗಳು

ಕೊಪ್ಪಳ ಮೇ. 26 (ಕರ್ನಾಟಕ ವಾರ್ತೆ): ಪ್ರಸಕ್ತ ವರ್ಷ  ಹವಾಮಾನದ ವೈಪರೀತ್ಯದಿಂದಾಗಿ  ಮಾವಿನ ಫಸಲು ಶೇಕಡಾ 40 ರಷ್ಟು ಕಡಿಮೆಯಾಗಿದೆ . ಇದ್ದ ಉತ್ಪನ್ನವನ್ನೇ ಹೆಚ್ಚಿನ ಬೆಲೆ  ದೊರೆಯುವಂತೆ ನೋಡಿಕೊಳ್ಳುವದೇ  ಜಾಣತನ.  ಈ ನಿಟ್ಟಿನಲ್ಲಿ ಮಾವಿನ ಬೆಳೆಯಲ್ಲಿ ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆಗೆ ಕೊಪ್ಪಳ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
ಕೊಯ್ಲು ಮಾಡುವುದು : ಸಾಮಾನ್ಯವಾಗಿ  ತಳಿಯನ್ನಾಧರಿಸಿ ಮತ್ತು ವಾತಾವರಣವನ್ನು ಅನುಸರಿಸಿ ಮಾರ್ಚ 15 ರ  ನಂತರವೇ  ಮಾವು ಕೊಯ್ಲಿಗೆ ಸಿದ್ಧವಾಗುತ್ತದೆ. ಆಪೂಸು. ತೋತಾಪುರಿ ಮತ್ತು ಬಂಗೇನಪಲ್ಲಿ  ಹಣ್ಣುಗಳನ್ನು ಎಪ್ರಿಲ್  ನಂತರವೇ ಕೊಯ್ಲು  ಮಾಡಲಾಗುವುದು.  ಆದರೆ ಮಲ್ಲಿಕಾ ಜೂನ್ ಮೊದಲವಾರದ ನಂತರ ಕೊಯ್ಲಿಗೆ ಸಿದ್ದವಾಗುತ್ತದೆ.  ತೊಟ್ಟಿನ ಭಾಗದಲ್ಲಿ  ಗುಳಿ  ಬಿದ್ದು ಎರಡೂ ಬದಿ ಸಂಪೂರ್ಣ ಉಬ್ಬಿಕೊಂಡಾಗ ಹಣ್ಣುಗಳು ಕಟಾವಿಗೆ  ಸಿದ್ಧ ಎಂಬುದನ್ನು   ತಿಳಿಯಬೇಕು  6ರಿಂದ 8 ಹಣ್ಣುಗಳು ಮಾಗಿ ಕೆಳಗೆ ಉದುರಿದಾಗ ಶೇ.60-70 ರಷ್ಟು  ಹಣ್ಣುಗಳು ಕೊಯ್ಲಿಗೆ  ಸಿದ್ದವಾಗಿದೆ ಎಂಬುದನ್ನು ತಿಳಿಯಬೇಕು.  ಬೆನೆಶಾನ ತಳಿಯು ಹಣ್ಣಾದಲ್ಲಿ  ತೊಟ್ಟಿನ ಹತ್ತಿರ ಸಣ ್ಣಕಪ್ಪು ಅಥವಾ ಕಂದು  ಬಣ್ಣದ ಚುಕ್ಕೆ ಉಂಟಾಗುತ್ತದೆ.
ಕಟಾವು : ಯಾವುದೇ ತಳಿಯಾದರೂ ಮಾವನ್ನು ಬೆಳಗಿನ ಜಾವ ಕಟಾವು ಮಾಡಬೇಕು ಮತ್ತು 10 ಗಂಟೆಯ ಒಳಗೆ ಕಟಾವು ಮಾಡುವುದನ್ನು ಮುಗಿಸಬೇಕು.  ಯಾವುದೇ ಕಾರಣಕ್ಕೂ ಮಧ್ಯಾಹ್ನ 12 ರಿಂದ ಸಾಯಂಕಾಲ 4 ಗಂಟೆಯವರೆಗೆ  ಕಟಾವು ಮತ್ತು ಸಾಗಾಣಿಕೆ  ಮಾಡಬಾರದು. ಹಣ್ಣುಗಳನ್ನು ಒಂದು ಬಕೆಟ್ ನೀರಿನಲ್ಲಿ ಹಾಕಿದಾಗ ಪಕ್ವವಾದ ಹಣ್ಣುಗಳು ಮುಳುಗುತ್ತವೆ ಮತ್ತು ಅಪಕ್ವವಾದ ಹಣ್ಣುಗಳು ನೀರಿನಲ್ಲಿ ತೇಲುತ್ತವೆ.  ಹಣ್ಣುಗಳು ಕಟಾವು ಮಾಡಿದನಂತರ ಪ್ಲಾಸ್ಟಿಕ ಕ್ರೇಟಳಲ್ಲಿ ಸಂಗ್ರಹಿಸಿ 6 ಗಂಟೆಗಳ ವರೆಗೆ ನೆರಳಿನಲ್ಲಿ ಇಡಬೇಕು. ತೆಲೆಕೆಳಗಾಗಿ ಇಡುವುದು ಸೂಕ್ತ.ಕೈಗೆ ಸಿಗುವ ಹಣ್ಣುಗಳಾದರೆ ಕತ್ತರಿಯಿಂದ 1-2 ಸೆ.ಮೀ. ದೇಟು ಇರುವಂತೆ ಕಟಾವುಮಾಡಬೇಕು. ಹಣ್ಣುಗಳು ಎತ್ತರದಲ್ಲಿದ್ದರೆ ಉದ್ದನೆಯ ಕೋಲಿಗೆ ಹರಿತವಾದ ಚಾಕು ಸಿಕ್ಕಿಸಿ ಜೋಳಿಗೆ ಕಟ್ಟಿ  ಕೊಯ್ಯಬೇಕು. ಹಣ್ಣುಗಳು ಕೆಳಗೆ ಬೀಳದಂತೆ ಎಚ್ಚರ ವಹಿಸಬೇಕು. 
     ಪ್ರತಿ ಗಿಡ ಕಟಾವು ಮಾಡಿದಾಗ ಕತ್ತರಿಯನ್ನು ಶೇ.1ರ ಬೋರ್ಡೋ ಅಥವಾ ಶೇ.1ರ ಬಾವಿಸ್ಟಾನ್ ದ್ರಾವಣದಲ್ಲಿ ಅದ್ದಿ ಮತ್ತೆ  ಕಟಾವು ಮಾಡುವುದನ್ನು  ಆರಂಭಿಸಬೇಕು. ನಂತರ ಹಣ್ಣುಗಳನ್ನು 100 ಪಿಪಿಎಂ. ಕ್ಲೋರಿನ್ ದ್ರಾವಣದಲ್ಲಿ ಅದ್ದಬೇಕು.  2 ಗ್ರಾಂ ಬೆನಲೇಟ್+10ಗ್ರಾಂ. ಸರ್ಫ ಪುಡಿ 100ಲೀ. ನೀರಿನಲ್ಲಿ ಬೆರೆಸಿ  ಹಣ್ಣುಗಳನ್ನು  ಕೆಲ ಕಾಲ ಮುಳುಗಿಸಿ ತೆರೆದ ನಂತರ ಸ್ವಚ್ಛವಾದ  ತಣ್ಣೀರಿನಲ್ಲಿ  ತೊಳೆಯಬೇಕು.  ನಂತರ ಶುಭ್ರವಾದ ಹತ್ತಿ ಬಟ್ಟೆಯಿಂದ ಒರೆಸಬೇಕು. ಇದರಿಂದಾಗಿ   ಶಿಲೀಂದ್ರದಿಂದಾಗುವ  ಕಪ್ಪು  ಚುಕ್ಕೆಗಳು  ಇರುವುದಿಲ್ಲ.  ರಫ್ತಿಗಾಗಿ  ಬಳಸುವ   ಹಣ್ಣುಗಳನ್ನು ಶೇ.6ರ ಮೇಣದ ದ್ರಾವಣದಲ್ಲಿ  ಅದ್ದಿ ,ಒಣಗಿದ ನಂತರ  ಹತ್ತಿ ಬಟ್ಟೆಯಿಂದ ಒರೆಸಿ 4 ಕೆ.ಜಿ. ಬಾಕ್ಸಗಳಲ್ಲಿ   ಪೇಪರ್ ವೇಸ್ಟ ಹಾಕಿ   ಜೋಡಿಸಬೇಕು .  ನಂತರ 12 ಡಿಗ್ರಿ ಸೆಲ್ಸಿಯಸ್  ಉಷ್ಣಾಂಶವಿರುವ  ಮತ್ತು ಶೇ.90-95 ಆದ್ರ್ರತೆ ಇರುವ  ಶೀತಲ ಗೃಹಗಳಲ್ಲಿ  ಶೇಖರಣೆ ಮಾಡಬೇಕು.  ಸುಮಾರು  800 ಗ್ರಾಂ. ತೂಗುವ, ಇನ್ನೂ  ಹಸಿರಾಗಿರುವ ಶೇ.7 ರಿಂದ 8 ಸಕ್ಕರೆ  ಅಂಶವಿರುವ  ಹಣ್ಣುಗಳು ರಫ್ತಿಗೆ ಯೋಗ್ಯವಾಗಿದ್ದು,  20 ರಿಂದ 25 ದಿನಗಳಷ್ಟು ಕಾಲ  ಹಡಗಿನ ಮೂಲಕ ಸಾಗಿಸಬಹುದು.  ಒಂದೇ ಸಮನಾದ ಹಣ್ಣುಗಳನ್ನು ಪಡೆಯಲು  ನಿರ್ದಿಷ್ಟವಾದ ವ್ಯಾಸವುಳ್ಳ  ಬಳೆಗಳ ಮೂಲಕ  ಹಾಯಿಸುವುದರಿಂದ ಎ, ಬಿ, ಸಿ. ಶ್ರೇಣಿಗಳನ್ನಾಗಿ ಗ್ರೇಡಿಂಗ್ ಮಾಡಬಹುದು.
ಕೊಯ್ಲೋತ್ತರ : ಪ್ರತಿ ವರ್ಷ ಹೂ ಬಿಡುವ  ಸಮಯ ಮತ್ತು ಸೆಪ್ಟಂಬರ್, ಅಕ್ಟೋಬರ ತಿಂಗಳಲ್ಲಿ  ಒಮ್ಮೆ ಡಿಸೆಂಬರ, ಜೂನ್ ತಿಂಗಳಲ್ಲಿ   ಒಮ್ಮೆ ಪ್ಯಾಕ್ಲೋಬುಟ್ರಾಜಾಲ (ಕಲ್ಟರ್) ಎಂಬ ಔಷದಿಯನ್ನು 5 ಮಿಲಿ 1 ಲೀ. ನೀರಿನಲ್ಲಿ ಬೆರೆಸಿ  ಪ್ರತಿ ಗಿಡದ ಬುಡದಲ್ಲಿ  ಪಾತಿ ಮಾಡಿ 90 ಸೆಂ.ಮೀ. ಅಂತರದಲ್ಲಿ  ಹಾರೆಯಿಂದ   3-4  ಗುಣಿಗಳನ್ನು  ಮಾಡಿ  ಸುರಿಯಬೇಕು. ಈ ರಸಾಯನಿಕದ ಉಪಯೋಗವನ್ನು ತಜ್ಞರ ಸಲಹೆ ಪಡೆದು ಮಾಡಬೇಕು.
     ಹೆಚ್ಚಿನ ಮಾಹಿತಿಗಾಗಿ ವಾಮನ್ ಮೂರ್ತಿ ವಿಷಯ ತಜ್ಞರು, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ  ಕೊಪ್ಪಳ  ಮೊ.ಸಂ. 9482672039 ಮತ್ತು ತೋಟಗಾರಿಕೆ ಇಲಾಖೆ ಕೊಪ್ಪಳ, ದೂ.ಸಂ:08539-231530 ಇವರನ್ನು ಸಂಪರ್ಕಿಸಬಹುದಾಗಿದೆ.  

Monday, 25 May 2015

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಶೀಘ್ರ ಆರಂಭ - ಡಿ.ಸಿ. ಆರ್.ಆರ್. ಜನ್ನು


ಕೊಪ್ಪಳ ಮೇ. 25 (ಕ.ವಾ): ಕೊಪ್ಪಳ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತಿದ್ದು, ಖರೀದಿ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಜರುಗಿದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಪ್ರಕ್ರಿಯೆಯನ್ನು ಶೀಘ್ರ ಪ್ರಾರಂಭಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಅದರನ್ವಯ ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿಯ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು.  ರೈತರು ಬೆಳೆದಿರುವ ಬೇಸಿಗೆ ಬೆಳೆ ಭತ್ತವನ್ನು 2014-15 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ನಿಗದಿಪಡಿಸಿರುವ ದರದಂತೆ ಅಂದರೆ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ  1360 ರೂ. ಹಾಗೂ ಗ್ರೇಡ್-ಎ ಭತ್ತಕ್ಕೆ 1400 ರೂ. ನಂತೆ ಎಫ್.ಎ.ಕ್ಯೂ ಗುಣಮಟ್ಟದ ಭತ್ತವನ್ನು ಖರೀದಿ ಮಾಡಲು ಈಗಾಗಲೆ ಸರ್ಕಾರ ಸೂಚನೆ ನೀಡಿದೆ.  ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಯನ್ನು ಜೂ. 30 ರವರೆಗೆ ಮಾತ್ರ ಕೈಗೊಳ್ಳುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.  ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಬೆಂಬಲ ಬೆಲೆ ಯೋಜನೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಚುನಾವಣಾ ಆಯೋಗವು, ರಾಜಕೀಯ/ಜನಪ್ರತಿನಿಧಿಗಳನ್ನು ಆಹ್ವಾನಿಸುವಂತಿಲ್ಲ ಎಂಬ ಷರತ್ತಿನೊಂದಿಗೆ ಅನುಮತಿ ನೀಡಿದೆ.  ಕೊಪ್ಪಳ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ರೈತರಿಂದ ಖರೀದಿಸಿದ ಭತ್ತವನ್ನು ದಾಸ್ತಾನು ಮಾಡಲು ಗಂಗಾವತಿ, ಕಾರಟಗಿ ಮತ್ತು ಸಿದ್ದಾಪುರದಲ್ಲಿನ ಗೋದಾಮುಗಳು, ತೂಕದ ಯಂತ್ರ ಹಾಗೂ ಅಗತ್ಯ ಸಿಬ್ಬಂದಿಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು.  ಭತ್ತದ ಗುಣಮಟ್ಟ ಪರಿಶೀಲನೆಗೆ ಗ್ರೇಡರ್‍ಗಳನ್ನು ಕೃಷಿ ಇಲಾಖೆಯವರು ನೇಮಕ ಮಾಡಬೇಕು.  ಖರೀದಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸುವ ವ್ಯವಸ್ಥೆ ಮಾಡಬೇಕು.  ಎಫ್.ಎ.ಕ್ಯೂ ಗುಣಮಟ್ಟದ ಬಗ್ಗೆ ಹಾಗೂ ಖರೀದಿ ಪ್ರಕ್ರಿಯೆ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡುವ ಸಲುವಾಗಿ ಭತ್ತ ಬೆಳೆಯುವ ಗ್ರಾಮಗಳಲ್ಲಿ ಸೂಕ್ತ ಫ್ಲೆಕ್ಸ್ ಅಳವಡಿಸುವುದು, ಕರಪತ್ರ, ಪೋಸ್ಟರ್‍ಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಂಟಿಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು ಮಾತನಾಡಿ, ಜಿಲ್ಲೆಯಲ್ಲಿ 2. 03 ಲಕ್ಷ ಟನ್ ಭತ್ತ ಉತ್ಪಾದನೆಯ ನಿರೀಕ್ಷೆ ಇತ್ತು.  ಆದರೆ ಅಕಾಲಿಕ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ಹಾನಿಗೊಳಗಾಗಿದೆ.  ಈಗಾಗಲೆ ಎಪಿಎಂಸಿಗಳ ಮೂಲಕ 2. 64 ಲಕ್ಷ ಕ್ವಿಂ. ಭತ್ತದ ಮಾರಾಟವಾಗಿದ್ದು, ಉಳಿದಂತೆ ಶೇ. 60 ರಷ್ಟು ಬೆಳೆ ರೈತರಿಂದ ನೇರವಾಗಿ ಮಾರಾಟವಾಗಿರುವ ಸಾಧ್ಯತೆ ಇದೆ ಎಂದರು.
ರೈತರಿಗೆ ಸೂಚನೆಗಳು :  ಭತ್ತ ಮಾರಾಟ ಮಾಡಬಯಸುವ ರೈತರು ಮತದಾರರ ಗುರುತಿನ ಚೀಟಿ/ಆಧಾರ್/ಪಡಿತರ ಚೀಟಿ ಪೈಕಿ ಯಾವುದಾದರೊಂದು ಗುರುತಿನ ಚೀಟಿ, ಜೊತೆಗೆ ಪಹಣಿ ಪತ್ರಿಕೆ, ಬ್ಯಾಂಕ್ ಖಾತೆಯ ಪ್ರಿಂಟೆಡ್ ಪುಸ್ತಕದ ಜೆರಾಕ್ಸ್ ಪ್ರತಿ ಇವಿಷ್ಟು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.  ತಾವು ಬೆಳೆದ ಭತ್ತದ ಸ್ಯಾಂಪಲ್ ಅನ್ನು ಭತ್ತ ಖರೀದಿ ಕೇಂದ್ರಕ್ಕೆ ತಂದು ಗುಣಮಟ್ಟ ಪರಿಶೀಲಿಸಿಕೊಳ್ಳಬೇಕು.  ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಎಫ್‍ಎಕ್ಯೂ ಗುಣಮಟ್ಟವನ್ನು ಸರ್ಕಾರ ನಿಗದಿಪಡಿಸಿದ್ದು, ಇದರನ್ವಯ ಭತ್ತ ಚೆನ್ನಾಗಿ ಒಣಗಿರಬೇಕು, ತೇವಾಂಶ ಇರಬಾರದು, ಇತರೆ ಕಲ್ಮಶಗಳಿಂದ ಮುಕ್ತವಾಗಿರಬೇಕು ಎಂಬುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಆರ್. ಲಂಬೂ ಅವರು ತಿಳಿಸಿದರು.
    ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿಎಸ್. ಮಂಜುನಾಥ್, ಡಿವೈಎಸ್‍ಪಿ ರಾಜೀವ್ ಸೇರಿದಂತೆ ಕೃಷಿ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಸಹಕಾರ ಸಂಘಗಳ ಉಪನಿಬಂಧಕರು, ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳು, ಉಪಸ್ಥಿತರಿದ್ದರು.

ಯಲಬುರ್ಗಾ ತಾಲೂಕು : ಗ್ರಾ.ಪಂ. ಚುನಾವಣಾಧಿಕಾರಿಗಳ ನೇಮಕ

ಕೊಪ್ಪಳ ಮೇ. 25 (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕಿನ 35 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು 35 ಚುನಾವಣಾಧಿಕಾರಿಗಳು ಹಾಗೂ 35 ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು 70 ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.
     ಗ್ರಾಮ ಪಂಚಾಯತಿಗಳಿಗೆ ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿರುವವರ ವಿವರ ಇಂತಿದೆ. ಮುಧೋಳ ಗ್ರಾಮ ಪಂಚಾಯಿತಿಗೆ ಸಿದ್ಲಿಂಗಪ್ಪ ಎಸ್.ಜಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬಳೂಟಗಿ ಇವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕರಮುಡಿ-ಸಿ.ಹೆಚ್ ಮುದಗಲ,್ಲ ರೇಷ್ಮೆ ವಿಸ್ತೀರ್ಣಾಧಿಕಾರಿ, ಯಲಬುರ್ಗಾ. ಬಳೂಟಗಿ-ಶಿವಪ್ಪ ಬೇಲೇರಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಯಲಬುರ್ಗಾ. ಬಂಡಿ-ಮಾರುತಿ ಲಕಮಾಪೂರ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಮಂಗಳೂರು. ಗೆದಿಗೇರಿ-ಈರಯ್ಯ ಎಸ್.ಕಾಡಗಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಯಲಬುರ್ಗಾ. ವಜ್ರಬಂಡಿ-ಹನುಮಪ್ಪ .ಎಸ್. ದೇವರಮನಿ,  ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬಂಡಿ. ಹಿರೇಅರಳಿಹಳ್ಳಿ-ರವೀಂದ್ರ ಹಂಚಿನಾಳ, ಸಹಾಯಕ ತೋಟಗಾರಿಕೆ ಅಧಿಕಾರಿ, ಯಲಬುರ್ಗಾ. ಮಾಟಲದಿನ್ನಿ-ಈ.ಎಸ್. ಬಿಸಲದಿನ್ನಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಯಲಬುರ್ಗಾ. ಹಿರೇವಂಕಲಕುಂಟಾ-ಹನುಮಂತಪ್ಪ ಚೌದ್ರಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬಂಡಿ. ತಾಳಕೇರಿ-ರಾಘವೇಂದ್ರ ಕೊಂಡಗುರಿ, ಸಹಾಯಕ ಕೃಷಿ ಅಧಿಕಾರಿ,   ಯಲಬುರ್ಗಾ.  ಗಾಣದಾಳ-ದೀಪಕ್ ಮಹಬಳೇಶ್ವರ ನಾಯಕ, ಮುಖ್ಯ ಶಿಕ್ಷಕರು,  ಸರ್ಕಾರಿ ಪ್ರೌಢ ಶಾಲೆ, ವಟಪರವಿ. ಗುನ್ನಾಳ-ಶರಣಯ್ಯ ಹಾಳಕೇರಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬಂಡಿ. ಬೇವೂರು-ಚಿಕ್ಕರಡ್ಡೆಪ್ಪ ಬಿ.ವಿ., ಉಪನ್ಯಾಸಕರು, ಸರ್ಕಾರಿ ಪ.ಪೂ. ಮಂಗಳೂರು. ಕುದರಿಮೋತಿ-ಮಲ್ಲರಾಜು.ಎನ್, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಮಂಗಳೂರು. ಹಿರೇಬಿಡನಾಳ-ಎಸ್.ಆರ್. ಪತ್ತಾರ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬೇವೂರ.  ಮಂಗಳೂರು-ಜಿ.ಎ. ಹಿರೇಮಠ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬೇವೂರ.  ವಣಗೇರಿ-ಚಿದಾನಂದ ಮೇಟಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬೇವೂರ. ಮುರಡಿ- ಮಲ್ಲಪ್ಪ ಕಾಳಗಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಹಿರೇವಂಕಲಕುಂಟಾ. ಚಿಕ್ಕಮ್ಯಾಗೇರಿ-ರಂಗಪ್ಪ ಗಲಗಿನ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬೇವೂರ. ಬಳಿಗೇರಿ-ಚಂದ್ರಶೇಖರ ಮಂಗಳೂರು, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬೇವೂರ. ಶಿರೂರು-ಈಶಪ್ಪ ಮಳಗಿ, ಉಪನ್ಯಾಸಕರು, ಸ.ಪ.ಪೂ.ಕಾಲೇಜು, ಬಂಡಿ. ಬೆಣಕಲ್ಲ-ಕೊಟ್ರೇಶ.ವಿ.ಗದಗ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಹಿರೇಮ್ಯಾಗೇರಿ. ಭಾನಾಪೂರ-ಪರಶುರಾಮ ಖೇಮಣ್ಣ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ತಳಕಲ್ಲ.  ತಳಕಲ್ಲ-ಚಂದ್ರಶೇಖರ ಹೆಚ್.ಬಿ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಕಲ್ಲೂರ. ಇಟಗಿ-ಅಬ್ದುಲರಜಾಕ್ ಢೋನೂರು, ಕ್ಷೇತ್ರ ಸಮನ್ವಯಾಧಿಕಾರಿ, ಬಿ.ಆರ್.ಸಿ, ಯಲಬುರ್ಗಾ.  ಬನ್ನಿಕೊಪ್ಪ-ಪ್ರಕಾಶ ಚವಡಿ, ಕೃಷಿ ಅಧಿಕಾರಿ, ಯಲಬುರ್ಗಾ. ಮಂಡಲಗೇರಿ-ವೀರಶೇಖರ ಪತ್ತಾರ, ಉಪನ್ಯಾಸಕರು, ಸರಕಾರಿ ಪ.ಪೂ. ಕಾಲೇಜು, ಮಂಗಳೂರು. ಯರೇಹಂಚಿನಾಳ-ಶರಣಪ್ಪ ಗುಂಗಾಡಿ, ಕೃಷಿ ಅಧಿಕಾರಿ, ಯಲಬುರ್ಗಾ. ಸಂಗನಾಳ-ಬಸವರಾಜ ಮಾಸ್ತಿ, ಸ.ಶಿ,  ಬಾಲಕಿಯರ ಸ.ಪ್ರೌ.ಶಾಲೆ, ಯಲಬುರ್ಗಾ. ಕಲ್ಲೂರು-ಕುಮಾರ.ಎ.ಎಚ್, ಮುಖ್ಯ ಶಿಕ್ಷಕರು, ಸ.ಪ.ಪೂ ಕಾಲೇಜು. ಮಂಗಳೂರು. ರಾಜೂರು-ಉಮೇಶ ಬಿ.ಕಾಳೆ, ಸಹಾಯಕ ತೋಟಗಾರಿಕೆ ಅಧಿಕಾರಿ, ಯಲಬುರ್ಗಾ. ತುಮ್ಮರಗುದ್ದಿ-ಶರಣಪ್ಪ ಉಳ್ಳಾಗಡ್ಡಿ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಯಲಬುರ್ಗಾ. ನೆಲಜೇರಿ-ಬಸವರಾಜ ಕಳಕಪ್ಪ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಮಂಗಳೂರು. ಬೋದೂರು-ಬಾಬುಸಾಬ ಲೈನ್‍ದಾರ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ತಾಳಕೇರಿ. ಮಸಬಹಂಚಿನಾಳ-ಮಧುಕರ ಜಿ.ಟಿ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಮಾಳೇಕೊಪ್ಪ ಇವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಕುಷ್ಟಗಿ ತಾಲೂಕು : ಗ್ರಾ.ಪಂ. ಚುನಾವಣಾಧಿಕಾರಿಗಳ ನೇಮಕ

ಕೊಪ್ಪಳ,ಮೇ.25(ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಿನ 35 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು 35 ಚುನಾವಣಾಧಿಕಾರಿಗಳು ಹಾಗೂ 39 ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು 74 ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.
     ಗ್ರಾಮ ಪಂಚಾಯತಿಗಳಿಗೆ ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿರುವವರ ವಿವರ ಇಂತಿದೆ. ನಿಲೋಗಲ್ ಗ್ರಾಮ ಪಂಚಾಯಿತಿಗೆ ಹನಮೇಶ, ಉಪನ್ಯಾಸಕರು, ಪಾಲಿಟೆಕ್ನಿಕ್ ಕಾಲೇಜು, ಕುಷ್ಟಗಿ ಇವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ತುಗ್ಗಲದೋಣಿ-ಅಶೋಕ ಕುಮಾರ ತಸಮ್ಮಿನ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಹಿರೇಗೊಣ್ಣಾಗರ. ಹನಮನಾಳ-ವಿಜಯಕುಮಾರ ಕುದರಿ, ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು. ಕುಷ್ಟಗಿ ಮಾಲಗಿತ್ತಿ-ಈಶಪ್ಪ ತಳವಾರ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಜಾಗಿರಗುಡದೂರ.   ಜಾಗೀರಗುಡದೂರು-ಹೆಚ್.ಪ್ರಶಾಂತ, ಸ.ಇಂ, ಸಣ್ಣ ನೀರಾವರಿ ಉಪ ವಿಭಾಗ, ಕುಷ್ಟಗಿ.  ಯರಗೇರಾ-ಎಸ್.ಎಸ್. ಜನಾದ್ರಿ, ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕುಷ್ಟಗಿ.  ಹನುಮಸಾಗರ-ಎಂ.ಹೆಚ್ ಪವಾರ್, ಸಹಾಯಕ ಕಾ.ನಿ.ಅ, ಸಣ್ಣ ನೀರಾವರಿ, ಉಪ ವಿಭಾಗ, ಕುಷ್ಟಗಿ. ಕಾಟಾಪೂರ-ಬಸವಂತಪ್ಪ ಮೇಟಿ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಮುದೇನೂರು. ಹೂಲಗೇರಾ-ಗುರುರಾಜ ದೇಸಾಯಿ, ಉಪನ್ಯಾಸಕರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್, ತಾವರಗೇರ.  ಅಡವಿಬಾವಿ-ತಿಮ್ಮಣ್ಣ ಹನಮಪ್ಪಾ ಕುಂದರಗಿ, ಸಹಾಯಕ ನಿರ್ದೆಶಕರು, ಗ್ರಾಮೀಣ ಉದ್ಯೋಗ ಅಧಿಕಾರಿ, ಕುಷ್ಟಗಿ. ಚಳಗೇರಿ-ಮಹಾಬಳೇಶ್ವರ ಸ್ವಾಮಿ, ಸಹಾಯಕ ತೋಟಗಾರಿಕೆ ಅಧಿಕಾರಿ, ಕುಷ್ಟಗಿ. ಬೆನಕನಾಳ-ಪ್ರಹ್ಲಾದ, ಕಿರಿಯ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ, ಕುಷ್ಟಗಿ. ಹಿರೇಗೊಣ್ಣಾಗರ-ಸಂಜೀವ ಬಡಿಗೇರ, ಉಪನ್ಯಾಸಕರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕುಷ್ಟಗಿ.  ಹಿರೇಬನ್ನಿಗೋಳ-ಎಸ್.ಟಿ.ಪಾಟೀಲ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಮನ್ನೇರಾಳ. ಕೊರಡಕೇರಾ-ಜಿ.ವಾಯ್. ಮೇಟಿ, ಮುಖ್ಯ ಗುರುಗಳು ಸ.ಪ್ರೌ ಶಾಲೆ, ತಳುವಗೇರಾ. ತಳುವಗೇರಾ-ಅಶೋಕ ಗೌಡರ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ನೀಲೋಗಲ್. ಬಿಜಕಲ್-ಬಸವಂತಪ್ಪ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಚಳಗೇರಾ.  ದೋಟಿಹಾಳ-ಪ್ರವೀಣ ಎಂ. ಕಿನ್ನಾಳ, ಸ.ಇಂ, ಸಣ್ಣ ನೀರಾವರಿ ಉಪ ವಿಭಾಗ, ಕುಷ್ಟಗಿ.  ಕ್ಯಾದಿಗುಪ್ಪ-ಮಹಂತಯ್ಯ ಹಿರೇಮಠ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಶಿರಗುಂಪಿ. ಮುದೇನೂರು-ರಾಜಕುಮಾರ ನಾಯಕ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಅಡವಿಭಾವಿ. ಕಂದಕೂರು-ಶಂಕರಪ್ಪ, ಉಪನ್ಯಾಸಕರು, ಪಾಲಿಟೆಕ್ನಿಕ್ ಕಾಲೇಜು, ಕುಷ್ಟಗಿ. ಹಿರೇಮನ್ನಾಪುರ-ಬಿ.ಆರ್.ಪಾಟೀಲ್, ಮುಖ್ಯ ಗುರುಗಳು, ಎಂ. ವಿಶ್ವೇಶ್ವರಯ್ಯ ಪ್ರೌಡಶಾಲೆ, ತಾವರಗೇರ. ಜುಮ್ಲಾಪುರ-ಬಿ.ಎನ್.ಪಾಟೀಲ್, ಉಪನ್ಯಾಸಕರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜ್, ತಾವರಗೇರ. ಕಿಲ್ಲಾರಹಟ್ಟಿ-ಟಿ.ವೈ. ಪಂಚಮ, ರೇಷ್ಮೇ ನಿರೀಕ್ಷಕರು, ಕುಷ್ಟಗಿ. ಮೆಣೆದಾಳ-ಶಿವಯ್ಯ, ಉಪನ್ಯಾಸಕರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್, ತಾವರಗೇರ. ಸಂಗನಾಳ-ಚನ್ನಪ್ಪ, ಮುಖ್ಯ ಗುರುಗಳು, ಸ.ಬಾ.ಪ.ಪೂ ಕಾಲೇಜು, ತಾವರಗೇರಾ. ಹಿರೇನಂದಿಹಾಳ-ಪಿ.ಎಮ್. ಪಾಟೀಲ, ಉಪನ್ಯಾಸಕರು, ಪಾಲಿಟೆಕ್ನಿಕ್ ಕಾಲೇಜು, ಕುಷ್ಟಗಿ. ಅಂಟರಠಾಣಾ-ಪ್ರವೀಣ ಗುಲಗುಂಜಿ, ಸಹಾಯಕ ತೋಟಗಾರಿಕೆ ಅಧಿಕಾರಿ,   ಕುಷ್ಟಗಿ. ಕೇಸೂರು-ಶಂಕರಗೌಡ ಪಾಟೀಲ್, ಸ.ಶಿ, ಸ.ಪ.ಪೂ ಕಾಲೇಜು, ದೋಟಿಹಾಳ. ಲಿಂಗದಳ್ಳಿ-ಯಂಕಪ್ಪ ನಾಯಕ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಕಿಲ್ಲಾರಹಟ್ಟಿ. ಗುಮಗೇರಾ-ಶರಣಬಸವನಗೌಡ, ಮುಖ್ಯ ಗುರುಗಳು, ಸ.ಪ್ರೌ ಶಾಲೆ, ಕಂದಕೂರ. ಬಿಳೇಕಲ್-ಈರಬಸಪ್ಪ ವಾಲೀಕಾರ, ಉಪನ್ಯಾಸಕರು, ಪಾಲಿಟೆಕ್ನಿಕ್ ಕಾಲೇಜು, ಕುಷ್ಟಗಿ. ತುಮರಿಕೊಪ್ಪ-ಎ.ಕೆ. ನಾಯಕ, ಕಿರಿಯ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ, ಕುಷ್ಟಗಿ. ಹಾಬಲಕಟ್ಟಿ-ಶಿವಾನಂದ ಹಿರೇಮಠ, ಮುಖ್ಯ ಗುರುಗಳು, ಗವಿಸಿದ್ದೇಶ್ವರ ಪ್ರೌಡಶಾಲೆ, ಕುಷ್ಟಗಿ. ಶಿರಗುಂಪಿ-ಎಸ್.ಆರ್. ಕಾಂಬಳೆ, ಸಮನ್ವಯ ಅಧಿಕಾರಿ, ಬಿ.ಆರ್.ಸಿ ಕುಷ್ಟಗಿ ಇವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Saturday, 23 May 2015

ಗ್ರಾ.ಪಂ. ಚುನಾವಣೆ : ಅಂತಿಮ ದಿನದಂದು 2901 ನಾಮಪತ್ರ ಸಲ್ಲಿಕೆ

ಕೊಪ್ಪಳ ಮೇ. 23 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಮೇ. 22 ಶುಕ್ರವಾರದಂದು ಜಿಲ್ಲೆಯಲ್ಲಿ  ಒಟ್ಟು 2901 ನಾಮಪತ್ರಗಳು ಸಲ್ಲಿಕೆಯಾಗಿವೆ. 
     ಕೊಪ್ಪಳ ತಾಲೂಕಿನಲ್ಲಿ 909 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ  821 ನಾಮಪತ್ರಗಳು.  ಕುಷ್ಟಗಿ ತಾಲೂಕಿನಲ್ಲಿ 601 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 570 ಜನ ನಾಮಪತ್ರ ಸಲ್ಲಿಸಿದ್ದಾರೆ.  ಜಿಲ್ಲೆಯಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ.ಜಾತಿ-466, ಪ.ಪಂಗಡ-232, ಹಿಂದುಳಿದ ಅ ವರ್ಗ-373, ಹಿಂದುಳಿದ ಬ ವರ್ಗ-111 ಹಾಗೂ ಸಾಮಾನ್ಯ ವರ್ಗದ-1634 ನಾಮಪತ್ರಗಳು ಸಲ್ಲಿಕೆಯಾಗಿವೆ.  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ, ಈವರೆಗೆ ಒಟ್ಟು 10540 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.  ಉಮೇದುವಾರಿಕೆ ಹಿಂಪಡೆಯಲು ಮೇ. 25 ಕೊನೆಯ ದಿನಾಂಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಗ್ರಾಮ ಪಂಚಾಯತಿ ಚುನಾವಣೆ : ಒಟ್ಟಾರೆ 10540 ನಾಮಪತ್ರಗಳು ಸಲ್ಲಿಕೆ

ಕೊಪ್ಪಳ ಮೇ. 23 (ಕರ್ನಾಟಕ ವಾರ್ತೆ): ಪ್ರಸಕ್ತ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾದ ಮೇ. 15 ರಿಂದ 22 ರವರೆಗೆ ಒಟ್ಟಾರೆ 10540 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮೂರು ಗ್ರಾಮ ಪಂಚಾಯತಿಗಳ ಒಟ್ಟು 14 ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
     ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳ 736 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.  ಈವರೆಗೆ ಪರಿಶಿಷ್ಟ ಜಾತಿಯ 622, ಪರಿಶಿಷ್ಟ ಪಂಗಡದ 264, ಹಿಂದುಳಿದ ಅ ವರ್ಗದ 472, ಹಿಂದುಳಿದ ಬ ವರ್ಗದ 99 ಹಾಗೂ ಸಾಮಾನ್ಯ ವರ್ಗದ 1793 ಸೇರಿದಂತೆ 3250 ನಾಮಪತ್ರಗಳು ಸಲ್ಲಿಕೆಯಾಗಿವೆ.  ಆದರೆ ಕೊಪ್ಪಳ ತಾಲೂಕು ತಾವರಗೇರಿ ಗ್ರಾಮ ಪಂಚಾಯತಿಯ ಕೂಕನಪಳ್ಳಿ-1, ಕೂಕನಪಳ್ಳಿ-2 ಕ್ಷೇತ್ರಕ್ಕೆ ಸಂಬಂಧಿಸಿದ ಒಟ್ಟು 07 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
     ಗಂಗಾವತಿ ತಾಲೂಕಿನ 40 ಗ್ರಾಮ ಪಂಚಾಯತಿಗಳ 750 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.  ಈವರೆಗೆ ಪರಿಶಿಷ್ಟ ಜಾತಿಯ 592, ಪರಿಶಿಷ್ಟ ಪಂಗಡದ 445, ಹಿಂದುಳಿದ ಅ ವರ್ಗದ 258, ಹಿಂದುಳಿದ ಬ ವರ್ಗದ 60 ಹಾಗೂ ಸಾಮಾನ್ಯ ವರ್ಗದ 1592 ಸೇರಿದಂತೆ 2947 ನಾಮಪತ್ರಗಳು ಸಲ್ಲಿಕೆಯಾಗಿವೆ. 
     ಕುಷ್ಟಗಿ ತಾಲೂಕಿನ 35 ಗ್ರಾಮ ಪಂಚಾಯತಿಗಳ 607 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.  ಈವರೆಗೆ ಪರಿಶಿಷ್ಟ ಜಾತಿಯ 359, ಪರಿಶಿಷ್ಟ ಪಂಗಡದ 312, ಹಿಂದುಳಿದ ಅ ವರ್ಗದ 298, ಹಿಂದುಳಿದ ಬ ವರ್ಗದ 66 ಹಾಗೂ ಸಾಮಾನ್ಯ ವರ್ಗದ 1195 ಸೇರಿದಂತೆ 2230 ನಾಮಪತ್ರಗಳು ಸಲ್ಲಿಕೆಯಾಗಿವೆ.  ಆದರೆ ಕುಷ್ಟಗಿ ತಾಲೂಕು ಹಾಬಲಕಟ್ಟಿ ಗ್ರಾಮ ಪಂಚಾಯತಿಯ ವಾರಿಕಲ್ ಮತ್ತು ಚಿಕ್ಕಗೊಣ್ಣಾಗರ ಕ್ಷೇತ್ರಕ್ಕೆ ಸಂಬಂಧಿಸಿದ ತಲಾ 01 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
     ಯಲಬುರ್ಗಾ ತಾಲೂಕಿನ 35 ಗ್ರಾಮ ಪಂಚಾಯತಿಗಳ 584 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.  ಈವರೆಗೆ ಪರಿಶಿಷ್ಟ ಜಾತಿಯ 422, ಪರಿಶಿಷ್ಟ ಪಂಗಡದ 225, ಹಿಂದುಳಿದ ಅ ವರ್ಗದ 243, ಹಿಂದುಳಿದ ಬ ವರ್ಗದ 78 ಹಾಗೂ ಸಾಮಾನ್ಯ ವರ್ಗದ 1145 ಸೇರಿದಂತೆ 2113 ನಾಮಪತ್ರಗಳು ಸಲ್ಲಿಕೆಯಾಗಿವೆ.  ಆದರೆ ಯಲಬುರ್ಗಾ ತಾಲೂಕು ಮಾಟಲದಿನ್ನಿ ಗ್ರಾಮ ಪಂಚಾಯತಿಯ ಯಡ್ಡೋಣಿ-1 ಮತ್ತು ಯಡ್ಡೋಣಿ-2 ಕ್ಷೇತ್ರಕ್ಕೆ ಸಂಬಂಧಿಸಿದ ಒಟ್ಟು 05 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಉಮೇದುವಾರಿಕೆ ಹಿಂಪಡೆಯಲು ಮೇ. 25 ಕೊನೆಯ ದಿನಾಂಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಕೊಪ್ಪಳ ತಾಲೂಕು : ಗ್ರಾ.ಪಂ. ಚುನಾವಣಾಧಿಕಾರಿಗಳ ನೇಮಕ

 ಕೊಪ್ಪಳ, ಮೇ.23 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ವಿವಿಧ ಗ್ರಾಮ ಪಂಚಾಯಿತಿಗಳಿಗೆ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶ ಹೊರಡಿಸಿದ್ದಾರೆ.
     ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು 38   ಚುನಾವಣಾಧಿಕಾರಿಗಳು ಹಾಗೂ 42 ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು 80  ಅಧಿಕಾರಿಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲು ನೇಮಿಸಲಾಗಿದ್ದು, ನೇಮಕಗೊಂಡಿರುವ ಚುನಾವಣಾಧಿಕಾರಿಗಳ ವಿವರ ಇಂತಿದೆ.
     ಕವಲೂರು ಗ್ರಾಮ ಪಂಚಾಯಿತಿಗೆ ಆರ್. ಗುರುಬಸವರಾಜ, ವಿಷಯ ನಿರೀಕ್ಷಕ, ಡಿಡಿಪಿಐ ಕಛೇರಿ, ಕೊಪ್ಪಳ ಇವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಹಟ್ಟಿ-ಸತ್ಯನಾರಾಯಣ, ರೇಷ್ಮೆ ವಿಸ್ತರಣಾಧಿಕಾರಿ,  ಅಳವಂಡಿ-ಶಂಕ್ರಪ್ಪ, ಸಹಾಯಕ ಅಭಿಯಂತರ, ಜಿಲ್ಲಾ ಪಂಚಾಯತ್ ಉಪವಿಭಾಗ.  ಬೋಚನಹಳ್ಳಿ-ನಾಗಲಿಂಗಪ್ಪ ಖಂಡ್ರಿ, ಉಪನ್ಯಾಸಕರು, ಸರಕಾರಿ ಪ.ಪೂ. ಕಾಲೇಜು, ಮತ್ತೂರು-ಶರಣಪ್ಪ, ಕೋ-ಆರ್ಡಿನೇಟರ್, ಬಿಆರ್‍ಸಿ, ಕೊಪ್ಪಳ. ಕಾತರಕಿ-ಗುಡ್ಲಾನೂರು- ಬಸಯ್ಯ ಅಂಗಡಿ, ಕಾರ್ಮಿಕ ನಿರೀಕ್ಷಕರು, ಕೊಪ್ಪಳ, ಬಿಸರಳ್ಳಿ-ಭೀಮಪ್ಪ, ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ಹಿರೇಸಿಂದೋಗಿ- ಎಂ.ಎ. ಪ್ರಬಣ್ಣನವರ, ಸಹಾಯಕ ನಿರ್ದೆಶಕರು, ನಗರಾಬಿವೃದ್ದಿ ಪ್ರಾಧಿಕಾರ, ಕೊಪ್ಪಳ. ಕೋಳೂರು- ಕೀರ್ತಪ್ಪ ಗೋಟೂರು, ಸಹಾಯಕ ನಿರ್ದೆಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ. ಹಲಗೇರಿ-ದೇವೇಂದ್ರಕುಮಾರ ದೊಡ್ಡಮನಿ, ಉಪನ್ಯಾಸಕರು, ಸರ್ಕಾರಿ ಪ.ಪೂ ಕಾಲೇಜು ಹೊಸಬಂಡಿಹರ್ಲಾಪುರ. ಓಜನಹಳ್ಳಿ-ಎ.ಕೆ. ತುಪ್ಪದ, ಉಪಪ್ರಾಚಾರ್ಯರು, ಸರಕಾರಿ ಬಾಲಕರ ಪ.ಪೂ. ಕಾಲೇಜು, ಕೊಪ್ಪಳ. ಮಾದಿನೂರು-ರಮೇಶ, ಸಹಾಯಕ ತೋಟಗಾರಿಕೆ ಅಧಿಕಾರಿ, ಕೊಪ್ಪಳ. ಕಿನ್ನಾಳ-ರಾಚಪ್ಪ ಕೇಸರಬಾವಿ, ಉಪನ್ಯಾಸಕರು, ಸರಕಾರಿ ಪ.ಪೂ ಕಾಲೇಜು, ಹಿರೇಸಿಂಧೋಗಿ. ಲೇಬಗೇರಿ-ಶಾಂತಪ್ಪ, ಕಿರಿಯ ಉಪನ್ಯಾಸಕರು, ಡಯಟ್ ಮುನಿರಾಬಾದ. ಇರಕಲ್ಲಗಡಾ-ಚಿದಾನಂದ, ತಾಲೂಕು ಸಮಾಜ ಕಲ್ಯಾಣ  ಅಧಿಕಾರಿಗಳು, ಕೊಪ್ಪಳ. ಚಿಕ್ಕಬೊಮ್ಮನಾಳ-ಕೊಟ್ರಪ್ಪ, ಉಪನ್ಯಾಸಕರು, ಸರಕಾರಿ ಬಾಲಕರ ಪ.ಪೂ. ಕಾಲೇಜು, ಕೊಪ್ಪಳ. ಹಾಸಗಲ್-ಪರಸಪ್ಪ ಭಜಂತ್ರಿ, ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ, ಕೊಪ್ಪಳ. ತಾವರಗೇರಿ-ಅಸ್ಲಾಂಖಾನ್, ಸಹಶಿಕ್ಷಕ ಸರ್ಕಾರಿ ಪ್ರೌಢಶಾಲೆ, ಬಂಡಿಹರ್ಲಾಪುರ. ಇಂದರಗಿ-ಉದಯಕುಮಾರ, ಸಹಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕೂಕನಪಳ್ಳಿ. ಬೂದಗುಂಪಿ-ರವೀಂದ್ರನಾಗನಾಥ್, ಸಹಾಯಕ ಅಭಿಯಂತರರು, ಮುನಿರಾಬಾದ್. ಬಂಡಿಹರ್ಲಾಪೂರ-ನಿರಂಜನಮೂರ್ತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮುನಿರಾಬಾದ್. ಶಿವಪೂರ-ವಿದ್ಯಾಧರ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಭಾಗ್ಯನಗರ. ಹುಲಗಿ-ಎನ್. ಚೌಡಯ್ಯ, ಸಹಾಯಕ ಅಭಿಯಂತರರು,  ಮುನಿರಾಬಾದ್. ಮುನಿರಾಬಾದ ಯೋಜನಾ ಗ್ರಾಮ-ಉದಯಸಿಂಗ್ ವಿ.ಎಸ್, ಉಪನ್ಯಾಸಕರು, ಸರ್ಕಾರಿ ಪ.ಪೂ ಕಾಲೇಜ್, ಭಾಗ್ಯನಗರ. ಹೊಸಳ್ಳಿ-ವಿರುಪಾಕ್ಷಯ್ಯ, ಕಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ. ಅಗಳಕೇರಿ-ಬಿ.ಎಲ್. ಬಸಾಪುರ್, ಸಹಾಯಕ ಅಭಿಯಂತರರು, ಮುನಿರಾಬಾದ್.  ಹಿಟ್ನಾಳ-ಬಸಪ್ಪ ಜಾನಕರ್, ಸಹಾಯಕ ಇಂಜಿನೀಯರ್, ತುಂಗಭದ್ರಾ ಯೋಜನಾ ವೃತ್ತ, ಮುನಿರಾಬಾದ್. ಗುಳದಳ್ಳಿ-ದುರ್ಗಾಪ್ರಸಾದ, ಸಹಾಯಕ ತೋಟಗಾರಿಕೆ ಅಧಿಕಾರಿ, ಕೊಪ್ಪಳ. ಗಿಣಿಗೇರಿ-ಪ್ರಭು ಮಾನೆ, ಯೋಜನಾ, ಅಂದಾಜು & ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಕೊಪ್ಪಳ. ಹಿರೇಬಗನಾಳ-ಸತೀಶ್, ಸಹಾಯಕ ಅಭಿಯಂತರರು, ಕಾಡಾ ಟಿಬಿಪಿ, ಮುನಿರಾಬಾದ್. ಕುಣಿಕೇರಿ-ವೀರಭದ್ರಯ್ಯ, ಕಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ.  ಗೊಂಡಬಾಳ-ರಾಮರೆಡ್ಡಿ, ಸಹಶಿಕ್ಷಕ ಸರ್ಕಾರಿ ಪ್ರೌಢಶಾಲೆ ಬೆಂಕಿನಗರ. ಕೊಪ್ಪಳ. ಬಹದ್ದೂರಬಂಡಿ-ಸಿದ್ದಲಿಂಗ ಸ್ವಾಮಿ, ಸಹಾಯಕ ನಿರ್ದೇಶಕರು, ಸಣ್ಣ ಉಳಿತಾಯ ಇಲಾಖೆ, ಕೊಪ್ಪಳ. ಹಾಲವರ್ತಿ-ಪಂಪಾಪತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮುನಿರಾಬಾದ. ಕಲಕೇರಿ-ಮಲ್ಲಪ್ಪ, ಉಪನ್ಯಾಸಕರು, ಸರಕಾರಿ ಬಾಲಕರ ಪ.ಪೂ. ಕಾಲೇಜು, ಕೊಪ್ಪಳ. ಬೇವಿನಹಳ್ಳಿ-ಮನೋಹರ, ಕಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ. ವನಬಳ್ಳಾರಿ-ಭೀಮಪ್ಪ ಕಸಾಳೆ, ಮುಖ್ಯಗುರು, ಸರ್ಕಾರಿ ಪ್ರೌಢಶಾಲೆ, ಕೂಕನಪಳ್ಳಿ ಇವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
 

ಕೊಪ್ಪಳ ಐಟಿಐ ಕಾಲೇಜು : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕೊಪ್ಪಳ, ಮೇ.23 (ಕರ್ನಾಟಕ ವಾರ್ತೆ): ಕೊಪ್ಪಳ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಅಳವಂಡಿಯಲ್ಲಿ  ನೂತನವಾಗಿ ಆರಂಭಿಸಲಾಗಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ  ವಿವಿಧ ಕೋರ್ಸ್ ತರಬೇತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳ ಮತ್ತು ಅಳವಂಡಿಯಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಫಿಟ್ಟರ್ ಎಲೆಕ್ಟ್ರಿಷಿಯನ್ (ಎಸ್‍ಸಿವಿಟಿ ಮತ್ತು ಎನ್‍ಸಿವಿಟಿ) ವೃತ್ತಿಗಳಿಗೆ ಮೆರಿಟ್ ಆಧಾರದ ಮೇಲೆ ಪ್ರಸಕ್ತ ಸಾಲಿನಲ್ಲಿ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮೇ.20 ರಿಂದ ಜೂ.05 ರವರೆಗೆ ವೆಬ್‍ಸೈಟ್  www.emptrg.kar.nic.in ಅಥವಾ  www.detkar.com/admission-2015 ರ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೊಪ್ಪಳ ದೂರವಾಣಿ ಸಂಖ್ಯೆ:08539-221367 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಗಂಗಾವತಿ ತಾಲೂಕು : ಗ್ರಾ.ಪಂ. ಚುನಾವಣಾಧಿಕಾರಿಗಳ ನೇಮಕ

 ಕೊಪ್ಪಳ ಮೇ. 23 (ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನ 40 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು 40   ಚುನಾವಣಾಧಿಕಾರಿಗಳು ಹಾಗೂ 41 ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು 81  ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.
      ಗ್ರಾಮ ಪಂಚಾಯತಿಗಳಿಗೆ ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿರುವವರ ವಿವರ ಇಂತಿದೆ.  ಆನೆಗೊಂದಿ ಗ್ರಾಮ ಪಂಚಾಯಿತಿಗೆ ಕೆ.ಎಸ್. ಸುರೇಶ, ಸರ್ಕಾರಿ ಪ್ರೌಢಶಾಲೆ, ಢಣಾಪುರ ಇವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸಂಗಾಪೂರ- ಮುರಳಿಧರ, ಉಪನ್ಯಾಸಕರು, ಸ.ಪ.ಪೂ ಕಾಲೇಜು, ನವಲಿ. ಮಲ್ಲಾಪೂರ-ಅಶೋಕ ಸಿದ್ದಪ್ಪ ಗೌಡರ, ಸರಕಾರಿ ಪ್ರೌಢಶಾಲೆ, ಮುಕ್ಕುಂಪಿ.  ಚಿಕ್ಕಜಂತಕಲ್- ವಿಜಯಕುಮಾರ, ಸಹಾಯಕ ಇಂಜಿನಿಯರ್, ಗಂಗಾವತಿ. ಢಣಾಪೂರ-ನಿಂಗಪ್ಪ, ಕೃಷಿ ಅಧಿಕಾರಿ,   ಗಂಗಾವತಿ. ಉಳೇನೂರು- ಮನೋಹರ ಜಿ.ಎಸ್, ಸರಕಾರಿ ಉನ್ನತಿಕರಿಸಿದ ಪ್ರೌಢಶಾಲೆ, ಗುಂಡೂರು. ಬೆನ್ನೂರು- ಮಲ್ಲಪ್ಪ ಅಡ್ಡೇರು, ಸರಕಾರಿ ಉನ್ನತಿಕರಿಸಿದ ಪ್ರೌಢಶಾಲೆ, ಬರಗೂರು. ಬೂದಗುಂಪಾ-ಆರ್.ಟಿ.ನಾಯಕ್, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಗಂಗಾವತಿ. ಯರಡೋಣ-ನಾಗಪ್ಪ, ಸಹಾಯಕ ಅಭಿಯಂತರರು, ಕಾರಟಗಿ. ಶ್ರೀರಾಮನಗರ-ವಸಂತಪ್ಪ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು, ಗಂಗಾವತಿ, ಮರಳಿ-ಹುಂಬಣ್ಣ ರಾಠೋಡ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ಸಂಗಾಪೂರ. ವಡ್ಡರಹಟ್ಟಿ-ಡಾ. ಎ. ಸತೀಶಕುಮಾರ, ಸಹಾಯಕ ನಿರ್ದೇಶಕರು, ಕೋಳಿ ಸಾಗಾಣಿಕೆ ಮತ್ತು ಸಂವರ್ಧನಾ ಕೇಂದ್ರ, ಗಂಗಾವತಿ. ಬಸಾಪಟ್ಟಣ-ಗವಿಸಿದ್ದಯ್ಯ, ಸರ್ಕಾರಿ ಪ್ರೌಢಶಾಲೆ, ಮೈಲಾಪುರ. ವೆಂಕಟಗಿರಿ-ಮಂಜುನಾಥ ಎ.ಆರ್, ಉಪನ್ಯಾಸಕರು, ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ. ಆಗೋಲಿ-ಸುರೇಶಕುಮಾರ, ಕೃಷಿ ಅಧಿಕಾರಿ, ಬೀಜ ಪರೀಕ್ಷಾ ಪ್ರಯೋಗಾಲಯ, ವಡ್ಡರಹಟ್ಟಿ. ಚಿಕ್ಕಬೆಣಕಲ್-ಬಿ.ಹೆಚ್ ಮಂಜುನಾಥ, ವಡ್ಡರಹಟ್ಟಿ ಕ್ಯಾಂಪ್. ಚಿಕ್ಕಮಾದಿನಾಳ-ಸಂಜಯ ಬಿ. ಸಜ್ಜನರ ಉಪನ್ಯಾಸಕರು, ಸ.ಪ.ಪೂ ಕಾಲೇಜ್, ಕನಕಗಿರಿ. ಸುಳೇಕಲ್-ವೆಂಕಟೇಶ, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕನಕಗಿರಿ. ಹಿರೇಖೇಡ-ಎಚ್.ಎಸ್. ಚಂದ್ರಶೇಖರ, ಸರ್ಕಾರಿ ಪ್ರೌಢಶಾಲೆ, ಇಸ್ಲಾಂಪುರ.  ಕೆಸರಹಟ್ಟಿ-ಮಂಜುನಾಥ,  ಹೇರೂರು ಸರಕಾರಿ ಪ್ರೌಢಶಾಲೆ. ಹೇರೂರು-ಕೆ. ದಯಾನಂದಬಾಬು,   ಸರಕಾರಿ ಪ್ರೌಢಶಾಲೆ, ಬಸಾಪಟ್ಟಣ. ಹೊಸಕೇರಾ-ಚಂದ್ರಗೌಡ ಕೆ.ಎನ್, ಸರಕಾರಿ ಪ್ರೌಢಶಾಲೆ ಹಣವಾಳ. ಹಣವಾಳ-ನುಸರತ್ ಅಲಿ, ಸಹಾಯಕ ಅಭಿಯಂತರರು, ಲೋಕೊಪಯೋಗಿ ಇಲಾಖೆ, ಗಂಗಾವತಿ. ಗುಂಡೂರು-ವೈಜನಾಥ ಹಿರೇಮಠ, ಪ್ರಾಂಶುಪಾಲರು, ಸಿ.ಎನ್.ಆರ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀರಾಮನಗರ. ಮರಲಾನಹಳ್ಳಿ-ಎನ್.ವಿಜಯಕುಮಾರ   ಸರಕಾರಿ ಪ್ರೌಢಶಾಲೆ, ಯರಡೋಣಾ. ಹುಳ್ಕಿಹಾಳ-ರಾಘವೇಂದ್ರ ಕಂಠಿ, ಸರಕಾರಿ ಪ್ರೌಢಶಾಲೆ, ಸೋಮನಾಳ.  ಚಳ್ಳೂರು-ಮಲ್ಲಿಕಾರ್ಜುನ ಎಸ್. ಗೊಣ್ಣಾಗರ, ಸರ್ಕಾರಿ ಪ್ರೌಢ ಶಾಲೆ, ಬೂದಗುಂಪಾ. ಚಿಕ್ಕಡಂಕನಕಲ್-ಚಂದ್ರಪ್ಪ ಹೆಚ್.ಕೆ, ಉಪಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು ಕನಕಗಿರಿ.  ಗೌರಿಪುರ-ಎ.ಚಂದ್ರಶೇಖರ, ಸರ್ಕಾರಿ ಪ್ರೌಢಶಾಲೆ, ಹುಲಿಹೈದರ. ಹುಲಿಹೈದರ-ಮಹಾಂತೇಶ ಎನ್. ಸರ್ಕಾರಿ ಪ್ರೌಢಶಾಲೆ, ಮುಸಲಾಪುರ. ಕರಡೋಣ-ನಾಗರಾಜ ಹೆಚ್.ಎಂ, ಸಹಾಯಕ ಪ್ರಾಧ್ಯಾಪಕರು, ಸಿ.ಎನ್.ಆರ್. ಸ.ಪ್ರ ಕಾಲೇಜ್, ಶ್ರೀರಾಮನಗರ.  ನವಲಿ-ಶ್ರೀನಿವಾಸ.ಎ, ಸ.ಕಾ.ನಿ ಅಭಿಯಂತರರ ಕಛೇರಿ,  ಕಾರಟಗಿ. ಬೇವಿನಾಳ- ಕುಮಾರ ಸುಂಕಮ್ಮನವರ, ಉಪನ್ಯಾಸಕರು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾರಟಗಿ.  ಮುಸಲಾಪೂರ-ಲಕ್ಷ್ಮಪ್ಪ ಚಂದಪ್ಪ,  ಸ.ಪ್ರೌ ಶಾಲೆ, ವೆಂಕಟಗಿರಿ.  ಬರಗೂರು-ರೋಷಣ್ಣ, ಸರ್ಕಾರಿ ಉನ್ನತಿಕರಿಸಿದ ಪ್ರೌಢಶಾಲೆ, ಮರಳಿ.  ಸಣಾಪೂರ-ರಾಮಪ್ಪ, ಉಪಪ್ರಾಂಶುಪಾಲರು, ಎಂ.ಎನ್.ಎಂ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ. ಜಂಗಮರ ಕಲ್ಗುಡಿ-ಬಸವೇಶ್ವರ, ಪತ್ರಾಂಕಿತ ವ್ಯವಸ್ಥಾಪಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗಂಗಾವತಿ. ಮೈಲಾಪೂರ-ಮೆಹಬೂಬ ಹುಸೇನಲಿ, ಉಪನ್ಯಾಸಕರು, ಸ.ಪ.ಪೂ ಕಾಲೇಜು, ಕಾರಟಗಿ. ಜೀರಾಳ-ಶ್ರೀನಿವಾಸ ತಡಕನಹಳ್ಳಿ, ಸರ್ಕಾರಿ ಪ್ರೌಢಶಾಲೆ, ಉಡಮಕಲ್. ಬಸರಿಹಾಳ-ಡಾ.ಡಿ.ಕೆ. ಮಾಳೆ, ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕನಕಗಿರಿ ಇವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Friday, 22 May 2015

ವಿದ್ಯಾರ್ಥಿ ವೇತನ : ಜಂಟಿ ಬ್ಯಾಂಕ್ ಖಾತೆ ತೆರೆಯಲು ಸೂಚನೆ

ಕೊಪ್ಪಳ, ಮೇ.22 (ಕರ್ನಾಟಕ ವಾರ್ತೆ): ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರಸಕ್ತ ಸಾಲಿನಿಂದ ಆನ್‍ಲೈನ್ ಮೂಲಕ ನೇರವಾಗಿ ವಿದ್ಯಾರ್ಥಿಗಳ, ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ವಿದ್ಯಾರ್ಥಿ ವೇತನ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ತಾಯಿ ಅಥವಾ ಪೋಷಕರ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯುವುದು ಕಡ್ಡಾಯವಾಗಿದೆ ಎಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಲ್ಲೇಶ್ ಸೂಚನೆ ನೀಡಿದ್ದಾರೆ.
           ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.01 ಲಕ್ಷಗಳಿಗೆ ಮೀರಿರಬಾರದು ಹಾಗೂ ಪ್ರವರ್ಗ 2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ ಕುಟುಂಬದ ವಾರ್ಷಿಕ ಆದಾಯದ ಮಿತಿ ರೂ. 44,500 ಗಳಿಗೆ ಮೀರಿರಬಾರದು. ಡಿ.ಬಿ.ಟಿ ಮೂಲಕ ಜಾರಿಗೊಳಿಸುತ್ತಿರುವ ವಿದ್ಯಾಸಿರಿ, ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ತಾಯಿಯ ಅಥವಾ ಪೋಷಕರ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡ್ ಮತ್ತು ಖಾತೆ ಸಂಖ್ಯೆ ಇರುವ ಪಾಸ್ ಪುಸ್ತಕದ ಮೊದಲ ಪುಟದ ಝೆರಾಕ್ಸ್ ಪ್ರತಿಯನ್ನು ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ನೀಡಬೇಕು.
     ಆನ್‍ಲೈನ್ ಮೂಲಕ ಸೌಲಭ್ಯ ಪಡೆಯುವ ಎಲ್ಲಾ ವಿದ್ಯಾರ್ಥಿಗಳ ಆಧಾರ್ ಕಾರ್ಡ್‍ಗಳ ಸಂಖ್ಯೆಯನ್ನು ಪಡೆದು ಕೆ.ಆರ್.ಡಿ.ಹೆಚ್‍ನೊಂದಿಗೆ ತಾಳೆ ಮಾಡುವುದು ಅವಶ್ಯಕವಾಗಿದ್ದು, ಆದಾರ್ ಕಾರ್ಡ್ ಪಡೆಯದೇ ಇರುವ ವಿದ್ಯಾರ್ಥಿಗಳು ಕೂಡಲೇ ಹತ್ತಿರದ ನಾಡ ಕಛೇರಿ, ತಾಲೂಕಾ ಕಛೇರಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಪಾಲಿಕೆ ಕಛೇರಿಗಳಲ್ಲಿ ಪ್ರಾರಂಭಿಸಿರುವ ಖಾಯಂ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮಾಡಿಸಿಕೊಳ್ಳಬೇಕು.
     ವಿದ್ಯಾರ್ಥಿಯು ಜಾತಿ, ಆದಾಯ ಪ್ರಮಾಣ ಪತ್ರದ ಝೆರಾಕ್ಸ್ ಪ್ರತಿಯನ್ನು ಶಾಲಾ/ಕಾಲೇಜುಗಳ ಪ್ರವೇಶ ಪಡೆಯುವ ಸಮಯದಲ್ಲಿಯೇ ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ನೀಡಬೇಕು. ಆಯಾ ಸಂಸ್ಥೆಗಳ ಮುಖ್ಯಸ್ಥರು ವಿದ್ಯಾರ್ಥಿಗಳಿಂದ ಪಡೆದ ಮೇಲ್ಕಂಡ ಝೆರಾಕ್ಸ್ ಪ್ರತಿಗಳ ದಾಖಲೆಗಳೊಂದಿಗೆ ಸಂಬಂಧಿಸಿದ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು. ಅಲ್ಲದೇ ಸಂಬಂಧಪಟ್ಟ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು ಸಹ ಅರ್ಹ ವಿದ್ಯಾರ್ಥಿಗಳ ಪೋಷಕರಿಗೆ ಈ ಕುರಿತು ತಿಳುವಳಿಕೆ ನೀಡುವಂತೆ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಲ್ಲೇಶ್  ಬಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ದತ್ತಾಂಶ ನಿರ್ವಾಹಕರ ಹುದ್ದೆ ನೇಮಕಾತಿ : ಅರ್ಜಿ ಆಹ್ವಾನ

ಕೊಪ್ಪಳ, ಮೇ.22 (ಕರ್ನಾಟಕ ವಾರ್ತೆ): ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಸಮುದಾಯದ ಕಾರ್ಯಕ್ರಮಗಳ ಅರಿವು ಮೂಡಿಸುವ ಮಾಹಿತಿ ಕೇಂದ್ರದ ನಿರ್ವಹಣೆಗಾಗಿ ದತ್ತಾಂಶ ನಿರ್ವಾಹಕರ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ದತ್ತಾಂಶ ನಿರ್ವಾಹಕರ ಹುದ್ದೆಗೆ ಅಭ್ಯರ್ಥಿಗಳನ್ನು ಹೊರ ಸಂಪನ್ಮೂಲ ಸಂಸ್ಥೆಯ ಮೂಲಕ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುವುದು. ಪ್ರತಿ ಮಾಹೆಗೆ ರೂ.12,000/- ಗೌರವಧನ ನಿಗದಿಪಡಿಸಲಾಗಿದ್ದು ವೇತನವನ್ನು ಹೊರಸಂಪನ್ಮೂಲ ಸಂಸ್ಥೆಯಿಂದ ಪಾವತಿಸಲಾಗುವುದು.    ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಬಿ.ಸಿ.ಎ ವಿದ್ಯಾರ್ಹತೆ ಹೊಂದಿರಬೇಕು. 21 ರಿಂದ 35 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಕನ್ನಡ ಇಂಗ್ಲೀಷ್ ಮತ್ತು ಉರ್ದು ಓದಲು-ಬರೆಯಲು ಸಮರ್ಥರಾಗಿರಬೇಕು. ಅಭ್ಯರ್ಥಿಗಳು ತಮ್ಮ ಸ್ವ-ವಿವರವನ್ನು ಅಗತ್ಯ ವಿದ್ಯಾರ್ಹತೆ ದಾಖಲೆಗಳೊಂದಿಗೆ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ಈ ವಿಳಾಸಕ್ಕೆ ಮೇ.30 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಶಿಕ್ಷಕರ ನೇಮಕಾತಿ ಪರೀಕ್ಷೆ : ನಿಷೇದಾಜ್ಞೆ ಜಾರಿ

ಕೊಪ್ಪಳ, ಮೇ.22 (ಕರ್ನಾಟಕ ವಾರ್ತೆ): ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಕೊಪ್ಪಳದಲ್ಲಿ ಮೇ.23 ಮತ್ತು ಮೇ.24 ರಂದು ನಡೆಯಲಿರುವ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶ ಹೊರಡಿಸಿದ್ದಾರೆ.
     ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳು ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿ ಕಾಲೇಜು ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೇ.23 ಮತ್ತು 24 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ರವರೆಗೆ ನಡೆಯಲಿದ್ದು,  ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ರ ಕಲಂ 144 ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆಯನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಝೆರಾಕ್ಸ್, ಟೈಪಿಂಗ್ ಹಾಗೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ.  ಈ ಆದೇಶವು ಮದುವೆ, ಶವ ಸಂಸ್ಕಾರ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಲೋಕಾಯುಕ್ತ ಪ್ರವಾಸ : ಕುಂದು, ಕೊರತೆ ದೂರು ಆಹ್ವಾನ

ಕೊಪ್ಪಳ, ಮೇ.22 (ಕರ್ನಾಟಕ ವಾರ್ತೆ) :  ರಾಯಚೂರು-ಕೊಪ್ಪಳ ಲೋಕಾಯುಕ್ತ ಎಸ್‍ಪಿ   ವಿ.ವಿ. ಕುಂಬಾರ ಹಾಗೂ ಕೊಪ್ಪಳ ಡಿವೈಎಸ್‍ಪಿ ಎಂ.ಎಚ್. ಚಿಕ್ಕರೆಡ್ಡಿ ಅವರು ಮೇ.23, 25 ಮತ್ತು ಮೇ.26 ರಂದು ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲಾ ಪ್ರವಾಸ ಕೈಗೊಂಡು ಸಾರ್ವಜನಿಕರಿಂದ ಕುಂದು ಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸುವರು.
     ಲೋಕಾಯುಕ್ತ ಅಧಿಕಾರಿಗಳು ಮೇ.23 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಯಲಬುರ್ಗಾದ ಪ್ರವಾಸಿ ಮಂದಿರದಲ್ಲಿ, ಅದೇ ದಿನ ಮಧ್ಯಾಹ್ನ 03 ಗಂಟೆಯಿಂದ 05 ಗಂಟೆಯವರೆಗೆ ಕುಷ್ಟಗಿ ಪ್ರವಾಸಿ ಮಂದಿರದಲ್ಲಿ, ಮೇ.25 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಹಾಗೂ ಮೇ.26 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಗಂಗಾವತಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸಲಿದ್ದಾರೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಬಹುದಾಗಿದೆ. ಅಲ್ಲದೇ ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ 1 ಮತ್ತು 2 ಅನ್ನು ಸ್ಥಳದಲ್ಲಿಯೇ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆರಕ್ಷಕ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕೊಪ್ಪಳ. ದೂರವಾಣಿ ಸಂಖ್ಯೆ : 08539-220533, 08539-220200 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಅನುದಾನ ರಹಿತ ಶಾಲೆಗಳು ಶುಲ್ಕ ವಿವರ ಫಲಕ ಅಳವಡಿಸಲು ಸೂಚನೆ

ಕೊಪ್ಪಳ, ಮೇ.22 (ಕರ್ನಾಟಕ ವಾರ್ತೆ): ಜಿಲ್ಲೆಯ ಅನುದಾನರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪ್ರಸಕ್ತ ಸಾಲಿಗೆ ದಾಖಲಾತಿ ಆರಂಭಿಸುವ ಮುನ್ನ ಶಾಲಾ ಶುಲ್ಕ ಹಾಗೂ ಇತರೆ ವಿವರವಾದ ಮಾಹಿತಿಯುಳ್ಳ ಫಲಕವನ್ನು ಶಾಲೆಯಲ್ಲಿ ಅಳವಡಿಸುವಂತೆ ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ಯಾಮಸುಂದರ್ ಅವರು ಸೂಚನೆ ನೀಡಿದ್ದಾರೆ.
     ಈ ಕುರಿತಂತೆ ಈಗಾಗಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದು, ಇದರನ್ವಯ ಖಾಸಗಿ ಅನುದಾನರಹಿತ ಶಾಲೆಗಳ ಮುಖ್ಯಸ್ಥರು ಶಾಲೆಯ ಸೂಚನಾ ಫಲಕದಲ್ಲಿ 6*10 ಅಡಿ ಅಳತೆಯ ಫ್ಲೆಕ್ಸ್ ಬೋರ್ಡ್‍ನಲ್ಲಿ ಶಾಲಾ ಶುಲ್ಕದ ಬಗ್ಗೆ ಹಾಗೂ ಶಾಲೆಯ ಇತರೆ ಮಾಹಿತಿಯನ್ನು ಹಾಕಬೇಕು.  ಪ್ರಸಕ್ತ ಸಾಲಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು, ಅಧಿಕೃತ ಶಾಲೆ ಆಗಿರುವ ಬಗ್ಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಅಳವಡಿಸಿರುವ ಶಾಲೆಗಳ ವಿವರವನ್ನು ನೋಡಿ ಖಾತರಿಪಡಿಸಿಕೊಂಡು ಪ್ರವೇಶ ಪಡೆಯಬೇಕು.
ಟ್ಯುಟೋರಿಯಲ್ಸ್ ಅಥವಾ ಬೇಸಿಗೆ ಕೋಚಿಂಗ್ ಸೆಂಟರ್‍ಗಳನ್ನು ಇಲಾಖೆಯ ಅನುಮತಿ ಪಡೆದು ನಡೆಸಬೇಕು. ಇಲ್ಲವಾದಲ್ಲಿ ಅಂತಹ ಕೋಚಿಂಗ್ ಸೆಂಟರ್‍ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಖಾಸಗಿ ಅನುದಾನರಹಿತ ಶಾಲೆಗಳ ಆವರಣದಲ್ಲಿ ಅನುಮತಿ ಇಲ್ಲದೇ ವಸತಿ ನಿಲಯಗಳನ್ನು ನಡೆಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಜನಗಣತಿ ವಿವರ ಪುಸ್ತಕ ಪಡೆಯಲು ಸೂಚನೆ

http://censusmp.nic.in/censusmp/images/logo.gifಕೊಪ್ಪಳ, ಮೇ.22 (ಕರ್ನಾಟಕ ವಾರ್ತೆ): ಕರ್ನಾಟಕದ ಜನಗಣತಿ ನಿರ್ದೇಶನಾಲಯವು ರಾಜ್ಯದ  ಜನಗಣತಿ ಮಾಹಿತಿ ಬಳಕೆದಾರರ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಗೆ ಪ್ರತ್ಯೇಕವಾಗಿ ಜಿಲ್ಲಾ ಜನಗಣತಿ-2011 ಪುಸ್ತಕ ಹಾಗೂ ಸಿಡಿ ಗಳನ್ನು ಹೊರತಂದಿದ್ದು, ಆಸಕ್ತರು ಖರೀದಿಸಬಹುದಾಗಿದೆ.
     ಜಿಲ್ಲಾ ಜನಗಣತಿ ಪುಸ್ತಿಕೆಯು ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮ, ಪಟ್ಟಣ ಮತ್ತು ವಾರ್ಡ್ ಮಟ್ಟದಲ್ಲಿರುವ ಲಿಂಗ ಪ್ರಭೇಧದೊಂದಿಗೆ ಒಟ್ಟು ಜನಸಂಖ್ಯೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ ಜನಸಂಖ್ಯೆ, ಒಟ್ಟು ಜನಸಂಖ್ಯೆ ಹಾಗೂ 0-06 ವಯೋವರ್ಗದ ಮಕ್ಕಳ ಜನಸಂಖ್ಯೆಗಳಿಗೆ ಲಿಂಗಾನುಪಾತ, ಸಾಕ್ಷರತೆ ಮತ್ತು ಕೆಲಸದಲ್ಲಿ ತೊಡಗಿರುವವರ ಮಾಹಿತಿಯನ್ನು ಒಳಗೊಂಡಿದೆ. ಜಿಲ್ಲೆ ಮತ್ತು ತಾಲೂಕುಗಳ ನಕ್ಷೆಗಳ ಜೊತೆಗೆ ಪ್ರಮುಖ ಅಂಕಿ ಅಂಶಗಳ ರೂಪದಲ್ಲಿ ರಾಜ್ಯ, ಜಿಲ್ಲೆ, ತಾಲೂಕುಗಳ ಕೋಷ್ಟಕಗಳನ್ನು ಸಹ ಪುಸ್ತಕದಲ್ಲಿ ನಮೂದಿಸಲಾಗಿದೆ.
     ಭಾರತದ 2011 ರ ಜನಗಣತಿಯು 2011 ರ ಮಾರ್ಚ್ 01 ಕ್ಕೆ ಅನ್ವಯಿಸುವಂತೆ ರಾಷ್ಟ್ರದಲ್ಲಿ ಉಪಲಬ್ಧವಿರುವ ಅಪಾರ ಮಾನವ ಸಂಪನ್ಮೂಲದ ಬಗೆಗಿನ ಮಾಹಿತಿ, ಜನಾಂಗೀಯ ಸ್ಥಿತಿಗತಿಗಳ ಮಾಹಿತಿಯನ್ನು ಗ್ರಾಮೀಣ ಪ್ರದೇಶಗಳಿಗೆ ಗ್ರಾಮಗಳ ಮಟ್ಟದಲ್ಲಿ ಮತ್ತು ಪಟ್ಟಣ ಪ್ರದೇಶಗಳಿಗೆ ವಾರ್ಡ್ ಮಟ್ಟದಲ್ಲಿ ಒದಗಿಸುತ್ತದೆ. ಜನಗಣತಿಯು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಿನ ಹತ್ತು ವರ್ಷಗಳಲ್ಲಿ ಯೋಜನೆಗಳು ಮತ್ತು ಕಾರ್ಯಗಳನ್ನು ರೂಪಿಸಲು ಮತ್ತು ಅವುಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಅಗತ್ಯವಾಗಿರುವ ಗ್ರಾಮ, ವಾರ್ಡ್ ಮಟ್ಟದ ಮಾಹಿತಿಯನ್ನು ಒದಗಿಸುವ ಏಕೈಕ ಮೂಲವಾಗಿದೆ. ಮುಂಬರುವ ಹತ್ತು ವರ್ಷಗಳಲ್ಲಿ ರಾಷ್ಟ್ರದಲ್ಲಿರುವ ಜನತೆಯ ಕ್ಷೇಮಾಭಿವೃದ್ಧಿ ಮತ್ತು ಅಭಿವೃದ್ಧಿ ಯೋಜನೆಗಳ ನೀಲಿ ನಕ್ಷೆಯನ್ನು ರೂಪಿಸಲು ಮತ್ತು ಅವುಗಳನ್ನು ದಕ್ಷತೆಯಿಂದ ನಿರ್ವಹಿಸಲು ಯೋಜಕರು, ಆಡಳಿತಾಧಿಕಾರಿಗಳು, ಜನಾಂಗೀಯ ವಿಶ್ಲೇಷಕರು, ವಿದ್ವಾಂಸರುಗಳಿಗೆ ಜನಗಣತಿಯ ವಿವರವು ರಾಷ್ಟದ ಒಂದು ಪೂರ್ಣ ಚಿತ್ರಣವನ್ನು ಒದಗಿಸುತ್ತದೆ. 
     ನವದೆಹಲಿಯ ಮಹಾ ರಿಜಿಸ್ಟ್ರಾರ್ ಜನರಲ್ ಮತ್ತು ಸಂಬಂಧಿತ ರಾಜ್ಯಗಳ ಜನಗಣತಿಯ ನಿರ್ದೇಶನಾಲಯಗಳು ಈಗಾಗಲೇ 2011 ರ ಪ್ರಾಥಮಿಕ ಜನಗಣತಿಯ ಕೋಷ್ಟಕಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮ ರೂಪದಲ್ಲಿಯೂ ಸಹ ಬಿಡುಗಡೆ ಮಾಡಿವೆ. ಅವು ಜನಗಣತಿ ಇಲಾಖೆಯ ಅಧಿಕೃತ ಅಂತರ್ಜಾಲ 
www.censusindia.gov.in ನಲ್ಲಿ ಶುಲ್ಕರಹಿತವಾಗಿ ಲಭ್ಯವಿದೆ. ಅಲ್ಲದೇ 2011 ರ ಜನಗಣತಿ ಮಾಹಿತಿಯನ್ನು ಎಲ್ಲಾ ರಾಜ್ಯಗಳ ಜನಗಣತಿಯ ನಿರ್ದೇಶನಾಲಯಗಳಲ್ಲಿ ಸಿ.ಡಿ ಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮ ರೂಪದಲ್ಲಿ ಮಾಹಿತಿಯು ಲಭ್ಯವಿದ್ದರೂ ಸಹ ಜನಸಂಖ್ಯೆ ಮತ್ತು ಇತರೆ ಪ್ರಮುಖ ಜನಾಂಗೀಯ ಸ್ಥಿತಿಗತಿಗಳ ಮೂಲ ಮಾಹಿತಿಯನ್ನು ಮುದ್ರಿತ ರೂಪದಲ್ಲಿ ಬಯಸುವ ರಾಜ್ಯದ ಜಿಲ್ಲೆ, ತಾಲೂಕು, ಪಟ್ಟಣ ಮಟ್ಟದಲ್ಲಿನ ರಾಜ್ಯ ಸರ್ಕಾರಿ ಅಧಿಕಾರಿಗಳ ಹಾಗೂ ಕಾರ್ಯನಿರ್ವಾಹಕರ ದೈನಂದಿನ ಆಡಳಿತ ಕಾರ್ಯಗಳಿಗೆ ಜನಗಣತಿಯ ಮುದ್ರಣ ರೂಪದ  ಅಗತ್ಯತೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹೊತ್ತಿಗೆಗಳನ್ನು  ಬಿಡುಗಡೆಗೊಳಿಸಿದ್ದಾರೆ.       
     ಜನಗಣತಿ ಮಾಹಿತಿ ಬಳಕೆದಾರರಿಗೆ ಮತ್ತು ಜನಸಾಮಾನ್ಯರಿಗೆ ಈ ಜನಗಣತಿ ಪುಸ್ತಕವು ಬೆಂಗಳೂರಿನ ಕೋರಮಂಗಲದಲ್ಲಿರುವ ಕೇಂದ್ರೀಯ ಸದನದ 7ನೇ ಮಹಡಿಯ ಇ ಮತ್ತು ಎಫ್ ಭಾಗದಲ್ಲಿರುವ ಜನಗಣತಿ ನಿರ್ದೇಶನಾಲಯದಲ್ಲಿ ಯುಕ್ತ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ.
  ಜನಗಣತಿ ಪುಸ್ತಕದ ಜಿಲ್ಲಾ ವಾರು ದರ ವಿವರ ಇಂತಿದೆ.  ಬೆಳಗಾವಿ ಜಿಲ್ಲೆಯ ಜನಗಣತಿ ಮಾಹಿತಿ ಒದಗಿಸುವ ಪುಸ್ತಕದ ಬೆಲೆ ರೂ.90/-, ಬಾಗಲಕೋಟೆ  ರೂ. 60, ಬಿಜಾಪುರ ರೂ.60, ಬೀದರ್ ರೂ.55, ರಾಯಚೂರು ರೂ.60, ಕೊಪ್ಪಳ ರೂ.55, ಗದಗ ರೂ.50, ಧಾರವಾಡ ರೂ.50, ಉತ್ತರಕನ್ನಡ ರೂ.90, ಹಾವೇರಿ ರೂ.65, ಬಳ್ಳಾರಿ ರೂ.65, ಚಿತ್ರದುರ್ಗ ರೂ.65, ದಾವಣಗೆರೆ ರೂ.70, ಶಿವಮೊಗ್ಗ ರೂ.80, ಉಡುಪಿ ರೂ.45, ಚಿಕ್ಕಮಗಳೂರು ರೂ.80, ತುಮಕೂರು 110, ಬೆಂಗಳೂರು ನಗರ ರೂ.55, ಮಂಡ್ಯ ರೂ.85, ಹಾಸನ ರೂ.100, ದಕ್ಷಣ ಕನ್ನಡ ರೂ.55, ಕೊಡಗು ರೂ.50, ಮೈಸೂರು ರೂ.80, ಚಾಮರಾಜನಗರ ರೂ.45, ಕಲಬುರಗಿ ರೂ.70, ಯಾದಗಿರಿ ರೂ.50, ಕೋಲಾರ ರೂ.80, ಚಿಕ್ಕಬಳ್ಳಾಪುರ ರೂ.75 ಬೆಂಗಳೂರು ಗ್ರಾಮೀಣ ರೂ.60 ಮತ್ತು ರಾಮನಗರ ರೂ.60 ಎಂದು ನಿಗದಿಪಡಿಸಲಾಗಿದ್ದು, ಎಲ್ಲ 30 ಜಿಲ್ಲೆಗಳ ಪ್ರತಿಗಳಿಗೆ ರೂ. 2015 ನಿಗದಿಪಡಿಸಿದೆ.
     ಪುಸ್ತಕ ಪಡೆಯಬಯಸುವ ಆಸಕ್ತರು ಪುಸ್ತಕದ ದರ ಹಾಗೂ ಅಂಚೆ ವೆಚ್ಚವನ್ನು ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಸೆನ್ಸಸ್ ಆಪರೇಷನ್ಸ್, ಕರ್ನಾಟಕ, ಬೆಂಗಳೂರು ಇವರ ಹೆಸರಿಗೆ ಡಿ.ಡಿ. ಅಥವಾ ಮನಿ ಆರ್ಡರ್ ಮೂಲಕ ಡೈರೆಕ್ಟರೇಟ್ ಆಫ್ ಸೆನ್ಸಸ್, 7ನೇ ಮಹಡಿ, ಇ-ಎಫ್ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-560034 ವಿಳಾಸಕ್ಕೆ ಮನವಿ ಪತ್ರದೊಂದಿಗೆ ಕಳುಹಿಸಿಕೊಡಬೇಕು ಎಂದು ಜನಗಣತಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

ಯುವ ಕ್ರೀಡಾ ಮಿತ್ರ ಯೋಜನೆ : ಅರ್ಜಿ ಆಹ್ವಾನ

ಕೊಪ್ಪಳ ಮೇ. 22 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು       “ಯುವ ಕ್ರೀಡಾ ಮಿತ್ರ” ಎಂಬ ಹೊಸ ಯೋಜನೆಯಡಿ ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಹಾಯಧನ ಮಂಜೂರಾತಿಗೆ ಅರ್ಹ ಯುವ ಸಂಘ/ಕ್ರೀಡಾ ಸಂಘಗಳಿಂದ ಅರ್ಜಿ ಆಹ್ವಾನಿಸಿದೆ.
      ಈ  ಯೋಜನೆಯಡಿ ಜಿಲ್ಲೆಯ ಕ್ರೀಡಾ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಆಸಕ್ತ ಯುವ ಸಂಘ/ಕ್ರೀಡಾ ಸಂಘಗಳನ್ನು ಸ್ಥಾಪಿಸಲು ಒತ್ತು ನೀಡಬೇಕಾಗಿರುವುದರಿಂದ ಜಿಲ್ಲೆಯ ಪ್ರತಿ ಹೋಬಳಿಗೆ ಒಂದರಂತೆ ಯುವ/ಕ್ರೀಡಾ ಸಂಘವನ್ನು ಸ್ಥಾಪಿಸಲು ಉದ್ದೇಶಿಸಿದೆ. ಇಂತಹ ಯುವ/ಕ್ರೀಡಾ ಸಂಸ್ಥೆಗಳಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಪ್ರತಿಭೆಗಳನ್ನು ಗುರುತಿಸಿ ಕ್ರೀಡಾಶಾಲೆ/ನಿಲಯಗಳಿಗೆ ಕಳುಹಿಸಲು ಪ್ರೋತ್ಸಾಹ ಧನವಾಗಿ ಪ್ರತಿ ಹೋಬಳಿಯ ಒಂದು ಸಂಘಕ್ಕೆ ವಾರ್ಷಿಕ ತಲಾ ಇಪ್ಪತ್ತೈದು ಸಾವಿರ ರೂ. ಗಳನ್ನು ನೀಡಲು ಅವಕಾಶವಿದೆ.  ಜಿಲ್ಲೆಯ ಪ್ರತಿ ಹೋಬಳಿಯ ಒಂದು ಅರ್ಹ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಥವಾ ಏಕಲವ್ಯ, ಕರ್ನಾಟಕ ಕ್ರೀಡಾರತ್ನ, ಅರ್ಜುನ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಮತ್ತು ಉನ್ನತ ಕ್ರೀಡಾ ಪಟುಗಳು ಇರುವ ಯುವ/ಕ್ರೀಡಾ ಸಂಘ-ಸಂಸ್ಥೆಗಳು ಇದ್ದಲ್ಲಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರಲ್ಲಿ ತಮ್ಮ ಹೆಸರು ನೋಂದಾಯಿಸಕೊಳ್ಳಬೇಕು. ನೊಂದಾವಣೆಗೊಂಡ ಯುವಕ/ಯುವತಿಯರ ಪಟ್ಟಿಯನ್ನು ಸಿದ್ದಪಡಿಸಿ ಕೇಂದ್ರ ಕಚೇರಿಗೆ ಅಂತಿಮ ಆಯ್ಕೆಗಾಗಿ ಸಲ್ಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ :08539-201400 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಮೇ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಮೇ. 23 ಮತ್ತು 24 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
     ಸಚಿವರು ಮೇ. 23 ಮತ್ತು 24 ರಂದು ಕಾರಟಗಿಯಲ್ಲಿ ಜರುಗುವ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರಟಗಿಯಲ್ಲಿ ವಾಸ್ತವ್ಯ ಮಾಡುವರು.  ಸಚಿವರು ಮೇ. 25 ರಂದು ಬೆಳಿಗ್ಗೆ 9 ಗಂಟೆಗೆ ಕಾರಟಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ : ಜೂ. 02 ರಂದು ಸಾರ್ವತ್ರಿಕ ರಜೆ

ಕೊಪ್ಪಳ ಮೇ. 22 (ಕರ್ನಾಟಕ ವಾರ್ತೆ): ಪ್ರಸಕ್ತ ಗ್ರಾಮ ಪಂಚಾಯತಿ ಚುನಾವಣೆ ನಿಮಿತ್ಯ ಜೂ. 02 ರಂದು ಚುನಾವಣೆ ನಡೆಯುವ ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಇತರೆ ಬ್ಯಾಂಕ್‍ಗಳು, ಜೀವವಿಮಾ ನಿಗಮದ ಕಚೇರಿಗಳಿಗೆ ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
     ಯಾವುದೇ ಬಿಸಿನೆಸ್ ಟ್ರೇಡ್, ಇಂಡಸ್ಟ್ರಿಯಲ್ ಅಂಡರ್‍ಟೇಕಿಂಗ್ ಅಥವಾ ಇನ್ನೆತರ ಎಸ್ಟಾಬ್ಲಿಷ್‍ಮೆಂಟ್‍ಗಳಲ್ಲಿ ಮತ್ತು ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮತದಾನ ದಿನಾಂಕದಂದು ವೇತನ ಸಹಿತ ರಜೆಗೆ ಅರ್ಹರು.  ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಪ್ರದೇಶಗಳನ್ನು ಹೊರತುಪಡಿಸಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಕೇಂದ್ರ ಸರ್ಕಾರದ ಕಚೇರಿಗಳಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಾರ್ಖಾನೆ, ಕೈಗಾರಿಕೆ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳೂ ಸೇರಿದಂತೆ) ಜೂ. 02 ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.  ಆದರೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟಿರುವ ಎಲ್ಲ ಸರ್ಕಾರಿ ನೌಕರರು ಅಂದು ಚುನಾವಣಾ ಕಾರ್ಯದಲ್ಲಿ ಹಾಜರಾಗಬೇಕು.
     ಮತದಾನದ ದಿನದಂದು ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಅನುವು ಮಾಡಿಕೊಡುವಂತೆ ರಾಜ್ಯ ಕಾರ್ಮಿಕ ಆಯುಕ್ತರು ಸಂಬಂಧಪಟ್ಟ ಮಾಲೀಕರು ಹಾಗೂ ನಿಯೋಜಕರಿಗೆ ಸುತ್ತೋಲೆ ಮೂಲಕ ಸೂಚನೆ ನೀಡಿದೆ.
     ಕಾರ್ಖಾನೆಗಳ ಕಾಯ್ದೆ ಅಡಿ ನೋಂದಾಯಿಸಲ್ಪಟ್ಟಿರುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮತದಾನದ ದಿನದಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅವರಿಗೆ ವೇತನ ಸಹಿತ ರಜೆ ಅಥವಾ ನಿರಂತರ ಕಾರ್ಯಾಚರಣೆಯುಳ್ಳ ಕಾರ್ಖಾನೆಗಳಲ್ಲಿ ಕಾರ್ಮಿಕರು ಹಕ್ಕು ಚಲಾಯಿಸಲು ಸಾಧ್ಯವಾಗುವಂತೆ ಕನಿಷ್ಠ 2 ಗಂಟೆಗಳ ಕಾಲ ಅನುಮತಿ ನೀಡಬೇಕು ಎಂದು ರಾಜ್ಯ ಕಾರ್ಖಾನೆಗಳು, ಬಾಯ್ಲರ್‍ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ನಿರ್ದೇಶಕರು ಕಾರ್ಖಾನೆಗಳು ಹಾಗೂ ಆಡಳಿತ ವರ್ಗದವರಿಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Thursday, 21 May 2015

ಗ್ರಾ.ಪಂ. ಚುನಾವಣೆ : 2151 ನಾಮಪತ್ರ ಸಲ್ಲಿಕೆ

ಕೊಪ್ಪಳ ಮೇ. 21 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ. 21 ಗುರುವಾರದಂದು ಜಿಲ್ಲೆಯಲ್ಲಿ  ಒಟ್ಟು 2151 ನಾಮಪತ್ರಗಳು ಸಲ್ಲಿಕೆಯಾಗಿವೆ. 
     ಕೊಪ್ಪಳ ತಾಲೂಕಿನಲ್ಲಿ 669 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ  582 ನಾಮಪತ್ರಗಳು.  ಕುಷ್ಟಗಿ ತಾಲೂಕಿನಲ್ಲಿ 493 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 407 ಜನ ನಾಮಪತ್ರ ಸಲ್ಲಿಸಿದ್ದಾರೆ.  ಜಿಲ್ಲೆಯಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ.ಜಾತಿ-424, ಪ.ಪಂಗಡ-213, ಹಿಂದುಳಿದ ಅ ವರ್ಗ-261, ಹಿಂದುಳಿದ ಬ ವರ್ಗ-54 ಹಾಗೂ ಸಾಮಾನ್ಯ ವರ್ಗದ-1199 ನಾಮಪತ್ರಗಳು ಸಲ್ಲಿಕೆಯಾಗಿವೆ.  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ, ಈವರೆಗೆ ಒಟ್ಟು 7638 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.  ನಾಮಪತ್ರ ಸಲ್ಲಿಕೆಗೆ ಮೇ. 22 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ಮೇ. 23 ರಂದು ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಮೇ. 25 ಕೊನೆಯ ದಿನಾಂಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ನ್ಯೂನ್ಯತೆ ಸರಿಪಡಿಸಿಕೊಳ್ಳಲು ಅವಕಾಶ

ಕೊಪ್ಪಳ, ಮೇ.21 (ಕನಾಟಕ ವಾರ್ತೆ): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಬೆಂಗಳೂರಿನ ಹಿಂದುಳಿದ ವರ್ಗಗಳ ಆಯೋಗವು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಒಳಪಡದಿರುವ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲು ಹಾಗೂ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಯಲ್ಲಿ ಮಾಹಿತಿದಾರರ ಪ್ರಕಾರ ನ್ಯೂನ್ಯತೆಗಳಿದ್ದಲ್ಲಿ ಲಿಖಿತ ಮನವಿ ಮೂಲಕ ಸರಿಪಡಿಸಿಕೊಳ್ಳಲು ಮೇ.27 ರವರೆಗೆ ಅವಕಾಶ ಕಲ್ಪಿಸಿದೆ.
      ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಒಳಪಡದಿರುವ ಕುಟುಂಬಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದ್ದು, ಅಂತಹ ಕುಟುಂಬಗಳು ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದವರು ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ನಗರ ಅಥವಾ ಪಟ್ಟಣಕ್ಕೆ ಸಂಬಂಧಿಸಿದವರು ಮುನ್ಸಿಪಲ್ ಕಾರ್ಯಾಲಯಕ್ಕೆ ಮೇ.27 ರೊಳಗಾಗಿ ಲಿಖಿತ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಅವರು ತಿಳಿಸಿದ್ದಾರೆ.

ಮೇ. 23 ರಿಂದ ಶಿಕ್ಷಕರ ನೇಮಕಾತಿ ಪರೀಕ್ಷೆ : ಸಿಸಿ ಟಿವಿ ಕಡ್ಡಾಯ- ಆರ್.ಆರ್. ಜನ್ನು


ಕೊಪ್ಪಳ, ಮೇ.21 (ಕರ್ನಾಟಕ ವಾರ್ತೆ): ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಮೇ. 23 ಮತ್ತು 24 ರಂದು ಎರಡು ದಿನಗಳ ಕಾಲ ಕೊಪ್ಪಳದಲ್ಲಿ ನಡೆಯಲಿರುವ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ) ಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಸೂಕ್ತ ನಿಗಾ ವಹಿಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಸಿಸಿ ಟಿವಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಶಿಕ್ಷಕರ ನೇಮಕಾತಿಗಾಗಿ ನಡೆಸಲಾಗುವ ಸಿಇಟಿ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಶಿಕ್ಷಕರ ನೇಮಕಾತಿಗಾಗಿ ಮೇ. 23 ಮತ್ತು 24 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಕೊಪ್ಪಳದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಬಾಲಕರ ಸರ್ಕಾರಿ ಪ.ಪೂ. ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ನಿಗದಿಪಡಿಸಲಾಗಿದೆ.  ಪರೀಕ್ಷೆ ನ್ಯಾಯಸಮ್ಮತ ಹಾಗೂ ಸುಗಮವಾಗಿ ಜರುಗಿಸಲು ಅಧಿಕಾರಿಗಳು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು.  ಪ್ರಶ್ನೆಪತ್ರಿಕೆಗಳನ್ನು ಸೂಕ್ತ ಭದ್ರತೆಯಲ್ಲಿ ಜಿಲ್ಲಾ ಖಜಾನೆಯಲ್ಲಿ ಇರಿಸುವುದು ಹಾಗೂ ಪರೀಕ್ಷೆಗೆ ಮುನ್ನ ಭದ್ರತಾ ವ್ಯವಸ್ಥೆಯಲ್ಲಿಯೇ ಪರೀಕ್ಷಾ ಕೇಂದ್ರಕ್ಕೆ ಸಕಾಲದಲ್ಲಿ ಪೊಲೀಸ್ ಬಂದೋಬಸ್ತ್‍ನಲ್ಲಿ ತಲುಪಿಸುವ ವ್ಯವಸ್ಥೆ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಬೇಕು.  ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಯಾವುದೇ ಅಕ್ರಮ ನಡೆಸದಂತೆ ನಿಗಾ ವಹಿಸಲು ಸಿಸಿ ಟಿವಿ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.  ಪ್ರಶ್ನೆಪತ್ರಿಕೆಗಳ ಲಕೋಟೆಯ ಭದ್ರತಾ ಅಂಶ ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬೇಕು.  ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸಬೇಕು.  ಪರೀಕ್ಷೆಗೆ ನೇಮಕಗೊಂಡಿರುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪರೀಕ್ಷೆ ನಡೆಸುವ ಕುರಿತಂತೆ ಯಾವುದೇ ದೂರುಗಳು ಬಾರದಂತೆ ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು.  ಒಂದು ವೇಳೆ ಯಾವುದೇ ಅಕ್ರಮ ನಡೆಯುವುದು ಅಥವಾ ದೂರುಗಳು ಬಂದಲ್ಲಿ ಸಂಬಂಧಪಟ್ಟವರೇ ಹೊಣೆ ಹೊರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು, ಪರೀಕ್ಷೆ ಬಗ್ಗೆ ವಿವರಣೆ ನೀಡಿ, ಜಿಲ್ಲೆಯಲ್ಲಿ 1 ರಿಂದ 5 ನೇ ತರಗತಿಗೆ 135-ಸಾಮಾನ್ಯ ಕನ್ನಡ ವಿಷಯದ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.  6 ರಿಂದ 8 ನೇ ತರಗತಿಗೆ 141- ಸಾಮಾನ್ಯ ಕನ್ನಡ ಮತ್ತು 141- ಆಂಗ್ಲ ಭಾಷೆ ವಿಷಯದ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುತ್ತದೆ.  ಎಲ್ಲ ಹುದ್ದೆಗಳಿಗೆ ಒಟ್ಟು 775 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಿಸಲಾಗಿದೆ.  ಅಲ್ಲದೆ ಪ್ರಶ್ನೆ ಪತ್ರಿಕೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಮಾರ್ಗಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದರು.
     ಸಿಇಟಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಎಂ.ಎಸ್. ಬಡದಾನಿ ಅವರು ಪರೀಕ್ಷೆ ಸಿದ್ಧತೆ ಹಾಗೂ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿ, ಮೇ. 23 ರಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ 1 ರಿಂದ 5 ನೇ ತರಗತಿ ಶಿಕ್ಷಕರ ಹುದ್ದೆಯ ಸಾಮಾನ್ಯ ಪರೀಕ್ಷೆ ನಡೆಯಲಿದೆ.  ಅದೇ ದಿನ ಮಧ್ಯಾಹ್ನ 2-30 ರಿಂದ 5 ಗಂಟೆಯವರೆಗೆ 6 ರಿಂದ 8 ನೇ ತರಗತಿ ಶಿಕ್ಷಕರ ಹುದ್ದೆಯ ಸಾಮಾನ್ಯ ಪರೀಕ್ಷೆ.  ಮೇ. 24 ರಂದು ಬೆ. 10-30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ 6 ರಿಂದ 8 ನೇ ತರಗತಿ ಶಿಕ್ಷಕರ ಹುದ್ದೆಯ ಸಾಮಾನ್ಯ-ಕನ್ನಡ ಪರೀಕ್ಷೆ. ಅದೇ ದಿನ ಮ. 2-30 ರಿಂದ ಸಂ. 5 ಗಂಟೆಯವರೆಗೆ 6 ರಿಂದ 8 ನೇ ತರಗತಿ ಶಿಕ್ಷಕರ ಹುದ್ದೆಯ ಆಂಗ್ಲ ಭಾಷೆ ಪರೀಕ್ಷೆ ನಡೆಯಲಿದೆ.  ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಯಾವುದೇ ರೀತಿಯ ಪುಸ್ತಕ, ಹಾಳೆ, ಲಾಗ್ ಟೇಬಲ್, ಕ್ಯಾಲ್ಕುಲೇಟರ್, ಮೊಬೈಲ್ ಇತ್ಯಾದಿ ಸಾಮಗ್ರಿಗಳನ್ನು ತರುವಂತಿಲ್ಲ ಎಂದು ವಿವರಿಸಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸೇರಿದಂತೆ ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಂಡಿರುವ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಖಜಾನೆ ಅಧಿಕಾರಿ ಕಳ್ಳೇರ್ ಅವರು ಪಾಲ್ಗೊಂಡಿದ್ದರು.

ಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾ ವಿಧಿ ಸ್ವೀಕಾರ

ಕೊಪ್ಪಳ ಮೇ. 21 (ಕರ್ನಾಟಕ ವಾರ್ತೆ): ಸರ್ಕಾರದ ಸೂಚನೆಯಂತೆ ಮೇ. 21 ರ ದಿನವನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
     ಭಯೋತ್ಪಾದನಾ ವಿರೋಧಿ ದಿನದ ಅಂಗವಾಗಿ ‘ ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ಶಕ್ತಿ, ಸಾಮಥ್ರ್ಯದಿಂದ ಎದುರಿಸುತ್ತೇವೆ.  ಸಹಬಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಿಸ್ಪರ ಅರಿವನ್ನು ಸಾಧಿಸಲು ಹಾಗೂ ಉತ್ತೇಜಿಸಲು ಅಲ್ಲದೆ ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆಯೊಡ್ಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಪಣ ತೊಡುತ್ತೇವೆ ಎಂಬುದಾಗಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಯುವ ಕ್ರೀಡಾ ಮಿತ್ರ ಯೋಜನೆ : ಹೆಸರು ನೊಂದಾಯಿಸಲು ಸೂಚನೆ

ಕೊಪ್ಪಳ, ಮೇ.21 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ  ಪ್ರಸಕ್ತ ಸಾಲಿಗೆ ಯುವ ಕ್ರೀಡಾ ಮಿತ್ರ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಯೋಜನೆಯ ಲಾಭ ಪಡೆಯಲು ಜಿಲ್ಲೆಯ ಆಸಕ್ತ ಯುವ ಕ್ರೀಡಾ ಸಂಘ ಸಂಸ್ಥೆಗಳು ಹೆಸರು ನೊಂದಾಯಿಸಬೇಕು ಎಂದು ಸೂಚನೆ ನೀಡಲಾಗಿದೆ.
     ಮುಖ್ಯಮಂತ್ರಿಗಳು ಪ್ರಸಕ್ತ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಈ ಯೋಜನೆಯಡಿ ಆಯಾ ಜಿಲ್ಲೆಗಳ ಕ್ರೀಡಾ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಜಿಲ್ಲೆಯ ಪ್ರತಿ ಹೋಬಳಿಗೊಂದರಂತೆ ಯುವ ಕ್ರೀಡಾ ಸಂಘಗಳನ್ನು ಸ್ಥಾಪಿಸಲಾಗುವುದು.  ಪ್ರತಿಭೆಗಳನ್ನು ಗುರುತಿಸಿ ಕ್ರೀಡಾ ಶಾಲೆಗಳಿಗೆ ಕಳುಹಿಸಲು ಪ್ರತಿ ಹೋಬಳಿಯ ಒಂದು ಸಂಘಕ್ಕೆ ಪ್ರೋತ್ಸಾಹ ಧನವಾಗಿ ವಾರ್ಷಿಕ ರೂ. 25,000 ನೀಡಲಾಗುವುದು.  ಜಿಲ್ಲೆಯ ಪ್ರತಿ ಹೋಬಳಿಯ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಉನ್ನತ ಕ್ರೀಡಾಪಟುಗಳನ್ನು ಹೊಂದಿರುವ ಯುವ ಕ್ರೀಡಾ ಸಂಘ ಸಂಸ್ಥೆಗಳು ತಮ್ಮ ಹೆಸರನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರಲ್ಲಿ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08539-201400 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಯಲಬುರ್ಗಾದಲ್ಲಿ ಖಜಾನೆ-2 ತರಬೇತಿ ಕಾರ್ಯಗಾರ

ಕೊಪ್ಪಳ, ಮೇ.21 (ಕರ್ನಾಟಕ ವಾರ್ತೆ): ಜಿಲ್ಲೆಯ ಯಲಬುರ್ಗಾ ಉಪಖಜಾನೆ ಇಲಾಖೆ ವತಿಯಿಂದ ಖಜಾನೆ-2 ವ್ಯವಸ್ಥೆ ಕುರಿತಂತೆ ಯಲಬುರ್ಗಾದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಮೇ.22 ರಂದು ಬೆಳಿಗ್ಗೆ 11 ಗಂಟೆಗೆ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
     ಯಲಬುರ್ಗಾ ಉಪಖಜಾನೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಹಣ ಸೆಳೆಯುವ ಹಾಗೂ ಬಟವಾಡೆ ಅಧಿಕಾರಿಗಳು ಮತ್ತು ಅವರ ಅಧೀನ ಸಿಬ್ಬಂದಿಗಳು ಈ ತರಬೇತಿ ಶಿಬಿರದಲ್ಲಿ ತಪ್ಪದೆ ಭಾಗವಹಿಸಿ, ಯೋಜನೆಯ ಮಾಹಿತಿ ಪಡೆಯಬೇಕು ಎಂದು ಯಲಬುರ್ಗಾ ಉಪಖಜಾನೆಯ ಖಜಾನೆ ಅಧಿಕಾರಿ ಅಮರೇಗೌಡ ಮಾಲಿಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕೊಪ್ಪಳ, ಮೇ.21 (ಕರ್ನಾಟಕ ವಾರ್ತೆ): ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಪ್ರಸಕ್ತ ಸಾಲಿಗೆ ಮೆರಿಟ್ ಕಂ. ರಿಸರ್ವೇಷನ್ ಆಧಾರಿತ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, 8ನೇ ತರಗತಿ, ಎಸ್.ಎಸ್.ಎಲ್.ಸಿ ಉತ್ತೀರ್ಣರಾದ   ಅಭ್ಯರ್ಥಿಗಳಿಂದ ವಿವಿಧ ತಾಂತ್ರಿಕ, ತಾಂತ್ರಿಕೇತರ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     2015 ರ ಮೇ. 20 ಕ್ಕೆ 14 ವರ್ಷ ವಯಸ್ಸು ಮೇಲ್ಪಟ್ಟ 8ನೇ ತರಗತಿ, ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ಅರ್ಜಿಯನ್ನು ಮೇ.20 ರಿಂದ ಜೂ.05 ರವರೆಗೆ ವೆಬ್‍ಸೈಟ್   ಅಥವಾ  www.emptrg.kar.nic.in  or www.detkar.com/admission-2015  ರಲ್ಲಿ  ಮೂಲಕ ಆನ್‍ಲೈನ್ ನಲ್ಲಿ   ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ರಾಜ್ಯದ ಯಾವುದೇ ಸರಕಾರಿ, ಅನುದಾನಿತ ಐಟಿಐ, ಇಂಟರ್‍ನೆಟ್ ಕೆಫೆ, ಸೈಬರ್ ಸೆಂಟರ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.   
      ಕೊಪ್ಪಳ ಜಿಲ್ಲೆಯ ಸರ್ಕಾರಿ  ಕೈಗಾರಿಕಾ ತರಬೇತಿ ಸಂಸ್ಥೆಗಳಾದ ಕೊಪ್ಪಳ, ಕುಕನೂರು, ತಳಕಲ್, ಮಂಗಳೂರು ಗ್ರಾಮ, ಯಲಬುರ್ಗಾ (ಮ), ಹನುಮಸಾಗರ, ಮುಧೋಳ, ಯಡ್ಡೋಣಿ, ಅಳವಂಡಿ, ಕನಕಗಿರಿ ಮತ್ತು ಗಂಗಾವತಿ. ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಾದ ಮಂಡಲಗಿರಿ, ಮಾಲಗಿತ್ತಿ ಮತ್ತು ಗಂಗಾವತಿ ಇಲ್ಲಿನ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಅಥವಾ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರನ್ನು ಕಛೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂ: 08534-230470 ಕ್ಕೆ ಸಂಪರ್ಕಿಸಬಹುದು ಎಂದು ಕುಕನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವ ಚೇತನ ಯೋಜನೆ : ಹೆಸರು ನೊಂದಣಿಗೆ ಸೂಚನೆ

ಕೊಪ್ಪಳ, ಮೇ.21 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ  ಪ್ರಸಕ್ತ ಸಾಲಿಗೆ ಯುವ ಚೇತನ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಯೋಜನೆಯ ಲಾಭ ಪಡೆಯಲು ಜಿಲ್ಲೆಯ ಆಸಕ್ತ ಯುವ ಕ್ರೀಡಾ ಸಂಘ ಸಂಸ್ಥೆಗಳು ಹೆಸರು ನೊಂದಾಯಿಸಲು ಸೂಚಿಸಲಾಗಿದೆ.
           ಈ ಯೋಜನೆಯಡಿ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಯುವಜನ ಅಥವಾ ಯುವಜನೇತರ ಸಂಘ ಸಂಸ್ಥೆಗೆ ಯುವಜನರಿಗಾಗಿ ಉದ್ಯೋಗಾಧಾರಿತ ವೃತ್ತಿ ಕೌಶಲ್ಯ ಶಿಬಿರಗಳನ್ನು ಮತ್ತು ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸಲು 01 ಲಕ್ಷ ರೂ.ಗಳ ಸಹಾಯಧನ ನೀಡಲಾಗುವುದು. ಯುವ ಸಬಲೀಕರಣ ಕಾರ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವವನ್ನು ಯುವ ಸಂಘ ಸಂಸ್ಥೆಗಳ ಮೂಲಕ ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ನೊಂದಾಯಿತ, ಅನುಭವ ಹೊಂದಿರುವ ಅರ್ಹ ಯುವಜನ ಹಾಗೂ ಯುವಜನೇತರ ಸಂಘ ಸಂಸ್ಥೆಗಳು ತಮ್ಮ ಹೆಸರನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08539-201400 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 20 May 2015

ಗ್ರಾ.ಪಂ. ಚುನಾವಣೆ : 3486 ನಾಮಪತ್ರ ಸಲ್ಲಿಕೆ

ಕೊಪ್ಪಳ ಮೇ. 20 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ. 20 ಬುಧವಾರದಂದು ಜಿಲ್ಲೆಯಲ್ಲಿ  ಒಟ್ಟು 3486 ನಾಮಪತ್ರಗಳು ಸಲ್ಲಿಕೆಯಾಗಿವೆ. 
     ಕೊಪ್ಪಳ ತಾಲೂಕಿನಲ್ಲಿ 945 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ  1037 ನಾಮಪತ್ರಗಳು.  ಕುಷ್ಟಗಿ ತಾಲೂಕಿನಲ್ಲಿ 784 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 720 ಜನ ನಾಮಪತ್ರ ಸಲ್ಲಿಸಿದ್ದಾರೆ.  ಜಿಲ್ಲೆಯಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ.ಜಾತಿ-679, ಪ.ಪಂಗಡ-535, ಹಿಂದುಳಿದ ಅ ವರ್ಗ-406, ಹಿಂದುಳಿದ ಬ ವರ್ಗ-90 ಹಾಗೂ ಸಾಮಾನ್ಯ ವರ್ಗದ-1776 ನಾಮಪತ್ರಗಳು ಸಲ್ಲಿಕೆಯಾಗಿವೆ.  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ, ಈವರೆಗೆ ಒಟ್ಟು 5487 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.  ನಾಮಪತ್ರ ಸಲ್ಲಿಕೆಗೆ ಮೇ. 22 ಕೊನೆಯ ದಿನಾಂಕವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಉಪನ್ಯಾಸಕರ ನೇಮಕ : ಅರ್ಜಿ ಆಹ್ವಾನ

ಕೊಪ್ಪಳ, ಮೇ.19 (ಕರ್ನಾಟಕ ವಾರ್ತೆ): ಕೊಪ್ಪಳದ ಅಲ್ಪ ಸಂಖ್ಯಾತರ ಪದವಿ ಪೂರ್ವ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಹೊರಸಂಪನ್ಮೂಲ ಗೌರವ ಧನ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
     ಖಾಲಿ ಇರುವ ಹುದ್ದೆ, ವಿದ್ಯಾರ್ಹತೆ ವಿವರ ಇಂತಿದೆ. ಪ್ರಾಚಾರ್ಯರು- ಎಂಎ, ಎಂಎಸ್‍ಸಿ, ಬಿ.ಎಡ್ (5 ವರ್ಷ ಅನುಭವ). ಕನ್ನಡ ಉಪನ್ಯಾಸಕರು-ಎಂಎ, ಬಿ.ಎಡ್, ಇಂಗ್ಲೀಷ್ ಉಪನ್ಯಾಸಕರು- ಎಂಎ, ಬಿ.ಎಡ್. ಗಣಿತ ಉಪನ್ಯಾಸಕರು- ಎಂಎಸ್‍ಸಿ, ಬಿ.ಎಡ್(ಗಣಿತ). ಭೌತಶಾಸ್ತ್ರ ಉಪನ್ಯಾಸಕರು- ಎಮ್‍ಎಸ್‍ಸಿ, ಬಿ.ಎಡ್(ಭೌತಶಾಸ್ತ್ರ), ಜೀವಶಾಸ್ತ್ರ ಉಪನ್ಯಾಸಕರು  ಎಂಎಸ್‍ಸಿ, ಬಿ.ಎಡ್(ಜೀವಶಾಸ್ತ್ರ), ರಸಾಯನಶಾಸ್ತ್ರ ಉಪನ್ಯಾಸಕರು ಎಂಎಸ್‍ಸಿ, ಬಿ.ಎಡ್(ರಸಾಯನಶಾಸ್ತ್ರ). ಗಣಕಯಂತ್ರ ಉಪನ್ಯಾಸಕರು-ಎಂಎಸ್‍ಸಿ, ಕಂಪ್ಯೂಟರ್ ಸೇರಿದಂತೆ ತಲಾ ಒಂದು ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
     ಆಸಕ್ತ ಅಭ್ಯರ್ಥಿಗಳು ತಮ್ಮ ದಾಖಲೆಗಳ ನಕಲು ಪ್ರತಿಗಳನ್ನು ಹಾಗೂ ವೈಯಕ್ತಿಕ ವಿವರಗಳೊಂದಿಗೆ ಮೇ.29 ರ ಸಂಜೆ 5 ಗಂಟೆಯೊಳಗಾಗಿ ಅರ್ಜಿಯನ್ನು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಅಥವಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರ ನೇಮಕಕ್ಕೆ ಸಿಇಟಿ ಪರೀಕ್ಷೆ : ಮೇ. 21 ರಂದು ಪೂರ್ವಭಾವಿ ಸಭೆ

ಕೊಪ್ಪಳ, ಮೇ.19 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಮೇ. 23, 24 ರಂದು ಕೊಪ್ಪಳದಲ್ಲಿ ಸಿಇಟಿ ಪರೀಕ್ಷೆ ನಡೆಸುವ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳಲು ಪೂರ್ವಭಾವಿ ಸಭೇ ಮೇ. 21 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ವಹಿಸುವರು ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.

ಮೇ.21 ರಂದು ಭಯೋತ್ಪಾದನಾ ವಿರೋಧಿ ದಿನ

ಕೊಪ್ಪಳ, ಮೇ.19 (ಕರ್ನಾಟಕ ವಾರ್ತೆ): ಇದೇ ಮೇ. 21 ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಅಂದು ಬೆಳಿಗ್ಗೆ 11 ಗಂಟೆಗೆ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳಿಂದ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಚನ ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದೆ.
     ಜಿಲ್ಲಾ ಆಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಛೇರಿಗಳ ಮುಖ್ಯಸ್ಥರು ಹಾಗೂ ಸಿಬ್ಬಂದ ವರ್ಗದವರು  ಪ್ರತಿಜ್ಞಾ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ತಪ್ಪದೇ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ||ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.

ವಕ್ಫ್ ಆಸ್ತಿಗಳಿಗೆ ನಾಮಫಲಕ ಹಾಕಲು ಸೂಚನೆ

ಕೊಪ್ಪಳ, ಮೇ.20 (ಕರ್ನಾಟಕ ವಾರ್ತೆ): ವಕ್ಫ್ ಸ್ವತ್ತುಗಳ ಸಂರಕ್ಷಣೆಯ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ನೊಂದಣಿಯಾದ ವಕ್ಫ್ ಆಸ್ತಿಗಳ ಮುಂದೆ ಕಡ್ಡಾಯವಾಗಿ ನಾಮ ಫಲಕಗಳನ್ನು ಅಳವಡಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಶಾ ಸೂಚನೆ ನೀಡಿದ್ದಾರೆ.
     ವಕ್ಫ್ ಆಸ್ತಿಗಳಾದ ಖಬರಸ್ತಾನ, ಈದ್ಗಾ, ಮಸಜೀದ್, ಮುಸ್ಲಿಂ ಶಾದಿ ಮಹಲ್, ಆಶೂರಖಾನ, ದರ್ಗಾ, ಮೆಹಬೂಬ್ ಸುಬಾನಿ ದರ್ಗಾ, ಝಂಡೆ ಕಟ್ಟಾ, ಮದರಸಾ ಹಾಗೂ ಇತ್ಯಾದಿಗಳಲ್ಲಿ ನಡೆಯುತ್ತಿರುವ ಒತ್ತುವರಿ, ಅನಧೀಕೃತ ಕಟ್ಟಡ ನಿರ್ಮಾಣಗಳನ್ನು ತಡೆಯುವ ನಿಟ್ಟಿನಲ್ಲಿ ವಕ್ಫ್ ಆಸ್ತಿಗಳ ಮುಂದೆ ನಾಮ ಫಲಕಗಳನ್ನು ಅಳವಡಿಸಲು ಸಂಬಂಧಪಟ್ಟ ವಕ್ಫ್ ಆಸ್ತಿಗಳ ಮುಖ್ಯಸ್ಥರು  ಕ್ರಮ ಕೈಗೊಳ್ಳಬೇಕು. ಸರ್ಕಾರದ ಆದೇಶದಂತೆ ಈಗಾಗಲೇ ವಕ್ಫ್ ಆಸ್ತಿಗಳಿಗೆ ಅಳತೆಯ ಮೂಲಕ ಸರಹದ್ದು ವಿಂಗಡಿಸಿ, ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ತಂತಿ ಬೇಲಿ ಹಾಕಿಸುವ ಕಾರ್ಯ ಪ್ರಗತಿಯಲ್ಲಿದ್ದು, ಎಲ್ಲ ವಕ್ಫ್ ಸ್ವತ್ತುಗಳ ಮುಂದೆ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಂಚಣಿ ಯೋಜನೆ : ಮೇ.24 ರಂದು ಕಾರ್ಯಾಗಾರ

ಕೊಪ್ಪಳ, ಮೇ.20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿರುವ ವಕ್ಫ್ ಸ್ವತ್ತುಗಳಾದ ಮಸ್ಜೀದ್, ದರ್ಗಾ, ಆಶೋರಖಾನಾ ಇತ್ಯಾದಿ ಧಾರ್ಮಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರಿಗೆ (ಮುಜಾವರ) ರಾಷ್ಟ್ರೀಯ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಲು ಮೇ.24 ರಂದು ಗಂಗಾವತಿಯಲ್ಲಿ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ.
     ಗಂಗಾವತಿಯ ದಾರೂಲ್ ಉಲೂಮ್ ಖಾದ್ರಿಯಾದಲ್ಲಿ ಅಂದು ಮಧ್ಯಾಹ್ನ 2 ಗಂಟೆಗೆ  ನಡೆಯಲಿರುವ ಕಾರ್ಯಾಗಾರದಲ್ಲಿ ವೆ ಟೂ ವೆಲ್ತ್ ಎ ಕಾಫಿ ವೆನಚೂರ್ ಸಂಸ್ಥೆಯ ಪ್ರಸಾದ ಎನ್. ಪಾಟೀಲ್ ಅವರು ರಾಷ್ಟ್ರೀಯ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಲಿದ್ದಾರೆ. ಈ ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವ ಮುಜಾವರಗಳು ತಮ್ಮ 02 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ ಸ್ಥಳದ 02 ಛಾಯಾಚಿತ್ರಗಳೊಂದಿಗೆ ಕಾರ್ಯಾಗಾರದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸೂರಮ್ಮ ದೇವಿ ಜಾತ್ರಾ ಮಹೋತ್ಸವ


ಕೊಪ್ಪಳ, ಮೇ.20 (ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಶ್ರೀ ಕ್ಷೇತ್ರ ಹೊಸೂರಿನ ಶ್ರೀ ಹೊಸೂರಮ್ಮ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮೇ.19 ರಿಂದ 28 ರವರೆಗೆ ನಡೆಯಲಿದೆ.
     ಮೇ.19 ರಂದು ರಾತ್ರಿ 7 ಗಂಟೆಗೆ ಕಂಕಣಧಾರಣೆ, ಮಹಾಮಂಗಳಾರತಿ, ಮೇ.20 ರಂದು ಬೆ. 9-30 ಗಂಟೆಗೆ ಅಶ್ವವಾಹನೋತ್ಸವ, ಮೇ.21 ರಂದು ಮಯೂರ ವಾಹನೋತ್ಸವ, ಮೇ.22 ರಂದು ಸಿಂಹ ವಾಹನೋತ್ಸವ, ಮೇ.23 ರಂದು ಶೇಷ ವಾಹನೋತ್ಸವ, ಮೇ.24 ರಂದು ಹಂಸ ವಾಹನೋತ್ಸವ, ಮೇ.25 ರಂದು ಐರಾವತ ವಾಹನೋತ್ಸವ, ಮೇ.26 ರಂದು ಬೆಳಿಗ್ಗೆ 09.30 ಗಂಟೆಗೆ ಗಜವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಅದೇ ದಿನ ರಾತ್ರಿ 09.30 ಗಂಟೆಗೆ ಹೊಸೂರಮ್ಮ ದೇವಿಯ ಉಚ್ಛಾಯ ಕಾರ್ಯಕ್ರಮ ನಡೆಯಲಿದೆ. ಮೇ.27 ರಂದು ರಾತ್ರಿ 08.30 ಗಂಟೆಗೆ ಬಾಳೆದಂಡಿಗೆ ಆರಂಭಗೊಳ್ಳಲಿದ್ದು, ಮೇ.28 ರಂದು ರಾತ್ರಿ ಪಾಯಸ ನಿವೇದನೆ ಹಾಗೂ ಅಗ್ನಿಕುಂಡ, ಜೂ.02 ರಂದು ಸಂಜೆ 06 ಗಂಟೆಗೆ ಹೊಸೂರು ಶ್ರೀ ಪಾವಡ ಆಂಜನೇಯ ಸ್ವಾಮಿ ರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ.
      ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತನು, ಮನ, ಧನದಿಂದ ಭಾಗವಹಿಸಿ, ಶ್ರೀದೇವಿಯ ಕೃಪಾಶಿರ್ವಾದ ಪಡೆಯಬೇಕು.  ದೇವಸ್ಥಾನಕ್ಕೆ ನೀಡಬಯಸುವ ಕಾಣಿಕೆ, ಬಂಗಾರ, ಬೆಳ್ಳಿ, ಸೀರೆ, ದವಸಧಾನ್ಯ ಇತ್ಯಾದಿಗಳನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ನೀಡಿ ಸೂಕ್ತ ರಸೀದಿ ಪಡೆದುಕೊಳ್ಳಬೇಕು ಎಂದು ಶ್ರೀ ಹೊಸೂರಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯಂ.ಹೆಚ್. ಪ್ರಕಾಶ್ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Tuesday, 19 May 2015

ತೋಟಗಾರಿಕೆ ಬೆಳೆ ಹಾನಿ ಪ್ರದೇಶಕ್ಕೆ ಸಂಸದರ ಭೇಟಿ

ಕೊಪ್ಪಳ ಮೇ. 19 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನಲ್ಲಿ ಕಳೆದ ಭಾನುವಾರದಂದು ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಹಾನಿಗೊಳಗಾದ ತೋಟಗಾರಿಕೆ ಬೆಳೆ ಪ್ರದೇಶಕ್ಕೆ ಸಂಸದ ಸಂಗಣ್ಣ ಕರಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
     ಕಳೆದ ಭಾನುವಾರದಂದು ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಕೊಪ್ಪಳ ತಾಲೂಕಿನ ಚುಕ್ಕನಕಲ್, ಮುದ್ದಾಬಳ್ಳಿ, ಗೊಂಡಬಾಳ, ಹ್ಯಾಟಿ, ಹೊಸಳ್ಳಿ ಮತ್ತಿತರೆ ಗ್ರಾಮಗಳ ಸುಮಾರು 500 ಎಕರೆ ಪ್ರದೇಶದಲ್ಲಿ ಬೆಳೆದ ತೋಟಗಾರಿಕೆ ಬೆಳೆ ಹಾನಿಯಾಗಿದೆ.  ಬಾಳೆ, ವಿಳೇದ ಎಲೆ ಬಳ್ಳಿ ಮತ್ತಿತರ ಬೆಳೆಗಳಿಗೆ ಅಪಾರ ಹಾನಿಯಾಗಿದೆ.  ನಷ್ಟ ಅನುಭವಿಸಿದ ರೈತರಿಗೆ ಹಾಗೂ ಮನೆ ಹಾನಿ ಅನುಭವಿಸಿದವರಿಗೆ ಸರ್ಕಾರದಿಂದ ಪರಿಹಾರ ಒದಗಿಸಬೇಕಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಗ್ರಾ.ಪಂ. ಚುನಾವಣೆ : 1182 ನಾಮಪತ್ರ ಸಲ್ಲಿಕೆ

ಕೊಪ್ಪಳ ಮೇ. 19 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ. 19 ಮಂಗಳವಾರದಂದು ಜಿಲ್ಲೆಯಲ್ಲಿ  ಒಟ್ಟು 1182 ನಾಮಪತ್ರಗಳು ಸಲ್ಲಿಕೆಯಾಗಿವೆ. 
     ಕೊಪ್ಪಳ ತಾಲೂಕಿನಲ್ಲಿ 362 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ  319 ನಾಮಪತ್ರಗಳು.  ಕುಷ್ಟಗಿ ತಾಲೂಕಿನಲ್ಲಿ 226 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 275 ಜನ ನಾಮಪತ್ರ ಸಲ್ಲಿಸಿದ್ದಾರೆ.  ಜಿಲ್ಲೆಯಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ.ಜಾತಿ-267, ಪ.ಪಂಗಡ-163, ಹಿಂದುಳಿದ ಅ ವರ್ಗ-134, ಹಿಂದುಳಿದ ಬ ವರ್ಗ-24 ಹಾಗೂ ಸಾಮಾನ್ಯ ವರ್ಗದ-594 ನಾಮಪತ್ರಗಳು ಸಲ್ಲಿಕೆಯಾಗಿವೆ.  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ, ಈವರೆಗೆ ಒಟ್ಟು 2001 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.  ನಾಮಪತ್ರ ಸಲ್ಲಿಕೆಗೆ ಮೇ. 22 ಕೊನೆಯ ದಿನಾಂಕವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಕೊಪ್ಪಳ, ಮೇ.19 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ|| ಮಹಾಂತೇಶ ಮಲ್ಲನಗೌಡರ ಸ್ಥಾಪಿಸಿರುವ ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಜಿಲ್ಲೆಯ  ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.
       ದತ್ತಿ ಪ್ರಶಸ್ತಿಗೆ ಕಳೆದ 2014 ರಲ್ಲಿ ಜಿಲ್ಲೆಯಲ್ಲಿ ಪ್ರಕಟಗೊಂಡಿರುವ ಜಿಲ್ಲೆಯ ಲೇಖಕರ ಯಾವುದೇ ಸೃಜನಶೀಲ ಕೃತಿಯನ್ನು ಕಳುಹಿಸಬಹುದಾಗಿದೆ. ಅರ್ಜಿಯನ್ನು ಮೂರು ಪ್ರತಿಯಲ್ಲಿ ಅಕ್ಬರ್.ಸಿ.ಕಾಲಿಮಿರ್ಚಿ, ಗೌರವ ಕಾರ್ಯದರ್ಶಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಪ್ಪಳ, ಭಾಗ್ಯನಗರ-583238 ಇವರಿಗೆ ಜೂ.11 ರೊಳಗಾಗಿ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9008585482 ಅಥವಾ 9731327829 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಪ್ಪ ಮ.ನಿಂಗೋಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ವೃತ್ತಿ ತರಬೇತಿ ಶಿಬಿರಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ, ಮೇ.19 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವನೀತಿ ಅನುಷ್ಟಾನ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ವಿವಿಧ ವೃತ್ತಿ ತರಬೇತಿ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಿದ್ದು, ಆಸಕ್ತ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯುವನೀತಿ ಅನುಷ್ಟಾನ ಯೋಜನೆಯಡಿ ಬೆಂಗಳೂರಿನ ವಿದ್ಯಾನಗರ ಮತ್ತು ಕುಂಬಳಗೋಡು ಯುವ ಕೇಂದ್ರಗಳಲ್ಲಿ ಜಿಮ್ ಮತ್ತು ದೈಹಿಕ ಸಾಮಥ್ರ್ಯ ತರಬೇತುದಾರರ ತರಬೇತಿ, ಥೆರಪಿಸ್ಟ್ ಹಾಗೂ ವೃತ್ತಿ ಕೌಶಲ್ಯ ತರಬೇತಿಗಳನ್ನು ಮೇ 2015 ರಿಂದ ಆಯೋಜಿಸಲು ಉದ್ದೇಶಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ವಿಷಯಗಳಿಗೆ ಅನುಗುಣವಾಗಿ ನಿಗದಿತ ದಿನದ ಅವಧಿಯವರೆಗೆ ತರಬೇತಿಗಳು ನಡೆಯಲಿದ್ದು, ಜಿಮ್ ಮತ್ತು ದೈಹಿಕ ಸಾಮಥ್ರ್ಯ ತರಬೇತುದಾರರ ತರಬೇತಿಯು 45 ದಿನಗಳವರೆಗೆ ನಡೆಯಲಿದೆ. ಥೆರಪಿಸ್ಟ್ ತರಬೇತಿಯು 90 ದಿನಗಳವರೆಗೆ ನಡೆಯಲಿದ್ದು, ಈ ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು 20 ರಿಂದ 30 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು ಮತ್ತು ಪಿ.ಯು.ಸಿ ಅಥವಾ ಪದವಿ ಪಡೆದಿರುವುದು ಕಡ್ಡಾಯವಾಗಿದೆ. ಕೈಗಾರಿಕೆ ಮತ್ತು ಖಾಸಗಿ ಕಂಪನಿಗಳ ಬೇಡಿಕೆ ಆಧಾರಿತ ವೃತ್ತಿ ಕೌಶಲ್ಯ ತರಬೇತಿಯು 30 ದಿನಗಳವರೆಗೆ ನಡೆಯಲಿದೆ.
     ತರಬೇತಿ ಪಡೆಯಲಿಚ್ಛಿಸುವವರು ಮೇ.25 ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ಇವರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 08539-201400 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಮೇ.19 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕ್ರೀಡೆ, ಸಂಸ್ಕøತಿ, ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮವಾದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ, ಇಲಾಖೆಯಲ್ಲಿ ನೊಂದಾಯಿತ ಹಾಗೂ ಮಾನ್ಯತೆ ಪಡೆದ ಯುವಕ, ಯುವತಿ ಸಂಘಗಳಿಗೆ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳ ಜಿಲ್ಲೆಯ ಯುವಕ, ಯುವತಿಯರಿಗಾಗಿ ವೈಯಕ್ತಿಕ 01 ಪ್ರಶಸ್ತಿ ಹಾಗೂ ಯುವಜನ ಸಂಘಕ್ಕೆ 01 ಪ್ರಶಸ್ತಿಯನ್ನು ಮಾತ್ರ ಆಯ್ಕೆ ಮಾಡಿ, ಕೇಂದ್ರ ಕಛೇರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.  ಯುವಕ, ಯುವತಿ ಮಂಡಳಗಳು ಹಾಗೂ ಯುವಕ, ಯುವತಿಯರು 2014 ರ ಏ. 01 ರಿಂದ 2015 ರ ಮಾ. 31 ರವರೆಗೆ ಕೈಗೊಂಡಿರುವ ಕಾರ್ಯಕ್ರಮಗಳ ಸಾಧನೆಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಅರ್ಜಿದಾರರು 35 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಈ ಕುರಿತು ವಯಸ್ಸಿನ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳಿಂದ ಧೃಢೀಕರಿಸಿ ಸಲ್ಲಿಸಬೇಕು ಹಾಗೂ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇಲ್ಲದಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಧೃಢೀಕರಣದ ಮೂಲ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. 
     ಅರ್ಜಿಯೊಂದಿಗೆ ನಿಗದಿತ ಅವಧಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಅನುಸಾರ ಪತ್ರಿಕಾ ವರದಿ, ಛಾಯಾಚಿತ್ರಗಳು, ಬ್ಯಾನರ್‍ಗಳು ಸ್ಪಷ್ಟವಾಗಿ ಕಾಣುವಂತೆ ದಾಖಲೆಗಳನ್ನು ಒದಗಿಸಬೇಕು. ಪ್ರಸ್ತಾವನೆಗಳನ್ನು 3 ಪ್ರತಿಯಲ್ಲಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಮಳೆಮಲ್ಲೇಶ್ವರ ರಸ್ತೆ, ಕೊಪ್ಪಳ ಈ ಕಛೇರಿಗೆ ಜೂ.10 ರೊಳಗಾಗಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ : 08539-201400 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Monday, 18 May 2015

ಗ್ರಾಮ ಸ್ವರಾಜ್ಯ-ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದವರು ಗಾಂಧೀಜಿ- ಕೃಷ್ಣ ಉದಪುಡಿ



ಕೊಪ್ಪಳ ಮೇ. 18 (ಕರ್ನಾಟಕ ವಾರ್ತೆ): ಪ್ರತಿ ಗ್ರಾಮ ಸ್ವಚ್ಛ ಗ್ರಾಮವಾಗಬೇಕು, ಸ್ವಾವಲಂಬಿ ಬದುಕನ್ನು ರೂಪಿಸಬೇಕು ಎನ್ನುವ ಕನಸನ್ನು ಪ್ರತಿಯೊಬ್ಬ ಭಾರತೀಯರಲ್ಲಿ ಬಿತ್ತಿದವರು ಮಹಾತ್ಮಾ ಗಾಂಧೀಜಿಯವರು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
         ಮಹಾತ್ಮಾ ಗಾಂಧೀಜಿಯವರು ಕರ್ನಾಟಕಕ್ಕೆ ಮೊದಲ ಭೇಟಿ ನೀಡಿದ ಶತಮಾನೋತ್ಸವ ಸ್ಮರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಯಲಬುರ್ಗಾ ತಾಲೂಕು ಕುಕನೂರಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವಿಚಾರಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
          ಮಹಾತ್ಮಾ ಗಾಂಧೀಜಿಯವರು 1915 ರ ಮೇ. 08 ರಂದು ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಬೆಂಗಳೂರಿಗೆ ಭೇಟಿ ನೀಡಿದ ಸವಿನೆನಪಿಗಾಗಿ ಸರ್ಕಾರ, ಕರ್ನಾಟಕದಲ್ಲಿ ಗಾಂಧೀಜಿಯವರ ಮೊದಲ ಹೆಜ್ಜೆ ಶತಮಾನೋತ್ಸವವನ್ನು ಆಚರಿಸುತ್ತಿದೆ.  ಭಾರತ ದೇಶದಲ್ಲಿ ಎಲ್ಲೆಲ್ಲಿ ಸಂಚರಿಸಿದ್ದಾರೋ, ಆ ಎಲ್ಲ ಪ್ರದೇಶಗಳಲ್ಲೂ ಅವರ ಪ್ರಭಾವ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಪರಿಣಾಮವನ್ನು ಬೀರಿತ್ತು.  ಗಾಂಧೀಜಿಯವರ ಸರಳತೆ, ಆದರ್ಶತೆ, ಅಹಿಂಸಾ ಮಾರ್ಗ ಮತ್ತು ಅವರ ಮಾನವೀಯ ಮೌಲ್ಯಗಳು ಪ್ರತಿಯೊಬ್ಬ ಭಾರತೀಯರ ಮನವನ್ನು ಬಡಿದೆಬ್ಬಿಸಿ, ಬ್ರಿಟೀಷ್ ಆಳ್ವಿಕೆಯ ಸಂಕೋಲೆಯಿಂದ ಬಿಡಿಸಿಕೊಳ್ಳಲು ಹಾತೊರೆಯುವಂತೆ ಮಾಡಿತು.  ಮಹಾನ್ ಮಾನವತಾವಾದಿ ಬಸವಣ್ಣನವರ ನಂತರದ ಕಾಲಘಟ್ಟದಲ್ಲಿ ಅಸ್ಪøಷ್ಯತೆಯ ನಿವಾರಣೆಗೆ ಸಕ್ರಿಯವಾಗಿ ತೊಡಗಿಸಿಕೊಂಡವರು ಗಾಂಧೀಜಿಯವರು.  ಇದರ ಮಹತ್ಕಾರ್ಯಕ್ಕಾಗಿ ನಿಧಿ ಸಂಗ್ರಹಿಸಲು ಕೈಗೊಂಡ ಪ್ರವಾಸದ ಸಂದರ್ಭದಲ್ಲಿ 1934 ರ ಮಾರ್ಚ್ 03 ರಂದು ಕೊಪ್ಪಳ ಜಿಲ್ಲೆ ಭಾನಾಪುರದ ರೈಲ್ವೆ ನಿಲ್ದಾಣದಲ್ಲಿ ಕೆಲ ಕಾಲ ತಂಗಿ, ಜನರಿಗೆ ತಮ್ಮ ಸಂದೇಶವನ್ನು ನೀಡಿದ್ದರು.  ಹಳ್ಳಿಗಳ ಉದ್ಧಾರದಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ, ಸ್ವಚ್ಛ ದೇಶ, ಗ್ರಾಮೀಣ ನೈರ್ಮಲ್ಯ, ನೈತಿಕ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಮಾಢಲು ಸಾಧ್ಯ ಎಂಬ ಸಂದೇಶವನ್ನು ಗಾಂಧೀಜಿಯವರು ನೀಡಿದ್ದರು.  ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಮೂಲಕ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
       ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು, 1934 ರಲ್ಲಿ ಮಹಾತ್ಮಾ ಗಾಂಧೀಜಿಯವರ ಕೊಪ್ಪಳ ಜಿಲ್ಲೆಯ ಭಾನಾಪುರದ ಭೇಟಿ, ಇಲ್ಲಿನ ವೀರಭದ್ರಪ್ಪ ಶಿರೂರು, ಶಿವಮೂರ್ತಿ ಸ್ವಾಮಿ ಅಳವಂಡಿ, ಪುಂಡಲೀಕಪ್ಪ ಜ್ಞಾನಮೋಟೆ ಅಂತಹ ಮಹಾನ್ ವ್ಯಕ್ತಿಗಳನ್ನು ಮಹಾನ್ ಶಕ್ತಿಯನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.  ಭಾನಾಪುರದ ರೈಲ್ವೆ ನಿಲ್ದಾಣದಲ್ಲಿ ಗಾಂಧೀಜಿ ಆಗಮಿಸುವ ಸುದ್ದಿ ಹರಡುತ್ತಿದ್ದಂತೆ ಸಾಗರೋಪಾದಿಯಲ್ಲಿ ಜನ ಸೇರಿದ್ದರು, ಗಾಂಧೀಜಿಯವರ ಜೈಕಾರ ಮುಗಿಲು ಮುಟ್ಟಿತ್ತು.  ಅಸ್ಪøಷ್ಯತೆ ನಿವಾರಣೆ ನಿಟ್ಟಿನಲ್ಲಿ ಕೈಗೊಂಡಿದ್ದ ವಿಶೇಷ ಕಾರ್ಯಕ್ರಮ ನಿಮಿತ್ಯ ಆಗಮಿಸಿದ್ದ ಅವರು, ಇಲ್ಲಿನ ಹರಿಜನ ಮಹಿಳೆಯಿಂದ ಹಾಲು ಸ್ವೀಕರಿಸುವ ಮೂಲಕ, ಜನ ಜಾಗೃತಿಗೆ ಹೆಚ್ಚಿನ ಒತ್ತು ನೀಡಿದರು.  ಸತ್ಯದ ಅನ್ವೇಷಣೆಯಲ್ಲಿಯೇ ತನ್ನ ಇಡೀ ಜೀವನ ಸವೆಸಿದ ಗಾಂಧೀಜಿಯವರು, ಒಬ್ಬ ಸಾಮಾನ್ಯ ವ್ಯಕ್ತಿ ಜಗತ್ತಿನಲ್ಲಿ ಯಾವ ಮಟ್ಟದಲ್ಲಿ ತನ್ನ ಪರಿಣಾಮ ಬೀರಲು ಸಾಧ್ಯ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಗಾಂಧೀಜಿಯವರು.  ಇಂತಹ ಮಹಾನ್ ವ್ಯಕ್ತಿಯ ಆದರ್ಶತೆ, ಸರಳತೆ, ತ್ಯಾಗ ಹಾಗೂ ಜೀವನ ಮೌಲ್ಯವನ್ನು ಮೆಲುಕು ಹಾಕುವಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು ಎಂದು ಅಭಿಪ್ರಾಯಪಟ್ಟರು.
       ಕುಕನೂರು ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಕಾಲೇಜಿನ ಶಿವಲೀಲಾ ಅವರು ಪ್ರಾರ್ಥಿಸಿ, ಸ್ವಾಗತಿಸಿದರು.  ಎಸ್.ಬಿ. ಚೆಂಗಳಿ, ಸಿದ್ದಪ್ಪ ಕೋಟಿ ಉಪಸ್ಥಿತರಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ವಂದಿಸಿದರು.  ಎಂ.ಎನ್. ಹುಕುಮನಾಳ ಕಾರ್ಯಕ್ರಮ ನಿರೂಪಿಸಿದರು.